ಕವನ

ಕವನ: ಸುಗ್ಗಿ ಸಂಕ್ರಾಂತಿ

ಸುಗ್ಗಿ ಸಂಕ್ರಾಂತಿ ವರುಷದ ದುಡಿಮೆಯ ಫಲವಾಗಿ ಬಂದೈತೆ ಸುಗ್ಗಿಯ ಸಂಕ್ರಾಂತಿ ಬೆರೆಸುತ ಎಳ್ಳಿಗೆ ಬೆಲ್ಲವನು ತಂದೈತೆ ನಾಡಿಗೆ ಸುಖಶಾಂತಿ//ಪ ಬೆಳ್ಳಿಯ ರಥವೇರಿ ರವಿಬಂದು ಮಿಂಚೈತೆ ನಾಡೆಲ್ಲ ಬೆಳಕಲ್ಲಿ ಹಳ್ಳಿಯ ನೆಲದಿಂದ ದಿಲ್ಲಿಗೂ ಹಂಚೈತೆ ರಟ್ಟೆಯ ಬಲವಿಲ್ಲಿ//೧ ಗಿಲಿಗಿಲಿ ಗೆಜ್ಜೆಯ ನಾದದಲಿ ಬದುಕಿನ ಬಂಡಿಯು ಹೊರಟಾವ ಕುಲುಕುಲು ನಗುವಿನ ಮೊಗದಲ್ಲಿ  ಹಂತಿಯ ಪದವನು  ಹಾಡ್ಯಾವ//೨ ಕಬ್ಬನು ಸವಿಯುತ ಕೃಷಿಕಾರ ಬೆಲ್ಲದ ರುಚಿಯನು ನೀಡ್ಯಾನ ಹಬ್ಬವ ಮಾಡಿದ ಸರದಾರ  ವಲ್ಲಿಯ ನೆರಿಗೆಯ ತೀಡ್ಯಾನ/೩ ಪರಿಪರಿ ಕಾಳಿನ ರಾಶಿಯನು ಮುದದಲಿ ಮಡದಿಯು ಪೂಜಿಸಲು ಹರಿಹರ ನಾಮವ...

ಕವನ: ಮತ್ತೆ ಹುಟ್ಟಿ ಬನ್ನಿ

ಮತ್ತೆ ಹುಟ್ಟಿ ಬನ್ನಿ ದಿಟ್ಟೆದೆ ತೋರುತ ಆದರ್ಶವಾಗಿ ಜಗದೆಲ್ಲೆಡೆ ವಿವೇಕ ಮೆರೆದೆ ತಟ್ಟುತ ತರುಣರ ಹೃದಯವ ಜಾಗೃತಗೊಳಿಸಿ  ಮೌಲ್ಯವ ಎರೆದೆ ಅಟ್ಟುತ ದೂರಕೆ ಆಲಸ್ಯವ ಮೈಕೊಡವಿ ಬನ್ನಿರೆಂದಿರಲ್ಲವೇ ಮೆಟ್ಟುತ ಚಿಕ್ಯಾಗೋ ನೆಲವ ಭಾಷಣದೊಳು ಎಲ್ಲರ ಕಣ್ ತೆರೆದೆ ವೀರ ಸನ್ಯಾಸಿಯೇ ದೇಶವಿದೇಶಗಳ ತುಂಬೆಲ್ಲ ಪ್ರಖ್ಯಾತಿ ಪಡೆದಿರಿ ಸಾರುವ ಘೋಷವಾಕ್ಯ ಮನ ಪರಿವರ್ತಿಸಿ ಸಂಸ್ಕೃತಿ ಪೊರೆದೆ ವ್ಯಕ್ತಿತ್ವ ವಿಕಸನಕೆ ದಿವ್ಯೌಷಧಿ ನಿಮ್ಮ ನುಡಿ ಓರೆಕೋರೆಯ ತಿದ್ದುವಲ್ಲಿ ಶಕ್ತಿ ಪ್ರವೇಶ ಕಾಯದಿ ಸ್ವಾಮಿ ವಿವೇಕಾನಂದ ಎಂದು ಹೆಸರು ಕರೆದೆ ಕರಕಮಲ ಜೋಡಿಸಿ...

ಕವನ: ಹಂಗ ನೆಂಪಾತ್ರಿ

ಹಂಗ ನೆಂಪಾತ್ರಿ ಆಹಾ ಎನ್ ಚಳಿ ಅಂತೀರಿ ನಿಮ್ಮೂರಲ್ಲೂ ಇದೇನಾ ರೀ ಸುತ್ಕೊಂಡ ಮಲ್ಗಿದ್ರೆ ಸಾಕ್ರಿ ಗೊರಕಿ ಚಾಲೂನ  ನೋಡ್ರಿ ಹಂಗ ವಿಚಾರ ಮಾಡ್ತಿದ್ದೆ ನಾವ್  ಸನ್ನಾವ್ರಿದ್ದಾಗಾ ಎನ್ ಚೆಂದಿತ್ತು ಚಳಿಗಾಲಾ ಒಂದೊಂದೇ ನೆನಪ್ ಆಗ್ತೈತ್ರಿ ಅಜ್ಜಿ ಸೀರಿ ಅಜ್ಜನ ದೋತರ ಬೆಚ್ಚನೆಯ ಗೂಡು ಆಗಿದ್ದು ಮನಿ ಹಿಂದ ಮುಂದ ಎಲ್ಲಾರು ಕೂಡಿ ಬೆಂಕಿ ಕಾಯಿಸೋರು ಬೆಂಕಿ ಮುಂದ ನಿಂತ ನಾಕ ಮಂದಿ ಹಾಡೋರು ಇನ್ನಾಕೈದ ಮಂದಿ ಅದ ನೋಡಿ ಹಲ್ಲ ಕಿಸಿಯೋರು ಬೈಸ್ಕೋಳೋರು ಉಳ್ಳಾಡೋರು ನಸಿಕಿನ್ಯಾಗ...

Kuvempu Birthday: ರಸ ಋಷಿಗೆ ಜನ್ಮದಿನದ ಶುಭಾಶಯ ಕವಿತೆಗಳು

( ಡಾ. ಎಸ್.ಪುಟ್ಟಪ್ಪ, ಡಾ. ಜಯಾನಂದ ಧನವಂತ, ಶ್ರೀಕಾಂತೈಯ್ಯ ಮಠ, ಎಂ. ಸಂಗಪ್ಪ, ಕೆ. ಶಶಿಕಾಂತ ಲಿಂಗಸುಗೂರು ) ನನ್ನ ಜೇನುಗೂಡು ಕೃತಿಯಲ್ಲಿ ರಚಿಸಲಾಗಿರುವ ಕವಿತೆ. ಕುವೆಂಪು  ಕನ್ನಡ ನಾಡಿನ ಸುಕುಮಾರ ಕುವೆಂಪು ಎಂಬ ಕತೆಗಾರ  ಸಾಹಿತ್ಯ ಲೋಕದ ಹರಿಕಾರ ಜ್ಞಾನಪೀಠದ ಗರಿಕಾರ  ಕವಿಗಳ ಬಳಗದ ಸರದಾರ ಕರ್ನಾಟಕ ರತ್ನ ಭಾಜನಗಾರ  ವಿಶ್ವ ಮಾನವನ ಝೇಂಕಾರ  ಕಾವ್ಯ ಶಾಸ್ತ್ರದ ಅಲಂಕಾರ  ಶತಮಾನ ಕಂಡ ಕವಿಶೂರ  ಅಸಂಖ್ಯಾತ ಕಥೆಗಳ ನಾಟಕಕಾರ   ಜಾತ್ಯತೀತದ ನೇತಾರ  ರಾಮಾಯಣ...

ಜಗಳಗಂಟಿ (ಬಲಗನ್ನೆ)

ಜಗಳಗಂಟಿ (ಬಲಗನ್ನೆ) ಜಗಳಗಂಟಿ ಎಂದ ತಕ್ಷಣ ನಮ್ಮ ಚಿತ್ತಕ್ಕೆ ಬರುವುದು ಜಗಳಗಂಟಿತನ ಆದರೆ ನಾನು  ಈಗ ಹೇಳ ಹೊರಟಿರುವುದು ಜಗಳಗಂಟಿ ಬಲಗನ್ನೆ ಮರದ ಬಗ್ಗೆ.        ಮರದಲ್ಲಿ ಎರಡು ವಿಧ ಹೆಣ್ಣು ಮತ್ತು ಗಂಡು ಎಂದು ನಮ್ಮಲ್ಲಿ ಗುರುತಿಸುತ್ತಾರೆ. ಹೆಣ್ಣು ಮರದ ಚಕ್ಕೆ ತೆಗೆದಷ್ಟು ನೀಟಾಗಿ ಗಂಡು ಮರದ ಚಕ್ಕೆ ಏಳುವುದಿಲ್ಲ. ಎಲ್ಲಾ ಮರದ ಚಕ್ಕೆಯಂತಲ್ಲ ಈ...

ಕವನ: ಮಣ್ಣಿನ ಗಾಯದ ಮೇಲೆ

ಮಣ್ಣಿನ ಗಾಯದ ಮೇಲೆ ಅಲ್ಲಿ ಯಾರೋ ಮಾಂಸ ಸುಡುತ್ತಿದ್ದಾರೆ ಕತ್ತಲೊಳಗೆ ಕಾಡಿನ ನೀರವತೆಯಲ್ಲಿ ದಿಗಂತಕ್ಕೇರುತಿದೆ ಹೊಗೆ ಒಂದಿಷ್ಟು ಬೆಳಕೂ ಬಸುರಾದಂತೆ ಕಾಣುತ್ತಿದೆ ಚುಕ್ಕಿಗಳು ಕಕ್ಕಾಬಿಕ್ಕಿ  ಹಕ್ಕಿಗಳು, ಕಣ್ಣ ಕುಕ್ಕಿಸುವ ಬೆಂಕಿಯ ಕಂಡು, ಚಿಕ್ಕ ಮರಿಗಳ ಜೀವವ ನಾಜೂಕಾಗಿ ಕಾಪಾಡಲು ಎದೆ ಬಡಿತದ ಸದ್ದಡಗಿಸಿ ಗಾಯ ಮಾಡಿಕೊಂಡಿವೆ ಅಂವಾ  ಮುಲ್ಲಾ ಇರಬಹುದೇನೋ...? ಬೆಳದಿಂಗಳಿಗೆ ಚೂರಿ ಹಾಕಿದ್ದಾನೆ ಮಣ್ಣು ಗಾಯವಾದಂತೆಲ್ಲಾ ಮುಚ್ಚುತ್ತಲಿರುವನು ನೆತ್ರದ ತೆಗ್ಗು ಅವನ ಕೈಚಳಕದಲಿ  ನಿರಾಳವಾಗಿ ನರ್ತಿಸುತ್ತವೆ ಸತ್ತ ಜಿಂಕೆ ಮೊಲಗಳ ಡಿಂಬ- ಕಿಚ್ಚಿನೊಳಗೆ ಅಲ್ಲಿ ನೋಡು, ಹಸಿದ ರಾಜಕೀಯ ನಶೆಯ ಚಹರೆಗಳಿಗೆ ಎಸರು ಕುದಿಸಿದ ರಸಂ- ಕೊಡುತ್ತಾ.....ಎದುರಿಸಿರು ಬಿಡುತ್ತಾ...

ಕವನ: ಕಲೆಯ ಲೀಲೆ

"ಕಲೆಯ ಲೀಲೆ" ಲೀಲಾವತಿ ಎಂದರೆ ಕಲೆಯ ಕಡಲು ನಟನೆಯಲ್ಲಿ ಕೈಗೆಟುಕದ ಮುಗಿಲು ಮರೆಯದ ಕಲಾವಿದೆ ಇವರು ಮರೆತರು ಇವರ ಇವರಿಂದ ಬೆಳೆದವರು ಸಾರುತ್ತಿದ್ದವು ಮೌಲ್ಯ ಇವರ ಚಿತ್ರಗಳು ಕಲಿಸುತ್ತಿದ್ದವು ಪಾಠ ಇವರ ಹಾಡುಗಳು ಜೀವನವೇ ಇರುತ್ತಿತ್ತು ಇವರ ಸಿನಿಮಾದಲ್ಲಿ ಬದುಕುತ್ತಿದ್ದರು ಸಿನಿಮಾದಂತೆ ಜನರು ಜೀವನದಲ್ಲಿ ಬಡವಾಯಿತು ಸಿನಿಮನೆ ಹಿರಿಯ ಕಲೆ ತಲೆಗಳಿಲ್ಲದೆ ಚಿತ್ರರಂಗ ಸಾಗಿದೆ ಕಲೆ ಎಂಬುದೇ ಇಲ್ಲದೆ ಸಾವೇ ಬಂದೆಯಾ ಇವರನ್ನೂ ಕರೆದೊಯ್ಯಲು ಎಷ್ಟು ಸಾವಾಗಬೇಕು ನಿನ್ನ ಹೊಟ್ಟೆ ತುಂಬಲು ಬದುಕು ಇಷ್ಟೇ ಬರಬೇಕು ಹೋಗಬೇಕು ಉಸಿರು ಸತ್ತರೂ ಹೆಸರು ಬದುಕಬೇಕು. ಎಂ.ಸಂಗಪ್ಪ. ಲಿಂಗಸುಗೂರು

ಕವನ: ಬೆಂಕಿ ಇಲ್ದಾ ಹೊಗೆ ಯಂಗಾತು

ಬೆಂಕಿ ಇಲ್ದಾ ಹೊಗೆ ಯಂಗಾತು ನಾ ಹೇಳಿನಂತ ಹೇಳ್ಬೇಡ ಯಾರಿಗೂನು-? ಬಿರುಗಾಳಿನ ಕರಿಸಿ ನಮಗss ನಾವ ತೂರಿ ಹೋಗಿವಿ ನಮ್ ಕೇರಿ ಗುಡಿಸಲೊಳಗsss ಕಿಚ್ಚಿನ ಮ್ಯಾಲ ಬೆಚ್ಚಗ ಮಲಿಗೆದ್ದು ತಾಂಬೂಲ ಜಗಿದು ಝರಿಯಾಗಿ ಹರಿದು ರತಿ ತೇವ ಮೇಯ್ದು ಸದ್ದಿಲ್ದಂಗsss ಅವ್ರು- ಹೊರಗ ಬರಾ ಹೊತ್ತಿನಗss ನಾವು - ಎಚ್ಚರ ಇದ್ರುನೂ ನಿದ್ದಿ ಮಾಡುತ್ತಿದ್ದಂಗ ಇರ್ತೀವಿss ನಾ ಹೇಳಿನಂತ ಹೇಳ್ಬೇಡ ಯಾರಿಗೂನು? ಪಾಪಸ್ ಕಳ್ಳಿ ಮುಳ್ಳಿನ ಅಳುಕಿಗೆ ಸತ್ಗಿತ್ತಬಿಟ್ಟೇವು ನಾವು ಹುಚ್ಚರಂಗss ಅರಿವು-ಇರಿವು ಮರೆತುಬಿಟ್ಟೀವಿ sss ನಮಗನೂ ಕ್ವಾಪ ಬರ್ತದsss ಬುಸುಗುಡುತ ಚಿತ್ತ ಅವ್ರು ಕುತಗಿ ಕೊಳವಿ ಕಡುಕಂದು ತಿಂದ್...

ಕನಕದಾಸರ ನೆನೆಯುವ ಕವಿತೆಗಳು

(ಡಾ. ಮಹೇಂದ್ರ ಕುರ್ಡಿ, ವಿದ್ಯಾ ರೆಡ್ಡಿ, ಎಮ್ಮಾರ್ಕೆ, ಶುಭನುಡಿ, ಶೈಲಜಾ ಹಿರೇಮಠ )ದಾಸ ಶ್ರೇಷ್ಠರು ದಾಸ ಶ್ರೇಷ್ಠರು ಇವರಯ್ಯ ಮಾನವ ಕುಲಕ್ಕೆ ಮಾದರಿಯಾಗಿ ಮಹಾನ್ ಸಂತ ಸಾರಥಿಯಾದ ದಾಸ ಶ್ರೇಷ್ಠರು ಇವರಯ್ಯ. ಹರಿ ಭಕ್ತ ಮಹಾಮಹಿಮರು ಕಾಗಿನೆಲೆಯ ಆದಿಕೇಶವ ನಾಮಾಂಕಿತರು ಮೌಢ್ಯವ ಅಳಿಸಲು ಮುಂದಾದ ದಾಸ ಶ್ರೇಷ್ಠರು ಇವರಯ್ಯ. ಸವಿನುಡಿಯ ದಾರಿ ದೀಪವಾಗಿ ಅಂಧಕಾರದ ಜ್ಞಾನ ಜ್ಯೋತಿಯಾಗಿ ಭಕ್ತಿಯ ಬೆಳಕು ಚೆಲ್ಲಿದ ದಾಸ ಶ್ರೇಷ್ಠರು ಇವರಯ್ಯ. ತಂಬೂರಿಯ ಸ್ವರ ನುಡಿಸಿ ಜನಮನಗಳ ಹೃದಯ ತಲ್ಲಣಿಸಿ ಭೋಗ...

ಕವನ: “ತುಳಸಿ ಮಾತೆ”

"ತುಳಸಿ ಮಾತೆ" ಕೃಷ್ಣನ ನೆನೆವುದೆ ಭಾಗ್ಯವು ನಮಗೆ ತುಳಸಿಯ ಪೂಜಿಸೆ ಸಂತೃಪ್ತಿಯೆಮಗೆ ಪ ಗೋಪಾಲ ಕಂದನ ಪೂಜಿಸ ಬನ್ನಿರೆ ಹೆಂಗಳೆಯರೆಲ್ಲ ಬೇಗ ತುಳಸಿ ತನ್ನಿರೆ ಅ.ಪ ಜಗದಲಿ ನಾನಾ ಕಲಹ ಕಾರ್ಮೋಡ ಕಲಿಯುಗದಲಿ ಕಟ್ಟೆಯೊಡೆದಿದೆ ನೋಡ ನಾನು ನನ್ನದೆಂಬ ಅಹಂಭಾವ ಬಿಡ ಭವ ಬಂಧನ ಬಿಟ್ಟು ಭಕ್ತಿಯಲಿ ಹಾಡ ೧ ಕರುಣಾಮಯಿ ಮಾತೆ ತುಳಸಿಮಾತೆ ಸಕಲರಿಗೂ ಮಂಗಲ ಭಾಗ್ಯವಿಧಾತೆ  ದಯೆ ತೋರೆಂದು ಬೇಡೋಣ ಮತ್ತೆ ಜನುಮ ಜನುಮಕೂ ತುಳಸಿ ಮಾತೆ ೨ ಮನೆಮನೆಯಲಿ...
- Advertisement -spot_img

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...
- Advertisement -spot_img
error: Content is protected !!
Join WhatsApp Group