spot_img
spot_img

ಮಂತ್ರಾಲಯದಲ್ಲಿ ಡಾ. ಸುಭುದೇಂದ್ರ ತೀರ್ಥ ಶ್ರೀಪಾದರಿಗೆ ‘ಯತಿ ರಾಷ್ಟ್ರ ರತ್ನ’ ಪ್ರಶಸ್ತಿ ಗೌರವಸಮರ್ಪಣೆ

Must Read

spot_img
- Advertisement -

ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಗುರುರಾಜ ಅಂಗಣದಲ್ಲಿ ನಡೆದ ರಾಷ್ಟ್ರೀಯ ವಿಷ್ಣು ಸಹಸ್ರನಾಮ ಸಮ್ಮೇಳನವನ್ನು ಶ್ರೀ ರಾಘವೇಂದ್ರ ಮಠದ ಪೀಠಾಧಿಪತಿಗಳಾದ ಡಾ.ಸುಬುಧೇಂದ್ರ ತೀರ್ಥ ಶ್ರೀಪಾದರು  ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿದರು.

ಗ್ಲೋಬಲ್ ವಿಷ್ಣು ಸಹಸ್ರನಾಮ ಸತ್ಸಂಗ ಫೆಡರೇಶನ್ ಆಯೋಜಿಸಿದ್ದ ಈ ಸಮಾರಂಭದಲ್ಲಿ ಅದರ ಸಂಸ್ಥಾಪಕ ಹಿರಿಯ ದಾಸ ಸಾಹಿತ್ಯ ವಿದ್ವಾಂಸ ವಿದ್ಯಾವಾಚಸ್ಪತಿ  ಡಾ.ಅರಳುಮಲ್ಲಿಗೆ  ಪಾರ್ಥಸಾರಥಿ ನೇತೃತ್ವದಲ್ಲಿ ಪೂಜ್ಯ ಶ್ರೀಪಾದರಿಗೆ ‘ಯತಿ ರಾಷ್ಟ್ರ ರತ್ನ’ ಗುರುವಂದನ ಅಭಿನಂದನೆಯನ್ನು ಮಾಡಲಾಯಿತು.

ಕಾರ್ಯಕ್ರಮದಲ್ಲಿ ಕರ್ನಾಟಕ ಆಂಧ್ರಪ್ರದೇಶ ತೆಲಂಗಾಣ ತಮಿಳುನಾಡು ಮಹಾರಾಷ್ಟ್ರ ಮೊದಲಾದ ಭಾಗಗಳಿಂದ ಬಂದಿದ್ದ ನೂರಾರು ಮಂದಿ ಭಕ್ತರು 11 ಆವರ್ತಿ ವಿಷ್ಣು ಸಹಸ್ರನಾಮ ಪಾರಾಯಣವನ್ನು ಮಾಡಿದರು.

- Advertisement -

ಫೆಡರೇಶನ್ ಅಧ್ಯಕ್ಷ ಕ್ಯಾಪ್ಟನ್ ಮಣಿ , ಕಾರ್ಯದರ್ಶಿ ಭಾನುಪ್ರಕಾಶ್ ,ನಿರ್ದೇಶಕಿ ಮಂಗಳ ಭಾಸ್ಕರ್ ,ಸಂಸ್ಕೃತಿ ಚಿಂತಕ ಡಾ.ಗುರುರಾಜ ಪೋಶೆಟ್ಟಿಹಳ್ಳಿ, ಪ್ರಸಾದ್ ಮೊದಲಾದವರು ವೇದಿಕೆಯಲ್ಲಿದ್ದರು.

ಇದೇ ಸಂದರ್ಭದಲ್ಲಿ ಡಾ ಅರಳು ಮಲ್ಲಿಗೆ ಪಾರ್ಥಸಾರಥಿ ಬರೆದಿರುವ ವಿಷ್ಣು ಸಹಸ್ರನಾಮದ ವಿಶಿಷ್ಟ ಅರ್ಥಗಳು ಕೃತಿಗೆ ಐದನೇ ಆವೃತ್ತಿ ಲೋಕಾರ್ಪಣೆಗೊಂಡಿತು.

ಪೂಜ್ಯ ಶ್ರೀಪಾದರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ ಸರ್ವ ರೋಗಗಳನ್ನು ಉಪಶಮನ ಮಾಡುವ ಪರಮ ಮಂಗಳಕರ ಭಗವಂತನ ಸಹಸ್ರನಾಮದ ಪಾರಾಯಣವನ್ನು ಮಂತ್ರ ಸಿದ್ಧಿ ಕ್ಷೇತ್ರ ಮಂತ್ರಾಲಯದಲ್ಲಿ ಮಾಡುತ್ತಿರುವುದು ಬಹಳ ಔಚಿತ್ಯ ಪೂರ್ಣವಾದದ್ದು ,ಹರಿ ಮಂದಿರವೆನಿಸಿದ ಬೃಂದಾವನದಲ್ಲಿ ಸನ್ನಿಹಿತ ರಾಗಿರುವ ಶ್ರೀ ರಾಘವೇಂದ್ರ ತೀರ್ಥರಿಗೆ ಇದು ಅತಿ ಪ್ರಿಯವೆನಿಸಿ ಲೋಕ ಸುಭಿಕ್ಷೆ ಇಂದ ಇರಲಿ ಎಂದು  ಆಶೀರ್ವಚನ ನೀಡಿದರು.

- Advertisement -

ಮುಂದಿನ ದಿನಗಳಲ್ಲಿ ಶ್ರೀ ಕ್ಷೇತ್ರ ತಿರುಪತಿ, ಅಹೋಬಲ, ಹರಿದ್ವಾರ ಮೊದಲಾದ ಕಡೆ ವಿಷ್ಣು ಸಹಸ್ರನಾಮ ಪಾರಾಯಣ ಮಾಡಲು ಶ್ರೀಮಠದಿಂದ ಸಹಕಾರ ನೀಡಲಾಗುವುದು ಎಂದು ತಿಳಿಸಿದರು.

- Advertisement -
- Advertisement -

Latest News

ಶ್ರೀ ಬಸವೇಶ್ವರ ಸೊಸಾಯಿಟಿಗೆ ರಜತ ಮಹೋತ್ಸವ ಸಂಭ್ರಮ

ಮೂಡಲಗಿ -ಪಟ್ಟಣದ ಶ್ರೀ ಬಸವೇಶ್ವರ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸಾಯಿಟಿಗೆ ೨೫ ವರ್ಷಗಳು ಪೂರೈಸಿದ ಹಿನ್ನೆಲೆಯಲ್ಲಿ ಇದೇ ದಿ. ೨೫ ರಂದು ಸಂಭ್ರಮದ ಬೆಳ್ಳಿ ಮಹೋತ್ಸವ...
- Advertisement -

More Articles Like This

- Advertisement -
close
error: Content is protected !!
Join WhatsApp Group