ಬೆಂಗಳೂರು : ನಾಡಭಾಷೆ ಕನ್ನಡ ಆಡು ಭಾಷೆ, ಅನ್ನದ ಭಾಷೆಯಾಗಲಿ. ನಿತ್ಯ ಬದುಕಿನಲ್ಲಿ ಹೆಚ್ಚೆಚ್ಚು ಕನ್ನಡ ಭಾಷೆಯನ್ನು ಬಳಸೋಣ, ಆ ಮೂಲಕ ಕನ್ನಡವನ್ನು ಬೆಳೆಸೋಣ. “ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ” – ಎಂದು ಶ್ರೀನಿವಾಸ್ ದರ್ಶನಿ ಹೋಟೆಲ್ ನ ಮಾಲೀಕ ರಮೇಶ್ ನುಡಿದರು .
ಶ್ರೀನಗರ ದ , ಶ್ರೀನಿವಾಸ ಉಪಾಹಾರ, ಶ್ರೀನಿವಾಸ ದರ್ಶಿನಿ ಹೋಟೆಲ್ ನ ಮಾಲೀಕರು ಮತ್ತು ಸಿಬ್ಬಂದಿ ಗಳು ಹಾಗೂ ಶ್ರೀನಗರ ಸುತ್ತ ಮುತ್ತ ಇರುವ ಕನ್ನಡಿಗರು ಸಂಭ್ರಮ ದಿಂದ ಕನ್ನಡ ರಾಜ್ಯೋತ್ಸವ ಶ್ರೀನಗರ ಕ್ಷೇತ್ರದ ವ್ಯಾಪ್ತಿಯಲ್ಲಿ ಇರುವ ಶ್ರೀನಿವಾಸ ದರ್ಶಿನಿ ಹೋಟೆಲ್ ನ ಮುಂಭಾಗದಲ್ಲಿ ಆಚರಿಸಿದರು.
ಕನ್ನಡ ರಾಜ್ಯೋತ್ಸವ ಆಚರಣೆ ಸಮಯದಲ್ಲಿ ಹೋಟೆಲ್ ಗೆ ಬಂದವರಿಗೆ ಸಿಹಿ ಹಂಚಿ ಕನ್ನಡ ರಾಜ್ಯೋತ್ಸವದ ಶುಭಾಶಯ ಕೋರಲಾಯಿತು .
ಈ ಸಮಯದಲ್ಲಿ ಶ್ರೀನಿವಾಸ್ ದರ್ಶನಿ ಹೋಟೆಲ್ ನ ರಮೇಶ್ ಅವರು ಹಾಗೂ ಶ್ರೀನಗರ ಸುತ್ತ ಮುತ್ತ ಇರುವ ನಾಗರಿಕರು ಕನ್ನಡ – ಕನ್ನಡ ರಾಜ್ಯೋತ್ಸವ ದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.
ಕರ್ನಾಟಕ ರತ್ನ ಡಾ, ಪುನೀತ್ ರಾಜಕುಮಾರ್ ರವರ ಪುಣ್ಯ ಸ್ಮರಣೆ
ಬಸವನಗುಡಿಯ ಶ್ರೀನಗರ ವಾರ್ಡ್ ನಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಕನ್ನಡ ರಾಜ್ಯೋತ್ಸವ ಆಚರಣೆಯನ್ನು ಶ್ರೀನಿವಾಸ ಹೋಟೆಲ್, ಶ್ರೀನಗರ ಮಾಲೀಕರು ಹಾಗೂ ಶ್ರೀನಿವಾಸ ಉಪಹಾರ ಹೋಟೆಲ್ ಗೆಳೆೆಯರ ಬಳಗದ ವತಿಯಿಂದ ಸಿಹಿ ಹಂಚುವ ಮೂಲಕ ಕನ್ನಡ ಹಬ್ಬವನ್ನು ಹಾಗೂ ಕರ್ನಾಟಕ ರತ್ನ ಡಾ, ಪುನೀತ್ ರಾಜಕುಮಾರ್ ರವರ ಪುಣ್ಯ ಸ್ಮರಣೆಯ ಕಾರ್ಯಕ್ರಮವನ್ನು ಆಚರಿಸಲಾಯಿತ್ತು .
ಕಾರ್ಯಕ್ರಮದಲ್ಲಿ ಪ್ರವೀಣ್ ಶೆಟ್ಟಿ, ನಿತ್ಯ ನಿರಂತರ ಸೇವಾ ಟ್ರಸ್ಟ್ ನ ಅಧ್ಯಕ್ಷರು – ಈ ಸಮಯದಲ್ಲಿ ಪತ್ರಿಕೆ ಜೊತೆ ಮಾತಾನಾಡುತ್ತಾ ಕನ್ನಡ ರಾಜ್ಯೋತ್ಸವವನ್ನು ಬೆಂಗಳೂರಿನಂತಹ ಮಹಾನಗರಗಳಲ್ಲಿ ಒಂದು ತಿಂಗಳ ಕಾಲ ಆಚರಿಸಲಾಗುತ್ತದೆ. ಬೆಂಗಳೂರಿನ ಪ್ರತಿ ಏರಿಯಾಗಳಲ್ಲಿ ಬಹಳ ವಿಭಿನ್ನ, ವಿಶಿಷ್ಟವಾಗಿ ಕನ್ನಡ ರಾಜ್ಯೋತ್ಸವ ಆಚರಿಸಲಾಗುತ್ತದೆ. ಬೆಂಗಳೂರಿನಲ್ಲಿ ಮಾತ್ರವಲ್ಲ ಕರ್ನಾಟಕದ ಮೂಲೆ ಮೂಲೆಯಲ್ಲೂ ಕನ್ನಡ ರಾಜ್ಯೋತ್ಸವ ಎಂದರೆ ಸಂಭ್ರಮ, ಸಡಗರ , ಎಂದು ನುಡಿದರು .
ಶ್ರೀನಗರ ವಾರ್ಡ್ ನ ಮಾಜಿ ಬಿಬಿಎಂಪಿ ಸದಸ್ಯರಾದ ತಿಮ್ಮೇಗೌಡರು ಮತ್ತು ಶ್ರೀನಿವಾಸ ಉಪಾಹಾರ ಹೋಟೆಲ್ ನ ಮಾಲೀಕರು ಹಾಗೂ ಶ್ರೀನಿವಾಸ ಹೋಟೆಲ್ ಗೆಳೆಯರ ಬಳಗದ ಸ್ನೇಹಿತರು ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ವರದಿ : ತೀರ್ಥಹಳ್ಳಿ ಅನಂತ ಕಲ್ಲಾಪುರ