ಸವದತ್ತಿ ಃ ಪ್ರಾಚೀನ ಕಾಲದಲ್ಲಿ ಧಾರ್ಮಿಕ ಜಿಜ್ಞಾಸೆಗೆ ಉಪಯೋಗಿಸಲ್ಪಡುತ್ತಿದ್ದ ಸಂಸ್ಕೃತ ಆಡುಭಾಷೆಗಳಿಂದ ಸ್ವಲ್ಪ ವಿಭಿನ್ನವಾದರೂ ನಮ್ಮ ದೈನಂದಿನ ಜೀವನದಲ್ಲಿ ಬಳಸಲ್ಪಡುವ ವಿಜ್ಞಾನ ಮತ್ತು ತತ್ವಶಾಸ್ತ್ರಗಳಲ್ಲಿ ಬಹುಮುಖ್ಯ ಪಾತ್ರವಹಿಸುವ ಮೂಲಕ ನಮಗೆ ಸಂಸ್ಕಾರವನ್ನು ಕೊಟ್ಟ ಭಾಷೆಯಾಗಿತ್ತು ಎಂದು ರೇಣುಕಾ ಸಂಸ್ಕೃತ ಪಾಠಶಾಲೆಯ ಮುಖ್ಯಾಪಾಧ್ಯಾಯರು ಹಾಗೂ ಸವದತ್ತಿ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಬಿ,ಎನ್,ಹೊಸೂರ ತಿಳಿಸಿದರು.
ಅವರು ಪಟ್ಟಣದ ವಿವೇಕಾನಂದ ವಿಜ್ಞಾನ ಪಿ ಯು ಕಾಲೇಜಿನಲ್ಲಿ ಜರುಗಿದ ಆಸ್ಮಾಕಂ ಸಂಸ್ಕೃತಂ ಎಂಬ ಸಂಸ್ಕೃತ ಭಾಷೆಯ ಮೌಲ್ಯವನ್ನು ತಿಳಿಯಪಡಿಸುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಈ ಕಾರ್ಯಕ್ರಮದ ಅತಿಥಿಗಳಾಗಿ ಶಿಕ್ಷಕಿ ಶೈಲಶ್ರೀ ಮಲ್ಲೂರ, ವೈ,ಬಿ,ಕಡಕೋಳ, ಮೌನೇಶ್ವರ ಅರ್ಕಸಾಲಿ, ಶ್ರೀಮತಿ ಸುವರ್ಣಾ ಡೊಡ್ಲಿ, ಸದಾನಂದ ದೀಕ್ಷಿತ, ವಿಜಯಲಕ್ಷ್ಮೀ ಹಳ್ಳೀಕೇರಿ, ಮಧುಮತಿ ಅಂಗಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಸಿಗೆ ನೀರುಣಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.ವಿದ್ಯಾರ್ಥಿಗಳಿಂದ ಪ್ರಾರ್ಥನಾ ಗೀತೆ ಜರುಗಿತು.
ಶಿಕ್ಷಕಿ ಶೈಲಶ್ರೀ ಮಲ್ಲೂರ ಮಾತನಾಡಿ, “ಭಾರತದ ಪ್ರಾಚೀನ ಭಾಷೆಗಳೊಲ್ಲೊಂದಾದ ಸಂಸ್ಕೃತ ಕರ್ನಾಟಕದಲ್ಲಿ ಪ್ರಾಚೀನ ಕಾಲದಿಂದಲೂ ಬಳಕೆಯಲ್ಲಿದ್ದು ವಿವಿಧ ಕವಿಗಳ ರಚಿತ ಗ್ರಂಥಗಳನ್ನು ಉಲ್ಲೇಖಿಸಿ ಸಂಸ್ಕೃತದ ಮಹತ್ವ ಕುರಿತು ತಮ್ಮ ಉಪನ್ಯಾಸದಲ್ಲಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಶಿಕ್ಷಕ ಸಾಹಿತಿ ವೈ.ಬಿ.ಕಡಕೋಳ ಹಾಗೂ ಮೌನೇಶ್ವರ ಅರ್ಕಸಾಲಿ ಅವರನ್ನು ಸಂಸ್ಕೃತ ಪಾಠಶಾಲೆಗಳ ಮೂಲಕ ಗೌರವ ಸನ್ಮಾನ ಜರುಗಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಮೌನೇಶ್ವರ ಅರ್ಕಸಾಲಿ ‘ಸಂಸ್ಕೃತ ಭಾಷೆ ದೇವ ಭಾಷೆ ಎಂಬುದನ್ನು ತಿಳಿಸುತ್ತ ಸಂಸ್ಕೃತದ ಮಹತ್ವವನ್ನು ತಿಳಿಸಿದರು. ಶಿಕ್ಷಕ ಸಾಹಿತಿ ವೈ.ಬಿ.ಕಡಕೋಳ ಮಾತನಾಡಿ “ದೈನಂದಿನ ಬದುಕಿನಲ್ಲಿ ಸಂಸ್ಜೃತ ಎಷ್ಟು ಮಹತ್ವ ಪಡೆದಿದೆ ಎಂಬ ಸಂಗತಿಗಳನ್ನು ಉದಾಹರಣೆ ಸಹಿತವಾಗಿ ತಿಳಿಸಿದರು. ಸದಾನಂದ ದೀಕ್ಷಿತ್ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿದರು.ವಿಜಯಲಕ್ಷ್ಮೀ ಹಳ್ಳೀಕೇರಿ ಕಾರ್ಯಕ್ರಮ ನಿರೂಪಿಸಿದರು.ಸುಭಾಸ ಹಾನಗಲ್ ವಂದಿಸಿದರು.