spot_img
spot_img

ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ತರಲು ಸಿದ್ಧ: ವಿಠ್ಠಲ ಕೋಳೂರು

Must Read

- Advertisement -

ಸಿಂದಗಿ: ಪಕ್ಷ ಎಂಬುದು ನನಗೆ ತಾಯಿಯ ಸಮಾನ. ಟಿಕೆಟ್ ಸಿಗಲಿಲ್ಲ ಎಂಬ ಅಸಮಾಧಾನ ಇದೆ. ಬಂಡಾಯ ಸ್ಪರ್ಧೆ, ಪಕ್ಷೇತರ ಸ್ಪರ್ಧೆ ನಿಲ್ಲುವುದಿಲ್ಲ. ಹಾಗೆ ಮಾಡಿದರೆ ಹೆತ್ತ ತಾಯಿಯ ಉದರ ಕೊಯ್ದಂತೆ ಎಂದು ಸಿಂದಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಠ್ಠಲ್ ಕೋಳೂರು ಹೇಳಿದರು.

ಪಟ್ಟಣದ ರಾಜರಾಜೇಶ್ವರಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡ ಸಿಂದಗಿ ಹಾಗೂ ಆಲಮೇಲ ತಾಲೂಕಾ ಪದಾಧಿಕಾರಿಗಳು, ಮುಖಂಡರು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಸಿಂದಗಿ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಮನಗೂಳಿ ಮೂಲ ಕಾಂಗ್ರೆಸ್ ಪದಾಧಿಕಾರಿಗಳ, ಕಾರ್ಯಕರ್ತರ ವಿಶ್ವಾಸ ತೆಗೆದುಕೊಂಡು ಚುನಾವಣೆಯನ್ನು ಎದುರಿಸಬೇಕು.

ಕಾಂಗ್ರೆಸ್ ಪಕ್ಷ ಎಂಬುದು ಕಾರ್ಯಕರ್ತರು ನೀರು ಉಣಿಸಿ ಬೆಳಸಿದ ಮರ. ಸಿಂದಗಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ನೆನೆಗುದಿಗೆ ಬಿದ್ದಿತ್ತು. ನಾನು ಕ್ಷೇತ್ರದಲ್ಲಿ ಸಂಚಾರ ಮಾಡಿ ಕಾಂಗ್ರೆಸ್ ಪಕ್ಷವನ್ನು ಬಲಿಷ್ಠವಾಗಿ ಸಂಘಟನೆ ಮಾಡಿದ್ದೇನೆ. ಟಿಕೆಟ್ ದೊರಕದಿದ್ದದ್ದು ನೋವಾದರೂ ಸಹ ನಾನು ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಸಂಘಟನಾತ್ಮಕವಾಗಿ  ಕೆಲಸ ಮಾಡುತ್ತೇನೆ ಎಂದು ಸಿಂದಗಿ ಕಾಂಗ್ರೆಸ್ ಬ್ಲಾಕ್ ಸಮಿತಿ ಅಧ್ಯಕ್ಷ ವಿಠ್ಠಲ ಕೋಳೂರು ಹೇಳಿದರು.

- Advertisement -

೨೦೧೪ರಿಂದ ಬ್ಲಾಕ್ ಸಮಿತಿ ಅಧ್ಯಕ್ಷನಾಗಿ ಅಧಿಕಾರ ಸ್ವೀಕಾರ ಮಾಡಿದ ನಂತರ ಕ್ಷೇತ್ರದ ಪ್ರತಿಯೊಂದು ಬೂತ್ ಮಟ್ಟದಲ್ಲಿ ಕಾಂಗ್ರೆಸ್ಸನ್ನು ಸಂಘಟಿಸಿದ್ದು, ಪಕ್ಷದ ಕಾರ್ಯಕರ್ತರು ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಬಲಪಡಿಸಲು ಶ್ರಮ ವಹಿಸಿದ್ದಾರೆ. ಮೂಲ ಪದಾಧಿಕಾರಿಗಳು, ಮುಖಂಡರು ಹಾಗೂ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಬೇಕು ಎಂದರು.

ಆಲಮೇಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಯೂಬ್ ದೇವರಮನಿ ಮಾತನಾಡಿ, ಪಕ್ಷ ಸಂಘಟನೆ ಮಾಡಿ ತಾಲೂಕಿನಲ್ಲಿ ಕಾಂಗ್ರೆಸ್ಸನ್ನು ಬಲಿಷ್ಠ ಮಾಡಿದ ಕೀರ್ತಿ ವಿಠ್ಠಲ ಕೋಳೂರು ಅವರಿಗೆ ಸಲ್ಲುತ್ತದೆ. ಕಾಂಗ್ರೆಸ್ ಹೈಕಮಾಂಡ್ ಪಕ್ಷಕ್ಕಾಗಿ ದುಡಿದವರಿಗೆ ಕೂಲಿ ಕೊಡಬೇಕು ಎಂದರು.

ಎಸ್ಸಿಎಸ್ಟಿ ಘಟಕದ ತಾಲೂಕು ಅಧ್ಯಕ್ಷರಾದ ವೀರೇಶ್ ಕೋಟಾರಗಸ್ತಿ ಮಾತನಾಡಿ, ಪ್ರತಿ ಬೂತ್ ಮಟ್ಟದಲ್ಲಿ ಸಂಘಟನಾತ್ಮಕವಾಗಿ ಕೆಲಸ ಮಾಡಿ ಎಲ್ಲ ಕಾರ್ಯಕರ್ತರನ್ನು ಗುರುತಿಸಿ ಸೂಕ್ತ ಹುದ್ದೆಗಳನ್ನು ನೀಡಿದ ಕೀರ್ತಿ ವಿಠ್ಠಲ ಕೋಳೂರ ಅವರಿಗೆ ಸಲ್ಲುತ್ತದೆ. ಅವರ ನಾಯಕತ್ವದ ಅಡಿಯಲ್ಲಿ ನಾವು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ತರಲು ಶ್ರಮಿಸೋಣ ಎಂದರು.

- Advertisement -

ಮುಖಂಡ ಶ್ರೀಮಂತ ಮಲ್ಲೇದ ಮಾತನಾಡಿ, ಸಿಂದಗಿಯ ಪುರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ತರಲು ವಿಠ್ಠಲ ಕೋಳೂರು ಶ್ರಮಿಸಿದ್ದರು. ಅವರ ಮಾರ್ಗದರ್ಶನ ಕಾರ್ಯಕರ್ತರಿಗೆ ದೊರಕಬೇಕು. ಅವರ ಮಾರ್ಗದರ್ಶನದಲ್ಲಿಯೇ ಈ ಚುನಾವಣೆ ಎದುರಿಸಿ ಎಂದರು.

ಈ ವೇಳೆ ಯೂತ್ ಅಧ್ಯಕ್ಷ ಇರ್ಫಾನ್ ಆಳಂದ, ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಸಿಂದಗಿ ಅಧ್ಯಕ್ಷ ಮಾಂತೇಶ ಅಮ್ಮಾಗೋಳ, ಕಿಸಾನ್ ಘಟಕ ಅಧ್ಯಕ್ಷ ಸಿದ್ಧಲಿಂಗ ಗುಂಡಾಪೂರ, ಹಿಂದುಳಿದ ವರ್ಗಗಳ ಅಧ್ಯಕ್ಷ ರಮೇಶ್ ಪೂಜಾರಿ, ಎಸ್ಟಿ ಘಟಕದ ಅಧ್ಯಕ್ಷ ವಿಠ್ಠಲ್ ಖೇಡಗಿ, ಕಾಮೇಶ ಉಕ್ಕಲಿ, ಎನ್‌ಎಸ್‌ಯುಐ ಅಧ್ಯಕ್ಷ ರಾಘೂ ಪೂಜಾರಿ, ಭೀಮು ವಾಲೀಕಾರ, ಪ್ರಧಾನ ಕಾರ್ಯದರ್ಶಿ ಭೀಮು ಕೆರಕಿ, ಸಿದ್ದು ಮಲ್ಲೇದ, ಲಕ್ಷಣ ಜೇವರ್ಗಿ, ಕಂಟೆಪ್ಪ ಪೂಜಾರಿ ಹಾಗೂ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಇದ್ದರು.

- Advertisement -
- Advertisement -

Latest News

ರೈತ ಆತ್ಮಹತ್ಯೆ ; ಶಾಸಕರ ಸಾಂತ್ವನ

ಸಿಂದಗಿ; ಸಾಲದ ಬಾಧೆಗೆ ಆತ್ಮಹತ್ಯೆ ಪರಿವಾರವಲ್ಲ. ಕಾಲದ ವೈಪರೀತ್ಯದಿಂದ ಮಳೆಯಾಗದೇ ಇಂತಹ ದುಸ್ತರ ಪರಿಸ್ಥಿತಿ ಬಂದೊದಗಿದ್ದು ರೈತರ ಕಷ್ಟಗಳಿಗೆ ಸರಕಾರ ಸ್ಪಂದಿಸುತ್ತದೆ ಅಲ್ಲದೆ ನಿಮ್ಮ ಕಷ್ಟಕ್ಕೆ...
- Advertisement -

More Articles Like This

- Advertisement -
close
error: Content is protected !!
Join WhatsApp Group