- Advertisement -
ಕೆನೆಯಾದ ಭಾವ
ಹಾಲು ಹೃದಯದ ತುಂಬ
ಹರಿದ ನಿನ್ನ ಪ್ರೀತಿಯ
ಸ್ನೇಹ ಪರಿಮಳ ಭಾವವು…
ಸವಿ ಸಕ್ಕರೆಯಾಗಿ ಮನ
ಅಕ್ಕರೆಯಲಿ ಕರಗಿ
ಒಂದಾಗಿ ಮಧುರ ಜೀವವು…
ಎದೆ ಕಡಲಲಿ ಹೊಮ್ಮಿ
ಹಾಡುವ ನೀನು ಬರೆದ
ನೂರು ಕವನದಲೆಗಳು..
ಮೌನವಾಗಿ ಮಾತು ಮರೆತು
ಹೆಪ್ಪುಗಟ್ಟಿವೆ ಉಪ್ಪು ನೀರ
ನೋವ ಒಡಲಲಿ ಒಲವದು…
- Advertisement -
ಸಾವಿರ ಮಾತಿನ ಬಾಣ
ತೂರಿ ಹೃದಯ ಗಾಯ
ಕುದಿವ ಕಡಲ ಆಗರ…
ಮುಚ್ಚಿದೆದೆಯ ಕದವ
ತೆರೆಯದ ಕಲ್ಲು ಹೃದಯ
ನಡುಗಿತು ಭಾವ ಸಾಗರ.
ಬಿತ್ತಿದ ಭಾವ ಬೀಜ
ಮೊಳೆತು ಚಿಗುರು ಪರಿಮಳ..
ಕುದಿದು ಮರಳಿ ಹೊರಳಿ
ಶಶಿಕಿರಣ ಬೆಳಕ ಬೆರಗು
ಪದರ ಸವಿಯ ಕವಿ ಜೀವ
ಕೆನೆಗಟ್ಟಿದ ಭಾವ ಸೆರಗು….
— ಇಂದಿರಾ ಮೋಟೆಬೆನ್ನೂರ. ಬೆಳಗಾವಿ