ಸುದ್ದಿಗಳು

ಆರೋಗ್ಯಕರ ಬದುಕಿನ ಶೈಲಿಯಿಂದ ರೋಗ ಮುಕ್ತ ಜೀವನ ಸಾಧ್ಯ; ಡಾ. ಸೌಮ್ಯ

ಸಿಂದಗಿ: ಆಧುನಿಕ ಜೀವನ ಶೈಲಿ ಮತ್ತು ಒತ್ತಡದಿಂದಾಗಿ ರೋಗ ನಿರೋಧಕ ಶಕ್ತಿ ಕಡಿಮೆಯಾಗಿ ಬಿ.ಪಿ, ಶುಗರ್ ದಂತಹ ಕಾಯಿಲೆಗಳು ಸಾಮಾನ್ಯವಾಗುತ್ತಿರುವುದು ಎಲ್ಲರಲ್ಲಿ ಆತಂಕ ಮೂಡಿಸುತ್ತಿವೆ ಎಂದು ಡಾ|| ಸೌಮ್ಯ ಮನಗೂಳಿ ಕಳವಳ ವ್ಯಕ್ತಪಡಿಸಿದರು.ಪಟ್ಟಣದ ಎಚ್.ಜಿ.ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ತಾಲೂಕಾ ಆರೋಗ್ಯ ಇಲಾಖೆ  ಇವರ ಸಹಯೋಗದಲ್ಲಿ ವಿಶ್ವ ಮಧುಮೇಹ ದಿನಾಚರಣೆಯಲ್ಲಿ ಸಸಿಗೆ ನೀರುಣಿಸುವುದರ ಮೂಲಕ ಕಾರ್ಯಕ್ರಮವನ್ನು...

ಜಿಲ್ಲಾ ಮಟ್ಟಕ್ಕೆ ಕುಮಾರಿ ಲಕ್ಷ್ಮಿ ಕಲಾಲ್ ಆಯ್ಕೆ

ಸಿಂದಗಿ: ತಾಲೂಕಿನ ಗೋಲಗೇರಿಯ ಸರಕಾರಿ ಕನ್ನಡ ಹೆಣ್ಣುಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯ ಕುಮಾರಿ ಲಕ್ಷ್ಮಿ ಲಕ್ಷ್ಮಣ್ ಕಲಾಲ್ ವಿದ್ಯಾರ್ಥಿನಿಯು ಸಿಂದಗಿ ತಾಲ್ಲೂಕುಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದ ಕಥೆ ಹೇಳುವ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.ವಿದ್ಯಾರ್ಥಿನಿಯ ಸಾಧನೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್ ಎಂ ಹರನಾಳ, ಕ್ಷೇತ್ರ ಸಮನ್ವಯಾಧಿಕಾರಿ ಐ ಎಸ್ ಟಕ್ಕೆ, ...

ಗಿರಿಜಾ.ಎಸ್.ದೇಶಪಾಂಡೆರವರ ‘ಸಂಸ್ಕೃತಿ ‘( ನಮ್ಮ ಆಚರಣೆಗೊಂದು ಭಾವಾರ್ಥ) ೪ ನೇಯ ಕೃತಿ ಲೋಕಾರ್ಪಣೆ

ಬೆಂಗಳೂರು: ಸಂಸ್ಕೃತಿ ಎಂಬ ಕೃತಿ ಸಂದರ್ಭಕ್ಕನುಸಾರವಾಗಿ ಬರೆದ ಲೇಖನಗಳನ್ನೊಳಗೊಂಡಿದೆ. ಹಲವಾರು ಸಂಸ್ಕೃತಿಯ ಆಗರವಾಗಿರುವ ನಮ್ಮ ನಾಡಿನಲ್ಲಿ ಆಚರಿಸುವ ದೀಪಾವಳಿ, ಮಹಾನವಮಿ, ಸಂಕ್ರಾಂತಿ, ಯುಗಾದಿ ಮುಂತಾದ ಪ್ರಮುಖ ಹಬ್ಬಗಳ ಮಹತ್ವ ಅವುಗಳ ಪೌರಾಣಿಕ,ಧಾರ್ಮಿಕ,ಸಾಮಾಜಿಕ ಹಿನ್ನೆಲೆ, ಆಚರಿಸುವ ರೀತಿ,ಅದರಿಂದಾಗುವ ಪ್ರಯೋಜನ ಕುರಿತು ಮಾಹಿತಿಪೂರ್ಣವಾದ ವಿವರಣೆಗಳು ಕೃತಿಯಲ್ಲಿವೆ.ಬೇರೆ ಬೇರೆ ಪತ್ರಿಕೆಯಲ್ಲಿ ಪ್ರಕಟವಾದ ಲೇಖನಗಳನ್ನು ಒಂದುಗೂಡಿಸಿ "ಸಂಸ್ಕೃತಿ" ಹೆಸರಿನ ಪುಸ್ತಕ...

ಚಿತ್ರಕಲಾ ಸ್ಪರ್ಧೆ: 27 ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆ

ಬೆಳಗಾವಿ ವಿಭಾಗ ಮಟ್ಟದ ಪ್ರೌಢ ಶಾಲಾ ಮಕ್ಕಳ ಚಿತ್ರಕಲಾ ಸ್ಪರ್ಧೆಗಳ ಫಲಿತಾಂಶ ಪ್ರಕಟ ಧಾರವಾಡ: ಇಲ್ಲಿಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಆಯುಕ್ತರ ಕಚೇರಿಯ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಬೆಳಗಾವಿ ವಿಭಾಗ ಮಟ್ಟದ 9 ಜಿಲ್ಲೆಗಳ ಪ್ರೌಢ ಶಾಲಾ ಮಕ್ಕಳ ಚಿತ್ರಕಲಾ ಸ್ಪರ್ಧೆಯಲ್ಲಿ ಒಟ್ಟು 27 ವಿದ್ಯಾರ್ಥಿಗಳು ತಮ್ಮ ಕಲಾಕೃತಿಗಳ ಮೂಲಕ ಅತಿ ಹೆಚ್ಚು ಅಂಕಗಳನ್ನು...

ಮಕ್ಕಳ ರಕ್ಷಣೆಗೆ ಮಕ್ಕಳ ವಿಶೇಷ ಗ್ರಾಮ ಸಭೆ ಅವಶ್ಯಕ – ಸಿಸ್ಟರ್ ಸಿಂತಿಯಾ

ಸಿಂದಗಿ: ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಮಕ್ಕಳ ಗ್ರಾಮಸಭೆ ನಡೆಸುವುದು ಮುಖ್ಯ.  ಪೌಷ್ಟಿಕ ಆಹಾರ ,ಮಕ್ಕಳ ಕ್ರೀಡಾ ಕೂಟ, ಮಕ್ಕಳಿಗೆ ಕಥೆ ಹೇಳುವ ಕಾರ್ಯಕ್ರಮ, ಮಾನಸಿಕ ಅರೋಗ್ಯ ಸಂಬಂಧಿತ ಕಾರ್ಯಕ್ರಮಗಳು, ಶೈಕ್ಷಣಿಕ ಮತ್ತು ವೃತ್ತಿಪರ ಮಾರ್ಗದರ್ಶನ ಕಾರ್ಯಕ್ರಮಗಳು ಹಾಗೂ ಓದುವ ಬೆಳಕು ಕಾರ್ಯಕ್ರಮ ಆಯಾ ಪಂಚಾಯತಿ ವತಿಯಿಂದ ಮಕ್ಕಳಿಗೆ ಹಮ್ಮಿಕೊಳ್ಳಬೇಕು ಎಂದು ಸಂಗಮ ಸಂಸ್ಥೆಯ ಸಹನಿರ್ದೆಶಕಿ...

ಸ್ಮಶಾನ ಭೂಮಿಯ ಅತಿಕ್ರಮಣ ತೆರವುಗೊಳಿಸಲು ಆಗ್ರಹ

ಸಿಂದಗಿ: ಪಟ್ಟಣದ ಸ್ಮಶಾನ ಭೂಮಿಯ ಜಾಗದಲ್ಲಿ ಅತಿಕ್ರಮಣವಾಗಿ ಮನೆ ನಿರ್ಮಿಸುತ್ತಿದ್ದು ಕೂಡಲೆ ತೆರವುಗೊಳಿಸಬೇಕೆಂದು ತಾಲೂಕು ದಂಡಾಧಿಕಾರಿ  ನಿಂಗಣ್ಣ ಬಿರಾದಾರ ಅವರಿಗೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಸಿಂದಗಿ ಸುದಾರಣಾ ಸಮಿತಿಯ ಅದ್ಯಕ್ಷ ಅಶೋಕ ಅಲ್ಲಾಪುರ ಮಾತನಾಡಿ, ಸರ್ಕಾರಿ ಹಿಂದು ರುದ್ರಭೂಮಿಯ  5 ಎಕರೆ 32 ಗುಂಟೆ ಸ್ಮಶಾನ ಭೂಮಿಯಿದ್ದು ಅದನ್ನು ಕೆಲವರು ಅತಿಕ್ರಮಣ ಮಾಡಿ ಮನೆ...

ಉಚಿತ ತಪಾಸನಾ ಶಿಬಿರದ ಸದುಪಯೋಗ ಪಡೆದುಕೊಳ್ಳಿ- ಡಾ. ಕಬ್ಬೂರ

ಮೂಡಲಗಿ:  ತಾಲೂಕಿನ ವಡೇರಹಟ್ಟಿ ಗ್ರಾಮದಲ್ಲಿ ಆರೋಗ್ಯ ಇಲಾಖೆ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ಇಲಾಖೆಯ ಸಹಯೋಗದಲ್ಲಿ ನರೇಗಾ ಯೋಜನೆಯಡಿ ಮಹಿಳಾ ಉದ್ಯೋಗ ಸಬಲೀಕರಣ ಅಭಿಯಾನ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರ ಜರುಗಿತು.ಸಮುದಾಯ ಆರೋಗ್ಯಾಧಿಕಾರಿ ಡಾ.ಸಂಜಯ ಕಬ್ಬೂರ ಮಾತನಾಡಿ, ಗ್ರಾಮಸ್ಥರು ನರೇಗಾ ಯೋಜನೆಯಡಿ ಹಮ್ಮಿಕೊಂಡಿರುವ ಉಚಿತ ಆರೋಗ್ಯ ತಪಾಸಣಾ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು. ಆರೋಗ್ಯದ...

ನ.20 ರಂದು ‘ನೃತ್ಯಧಾರ’ ಸಾಂಸ್ಕೃತಿಕ ಕಾರ್ಯಕ್ರಮ

ಬೆಂಗಳೂರು - ನೃತ್ಯಕಾಶಿ ಸ್ಕೂಲ್ ಆಫ್ ಡ್ಯಾನ್ಸ್ ವತಿಯಿಂದ ಇದೇ ಭಾನುವಾರ ನ.20 ರಂದು  ಬೆಳಿಗ್ಗೆ 10.00ಗಂಟೆಗೆ ನೃತ್ಯಧಾರ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಗರದ ಮಲ್ಲೇಶ್ವರನ ಸೇವಾಸದನ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಕಾರ್ಯಕ್ರಮಕ್ಕೆ ಮುಖ ಅತಿಥಿಗಳಾಗಿ ಸಂಸ್ಕೃತಿ ಚಿಂತಕ- ಅಂಕಣಕಾರ ಡಾ.ಗುರುರಾಜ ಪೋಶೆಟ್ಟಿಹಳ್ಳಿ ಮತ್ತು ಖ್ಯಾತ ಮಕ್ಕಳ ಸಾಹಿತಿ - ಹಿಲ್ ರಾಕ್ ನ್ಯಾಷನಲ್ ಪಬ್ಲಿಕ್ ಶಾಲೆಯ ನಿದೇರ್ಶಕ...

ಪ್ರೊ. ಕೆ ವಿ ನಾರಾಯಣ ಮೂರ್ತಿರವರ ‘ಸತ್ಯಂ ಶಿವಂ ಸುಂದರಂ’ ಕೃತಿ ನ.20 ರಂದು ಬಿಡುಗಡೆ

ಬೆಂಗಳೂರು - ಸಾಹಿತ್ಯ ವಿಚಾರ ವೇದಿಕೆಯಿಂದ ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ನ. ೨೦ ರಂದು ಬೆಂಗಳೂರಿನ ಆರ್ ಪಿ ಸಿ ಲೇಔಟ್ 10 ನೇ ಮುಖ್ಯರಸ್ತೆಯ  ಡಾ.ಕೆ.ವಿ.ನಾರಾಯಣಮೂರ್ತಿರವರ ಮನೆಯಂಗಳದಲ್ಲಿ ಬೆಳಿಗ್ಗೆ 11.00 ಗಂಟೆಗೆ   ‘ಸತ್ಯಂ ಶಿವಂ ಸುಂದರಂ' ಕೃತಿ ಲೋಕಾರ್ಪಣೆಯನ್ನು ಖ್ಯಾತ ಕಾದಂಬರಿಕಾರ ಡಾ.ಸುರೇಶ್ ಪಾಟೀಲ ನೆರವೇರಿಸುವರು.ಪ್ರಾಧ್ಯಾಪಕ ಡಾ.ಎಸ್.ರಾಮಮೂರ್ತಿ ಶರ್ಮ ಲಕ್ಕೂರುರವರು ಕೃತಿ ಕುರಿತು...

ಆಕಾಶವಾಣಿಯಲ್ಲಿ ನ.18 ರಂದು ಸಮಗ್ರ ಶಿಕ್ಷಣ ಸಂಚಲನ ಕಾರ್ಯಕ್ರಮ ಪ್ರಸಾರ

ಧಾರವಾಡ: ರಾಜ್ಯದ ಎಲ್ಲಾ ೧೩ ಆಕಾಶವಾಣಿ ಕೇಂದ್ರಗಳಿಂದ ನಾಳೆ ಬೆಳಗ್ಗೆ ೭ ಗಂಟೆ ೧೫ ನಿಮಿಷಕ್ಕೆ ಏಕಕಾಲಕ್ಕೆ ಪ್ರಸಾರವಾಗುವ ಸಮಗ್ರ ಶಿಕ್ಷಣ ಸಂಚಲನ ಸರಣಿ ಕಾರ್ಯಕ್ರಮದಲ್ಲಿ ನಗರದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಬೆಳಗಾವಿ ವಿಭಾಗದ ಆಯುಕ್ತರ ಕಚೇರಿಯ ನಿರ್ದೇಶಕಿ ಮಮತಾ ನಾಯಕ ಅವರೊಂದಿಗೆ ‘ಶಿಕ್ಷಣ ಇಲಾಖೆಯಲ್ಲಿರುವ ಆನ್ ಲೈನ್ ಸೇವೆಗಳು’ ಎಂಬ...
- Advertisement -spot_img

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...
- Advertisement -spot_img
error: Content is protected !!
Join WhatsApp Group