ಸಿಂದಗಿ: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರು ಇಂದಿನ ಪೀಳಿಗೆಗೆ ಆದರ್ಶರಾಗಬೇಕು ಎನ್ನುವ ದೃಷ್ಟಿಯಿಂದ ಈ ಗ್ರಾಮದಲ್ಲಿ ಸಂಗೊಳ್ಳಿ ರಾಯಣ್ಣನವರ ಕಂಚಿನ ಪುತ್ಥಳಿ ಅನಾವರಣಗೊಳಿಸಿದ್ದು ಸ್ತುತ್ಯರ್ಹ ಎಂದು ಶಾಸಕ ರಮೇಶ ಭೂಸನೂರ ಹೇಳಿದರು.
ತಾಲೂಕಿನ ಕೊಕಟನೂರ ಗ್ರಾಮದಲ್ಲಿ ನಡೆದ, ಶ್ರೀ ಕೆಂಚಲಿಂಗೇಶ್ವರ ಕೃಪಾಶಿರ್ವಾದದಿಂದ ಸರ್ವಧರ್ಮ ಸಮ್ಮುಖದಲ್ಲಿ ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಕಂಚಿನ ಪುತ್ಥಳಿ ಪ್ರತಿಷ್ಠಾಪನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿ, ಸಿಂದಗಿಯಿಂದ ಕೊಕಟನೂರ ರಸ್ತೆ ಮಾಡಿಕೊಡುವ ವಾಗ್ದಾನದಂತೆ ನಡೆದುಕೊಂಡಿದ್ದೇನೆ ದಲಿತ ಬಂಧುಗಳಿಗೆ ಸ್ಪಂದನೆ ಮಾಡಿದ್ದೇನೆ ಚುನಾವಣೆಗಳು ಬರುತ್ತವೆ ಹೋಗುತ್ತವೆ ಆದರೆ ಕೊಟ್ಟ ಮಾತಿನಂತೆ ನಡೆದುಕೊಳ್ಳುವುದು ರಾಜಕಾರಣಿಗಳ ಲಕ್ಷಣ ಅದನ್ನು ಪೂರ್ಣಗೊಳಿಸಿದ್ದೇವೆ ಎನ್ನುವ ಆತ್ಮ ವಿಶ್ವಾಸ ನನ್ನಲಿದೆ ಎಂದರು.
ಸಾನ್ನಿಧ್ಯ ವಹಿಸಿದ ಹುಲಿಜಂತಿ ಮಾಳಿಂಗರಾಯರ ಪೂಜಾರಿಗಳಾದ ಮಾಳಿಂಗರಾಯ ಪೂಜಾರಿ, ಕೊಕಟನೂರ ಮಡಿವಾಳೇಶ್ವರ ಸ್ವಾಮೀಜಿ, ಬೊಮ್ಮನಜೋಗಿ ಗ್ರಾಮದ ಬೀರದೇವರು, ಮಣೂರದ ಗುರುಸಿದ್ದ ಪೂಜಾರಿ, ಲಗಮಣ್ಣ ಪೂಜಾರಿ, ಮಂಡಲ ಅಧ್ಯಕ್ಷ ಈರಣ್ಣಾ ರಾವೂರ, ಮಾಜಿ ಜಿಪಂ ಸದಸ್ಯ ಯಲ್ಲಪ್ಪ ಹಾದಿಮನಿ, ಶಂಕರ ಬಗಲಿ, ನಾಗಪ್ಪ ಶಿವೂರ, ಸಿದ್ದು ಬುಳ್ಳಾ, ರವಿಕಾಂತ ನಾಯ್ಕೋಡಿ, ಮಲ್ಲು ಸಾವಳಸಂಗ, ಬೀರಣ್ಣ ಮಾಸ್ತರ, ಅದ್ಯಕ್ಷತೆ ವಹಿಸಿದ ಗ್ರಾಪಂ ಪೈಗಂಬರ ಮುಲ್ಲಾ, ಕಾಂತು ಬ್ಯಾಕೋಡ, ಎಸ್‍ಕೆ. ಪೂಜಾರಿ ವಕೀಲರು, ಪಕುರುದ್ದಿನ ಕುಮಸಗಿ, ಯಲ್ಲು ಕೊರಬು, ಮಕದುಮ ಪಟೇಲ, ಯಲ್ಲು ಬಮ್ಮನಳ್ಳಿ, ಎಂ.ಐ.ಮುಲ್ಲಾ, ಎಸ್.ಎಂ.ಮಠ ಸೇರಿದಂತೆ ಗ್ರಾಮದ ಸಮಸ್ತ ಹಾಲುಮತದ ಹಿರಿಯರು, ಕಿರಿಯರು, ಗಣ್ಯರು, ಪಕ್ಷದ ಮುಖಂಡರು, ಕಾರ್ಯಕರ್ತರು, ಮಹಿಳೆಯರು, ಯುವಕರು, ಉಪಸ್ಥಿತರಿದ್ದರು.