spot_img
spot_img

ಸರ್ಕಾರಿ ನೌಕರರಿಂದ ರಾಜ್ಯ ಸುಭಿಕ್ಷ – ಡಾ. ಎಲ್. ಭೈರಪ್ಪ

Must Read

ಬೆಳಗಾವಿ – ಜನಪ್ರತಿನಿಧಿಗಳು ವಿವಿಧ ಯೋಜನೆಗಳನ್ನು ಕೇವಲ ಆದೇಶ ಮಾಡುತ್ತಾರೆ ಆದರೆ ಅದನ್ನು ಅನುಷ್ಠಾನಕ್ಕೆ ತರುವುದು ಸರಕಾರಿ ನೌಕರರು. ರಾಜ್ಯವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ದವರು. ಇವತ್ತು ರಾಜ್ಯ ಸುಭಿಕ್ಷೆಯಾಗಿದೆ ಎಂದರೆ ಅದಕ್ಕೆ ನಾವು ಸಲ್ಲಿಸಿದ ಸೇವೆಯೇ ಕಾರಣ ಎಂದು ರಾಜ್ಯ ಸರಕಾರಿ ನಿವೃತ್ತ ನೌಕರರ ಸಂಘದ ರಾಜ್ಯಾಧ್ಯಕ್ಷ ಡಾ. ಎಲ್. ಭೈರಪ್ಪ ಅಭಿಪ್ರಾಯ ಪಟ್ಟರು.

ರವಿವಾರ ಬೆಳಗಾವಿಯ ನಾಗನೂರು ರುದ್ರಾಕ್ಷಿ ಮಠದ ಪೂಜ್ಯ ಶ್ರೀ ಪ್ರಭುದೇವ ಕಲ್ಯಾಣ ಮಂಟಪದಲ್ಲಿ ರಾಜ್ಯ ಸರಕಾರಿ ನಿವೃತ್ತ ನೌಕರರ ಸಂಘ ಹಾಗೂ ಬೆಳಗಾವಿ ಜಿಲ್ಲಾ ಘಟಕದ ಸಹಯೋಗದಲ್ಲಿ ಆಯೋಜಿಸಿದ್ದ ಕಿತ್ತೂರು ಕರ್ನಾಟಕ, ಬೆಳಗಾವಿ ವಿಭಾಗದ ನಿವೃತ್ತ ನೌಕರರ ಸಮಾವೇಶ ಉದ್ಘಾಟಿಸಿ ಮಾತನಾಡಿ, ಸರಕಾರಿ ನಿವೃತ್ತ ನೌಕರರಿಗೆ ಯಾವುದೇ ಆರೋಗ್ಯ ಭಾಗ್ಯ ಕೊಟ್ಟಿಲ್ಲ. ಗ್ರಾ.ಪಂ. ಸದಸ್ಯರಿಂದ ಹಿಡಿದು ಎಲ್ಲ ಜನಪ್ರತಿನಿಧಿಗಳಿಗೆ ವೈದ್ಯಕೀಯ ವೆಚ್ಛ ನೀಡುತ್ತಾರೆ. ಒತ್ತಡದಲ್ಲಿ ಜನರ ಸೇವೆ ಮಾಡಿ ವಿವಿಧ ಕಾಯಿಲೆಯಿಂದ ಬಳಲುತ್ತಿರುವ ನಮಗೆ ಉಚಿತ ಆರೋಗ್ಯ ಭಾಗ್ಯ ನೀಡಬೇಕು. ದೀರ್ಘ ಕಾಯಿಲೆಯಿಂದ ಬಳಲುತ್ತಿರುವ ನಿವೃತ್ತ ನೌಕರರಿಗೆ ಉಚಿತ ಆರೋಗ್ಯ ಸೇವೆ ನೀಡಬೇಕೆಂದು 2015ರಲ್ಲಿ ಅಂದಿನ ಸಿದ್ದರಾಮಯ್ಯ ಅವರ ಮೇಲೆ ಒತ್ತಡ ಹಾಕಿ ಜಾರಿಗೆ ತರುವಂತೆ ಮಾಡಿದ್ದೇವು. ಆದರೆ ಈಗ ನಮಗೆ ಆ ಸೌಲಭ್ಯ ಸಿಗುತ್ತಿಲ್ಲ. ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ನೀಡುವಂತೆ ಇಂದಿನ ಸಿಎಂ ಬಸವರಾಜ ಬೊಮ್ಮಾಯಿ ಅವರ ಜತೆ ಚರ್ಚಿಸಿದ್ದೇವೆ. ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ನಗದು ರಹಿತ ಆರೋಗ್ಯ ಭಾಗ್ಯ ಯೋಜನೆ ಜಾರಿಗೆ ತರುತ್ತೇನೆ ಎಂದು ಮಾತು ಕೊಟ್ಟಂತೆ ತಕ್ಷಣವೇ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯಿಂದ ಕಡತ ತರಿಸಿಕೊಂಡು ತಕ್ಷಣವೇ ಜಾರಿಗೆ ತರಬೇಕೆಂದು ಒತ್ತಾಯಿಸಿದರು.

ಸಂಘದ ಹಿರಿಯ ಉಪಾಧ್ಯಕ್ಷ ಸೂರ್ಯಕಾಂತ ಕದಂ ಮಾತನಾಡಿ, ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ಬೃಹತ್ ಸಮಾವೇಶ ಆಯೋಜಿಸುವ ಮೂಲಕ ನಿವೃತ್ತ ನೌಕರರ ಸಂಘ ಜೀವಂತವಿದೆ ಎನ್ನುವುದನ್ನು ರಾಜ್ಯಾಧ್ಯಕ್ಷ ಡಾ. ಎಲ್. ಭೈರಪ್ಪ ಸಾಬೀತು ಮಾಡಿದ್ದಾರೆ. ವೇತನ ಭತ್ಯೆಗಳು ವೈದ್ಯಕೀಯ ವೆಚ್ಚ, ಕುಟುಂಬ ನಿರ್ವಹಣೆಗೆ ಸಾಲುತ್ತಿಲ್ಲ. ಹೀಗಾಗಿ ಏಳನೇ ವೇತನ ಆಯೋಗ ರಚನೆಯಾಗಿದ್ದು, ಇದರಲ್ಲಿ ನಿವೃತ್ತ ನೌಕರರಿಗೆ ಸಿಗಬೇಕಿರುವ ಎಲ್ಲ ಸೌಲಭ್ಯಗಳು ಸಿಗುವಂತಾಗಬೇಕು. ಶವ ಸಂಸ್ಕಾರ ಭತ್ಯೆ, ನಿವೇಶನ ಸೇರಿ ಇನ್ನಿತರ ಬೇಡಿಕೆಗಳನ್ನು ಈಡೇರಿಸಬೇಕು. ಸರಕಾರಿ ನೌಕರಿಯಿಂದ ನಾವು ನಿವೃತ್ತಿ ಆಗಿರಬಹುದು ಆದರೆ ಸರಕಾರಕ್ಕೆ ಎಲ್ಲ ರೀತಿಯ ಮಾರ್ಗದರ್ಶನ ನೀಡಲು ನಿರಂತರವಾಗಿ ನಾವು ಸಿದ್ಧರಿದ್ದೇವೆ ಎಂದರು.

ಬಳಿಕ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ರಂಗೇಗೌಡ ಮಾತನಾಡಿ, ಬಜೆಟ್ ಅಧಿವೇಶನಕ್ಕೆ ಸರಕಾರ ಸಿದ್ಧತೆ ನಡೆಸಿದೆ. ಈ ಸಂದರ್ಭದಲ್ಲಿ ನಮ್ಮ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಸರಕಾರದ ಮೇಲೆ ಒತ್ತಡ ಹಾಕುವ ಕೆಲಸ ಮಾಡುತ್ತಿದ್ದೇವೆ ಎಂದು ಸಂಘದ ಕಾರ್ಯ ಚಟುವಟಿಕೆ ಕುರಿತು ವಿವರಿಸಿದರು.

ಸಂಘದ ರಾಜ್ಯ ಉಪಾಧ್ಯಕ್ಷೆ ಶಾರದಮ್ಮ ಮಾತನಾಡಿ, ನಮ್ಮ ಸಂಘ ಕೇವಲ ಬೇಡಿಕೆಗಳಿಗಾಗಿ ಹೋರಾಟ ಮಾಡುತ್ತಿಲ್ಲ. ಉಚಿತ ಆರೋಗ್ಯ ಶಿಬಿರದಂತ ಜನಪರ ಕೆಲಸಗಳನ್ನು ಮಾಡುತ್ತಿದೆ. ಸಮೂಹ ಬೆಳೆಸಿ, ಸಂಘಟನೆ ಇನ್ನು ಹೆಚ್ಚಾಗಿ ಮಾಡೋಣ ಎಂದರು.

ಕೊರಟಗೆರೆಯ ಪೂಜ್ಯ ಶ್ರೀ ಬಸವಕಿರಣ ಮಹಾಸ್ವಾಮಿಗಳು ದಿವ್ಯ ಸಾನ್ನಿಧ್ಯ ವಹಿಸಿ, ಆಶೀರ್ವಚನ ನೀಡಿದರು.

ಸಂಘದ ಬೆಳಗಾವಿ ವಿಭಾಗದ ಜಿಲ್ಲಾಧ್ಯಕ್ಷ ಎಸ್. ಜಿ. ಸಿದ್ನಾಳ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಹಾಂತೇಶ ತಾಂವಸಿ, ಎಸ್. ಎಸ್. ಕುಂದ್ರಾಳ, ನವೀನ ಗಂಗರೆಡ್ಡಿ, ಶಿಲ್ಪಾ ಘೋಡಗೇರಿ ಹಾಗೂ 80 ವರ್ಷ ಮೇಲ್ಪಟ್ಟ ನಿವೃತ್ತ ನೌಕರರನ್ನು ಇದೇ ವೇಳೆ ಸನ್ಮಾನಿಸಲಾಯಿತು.

ಅತಿಥಿಗಳಾಗಿ ವಿಜಯಪುರ ಜಿಲ್ಲಾಧ್ಯಕ್ಷ ಎಸ್. ಪಿ. ಬಿರಾದಾರ, ಸಂಘಟನಾ ಕಾರ್ಯದರ್ಶಿ ಸುರೇಶ ನಾಯ್ಕ,  ಡಾ. ಬಸವರಾಜ ಗೋಮಾಡಿ ಸೇರಿದಂತೆ ಇನ್ನಿತರರು ವೇದಿಕೆ ಮೇಲಿದ್ದರು.

ಹಿರಿಯ ನಾಗರಿಕರ ಸಂಘದ ರಾಜ್ಯಾಧ್ಯಕ್ಷ ಅಡಿವೆಪ್ಪ ಬೆಂಡಿಗೇರಿ ಸ್ವಾಗತಿಸಿದರು. ಆರ್. ಎಸ್. ಕಡಿ ಮತ್ತು ಎಂ.ವಾಯ್.ಮೆಣಸಿನಕಾಯಿ ನಿರೂಪಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ಮಲ್ಲಪ್ಪ ಮುದಕವಿ ವಂದಿಸಿದರು.

ಆನಂದ ಕರ್ಕಿ, ಎಸ್.ಜಿ.ರಜಪೂತ, ಆರ್.ಬಿ. ಬನಶಂಕರಿ, ಡಿ. ಎಸ್. ವಾಗೂಕರ್, ಎಂ.ಜಿ.ಪಾಟೀಲ, ಎ.ಎನ್.ಬೆಣ್ಣಿ, ವೀರಭದ್ರ ಅಂಗಡಿ ಸೇರಿದಂತೆ ಬೆಳಗಾವಿ ವಿಭಾಗದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ನಿವೃತ್ತ ನೌಕರರು ಸಮಾವೇಶದಲ್ಲಿ ಭಾಗಿಯಾಗಿದ್ದರು.

- Advertisement -
- Advertisement -

Latest News

ಸುಣಧೋಳಿ ಮಹಿಳಾ ಕ್ರೆಡಿಟ್ ಸೌಹಾರ್ದಗೆ ೭೬.೦೭ ಲಕ್ಷ ರೂ ಲಾಭ

ಮೂಡಲಗಿ: ಸುಣಧೋಳಿ ಮಹಿಳಾ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ ೨೦೨೩ರ ಮಾರ್ಚ ಅಂತ್ಯಕ್ಕೆ ರೂ.೭೬.೦೭ ಲಕ್ಷ ಲಾಭವನ್ನು ಗಳಿಸಿ ಪ್ರಗತಿಯಲ್ಲಿ  ಸಾಗುತ್ತಿದೆ ಎಂದು ಸಹಕಾರಿಯ ಅಧ್ಯಕ್ಷೆ...
- Advertisement -

More Articles Like This

- Advertisement -
close
error: Content is protected !!