spot_img
spot_img

ವಿಜಯನಗರ: ನಿವೃತ್ತ ಮುಖ್ಯೋಪಾಧ್ಯಾಯಿನಿ ಅರಳಗುಂಡಿ ಯವರಿಗೆ ಅಭಿನಂದನೆ ಕಾರ್ಯಕ್ರಮ

Must Read

spot_img

ಬೆಳಗಾವಿ: ತಾಲೂಕಿನ ವಿಜಯನಗರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸುಜಾತಾ ಶಿವಶಂಕರ ಅರಳಗುಂಡಿ ಯವರಿಗೆ ಅಭಿನಂದನಾ ಸಮಾರಂಭ ಹಾಗೂ ರಥ ಸಪ್ತಮಿ, ಭೀಷ್ಮಾಷ್ಟಮಿ ನಿಮಿತ್ತ ಸ್ನೇಹ ಭೋಜನ ಕಾರ್ಯಕ್ರಮ ಜರುಗಿತು.

ನಿವೃತ್ತ ಬ್ಯಾಂಕ ಅಧಿಕಾರಿಗಳಾದ ಆರ್ ವಿ ಭಟ್ ದಂಪತಿಗಳು, ಮುಖ್ಯೋಪಾಧ್ಯಾಯಿನಿಯರಾದ ಶ್ರೀಮತಿ ರಾಜೇಶ್ವರಿ ಆರ್ ಕುಲಕರ್ಣಿ ದಂಪತಿಗಳು, ಶಾಲೆಯ ಹಿಂದಿನ ಮುಖ್ಯೋಪಾಧ್ಯಾಯರು, ಸದ್ಯ ಮಾಸ್ತ ಮರಡಿ ಮಾದರಿ ಶಾಲೆಯ ಹಿರಿಯ ಮುಖ್ಯೋಪಾಧ್ಯಾಯರಾದ ಬಸವರಾಜ ಫಕೀರಪ್ಪ ಸುಣಗಾರ ರವರು, ಉಪಸ್ಥಿತರಿದ್ದು ಅರಳಗುಂಡಿ ಮುಖ್ಯೋಪಾಧ್ಯಾಯಿನಿಯರನ್ನು ಸನ್ಮಾನ ಮಾಡಿ ಮಾತನಾಡಿ, ಅವರ ಉತ್ತಮ ಸೇವೆಗೆ ಅಭಿನಂದನೆಗಳನ್ನು ಸಲ್ಲಿಸಿದರು

ಸಭೆಯಲ್ಲಿ ಮಾತನಾಡಿದವರು ಹಿಂದಿನ ಮುಖ್ಯೋಪಾಧ್ಯಾಯರಾದ ಬಸವರಾಜ ಸುಣಗಾರ, ಶ್ರೀಮತಿ ಸುಜಾತಾ ಶಿವಶಂಕರ ಅರಳಗುಂಡಿ ಯವರು ಮಾಡಿರುವ ಅಭಿವೃದ್ಧಿ ಪರ ಸೇವೆ ಸ್ಮರಿಸಿದರು.

ಶಾಲೆಯ ದತ್ತು ದಾನಿಗಳಾದ ಆರ್ ವಿ ಭಟ್ ರವರು ಶಾಲೆಯ ಮೂಲಭೂತ ಸಮಸ್ಯೆಗಳಿಗೆ ಸ್ಪಂದಿಸಿ ಸದ್ಯ ನಿವೃತ್ತಿ ನಂತರ ಯಾವುದೇ ಫಲಾಪೇಕ್ಷೇಯಿಲ್ಲದೆ ಇಂಗ್ಲೀಷ ವಿಷಯವನ್ನು ವಿದ್ಯಾರ್ಥಿಗಳಿಗೆ ಕಲಿಸುತ್ತಿರುವುದಕ್ಕೆ ಸಭೆಯಲ್ಲಿ ಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ ಶಿಕ್ಷಕರಾದ ಆಯ್ ಆರ್ ಮೆಟ್ಯಾಳಮಠರು, ಶಿಕ್ಷಕಿಯರಾದ ಶ್ರೀಮತಿ ಶಾಂತಾ ಅಡಿವೆಪ್ಪ ಸಿದ್ದಣ್ಣವರ ರವರು ಕಾರ್ಯಕ್ರಮ ನಿರೂಪಿಸಿದರು.

ಶಿಕ್ಷಕಿಯರಾದ ಶ್ರೀಮತಿ ನಯನಾ ಕೀರ್ತನೆ, ಶ್ರೀಮತಿ ಕರ್ಪೂರ ಶೆಟ್ಟಿ ಸೇರಿದಂತೆ ಎಸ್ ಡಿ ಎಮ್ ಸಿ ಸದಸ್ಯರು, ಗ್ರಾಮಸ್ಥರು, ಬಿಸಿಯೂಟದ ಸಿಬ್ಬಂದಿಗಳು ಉಪಸ್ಥಿತರಿದ್ದರು.

- Advertisement -
- Advertisement -

Latest News

ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ವಿಧಿವಶ- ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಕಂಬನಿ

ಬೆಂಗಳೂರು- ಶ್ರವಣ ಬೆಳಗೊಳದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ನಿಧನಕ್ಕೆ ಕೆಎಂಎಫ್ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಕಂಬನಿ ಮಿಡಿದಿದ್ದಾರೆ. ಜೈನ್ ಸಮುದಾಯದ ಸಮಗ್ರ...
- Advertisement -

More Articles Like This

- Advertisement -
close
error: Content is protected !!