- Advertisement -
ಸತ್ಯ ಮಾತ್ರ ಹೇಳು
ಸುಳ್ಳು ಇನ್ನೊಂದು ಸುಳ್ಳಿಗೆ
ಬೋಧನೆ ಮಾಡಿತ್ತು
ಒಮ್ಮೆಯದರೂ
ಸತ್ಯ ನುಡಿಯಲು
ಆಗ ಕೇಳಿದ
ಸುಳ್ಳು ಹೇಳಿತ್ತು
ನನ್ನ ಮನೆಯ
ಬಾಗಿಲಿಗೆ
ಬೋರ್ಡ್ ಹಾಕಿರುವೆ
ಸತ್ಯ ಮಾತ್ರ ಹೇಳು
ಸತ್ಯ ಮೇವ ಜಯತೇ
ಮನೆಯೊಳಗೇ
ಸುಳ್ಳಿನ ಮೂಟೆ
ಸರಕು ತುಂಬಿದ್ದನ್ನು
ಮೌನದಲಿ ಮುಚ್ಚಿಟ್ಟು
ಸದನ ಸಂಸತ್ತಿನಲ್ಲಿ
ನ್ಯಾಯಾಲಯದಲ್ಲಿಯೂ
ಸತ್ಯ ಹೇಳಲು ಆಗ್ರಹ
ಗಾಳಿ ಬೆಳಕಿನ ಹಣತೆ
ಬಾಳ ಪಯಣದಲ್ಲಿ
ನಡೆದಿರುವೆವು
ಒಮ್ಮೆ ನಾನು
ಒಮ್ಮೆ ನೀನು
ಹಿಂದೆ ಮುಂದೆ
ನೆರಳು ಬಿಸಿಲಿನ ಹಾಗೆ
ಗೆಲುವೂ ಅಷ್ಟೇ
ಒಮ್ಮೆ ಗೆಲ್ಲಲು
ಸೋಲ ಬೇಕಾಗುತ್ತದೆ
ನೂರು ಸಲ
ಹಲವು ಸಲ
ಸೋತಿರುವೆ
ಗೆಲ್ಲುವ
ಭರವಸೆಯಲಿ
ಸೋಲಿನಲಿ ಸಂತಸ
ಗೆಲುವಿನಲಿ ಸಂಭ್ರಮ
ಸ್ನೇಹ ಪ್ರೀತಿಯ ಭಾವ
ಕಳೆದುಕೊಳ್ಳದ ಆಸ್ತಿ
ಸಿರಿವಂತ ನಾನು
ನೀ ಕೊಟ್ಟ ಒಲುಮೆಯು
ಗಾಳಿ ಬೆಳಕಿನ ಹಣತೆ
ಕಾಯ್ದು ಕೊಟ್ಟೆ
- Advertisement -
ಡಾ. ಶಶಿಕಾಂತ ಪಟ್ಟಣ -ರಾಮದುರ್ಗ