spot_img
spot_img

ಹಾನಗಲ್ ಮಹಿಳಾ ದಿವ್ಯ ಜೀವನ ಸಂಘ ಸುವರ್ಣ ಮಹೋತ್ಸವ

Must Read

- Advertisement -

ಹಾನಗಲ್ – ಐತಿಹಾಸಿಕ ನಗರ ಹಾನಗಲ್. ಮಹಾಕಾವ್ಯಗಳ ಕಾಲದಿಂದಲೂ ತನ್ನದೇ ಆದ ವೈಶಿಷ್ಟ್ಯವನ್ನು ಹೊಂದಿದೆ. ಇಂತಹ ನಗರದಲ್ಲಿ. ಶ್ರೀಮತಿ ಡಾ.ವಿನೂತಾ ಬಾಯಿ ದೇಶಪಾಂಡೆ ಅವರ ಮನೆಗೆ ಉತ್ತರದ ಋಷಿ ಕೇಶದಿಂದ ಆಗಮಿಸಿದ ಗುರುಗಳೊಬ್ಬರ ಆಣತಿಯಂತೆ ಪ್ರಾರಂಭಗೊಂಡ ಮಹಿಳಾ ದಿವ್ಯ ಜೀವನ ಸಂಘ ಇಂದು ಹೆಮ್ಮರವಾಗಿ ಬೆಳೆದು ಬಂದಿದೆ. ಹತ್ತು ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಶ್ರಮಿಸುತ್ತಿದೆ.

ಈ ಸಂಘಕ್ಕೆ ಇಂದು ಸುವರ್ಣ ಮಹೋತ್ಸವದ ಸಂಭ್ರಮ ಸಡಗರ ಸಂತೋಷ.ತನ್ನಿಮಿತ್ತ 30-04-2022 ರಂದು ಹಾನಗಲ್ಲಿನ ಶ್ರೀ ಶಂಕರ ಮಠದಲ್ಲಿ ಸಾಯಂಕಾಲ 05:00 ಘಂಟೆಗೆ ಬಳಗದ ಸದಸ್ಯರು ಅನೇಕ ಕಾರ್ಯಗಳನ್ನು ಹಮ್ಮಿಕೊಂಡಿದ್ದರು. ದೀಪ ನೃತ್ಯ, ಕೃಷ್ಣನ ರೂಪಕ ಹಾಗೂ ಮರ ಮಾತನಾಡಿತು ನಾಟಕ,ಕೋಲಾಟ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿದರು.

ಮೇ. 01 ರಂದು ಬೆಳಿಗ್ಗೆ 9:30 ಗಂಟೆಗೆ ಸಾಮೂಹಿಕ ಸತ್ಯ ನಾರಾಯಣ ಪೂಜೆಯನ್ನು ಘನಶ್ಯಾಮ ದೇಶಪಾಂಡೆ ದಂಪತಿಗಳು ನಡೆಸಿಕೊಟ್ಟರು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ರಾಣೆಬೆನ್ನೂರಿನ ಶ್ರೀ ರಾಮಕೃಷ್ಣಾಶ್ರಮದ ಪೂಜ್ಯಶ್ರೀ ಪ್ರಕಾಶಾನಂದಜೀ ಅವರು ಮಾತನಾಡಿ, ಶ್ರೀಮದ್ಭಗವದ್ಗೀತೆಯ ಮಹತ್ವವನ್ನು ತಿಳಿಸಿದರು.ಗೀತೆಯ ಪಠಣ ಮಾಡಬೇಕು. ಇದರಿಂದ ನಮ್ಮಲ್ಲಿನ ದುರ್ವರ್ತನೆಗಳು ಕಡಿಮೆ ಆಗುತ್ತವೆ ಜೊತೆಗೆ ಸಂಸ್ಕ್ರತಿ ಸಂಸ್ಕಾರದ ಅರಿವು ಮೂಡುತ್ತದೆ.ಮಾನವೀಯ ಮೌಲ್ಯಗಳು ವೃದ್ದಿಯಾಗುತ್ತವೆ ಎಂದು ನುಡಿದರು.ಬಳಗ ಶತಮಾನದ ಸಂಭ್ರಮವನ್ನು ಆಚರಿಸುವಂತಾಗಲಿ ಎಂದು ಹಾರೈಸಿದರು.

- Advertisement -

ಕಾರ್ಯಕ್ರಮದಲ್ಲಿ ಬಳಗದ ಉಪಾಧ್ಯಕ್ಷರಾದ ಹಿರಿಯ ಸಾಹಿತಿ ಶ್ರೀಮತಿ ಪಾರ್ವತಿ ಬಾಯಿ ಕಾಶೀಕರ ಪೂಜ್ಯ ಶ್ರೀ ಶಿವಾನಂದರ ಕುರಿತು ಮಾತನಾಡಿದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಮತಿ ಲಲಿತಾ ದೇಸಾಯಿಯವರು ವಹಿಸಿದ್ದರು. ಶ್ರೀಮತಿ ವಾರುಣಿ ದೇಶಪಾಂಡೆ ಪ್ರಾರ್ಥನೆ ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶ್ರೀಮತಿ ಶೈಲಾ ಬಂಕನಾಳ ವೇದಿಕೆಯ ಮೇಲಿನ ಎಲ್ಲ ಅತಿಥಿ ಮಹೋದಯರನ್ನು ಸ್ವಾಗತಿಸಿದರು.ಶ್ರೀಮತಿ ವಾಣಿ ಪೂಜಾರ ಕಾರ್ಯಕ್ರಮ ನಿರೂಪಿಸಿದರು.

- Advertisement -
- Advertisement -

Latest News

ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ಸಮಾನತೆ ದೊರಕಬೇಕು- ಸಿಡಿಪಿಓ ಶ್ವೇತಾ

ಮೈಸೂರು ನಗರ ವರ್ತಲ ರಸ್ತೆಯಲ್ಲಿರುವ ಮಾರ್ವೆಲ್ ಪದವಿ ಪೂರ್ವ ಕಾಲೇಜಿನಲ್ಲಿ ಇಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ...
- Advertisement -

More Articles Like This

- Advertisement -
close
error: Content is protected !!
Join WhatsApp Group