ದೇವಮಂದಿರದಲ್ಲಿ ಶಹನಾಯಿ ನುಡಿಸುತಿರೆ
ಬಿಸ್ಮಿಲ್ಲ ಖಾನರಿಗೆ ದೇವ ಕಂಡ
ಪೂಜೆಗಿಂತಲು ಮಿಗಿಲು ನಾದಾನುಸಂಧಾನ
ನಾದ ಬ್ರಹ್ಮಾನಂದ - ಎಮ್ಮೆತಮ್ಮ
ಶಬ್ಧಾರ್ಥ
ನಾದ = ಸಂಗೀತದ ಧ್ವನಿ ತರಂಗ . ಅನುಸಂಧಾನ = ಧ್ಯಾನ
ಬ್ರಹ್ಮಾನಂದ= ಬ್ರಹ್ಮ ಸಾಕ್ಷಾತ್ಕಾರದಿಂದಾದ ಸಂತೋಷ
ತಾತ್ಪರ್ಯ
ಬಿಸ್ಮಿಲ್ ಖಾನ್ ಅವರ ಚಿಕ್ಕಪ್ಪ ಅಲಿ ಬಕ್ಷ್ ವಿಲಾಯತು ಅವರಲ್ಲಿ ಶಹನಾಯಿ ತರಬೇತಿಯನ್ನು ಪಡೆದರು. ಚಿಕ್ಕಪ್ಪ ವಾರಣಾಸಿಯ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಶಹನಾಯಿ ಬಾರಿಸುತ್ತಿದ್ದರು. ಮುಂದೆ ಬಿಸ್ಮಿಲ್...
ದುಡ್ಡಿಲ್ಲವೆಂದೇಕೆ ಕೈಚೆಲ್ಲಿ ಕೂಡುವುದು
ಸೇವೆಯನು ಮಾಡಲಿಕೆ ಮನಸು ಮುಖ್ಯ
ನೀರುಣಿಸಿ ಬೆಳೆಸಿದಳು ಸಾಲುಮರ ತಿಮ್ಮಕ್ಕ
ನಿಸ್ವಾರ್ಥ ನಿಜಸೇವೆ - ಎಮ್ಮೆತಮ್ಮ
ಶಬ್ಧಾರ್ಥ
ಕೈಚೆಲ್ಲು = ಅಸಹಾಯಕತೆಯಿಂದ ಕಾರ್ಯ ವಿಮುಖನಾಗು
ನಿಸ್ವಾರ್ಥ = ಪರಹಿತ ಬಯಸುವ ಪ್ರವೃತ್ತಿ , ಫಲಾಪೇಕ್ಷೆಯಿಲ್ಲದ
ತಾತ್ಪರ್ಯ
ಯಾವುದಾದರು ಸಾಧನೆ ಮಾಡಬೇಕಾದರೆ ದುಡ್ಡು ಬೇಕು.
ಆದರೆ ದುಡ್ಡಿಲ್ಲವೆಂದು ಕಾರ್ಯ ಸಾಧಿಸಲು ಸಾಧ್ಯವಿಲ್ಲವೆಂದು ವಿಮುಖನಾಗಬಾರದು. ಜಗತ್ತಿನಲ್ಲಿ ಸೇವೆ ಮಾಡಲು ಅನೇಕ ಮಾರ್ಗಗಳಿವೆ. ಸೇವೆ ಮಾಡಲು ಮುಖ್ಯವಾಗಿ...
ಯಾವ ಧರ್ಮದಿ ನೀನು ಜನಿಸಿಬಂದಿರಲೇನು?
ನೀನ್ಯಾವ ಧರ್ಮದವನಾದರೇನು ?
ಪ್ರೀತಿ ಮಾತುಗಳಿರಲಿ ನೀತಿ ನಡೆತೆಗಳಿರಲಿ
ಆಚಾರ ಧರ್ಮವೆಲೊ - ಎಮ್ಮೆತಮ್ಮ
ಶಬ್ಧಾರ್ಥ
ಆಚಾರ = ಒಳ್ಳೆಯ ನಡತೆ
ತಾತ್ಪರ್ಯ
ಯಾವ ಧರ್ಮ ಆಚರಿಸುವ ನಿನ್ನ ತಂದೆ ತಾಯಿಗಳಲ್ಲಿ ನೀನು
ಜನಿಸಿಬಂದರೇನು ಮತ್ತು ನೀನು ಯಾವ ಧರ್ಮವನ್ನು
ಆಚರಿಸುವನಾದರೇನು? ನೀನು ಹುಟ್ಟಿದ ಧರ್ಮ ಮತ್ತು
ಆಚರಿಸುವ ಧರ್ಮ ಯಾವುದಾದರು ಇರಲಿ.ಆದರೆ
ಸಕಲ ಜೀವಾತ್ಮರನ್ನು ಪ್ರೀತಿಯಿಂದ ಕಂಡು ಮಾತಾಡಿಸಬೇಕು.
ಒಳ್ಳೆಯ ನಡೆ ನುಡಿ ನೀತಿ...
ಪಟ್ಟಣಕೆ ದಾರಿಯಿದೆ ತೋರಿಸುವ ಫಲಕವಿದೆ
ನಡೆದುಹೋದರೆ ಮಾತ್ರ ತಲುಪಬಹುದು
ದೇವಪಥ ತೋರಿಸುವ ಗುರುದೇವನಿದ್ದರೂ
ಸಾಧಿಸುವ ಛಲಬೇಕು - ಎಮ್ಮೆತಮ್ಮ
ಶಬ್ಧಾರ್ಥ
ಫಲಕ = ದಾರಿ ತೋರಿಸುವ ಹಲಗೆ. ಮಾರ್ಗಸೂಚಿ
ತಾತ್ಪರ್ಯ
ಒಂದು ನಗರಕ್ಕೆ ಹೋಗುವ ಮಾರ್ಗವನ್ನು ತೋರಿಸಲು
ಒಂದು ಹಲಗೆಯಲ್ಲಿ ಅಥವಾ ಬಂಡೆಗಲ್ಲಿನಲ್ಲಿ ಬರೆದು ನಿಲ್ಲಿಸಿರುತ್ತಾರೆ. ಅದನ್ನು ನೋಡಿ ತಿಳಿದುಕೊಂಡು ತೋರಿದ
ದಾರಿಯಲ್ಲಿ ಚಲಿಸಿದರೆ ನಾವು ಮುಟ್ಟಬೇಕಾದ ಪಟ್ಟಣವನ್ನು
ತಲುಪಬಹುದು. ಹಾಗೆ ದೇವರನ್ನು ಕಾಣುವ ಮಾರ್ಗವನ್ನು
ತಿಳಿಸುವ ಗುರುದೇವನೊಬ್ಬನಿದ್ದರೂ ಕೂಡ...
ಜಗಳವಾಡುವುದೊಂದು ಸುಗುಣವೆಂದೆನಬೇಡ
ಲಾಭವಿಲ್ಲದರಿಂದ ನಷ್ಟವುಂಟು
ಮನದ ನೆಮ್ಮದಿ ಕೆಡಿಸಿ ನರಕಯಾತನೆ ಕೊಡುವ
ಜಗಳವನೆ ಕಡೆಗಣಿಸು- ಎಮ್ಮೆತಮ್ಮ
ಶಬ್ಧಾರ್ಥ
ಸುಗುಣ = ಒಳ್ಳೆಯ ಗುಣ. ನೆಮ್ಮದಿ = ಸಮಾಧಾನ
ತಾತ್ಪರ್ಯ
ಬೇರೆಯವರೊಂದಿಗೆ ಗುದ್ದಾಡುವುದು , ತಂಟೆತಕರಾರು ಮಾಡುವುದು ಒಳ್ಳೆಯ ಗುಣದ ಲಕ್ಷಣವಲ್ಲ.ಅಂದರೆ ಜಗಳ
ಮಾಡುವುದು ದುರ್ಗುಣದ ಲಕ್ಷಣ. ಅದರಿಂದ ಬರಿ ನಷ್ಟವೆ ಹೊರತು ಯಾವುದೆ ಲಾಭವಿಲ್ಲ. ಜಗಳದಿಂದ ಕೋಪ
ಉಂಟಾಗುತ್ತದೆ. ಕೋಪದಿಂದ ದೇಹವೆಲ್ಲ ಕಂಪಿಸುತ್ತದೆ.
ಕೈಕಾಲುಗಳು ನಡುಗುತ್ತವೆ.ಬಾಯಾರಿಕೆ ಉಂಟಾಗುತ್ತದೆ.
ಇದರಿಂದ ಆರೋಗ್ಯದಲ್ಲಿ...
"ವ್ಯಕ್ತಿಗಳು ಸಮಾಜದಲ್ಲಿ ತಮ್ಮದೇ ಆದ ಬೆಂಬಲ ಮತ್ತು ಸುಧಾರಣೆಯನ್ನು ಒದಗಿಸಿಕೊಳ್ಳಬೇಕು ಎಂಬ ಸಿದ್ಧಾಂತ, ತನ್ನನ್ನು ತಾನು ಒದಗಿಸುವ ಅಥವಾ ಸುಧಾರಿಸಿಕೊಳ್ಳುವ ಕ್ರಿಯೆ ಅಥವಾ ಸಾಮರ್ಥ್ಯ".ಈ ರೀತಿಯ...