ಮೂಡಲಗಿ: -ಪಟ್ಟಣದ ಜಾತಗಾರ ಪ್ಲಾಟ್ 401 ರ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ಕಲಿಕೆಗೆ ಅನುಕೂಲವಾಗಲು ಪಾಲಕರು ಅಲ್ಲಿನ ಮಕ್ಕಳಿಗೆ ಕಪ್ಪು ಹಲಗೆ (ಬ್ಲಾಕ್ ಬೋರ್ಡ್), ಕಲಿಕೆಗಾಗಿ ವಿವಿಧ ಬಗೆಯ ಚಿತ್ರಪಟ ಹಾಗೂ ಇನ್ನಿತರ ಕಲಿಕಾ ಸಲಕರಣೆಗಳನ್ನು ವಿತರಿಸಿದರು .
ಈ ಸಂದರ್ಭದಲ್ಲಿ ಅಂಗನವಾಡಿ ಮೇಲ್ವಿಚಾರಕಿ ಕೆ. ಎಸ್. ಪಡೆನ್ನವರ, ಸಹಾಯಕಿ ಸಲ್ಮಾ ಪೀರಜಾದೆ, ಆಶಾ ಕಾರ್ಯಕರ್ತೆ ಸುಜಾತಾ ಕೊಕಟನೂರ ಹಾಗೂ ಕುತಬು ಲಕ್ಷ್ಮೇಶ್ವರ, ಹಯಾತ್ ಗದ್ಯಾಳ, ಶಬ್ಬೀರ್ ಕತ್ನಳ್ಳಿ, ಖಾಜಾ ಮಂಟೂರ, ಇಸ್ಮಾಯಿಲ್ ಸೈಯದ್, ಮರಮಸಾಬ ಕುಳ್ಳಳ್ಳಿ ಯುನೂಸ್ ನಾಗರಾಳ, ಬಾಪು ನಾಗರಾಳ, ರಫೀಕ್ ಕತ್ನಳ್ಳಿ ಇನ್ನು ಅನೇಕರು ಉಪಸ್ಥಿತರಿದ್ದರು.