ರೈತರ ಪರ ಮಾತನಾಡಿರುವ ಕಾಂಗ್ರೆಸ್ ನಾಯಕರು ಯಾರಾದರೂ ಇರುವರೆ ?
ವಕ್ಫ್ ಎಂಬುದು ಭಾರತದ, ಕರ್ನಾಟಕದ ರೈತರ ಜಮೀನನ್ನು ಹೆಬ್ಬಾವಿನಂತೆ ಕಬಳಿಸುತ್ತ ಹೊರಟಿದೆ. ಹಲವು ದಶಕಗಳಿಂದ ತಲೆಮಾರುಗಳಿಂದ ಅನುಭವಿಸುತ್ತ ಬಂದಿರುವ ತಮ್ಮ ಜಮೀನನ್ನು ಒಂದೇ ರಾತ್ರಿಯಲ್ಲಿ ಒಂದು ಕೋಮಿನ ಸಂಸ್ಥೆ ವಕ್ಪ್ ಎಂಬುದು ತನ್ನ ಹೆಸರಿಗೆ ಮಾಡಿಕೊಳ್ಳುತ್ತದೆಯೆಂದರೆ ದೇಶದಲ್ಲಿ ಯಾವ ರೀತಿಯ ಕರಾಳ ಕಾನೂನು ಕೆಲಸ ಮಾಡುತ್ತಿದೆ ಎಂದು ದಿಗಿಲಾಗುತ್ತದೆ.
ಪಕ್ಕದ ಜಮೀನಿನ ರೈತ ಬದುವನ್ನು ಕೆತ್ತಿದರೇನೆ ರಾತ್ರಿಯೆಲ್ಲ ನಿದ್ದೆ ಮಾಡದ ರೈತನಿಗೆ ಯಾವನೋ ಒಬ್ಬ ರಾಕ್ಷಸನಂತೆ ಬಂದು ಜಮೀನು ತನ್ನದು ಎಂದು ಹೇಳಿದರೆ ಹೇಗಾಗಬೇಡ ? ಒಮ್ಮಿಂದೊಮ್ಮೆಲೆ ಜಮೀನಿನ ಪಹಣಿಯಲ್ಲಿ ಬೇರೆಯವರ ಹೆಸರು ಮೂಡಿಬಂದು ಕಾಲ ಕೆಳಗಿನ ಭೂಮಿಯೇ ಕುಸಿದಂತೆ ಆಗಿರುವುದರಲ್ಲಿ ತಪ್ಪಿಲ್ಲ. ಸರ್ಕಾರದ ಗಮನಕ್ಕೆ ಬರದೇ ಒಂದು ಪಹಣಿಯಲ್ಲಿನ ಹೆಸರು ಬದಲಾವಣೆ ಸಾಧ್ಯವೇ ಇಲ್ಲ. ಅದರಲ್ಲೂ ಹೀಗೆ ನೂರಾರು ಎಕರೆಗಟ್ಟಲೆ ಜಮೀನು ವಕ್ಫ್ ಹೆಸರಿಗೆ ಬದಲಾವಣೆಯಾಗುತ್ತದೆಯೆಂದರೆ ಈ ಕಾಂಗ್ರೆಸ್ ಪಕ್ಷದ ಕುತಂತ್ರವೇನು ಎನ್ನುವುದು ಸ್ಪಷ್ಟವಾಗುತ್ತದೆ. ಯಾಕೆಂದರೆ, ಈ ವಕ್ಫ್ ಕಾಯ್ದೆಯನ್ನು ರೂಪಿಸಿ ಅದಕ್ಕೆ ಬಲ ಕೊಟ್ಟವರೇ ದಿ. ನೆಹರೂ, ದಿ. ನರಸಿಂಹರಾವ್ ಹಾಗೂ ಮನಮೋಹನ್ ಸಿಂಗ್ ಎಂಬ ಕಾಂಗ್ರೆಸ್ ಪಕ್ಷದ ಪ್ರಧಾನಿಗಳು. ಒಂದು ದೇಶದ ಪ್ರಧಾನಿಯಾಗಿ ಹೇಗೆ ಇರಬಾರದು ಎಂಬುದಕ್ಕೆ ಉದಾಹರಣೆಯಾಗಿ ಈ ಮೂವರು ಪ್ರಧಾನಿಗಳನ್ನು ಹೆಸರಿಸಬಹುದು. ಯಾಕೆಂದರೆ ಇವರು ತಮ್ಮ ಆಡಳಿತಾವಧಿಯಲ್ಲಿ ಕೆಲಸ ಮಾಡಿದ್ದೇ ಕೇವಲ ಮುಸ್ಲಿಮರ ಪರವಾಗಿ. ಭಾರತದಲ್ಲಿ ಬಹುಸಂಖ್ಯಾತರು ಹಿಂದೂಗಳು, ಅಲ್ಪಸಂಖ್ಯಾತರ ಹೆಸರಿನಲ್ಲಿ ಇನ್ನೂ ಕ್ರೈಸ್ತ, ಪಾರ್ಸಿ, ಬೌದ್ಧ, ಸಿಕ್ಖರು, ಜೈನರು ಇದ್ದಾರೆ ಆದರೆ ಈ ಮಹನೀಯರು ಕೇವಲ ಮುಸಲ್ಮಾನರಿಗಷ್ಟೇ ಕೆಲಸ ಮಾಡಿ ಯಾರಿಗೂ ಇಲ್ಲದ ವಕ್ಫ್ ಬೋರ್ಡ್ ಸ್ಥಾಪಿಸಿ ಅದಕ್ಕಾಗಿ ಸುಮಾರು ೯.೪೦ ಲಕ್ಷ ಎಕರೆ ಜಮೀನು ಮಾಡಿ ಕೊಟ್ಟಿದ್ದರೂ ಇದರ ದಾಹ ಇನ್ನೂ ತೀರಿಲ್ಲ ಹಾಗೆಯೇ ಜಮೀನು ಕಬಳಿಸುತ್ತಲೇ ಇದೆ. ಕಾಂಗ್ರೆಸ್ ಪಕ್ಷ ಇದಕ್ಕೆ ಕುಮ್ಮಕ್ಕು ಕೊಡುತ್ತಲೇ ಇದೆ.
ಈಗ ನೋಡಿ ರಾಜ್ಯಾದ್ಯಂತ ಬಡ ರೈತರ ಜಮೀನು ತನ್ನದೆಂದು ವಕ್ಫ್ ಹೇಳುತ್ತಿದ್ದರೆ ಒಂದು ದಿನವಾದರೂ ರೈತರ ಪರವಾಗಿ ಮಾತನಾಡಿದ ಕಾಂಗ್ರೆಸ್ ನಾಯಕರು ಯಾರಾದರೂ ಇದ್ದಾರೆಯೇ ? ರೈತರು ಪ್ರತಿಭಟನೆಗೆ ಇಳಿದ ಮೇಲೆ ನೋಟೀಸು ಹಿಂತೆಗೆದುಕೊಳ್ಳುತ್ತೇವೆ ಎನ್ನುತ್ತಾರೆ ಹೊರತು ಅದು ಹಾಗಾಗಬಾರದಿತ್ತು, ಯಾಕಾಯಿತು ಎಂಬ ಬಗ್ಗೆ ಮಾತನಾಡುತ್ತಿಲ್ಲ. ಇವರಿಗೆ ಮುಸ್ಲಿಮರ ಮತಗಳಷ್ಟೇ ಬಂದಿವೆಯಾ ಎಂಬ ಬಗ್ಗೆ ಕಾಂಗ್ರೆಸ್ಸಿಗರು ಆತ್ಮ ಶೋಧನೆ ಮಾಡಿಕೊಳ್ಳಬೇಕು. ಮಾತು ಮಾತಿಗೂ ಅಹಿಂದ ಎನ್ನುವ ಸಿದ್ಧರಾಮಯ್ಯ ಕೇವಲ ಅಹಿಂದ ಮತಗಳನ್ನಷ್ಟೇ ಪಡೆದರೆ ಮುಖ್ಯಮಂತ್ರಿ ಹೋಗಲಿ ಶಾಸಕನಾಗಲೂ ಸಾಧ್ಯವಿಲ್ಲ. ಅವರು ಬಹಿರಂಗವಾಗಿಯೇ ಹಿಂದೂಗಳ ವಿರುದ್ದ ಮಾತನಾಡಿದರೂ ಹಿಂದೂಗಳು ಅವರಿಗೆ ಮತ ಹಾಕುತ್ತಾರೆಂದರೆ ಮೂರ್ಖರು ಯಾರು ಇದರಲ್ಲಿ ? ಕಾಂಗ್ರೆಸ್ ನಾಯಕರಿಂದ ವಕ್ಫ್ ವಿರುದ್ಧ ಒಂದೇ ಒಂದು ಹೇಳಿಕೆ ಬಂದಿಲ್ಲ ಅಂದರೆ ರೈತರ ವಿರೋಧಿ ಯಾರು? ಬಿಜೆಪಿ ನಾಯಕರಷ್ಟೇ ಹಿಂದೂಗಳ ಪರವಾಗಿ ಹೋರಾಡಬೇಕೆ ? ರೈತರ ರಕ್ಷಣೆಗೆ ಕಾಂಗ್ರೆಸ್ ನಿಲ್ಲಲಾರದೆ ? ಇವರು ತಮ್ಮದು ಸ್ವಾತಂತ್ರ್ಯ ಕ್ಕಾಗಿ ಹೋರಾಡಿದ ಪಕ್ಷ ಎನ್ನುತ್ತಾರೆ ಆದರೆ ಸದ್ಯ ರೈತರ ಪರವಾಗಿ ಹೋರಾಟ ಮಾಡುತ್ತಿಲ್ಲ. ಇದರ ಅರ್ಥವೇನು ?
ಅಲ್ಲಿ ಬಿಜೆಪಿಯ ಯತ್ನಾಳರು ಅಹೋರಾತ್ರಿ ಧರಣಿ ಮಾಡುತ್ತಿದ್ದರೆ ಕಾಂಗ್ರೆಸ್ ನ ಬುಡಕ್ಕೇ ಬೆಂಕಿ ಬಿದ್ದಂತೆ ಆಡುತ್ತಿದ್ದಾರೆ. ಸಿದ್ಧರಾಮಯ್ಯನವರು ರೈತರಿಗೆ ಕೊಟ್ಟ ನೋಟೀಸು ಹಿಂತೆಗೆದುಕೊಳ್ಳಲು ಹೇಳಿದ್ದಾರಂತೆ ! ಅಂದರೆ ನೋಟೀಸು ಕೊಡಲು ಅವರೇ ಹೇಳಿದ್ದರೇ ? ಅಷ್ಟಕ್ಕೂ ರೈತರ ಪಹಣಿಗಳ ಮೇಲೆ ವಕ್ಫ್ ಹೆಸರು ಸೇರಿಸಲು ಆ ಸಂಸ್ಥೆಗೆ ಯಾರು ಅಧಿಕಾರ ಕೊಟ್ಟರು ? ಹಿಂದೂಗಳ ವಿರುದ್ಧ ಅವುಡುಗಚ್ಚಿ ಅತ್ಯಂತ ಹೀನಾಯವಾಗಿ ಮಾತನಾಡುವ ಕಾಂಗ್ರೆಸ್ ಮಂತ್ರಿ ಜಮೀರ ಅಹ್ಮದನಿಗೆ ಬುದ್ಧಿ ಹೇಳುವವರಾರು ? ಮಾತು ಮಾತಿಗೂ ಇವರು ರೈತರ ಒಂದಿಂಚೂ ಜಮೀನು ಕಸಿದುಕೊಳ್ಳುವುದಿಲ್ಲ ಎನ್ನುತ್ತಾರೆ ಆದರೆ ಪಹಣಿಯಲ್ಲಿ ಹೆಸರು ಯಾಕೆ ಬಂತು ಎಂಬ ಬಗ್ಗೆ ಮಾತನಾಡುವುದಿಲ್ಲ. ವಕ್ಫ್ ಕಾಯ್ದೆಗೆ ತಿದ್ದುಪಡಿ ಮಾಡಲು ನೇಮಿಸಲಾದ ಜಂಟಿ ಸಂಸತ್ ಸಮಿತಿಯ ಸದಸ್ಯರು ಪ್ರತಿಭಟನಾಕಾರರ ಭೇಟಿಯಾದರೆ ಇವರಿಗೇಕೆ ಕೋಪ ? ಜೆಪಿಸಿ ಒಂದು ನಾಟಕದ ಕಂಪನಿ ಹಾಗೆ ಹೀಗೆ ಅನ್ನುತ್ತಿದ್ದಾರೆ. ಬಿಜೆಪಿ ಯವರು ರೈತರ ಪರವಾಗಿ ಧರಣಿ ಕುಳಿತರೆ ಇವರಿಗೇಕೆ ಉರಿ ?
ಎಂಥ ವಿಪರ್ಯಾಸ ನೋಡಿ ಶೇಕಡಾ ಎಪ್ಪತ್ತರಷ್ಟು ಇರುವ ಜನರು ಶೇಕಡಾ ಇಪ್ಪತ್ತರಷ್ಟು ಇರುವ ಒಂದು ಕೋಮಿಗೆ ಹೆದರಬೇಕಾಗಿದೆ ! ಇದಕ್ಕೆ ಕಾರಣ ಇವರೆಲ್ಲ ಸೇರಿಕೊಂಡು ಹಿಂದೂಗಳ ವಿರುದ್ಧ ನಡೆಸುತ್ತಿರುವ ಪಿತೂರಿ. ಇನ್ನಾದರೂ ಹಿಂದೂಗಳು ಒಂದಾಗಬೇಕು. ನಮ್ಮ ನಮ್ಮೊಳಗೆ ಪಂಗಡಗಳನ್ನು ಮಾಡಿಕೊಂಡು ಹೊಡೆದಾಡುವುದನ್ನು ಬಿಟ್ಟು ಒಗ್ಗಟ್ಟಿನಲ್ಲಿ ಬಲವಿದೆ ಎಂಬುದನ್ನು ತೋರಿಸುವ ಕಾಲ ಬಂದಿದೆ. ಇಲ್ಲದಿದ್ದರೆ ನಮ್ಮ ಮುಂದಿನ ಪೀಳಿಗೆ ನಮ್ಮನ್ನೆಂದೂ ಕ್ಷಮಿಸಲಾರದು.
ಉಮೇಶ ಬೆಳಕೂಡ, ಮೂಡಲಗಿ