ಸುದ್ದಿಗಳು

ನಕ್ಷತ್ರ ಮಾಲೆ: ಪೂರ್ವಾ ಫಲ್ಗುಣಿ

ಪೂರ್ವಾ ಫಲ್ಗುಣಿ 🌷ಚಿಹ್ನೆ- ಆರಾಮ, ಹಾಸಿಗೆಯ ಮುಂಭಾಗದ ಕಾಲುಗಳು🌷ಆಳುವ ಗ್ರಹ- ಶುಕ್ರ🌷ಲಿಂಗ- ಹೆಣ್ಣು🌷ಗಣ- ಮನುಷ್ಯ🌷ಗುಣ- ತಮಸ್ / ರಜಸ್🌷ಆಳುವ ದೇವತೆ- ಭಾಗ🌷ಪ್ರಾಣಿ- ಹೆಣ್ಣು ಇಲಿ🌷ಭಾರತೀಯ ರಾಶಿಚಕ್ರ- 13 ° 20 – 26 ° 40 ಸಿಂಹ🍀ಇಪ್ಪತ್ತೇಳು ನಕ್ಷತ್ರಗಳಲ್ಲಿ ಈ ನಕ್ಷತ್ರವು ಹನ್ನೊಂದನೆಯ ನಕ್ಷತ್ರವಾಗಿದೆ. ಈ ನಕ್ಷತ್ರದ ಅಧಿಪತಿ ದೇವರು ಶುಕ್ರ ಗ್ರಹವಾಗಿದೆ. ಈ ನಕ್ಷತ್ರದಲ್ಲಿ...

ಸಮಕಾಲೀನ ಬದುಕಿಗೆ ಸ್ಪಂದಿಸಿದ ಕವಿ ‘ಚಂಪಾ’- ಸಾಹಿತಿ ಶಿವಾನಂದ ಬೆಳಕೂಡ ಅಭಿಪ್ರಾಯ

ಮೂಡಲಗಿ: ‘ಚಂದ್ರಶೇಖರ ಪಾಟೀಲ ಅವರು ಸಮಕಾಲೀನ ಬದುಕಿಗೆ ಸ್ಪಂದಿಸಿದ ಸಂವೇದನಾಶೀಲ ಬರಹಗಾರರಾಗಿದ್ದರು’ ಎಂದು ಸಾಹಿತಿ ಶಿವಾನಂದ ಬೆಳಕೂಡ ಹೇಳಿದರು.ಇಲ್ಲಿಯ ಜ್ಞಾನದೀಪ್ತಿ ಸಾಹಿತ್ಯ ಪ್ರತಿಷ್ಠಾನ ಹಾಗೂ ಮೂಡಲಗಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಇವುಗಳ ಸಂಯುಕ್ತ ಆಶ್ರಯದಲ್ಲಿ ಬೆಳದಿಂಗಳ ಸಾಹಿತ್ಯ ಚಿಂತನ-ಮಂಥನ ಕಾರ್ಯಕ್ರಮದ ‘ಪ್ರೊ. ಚಂದ್ರಶೇಖರ ಪಾಟೀಲ ಅವರ ಬಂಡಾಯ ಮನೋಧರ್ಮ’ ಕುರಿತು ಮಾತನಾಡಿದ ಅವರು,...

26 ರಂದು ದಸಂಸ ಸದಸ್ಯರ ಸಭೆ

ಸಿಂದಗಿ: 26 ಶನಿವಾರ ಬೆಳಿಗ್ಗೆ 10-00 ಗಂಟೆಗೆ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ನಾಗವಾರಬಣ) ಸಿಂದಗಿ ತಾಲೂಕ ಶಾಖೆಯ ನೂತನ ಪದಾಧಿಕಾರಿಗಳ ಆಯ್ಕೆ ಹಾಗೂ ಸಂಘಟನೆಯ ಬಲಪಡಿಸುವ ಸಲುವಾಗಿ ಹಾಗೂ ಇನ್ನಿತರ ಕಾರ್ಯ ವೈಖರಿಗಳ ಬಗ್ಗೆ ಚರ್ಚಿಸುವ ಸಲುವಾಗಿ ನಗರದ ಪ್ರವಾಸಿ ಮಂದಿರದಲ್ಲಿ ಸಭೆ ಕರೆಯಲಾಗಿದೆ ಎಂದು ಜಿಲ್ಲಾ ಸಂಚಾಲಕ ಚಂದ್ರಕಾಂತ ಸಿಂಗೆ...

ಅಂಬೇಡ್ಕರ ಜಯಂತ್ಯುತ್ಸವ ಪೂರ್ವಭಾವಿ ಸಭೆ

ಸಿಂದಗಿ: ವಿಶ್ವರತ್ನ ಡಾ| ಬಾಬಾಸಾಹೇಬ ಅಂಬೇಡ್ಕರ್ ರವರ 121ನೇ ಜಯಂತ್ಯುತ್ಸವದ ಸಮಿತಿ ರಚಿಸಲು ದಿ. 26 ರಂದು ಸಮಯ 4-00 ಗಂಟೆಗೆ ಪಟ್ಟಣದ ಡಾ ಅಂಬೇಡ್ಕರ್ ಭವನದಲ್ಲಿ ಸಭೆ ಕರೆಯಲಾಗಿದೆ ಎಂದು ದಸಂಸ ಸಂಚಾಲಕ ಪರಶುರಾಮ ಕಾಂಬಳೆ ತಿಳಿಸಿದ್ದಾರೆ.ಈ ಕುರಿತು ಜಂಟಿ ಪತ್ರಿಕಾ ಹೇಳಿಕೆ ನೀಡಿರುವ ಅವರು, ಸತತ 2 ವರ್ಷಗಳಿಂದ ಕೋವಿಡ್-19 ನಿಂದ...

ನೀರಿನ ಸಂರಕ್ಷಣೆಗಾಗಿ ವಿಶ್ವ ಜಲ ದಿನ ಆಚರಣೆ – ಸಿದ್ದಣ್ಣ ದುರದುಂಡಿ

ಮೂಡಲಗಿ: ಹನಿ ಹನಿ ನೀರನ್ನೂ ಪೋಲು ಮಾಡದೆ ನೀರನ್ನು ಸರಿಯಾಗಿ ಸಂರಕ್ಷಿಸುವುದು, ಮಿತವಾಗಿ ಬಳಸುವುದು ಮತ್ತು ನೀರಿನ ಸಂರಕ್ಷಣೆ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಪ್ರತಿ ವರ್ಷ ಮಾರ್ಚ್ 22 ರಂದು ವಿಶ್ವ ಜಲ ದಿನವನ್ನಾಗಿ ಆಚರಿಸಲಾಗುತ್ತದೆ ಎಂದು ರಾಜ್ಯ ಯುವ ಪ್ರಶಸ್ತಿ ವಿಜೇತ ಸಿದ್ದಣ್ಣ ದುರದುಂಡಿ ಹೇಳಿದರು.ಅವರು ಹಳ್ಳೂರು ಗ್ರಾಮದ ದೇವರಾಜ...

ಕುಲಗೋಡ ಗ್ರಾಮದಲ್ಲಿ ೭೫ ಲಕ್ಷ ರೂ ವೆಚ್ಚದಲ್ಲಿ ಚರಂಡಿ ನಿರ್ಮಾಣಕ್ಕೆ ಭೂಮಿ ಪೂಜೆ

ಮೂಡಲಗಿ: ಕಹಾಮ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ನೇತೃತ್ವ ಹಾಗೂ ಮಾರ್ಗದರ್ಶನದಂತೆ ಕುಲಗೋಡ ಗ್ರಾಮದಲ್ಲಿ ಈಗಾಗಲೇ ಹಲವಾರು ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ಯಾದವಾಡ ಜಿಲ್ಲಾ ಪಂಚಾಯತ ಸದಸ್ಯ ಗೋವಿಂದ ಕೊಪ್ಪದ ಹೇಳಿದರು.ತಾಲೂಕಿನ ಕುಲಗೋಡ ಗ್ರಾಮದಲ್ಲಿ ಬಸ್ ನಿಲ್ದಾಣ ಹತ್ತಿರ ಮುಖ್ಯ ರಸ್ತೆಯ ಪಕ್ಕದಲ್ಲಿ  ಜಿಲ್ಲಾ ಪಂಚಾಯತ ಅನುದಾನದಲ್ಲಿ  ಸುಮಾರು ೭೫...

ಬೈಲಹೊಂಗಲ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಎನ್.ಪ್ಯಾಟಿ ಅವರಿಗೆ ಅಭಿನಂದನೆ

ಬೈಲಹೊಂಗಲ ತಾಲೂಕಿನ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ವಿಷಯವಾರು ಕಾರ್ಯಾಗಾರ ನಡೆಸಿ ಮಾರ್ಗದರ್ಶನ ಮಾಡಿ ವಿದ್ಯಾರ್ಥಿಗಳು ಪ್ರಸಕ್ತ ಸಾಲಿನ ಎಸ್‌. ಎಸ್.ಎಲ್.ಸಿ ಪರೀಕ್ಷೆಗೆ ಸನ್ನದ್ಧರಾಗುವಂತೆ ಪ್ರೇರೇಪಿಸಿದ ಬೈಲಹೊಂಗಲದ ದಕ್ಷ, ಪ್ರಾಮಾಣಿಕ ಮತ್ತು ಸಜ್ಜನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎ.ಎನ್.ಪ್ಯಾಟಿ ಇವರನ್ನು ಕೇಂದ್ರ ಬಸವ ಸಮಿತಿಯ ನಿರ್ದೇಶಕರಾದ ಮೋಹನ ಬಸನಗೌಡ ಪಾಟೀಲ ಅವರು ವಚನ ಸಾಹಿತ್ಯ ಗ್ರಂಥಗಳನ್ನು ನೀಡಿ ಅಭಿನಂದಿಸಿದರು.ಈ...

ಮಧ್ಯಾಹ್ನ ಉಪಾಹಾರ ಯೋಜನೆ ಸಹನಿರ್ದೇಶಕರ ಭೇಟಿ, ಪರಿಶೀಲನೆ

ಮೂಡಲಗಿ: ಪೌಷ್ಠಿಕಾಂಶಯುಳ್ಳ ಆಹಾರ ಸೇವನೆಯಿಂದ ಮಕ್ಕಳ ದೈಹಿಕ ಬೆಳವಣಿಕೆಯ ಜೊತೆಗೆ ಶೈಕ್ಷಣಿಕ ಕಾರ್ಯಚಟುವಟಿಕೆಗಳಲ್ಲಿ ಉತ್ಸಾಹದಿಂದ ತೊಡಗಲು ಸಾಧ್ಯವಾಗುವುದು ಎಂದು ತಾಲೂಕಾ ಮಧ್ಯಾಹ್ನ ಉಪಾಹಾರ ಯೋಜನೆಯ ಸಹನಿರ್ದೇಶಕ ಎ.ಬಿ ಮಲಬನ್ನವರ ಹೇಳಿದರು.ಅವರು ಪಟ್ಟಣದ ವಿಜಯನಗರದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಮಾತನಾಡಿ, ಮೂಡಲಗಿ ಶೈಕ್ಷಣಿಕ ವಲಯವು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಹೆಸರು ಹೊಂದಲು...

ನಿರಂತರ ಅಧ್ಯಯನದಿಂದ ಯಶಸ್ಸು ಸಾಧ್ಯ – ಕುಮಾರ ಮರ್ದಿ

ಮೂಡಲಗಿ- ಜೀವನದಲ್ಲಿ ನಿರಂತರ ಪ್ರಯತ್ನ ಮತ್ತು ಸತತ ಅಧ್ಯಯನದ ಮೂಲಕ ಯಶಸ್ಸು ಗಳಿಸಲು ಸಾಧ್ಯವಾಗುತ್ತದೆ ಎಂದು ತುಕ್ಕಾನಟ್ಟಿ ಗ್ರಾಮ ಪಂಚಾಯತ ಅಧ್ಯಕ್ಷ ಕುಮಾರ ಮರ್ದಿ ಹೇಳಿದರು.ಅವರು ತುಕ್ಕಾನಟ್ಟಿ ಪ್ರಾಥಮಿಕ ಶಾಲೆಯ 8 ನೇ ತರಗತಿಯ ಬೀಳ್ಕೊಡುವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.ಯಾವುದೇ ಕೆಲಸವನ್ನು ಶೃದ್ದೆ ನಿಷ್ಠೆಯಿಂದ ಮಾಡಿದರೆ ಫಲ ಸಿಕ್ಕೇ ಸಿಗುತ್ತದೆ. ಅದರಲ್ಲೂ ವಿದ್ಯಾರ್ಥಿಗಳು ಪುಸ್ತಕ...

ಭಾರತವು ಕೃಷಿ ರಫ್ತುಗಳಲ್ಲಿ ಅತ್ಯುತ್ತಮ ಬೆಳವಣಿಗೆಯನ್ನು ದಾಖಲಿಸಿದೆ- ಸಂಸದ ಈರಣ್ಣ ಕಡಾಡಿ

ಮೂಡಲಗಿ: 2020-21ರಲ್ಲಿ ಭಾರತವು ಕೃಷಿ ಮತ್ತು ಕೃಷಿ ಸಂಬಂಧಿತ ಉತ್ಪನ್ನಗಳ ರಫ್ತುಗಳಲ್ಲಿ ಅತ್ಯುತ್ತಮ ($ 41.869 ಶತಕೋಟಿ ) ಬೆಳವಣಿಗೆಯನ್ನು ದಾಖಲಿಸಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ರಾಜ್ಯ ಸಚಿವೆ ಅನುಪ್ರಿಯಾ ಪಟೇಲ್ ಅವರು ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ ಎಂದು ಸಂಸದ ಈರಣ್ಣ ಕಡಾಡಿ ತಿಳಿಸಿದ್ದಾರೆ.ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ಕೃಷಿ ಉತ್ಪನ್ನಗಳ...
- Advertisement -

Latest News

ವಚನ ವಿಶ್ಲೇಷಣೆ ; ಹಾಡಿದಡೆನ್ನೊಡೆಯನ ಹಾಡುವೆ

ಹಾಡಿದಡೆನ್ನೊಡೆಯನ ಹಾಡುವೆ,   ಬೇಡಿದಡೆನ್ನೊಡೆಯನ ಬೇಡುವೆ,         ಒಡೆಯಂಗೊಡಲ ತೋರಿ ಎನ್ನ ಬಡತನವ ಬಿನ್ನೈಸುವೆ ಒಡೆಯ ಮಹಾದಾನಿ ಕೂಡಲಸಂಗಮದೇವಂಗೆ ಸೆರಗೊಡ್ಡಿ ಬೇಡುವೆ.ವಿಶ್ವಗುರು ಬಸವಣ್ಣನವರುವಿಶ್ವ ಗುರು...
- Advertisement -
close
error: Content is protected !!
Join WhatsApp Group