spot_img
spot_img

ದಿನಕ್ಕೊಬ್ಬ ಶರಣ ಮಾಲಿಕೆ

Must Read

spot_img
- Advertisement -

ಶಂಕರ ದಾಸಿಮಯ್ಯ

ಶಂಕರದಾಸಿಮಯ್ಯನವರ ಚಾರಿತ್ರಿಕ ವಿವರಗಳು, ಶಂಕರದಾಸಿಮಯ್ಯನ ರಗಳೆ, ಶಂಕರ ದಾಸಿಮಯ್ಯನ ಪುರಾಣ. ತೆಲುಗು ಬಸವಪುರಾಣ, ಕನ್ನಡ ಬಸವಪುರಾಣ. ಚೆನ್ನಬಸವಪುರಾಣ. ಪಾಲ್ಕುರಿಕೆ ಸೋಮನಾಥ ಪುರಾಣ, ಭೈರವೇಶ್ವರ ಕಾವ್ಯದ ಕಥಾಮಣಿಸೂತ್ರ ರತ್ನಾಕರಗಳಲ್ಲಿ ದಾಖಲಾಗಿರುತ್ತದೆ. (ಸಂಕೀರ್ಣ ವಚನ ಸಂಪುಟ-4)

ಶ್ರೀ ಜಡೆಯ ಶಂಕರಲಿಂಗನೇ ತನ್ನ ಆರಾಧ್ಯದೈವ. ಆತನೆ ಕಾಮ್ಯಾರ್ಥಕ್ಕೆ, ಮೋಕ್ಷಾರ್ಥಕ್ಕೆ ಸಾಧಕನೆಂದು ಆತನ ಉಪಾಸನೆಗೆ ಮುಂದಾಗುತ್ತಾರೆ. ಸಮಕಾಲೀನರಾಗಿದ್ದ ಜೇಡರ ದಾಸಿಮಯ್ಯರಂತೆ , ಶಂಕರ ದಾಸಿಮಯ್ಯರೂ ವಚನ ರಚನೆಗೆ ತೊಡಗುತ್ತಾರೆ. ‘ನಿಜಗುರು ಶಂಕರದೇವ’ ಅಂಕಿತದಲ್ಲಿ ಅವರು ಬರೆದಿರುವ ವಚನಗಳ ಸಂಖ್ಯೆ ನಿಖರವಾಗಿ ತಿಳಿದುಬಂದಿಲ್ಲ. ಕರ್ನಾಟಕ ಸರಕಾರ ಹೊರತಂದಿರುವ ವಚನ ಸಂಪುಟಗಳ ಪೈಕಿ ೯ನೆಯ ಸಂಪುಟದಲ್ಲಿ (ಸಂಪಾದಕರು: ಡಾ. ಬಿ.ಆರ್. ಹಿರೇಮಠ), ಶಂಕರ ದಾಸಿಮಯ್ಯನವರ ಲಭ್ಯವಿರುವ ಐದು ವಚನಗಳು ಸಿಗುತ್ತವೆ.

- Advertisement -

ಎನ್ನ ಕಾಯಕ್ಕೆ ಗುರುವಾದನಯ್ಯಾ ಬಸವಣ್ಣನು. ಎನ್ನ ಜೀವಕ್ಕೆ ಲಿಂಗವಾದನಯ್ಯಾ ಚೆನ್ನಬಸವಣ್ಣನು. ಎನ್ನ ಪ್ರಾಣಕ್ಕೆ ಪ್ರಸಾದವಾದನಯ್ಯಾ ಮರುಳಶಂಕರದೇವರು. ಎನ್ನ ಜ್ಞಾನಕ್ಕೆ ಜಂಗಮವಾದನಯ್ಯಾ ಪ್ರಭುದೇವರು. ಇಂತಿವರ ಕರುಣದಿಂದಲಾನು ಬದುಕಿದೆನಯ್ಯಾ, నిజಗುರು ಶಂಕರದೇವ

ಕಾಯಶುದ್ಧಿಗೆ ಬಸವಣ್ಣನಂತಹ ಗುರು ಬೇಕು. ಜೀವಕ್ಕೆ ಲಿಂಗದ ಪಾವಿತ್ರ್ಯತೆಗೆ ಷಟ್ ಸ್ಥಳ ಜ್ಞಾನಿ ಚನ್ನಬಸವಣ್ಣನೆ ಇರಬೇಕು. ಪ್ರಾಣಲಿಂಗಕ್ಕೆ ಮರುಳಶಂಕರದೇವರು ಪ್ರಸಾದರೂಪಿಯಾಗಿರಬೇಕು ಎಂದು ಶಂಕರದಾಸಿಮಯ್ಯ ಹೇಳುವುದರ ಜೊತೆಗೆ, ಅತಿ ಮುಖ್ಯವಾಗಿರುವ ಜ್ಞಾನಕ್ಕೆ ಅಲ್ಲಮಪ್ರಭುದೇವರು ಜಂಗಮ ಸ್ವರೂಪಿಯಾಗಿರುವ ಅಗತ್ಯ ಬಿಂಬಿಸುತ್ತಾರೆ ಮತ್ತೂ ಗಮನಿಸಬೇಕಾದ ಒಂದು ವಿಷಯವೆಂದರೆ, ಜ್ಞಾನವೆಂಬುದು ಚಲನಶೀಲವಾದುದು. ಅದು ನಿಂತ ನೀರಲ್ಲ. ನಿತ್ಯವೂ ವೃದ್ಧಿಸುತ್ತಲೇ ಹೋಗುವಂಥದ್ದು ಎಂಬುದನ್ನು ಮನಗಾಣಿಸುವಲ್ಲಿ, ಶಂಕರದಾಸಿಮಯ್ಯ ಜ್ಞಾನವನ್ನು ‘ಜಂಗಮ’ಕ್ಕೆ ಹೋಲಿಸಿರುವುದು.

ಶಂಕರದಾಸಿಮಯ್ಯನ ವಚನಗಳು ಸರಳತೆ ಹಾಗೂ ಸ್ಪಷ್ಟತೆಗಳಿಂದ ಕೂಡಿದ್ದು, ‘ವಚನ ಶಿಲ್ಪದ ದೃಷ್ಟಿಯಿಂದ ಮಹತ್ವದವುಗಳಾಗಿರುತ್ತವೆ. ಈ ವಚನಗಳ ವಿಷಯ. ಸಂಗ್ರಹಗುಣ ಮತ್ತು ಅಭಿವ್ಯಕ್ತಿ ಕೌಶಲ್ಯ ಅತ್ಯಂತ ಗಮನಾರ್ಹವೆನಿಸಿವೆ

- Advertisement -

“ಅಣುವಿನಲ್ಲಿ ಘನವ ಬೆರೆಸಿ, ಹಿರಿದು ಕಿರಿದೆಂಬ ಭೇದವ ಮರೆಸುವಂತೆ” ವಯಸ್ಸಿನಲ್ಲಿ ತಮಗಿಂತಲೂ ಕಿರಿಯರಾದವರನ್ನು ಗೌರವಭಾವದಿಂದ ಕಾಣುವ ‘ಗುಣಗ್ರಾಹಿತ್ವ ಶಂಕರ ದಾಸಿಮಯ್ಯ ಅವರದು. ಬಸವಣ್ಣನವರು ಹೇಳುವ ಹಾಗೆ, ‘ಬಾಗಿದ ತಲೆ. ಮುಗಿದ ಕೈ’ನಂಥ ವಿನಯಶೀಲ ವ್ಯಕ್ತಿತ್ವ ಅವರದು.ಬಸವಪೂರ್ವ ಯುಗದಲ್ಲಿದ್ದ ಮೂವರು ದಾಸಿಮಯ್ಯರಲ್ಲಿ ಶರಣ ಶ್ರೇಷ್ಠರಾದ, ಕಾಯಕನಿಷ್ಠ ಶಂಕರ ದಾಸಿಮಯ್ಯರೂ ಒಬ್ಬರು. ಮತ್ತೊಬ್ಬ ದಾಸಿಮಯ್ಯರಾಗಿದ್ದ ಜೇಡರ ದಾಸಿಮಯ್ಯನವರಿಗಿಂತ ವಯಸ್ಸಿನಲ್ಲಿ ಸ್ವಲ್ಪ ಕಿರಿಯರಾಗಿದ್ದ ಶಂಕರ ದಾಸಿಮಯ್ಯನವರ ಕಾಲ ನಿರ್ದಿಷ್ಟವಾಗಿ ಹೇಳಲಿಕ್ಕಾಗದಿದ್ದರೂ ಸು. ಕ್ರಿ.ಶ. ೧೦೫೦ ರಿಂದ ಕ್ರಿ.ಶ. ೧೧೩೦ ರ ಕಾಲಾವಧಿಯಲ್ಲಿದ್ದಿರಬಹುದೆಂದು ವಿದ್ವಾಂಸರು ಅಭಿಪ್ರಾಯ ಪಡುತ್ತಾರೆ.

ಚಿತ್ರ ಕೃಪೆ : ಅಂತರ್ಜಾಲ

ವಿದ್ಯಾವತಿ ಅಕ್ಕಿ                                                      ವಚನ ಅಧ್ಯಯನ ವೇದಿಕೆ                                        ಅಕ್ಕನ ಅರಿವು ಬಸವಾದಿ ಶರಣರ ಚಿಂತನ ಕೂಟ

 

- Advertisement -
- Advertisement -

Latest News

ಬೀದರ: ಬುಡಾ ಲೇಔಟ್ ಮಾಡಲು ಲಂಚ ಕೊಡಬೇಕು ; ಸತೀಶ ನೌಬಾದೆ ಗಂಭೀರ ಆರೋಪ

ಬೀದರ - ಬೀದರ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಪ್ರತಿಯೊಂದು ಲೇ ಔಟ್ ಮಾಡಲು ದುಡ್ಡು ಕೊಡಲೇಬೇಕು. ಈ ಲಂಚದ ಹಣ  ಬುಡಾ ಕಚೇರಿಯ ಆಯುಕ್ತರಿಗೆ ಹಾಗೂ ಎಲ್ಲರಿಗೂ...
- Advertisement -

More Articles Like This

- Advertisement -
close
error: Content is protected !!
Join WhatsApp Group