spot_img
spot_img

ಕಲ್ಲು ಮಠದ ಶ್ರೀ ಪ್ರಭು ಸ್ವಾಮಿಗಳ ಲಿಂಗ ದೇವರ ಲೀಲಾ ವಿಳಾಸ ಚಾರಿತ್ರ

Must Read

- Advertisement -

ಅಂತಾರಾಷ್ಟ್ರೀಯ ಬಸವ ತಿಳಿವಳಿಕೆ ಮತ್ತು ಸಂಶೋಧನಾ ಕೇಂದ್ರ ಪುಣೆ ವಚನ ಅಧ್ಯಯನ ವೇದಿಕೆ ಮತ್ತು ಅಕ್ಕನ ಅರಿವು ಬಳಗದ ಸಂಯುಕ್ತ ಆಶ್ರಯದಲ್ಲಿ ಕಲ್ಲು ಮಠದ ಶ್ರೀ ಪ್ರಭು ಸ್ವಾಮಿಗಳ ಲಿಂಗದೇವರ ಲೀಲಾ ವಿಳಾಸ ಸಾಮೂಹಿಕ ಚಿಂತನ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಪೂಜ್ಯ ಶ್ರೀ ಶಿವರುದ್ರ ಮಹಾಸ್ವಾಮಿಗಳು ಅಧ್ಯಕ್ಷರು ಬೇಲಿ ಮಠ ಮಹಾಸಂಸ್ಥಾನ ಇವರು ಕಂಡ ಭಕ್ತರಿಗೆ ಕೈ ಮುಗಿವಾತನೆ ಭಕ್ತ.. ಎನ್ನುವ ವಚನ ಪ್ರಾರ್ಥನೆ ಮಾಡಿದ ಸಾಲುಗಳ ಅರ್ಥವನ್ನು ಹೇಳುತ್ತಾ ತಮ್ಮ ಉಪನ್ಯಾಸ ಪ್ರಾರಂಭ ಮಾಡಿದರು.

ಪುಸ್ತಕದ ಪೀಠಿಕೆಯನ್ನು ಹೇಳುತ್ತಾ, ಇದು ಆಧ್ಯಾತ್ಮಿಕ ನೆಲೆ ಗುರುತಿಸುವ ಗ್ರಂಥ, 1955 ರಲ್ಲಿ ಸಂಶಿ ಭೂಸನೂರ ಮಠ ಅವರು ಇದನ್ನು ಸಂಪಾದನೆ ಮಾಡಿದ್ದರು,ಎಂದು ಸ್ಮರಿಸುತ್ತಾ, ಅದರಲ್ಲಿರುವ ಹದಿನಾರು ಹಂತಗಳನ್ನು ನಮ್ಮ ಜೊತೆಗೆ ಹಂಚಿಕೊಂಡರು.

1. ನಿಷ್ಕಲ ಲಿಂಗಸ್ಥಲ
2. ಮಹಾಲಿಂಗಸ್ಥಲ
3. ಲಿಂಗ ಮೂರ್ತಿ ಸ್ಥಲ
4. ಅಂಗ ಸ್ಥಲ
5. ಸಂಸಾರ ಸಂಬಂಧ ಸ್ಥಲ
6. ಪಿಂಡಸ್ಥಲ
7. ಪಿಂಡ ಧ್ಯಾನಸ್ಥಲ
8. ಸಂಸಾರ ಹೇಯ ಸ್ತಲ
9. ಗುರು ಕಾರುಣ್ಯ ಸ್ಥಲ
10. ಭಕ್ತಿ ಸ್ಥಲ
11. ಮಾಹೇಶ್ವರ ಸ್ಥಲ
12. ಪ್ರಸಾದಿ ಸ್ಥಲ
13. ಪ್ರಾಣಲಿಂಗಿ ಸ್ಥಲ
14. ಶರಣ ಸ್ಥಲ
15. ಐಕ್ಯ ಸ್ಥಲ
16. ಸ್ವಲೀಲಾ ಭಕ್ತಿ ಸ್ಥಲ

- Advertisement -

ತೋoಟದ ಸಿದ್ದಲಿಂಗ ಯತಿಗಳ ಜೊತೆಗೆ ಕೂಡಿ 101 ವಿರಕ್ತರು ಮಹಾಪುರುಷರು 16 ಹಂತಗಳಲ್ಲಿ ಇದನ್ನು ವಿಂಗಡಿಸಿಕೊಟ್ಟರು.ಲಿಂಗ -ಅಂಗ ಸಂಬಂಧದಿಂದ ಪರಿಪೂರ್ಣ ಚೈತನ್ಯದತ್ತ ಹೇಗೆ ಸಾಗುವುದು, ಯಾವುದಕ್ಕೂ ಅಂಟಿಕೊಳ್ಳದೆ ಶೂನ್ಯ ಸ್ಥಿತಿಯನ್ನು ತಲುಪುವ ಪರಿ, ಅಖಂಡ ನಿತ್ಯನಿರ್ವಯದಿಂದ
ಅಗಮ್ಯ ಅಗೋಚರ ಅಗಮ್ಯ ಅಪ್ರತಿಮಲಿಂಗವಾಗುವುದನ್ನು, ನಿರುಪಾದಿಕ ನಿರುಪಾಯ ನಿರ್ಮಲ ಜ್ಯೋತಿಯಾಗುವುದನ್ನು, ಸತ್ -ಚಿತ್ -ಶಕ್ತಿ ಆನಂದವನ್ನು,ಸ್ಥೂಲ – ಚೈತನ್ಯ ಸಕಾರಾತ್ಮಕ ನೆಲೆಯಲ್ಲಿ, ಅಖಂಡ ಪರಮ ಜ್ಯೋತಿಯ ಸ್ವರೂಪವನ್ನು ಕಾಣಬೇಕು, ಇಷ್ಟ ಲಿಂಗ ಪ್ರಾಣ ಲಿಂಗ ಭಾವಲಿಂಗ ಕಾಯಕ ದಾಸೋಹವನ್ನು ಮನನ ಮಾಡಿಕೊಳ್ಳಬೇಕು, ಆಯತ ಸ್ವಾಯತ ಸನ್ನಿಹಿತವಾಗಬೇಕು, ಹಂತ ಹಂತದಲ್ಲಿ ನೆಲೆ ನಿಂತು ಭಾವಪೂರ್ಣವಾಗಿ ಬೆಳಗುವದು, ಸಮರಸವೆನ್ನೆ ನಾ ಎನ್ನೇ ನೀ ಎನ್ನೆ ಎನ್ನುವ ದ್ವಂದ್ವವಳಿದ ಸ್ಥಳದಲ್ಲಿ ನಿಂತು ತಾನೇ ಎಲ್ಲವಾಗಿ ತಾನೇ ಇಲ್ಲವಾಗಿ ಭಾವಲಿಂಗದಲ್ಲಿ ಒಂದಾಗುವುದನ್ನು ತಿಳಿಸಿದರು

ಐದು ಸಾಧಕ್ಯಗಳಾದ ಮೂರ್ತ ಸಾಧಕ್ಯ, ಅಮೂರ್ತ ಸಾಧಾಕ್ಯ, ಕತೃ ಸಾಧಾಕ್ಯ, ಕರ್ಮ ಸಾಧಾಕ್ಯ, ಶಿವ ಸಾಧಾಕ್ಯ ಹೇಳುತ್ತಾ, ನಿತ್ಯ ನಿರಾಳ, ನಿಶ್ಯೂನ್ಯವು ಮಹಾಲಿಂಗವಾಗುವ ಪರಿ ಜೀವತ್ರಯoಗಳು,ಅಂತ:ಕರಣಗಳು, ಜ್ಞಾನೇoದ್ರಿಯಗಳು, ಕರ್ಮೆಂದ್ರಿಯಗಳು, ಪಂಚೀಕರಣಗಳು, ಷಟ್ ಕರ್ಮಗಳನ್ನು ಅಕ್ಕಮಹಾದೇವಿಯವರ ವಚನದೊಂದಿಗೆ ವಿವರಿಸಿದರು.

ಷಟ್ ಸ್ಥಲಮಾರ್ಗವೇ ಶರಣಮಾರ್ಗ, ಎರಡಕ್ಕೂ ಅವಿನಾಭಾವ ಸಂಬಂಧವಿದೆ, ಶಿವ ತತ್ವವನ್ನು ಜೀವನದಲ್ಲಿ ಅಳವಡಿಸಿಕೊಂಡು, ವಚನ ವಾಗ್ಮಯದಿಂದ ಗುರು ಅರಿವು ವಚನ ಆಚರಣೆ, ವಚನದಿಂದ ಅರಿಯುವುದು,ಎಂದು ಹೇಳುತ್ತಾ ಮಾತೆoಬುದು ಜ್ಯೋತಿರ್ಲಿoಗ, ಅಂತರಂಗದ ಚೈತನ್ಯವೇ ಧ್ವನಿ, ಮಾತು ಮನoಗಳಿಗೆ ಅತ್ತತ್ತ ಮೀರಿದ, ಮಾಡುವಂತಿರಬೇಕು, ಮಾಡದಂತಿರಬೇಕು, ಮಾಡುವ ಮಾಟದಲ್ಲಿ ತಾನಲ್ಲದಂತಿರಬೇಕು ಎನ್ನುವ ವಚನಗಳನ್ನು ವಿವರಿಸಿದರು.

- Advertisement -

ಕಡೆಯಲ್ಲಿ ಅರಿವಿನ ಕನ್ನಡಿಯನ್ನು ನಿಮಗೆ ಕೊಟ್ಟಿದ್ದೇನೆ, ಹದಿನಾರು ಸ್ಥಲಗಳ ಸರಳ ವ್ಯಾಖ್ಯಾನದೊಂದಿಗೆ ತಿಳಿವಳಿಕೆ ಮೂಡಿಸುವ 772 ವಚನಗಳ ವಿವರಣೆ ಇರುವ ಇಹ -ಪರದ ಪ್ರಸಾದವನ್ನುನಿಮಗೆಲ್ಲ ಅರ್ಪಣೆ ಮಾಡುತ್ತಿದ್ದೇನೆ, ಸ್ವಲೀಲೆಯಿಂದ, ಅಂತ:ಪ್ರೇರಣೆ ಯಿಂದ ತನಗೆ ತಾನೇ ರೂಪಿಸಿಕೊಳ್ಳುವ, ತಾನೇ ಪೂಜ್ಯ ಮತ್ತು ಪೂಜಕ ಎಂದು ತಿಳಿದುಕೊಳ್ಳುವ ಅಂತರಂಗದ ಬೆಳಕು ಎಂದು ಪ್ರಭು ಸ್ವಾಮಿಗಳ ಲಿಂಗ ದೇವ ಲೀಲಾ ವಿಳಾಸದ ಬಗೆಗೆ ಹೇಳುತ್ತಾ ತಮ್ಮ ಮಾತುಗಳನ್ನು ಮುಕ್ತಾಯಗೊಳಿಸಿದರು.

ಡಾ. ಶಶಿಕಾಂತ ಪಟ್ಟಣ ಅವರು ತಮ್ಮ ವಿದ್ವತ್ ಪೂರ್ಣ ಮಾತುಗಳಿಂದ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಸಂವಾದದಲ್ಲಿ ಬಹಳಷ್ಟು ಜನರು ಪಾಲ್ಗೊಂಡು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಕುಮಾರಿ ಗ್ರೀಷ್ಮಾಳ ವಚನ ಪ್ರಾರ್ಥನೆ, ಶರಣೆ ಪ್ರೇಮಕ್ಕ ಹೊರಟ್ಟಿ ಅವರ ವಚನ ಮಂಗಳದೊಂದಿಗೆ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.

ಸುಧಾ ಪಾಟೀಲ
ವಿಶ್ವಸ್ಥರು
ಬಸವ ತಿಳಿವಳಿಕೆ ಮತ್ತು ಅಧ್ಯಯನ ಕೇಂದ್ರ -ಪುಣೆ

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಬೆಳಗಾವಿ – ಮನಗೂರು ವಿಶೇಷ ರೈಲು ಅ.16 ರಿಂದ

ಬೆಳಗಾವಿ: ಜಿಲ್ಲೆಯ ಜನರ ಬಹುದಿನಗಳ ಬೇಡಿಕೆಯಂತೆ ಬೆಳಗಾವಿ- ಮನಗೂರು ವಿಶೇಷ ಎಕ್ಸ್ಪ್ರೆಸ್ ರೈಲಿನ ಸಂಚಾರವು ಅ-16 ರಿಂದ ಪ್ರಾರಂಭವಾಗಲಿದೆ ಎಂದು ಹುಬ್ಬಳ್ಳಿ ನೈರುತ್ಯ ರೈಲ್ವೆ ಇಲಾಖೆ...
- Advertisement -

More Articles Like This

- Advertisement -
close
error: Content is protected !!
Join WhatsApp Group