ಸಿಂದಗಿ: ಪಟ್ಟಣದ ಸ್ಮಶಾನ ಭೂಮಿಯ ಜಾಗದಲ್ಲಿ ಅತಿಕ್ರಮಣವಾಗಿ ಮನೆ ನಿರ್ಮಿಸುತ್ತಿದ್ದು ಕೂಡಲೆ ತೆರವುಗೊಳಿಸಬೇಕೆಂದು ತಾಲೂಕು ದಂಡಾಧಿಕಾರಿ ನಿಂಗಣ್ಣ ಬಿರಾದಾರ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಿಂದಗಿ ಸುದಾರಣಾ ಸಮಿತಿಯ ಅದ್ಯಕ್ಷ ಅಶೋಕ ಅಲ್ಲಾಪುರ ಮಾತನಾಡಿ, ಸರ್ಕಾರಿ ಹಿಂದು ರುದ್ರಭೂಮಿಯ 5 ಎಕರೆ 32 ಗುಂಟೆ ಸ್ಮಶಾನ ಭೂಮಿಯಿದ್ದು ಅದನ್ನು ಕೆಲವರು ಅತಿಕ್ರಮಣ ಮಾಡಿ ಮನೆ ನಿರ್ಮಿಸುತ್ತಿದ್ದಾರೆ. ಹಿಂದು ರುದ್ರಭೂಮಿಯ ಜಾಗದಲ್ಲಿ ಪುರಸಭೆಯ ಆಡಳಿತ ಮಂಡಳಿಯು ಸುಳ್ಳು ಠರಾವು ಬರೆದು ಮನೆಕಟ್ಟಲು ಪರವಾನಗಿ ಕೊಟ್ಟಿದ್ದರಿಂದ ಕೆಲವರು ಆ ಜಾಗದಲ್ಲಿ ಮನೆಕಟ್ಟುತ್ತಿದ್ದಾರೆ ಮತ್ತು ಕೆಲವರು ದಿನೇ ದಿನೇ ಸ್ಮಶಾನ ಜಾಗವನ್ನು ಅತಿಕ್ರಮಣ ಮಾಡುತ್ತಿದ್ದಾರೆ. ಈ ಕೂಡಲೆ ತಾಲೂಕು ಅಧಿಕಾರಿಗಳು ಅತಿಕ್ರಮಣವಾದ ಜಾಗವನ್ನು ತೆರವುಗೊಳಿಸಬೇಕು ಇಲ್ಲದಿದ್ದರೆ ಎಲ್ಲಾ ಸಮಾಜ ಬಾಂಧವರಿಂದ ರಸ್ತೆ ತಡೆದು ಪ್ರತಿಭಟಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಬ್ರಾಹ್ಮಣ ಸಮಾಜ , ಮರಾಠಾ ಸಮಾಜ, ಕ್ಷತ್ರಿಯ ಸಮಾಜ ಸೇರಿದಂತೆ ಇನ್ನು ಹಲವಾರು ಸಮಾಜದ ಮುಖಂಡರುಗಳಾದ ಮಹಾದೇವಪ್ಪ ಗಾಯಕವಾಡ, ಶ್ರೀನಾಥ ಜೋಶಿ,ರಾಜೇಂದ್ರ ಕಲಾಲ, ರಾಮು ಜೋಶಿ, ಕಿಸಾನಸಿಂಗ ರಜಪೂತ್, ಶಾಂತು ಪತ್ತಾರ, ಬಾಬುರಾವ್ ಗಾಯಕವಾಡ, ದತ್ತಾತ್ರೆಯ ಕುಲಕರ್ಣಿ, ವಿಕ್ರಮ ಕುಲಕರ್ಣಿ, ವಿನಾಯಕ ಕುಲಕರ್ಣಿ, ಪ್ರಸನ್ ಕುಲಕರ್ಣಿ, ರವಿಕುಮಾರ ಗಾಯಕವಾಡ, ಸಿದ್ರಾಮ ಕಲಾಲ ಸೇರಿದಂತೆ ಇನ್ನು ಹಲವರು ಬಾಗಿಯಾಗಿದ್ದರು.
ಮನವಿ ಸ್ವೀಕರಿಸಿ ಮಾತನಾಡಿದ ತಹಶೀಲ್ದಾರ ಪಟ್ಟಣದಲ್ಲಿರುವ ಸ್ಮಶಾನ ಭೂಮಿ ಅತಿಕ್ರಮಣವಾದ ಬಗ್ಗೆ ನನ್ನ ಗಮನಕ್ಕೆ ಬಂದಿದ್ದು ಕೂಡಲೇ ಪರಿಶೀಲಿಸಿ ಕ್ರಮ ಜರುಗಿಸಲಾಗುವುದು ಎಂದರು.