Monthly Archives: November, 2024

ಕವನ : ಹುಟ್ಟುಹಬ್ಬ

ಹುಟ್ಟುಹಬ್ಬಇಂದು ಅವಳ ಹುಟ್ಟುಹಬ್ಬ ಜನಿಸಿದಳು ಮಗಳಾಗಿ ಮನೆಗೆ ಗೆಳತಿಯಾದಳು ನನಗೆ ತಾಯಿ ಮಮತೆ ವಾತ್ಸಲ್ಯ ನನ್ನ ಜೀವದ ಕೊನೆಗೆ ಕೈ ಹಿಡಿದು ನಡೆಸಿದಳು ಪ್ರತಿ ಘಳಿಗೆ ಸಗ್ಗ ಸುಖ ಸೋಪಾನ ನಮ್ಮ ಸುಂದರ ಗೂಡಿಗೆ ಸತ್ಯ ಸಮತೆ ಪ್ರೀತಿ ಅವಳು ಜ್ಞಾನ ದೀವಿಗೆ ಗಟ್ಟಿ ಹಿಡಿದಳು ಯಶದ ಏಣಿ ನಿತ್ಯ ನಗೆಯು ಮುತ್ತು ಸವಿ ಬಾಳಿಗೆ ಬದುಕು ಗೆದ್ದೇನು ಅವಳ ದೇಣಿಗೆ ಬುದ್ಧ ಬಸವರ ಬೆಳಕು ಇಂದು ನಾಳಿಗೆ ನೂರು ವರುಷ ಬಾಳು ನೀನು ನನ್ನ ದೇವತೆ ______________________ *ಡಾ ಶಶಿಕಾಂತ ಪಟ್ಟಣ ರಾಮದುರ್ಗ*

ಸಾಹಿತಿ , ಕನ್ನಡಪರ ಚಿಂತಕ ಡಾ.ಭೇರ್ಯ ರಾಮಕುಮಾರ್ ಅವರಿಗೆ ಸುವರ್ಣ ಮಹೋತ್ಸವ ಪುರಸ್ಕಾರ

ಮೈಸೂರಿನ ಹಿರಿಯ ಸಾಹಿತಿ , ಪತ್ರಕರ್ತ, ಕನ್ನಡಪರ ಚಿಂತಕ ಹಾಗೂ ಪರಿಸರ ಪ್ರೇಮಿ ಡಾ.ಭೇರ್ಯ ರಾಮಕುಮಾರ್ ಅವರದ್ದು ಕನ್ನಡ ಸಾಹಿತ್ಯ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ಜನಪ್ರಿಯ ಹೆಸರು. 1985 ರಲ್ಲಿ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದಾಗಲೇ ಗ್ರಾಮಾಂತರ ಬುದ್ಧಿಜೀವಿಗಳ ಬಳಗ ಎಂಬ ಸಂಸ್ಥೆ ಆರಂಭಿಸಿದರು.ಹಿರಿಯ ಪತ್ರಕರ್ತರಾದ ಪಿ.ಲಂಕೇಶ್ ಅವರು ನೂರು ಗ್ರಾಮೀಣ...

ದಾಸ ಸಾಹಿತ್ಯದ ಧ್ರುವ ತಾರೆ ಶ್ರೀ ವಿಜಯದಾಸರು – ವಿದ್ವಾನ್ ಶ್ರೀನಿವಾಸಾಚಾರ್ಯರು

ಬೆಂಗಳೂರು : ಹರಿದಾಸ ಕೂಟದಲ್ಲಿ 18 ನೇ ಶತಮಾನದ ಪ್ರಮುಖರಲ್ಲಿ ಶ್ರೀ ವಿಜಯ ದಾಸರು ಆಗ್ರಪಂಕ್ತಿ ಯಲ್ಲಿದ್ದಾರೆ, ಪುರಂದರ ದಾಸರ ನಂತರ ಸುಮಾರು ಒಂದು ಶತಮಾನಗಳಷ್ಟು ಕಾಲ ನೇಪಥ್ಯ ಕ್ಕೆ ಸರಿದಿದ್ದ ದಾಸಸಾಹಿತ್ಯ ವನ್ನು ಉದ್ದೀಪನಗೊಳಿಸಿದ ವಿಜಯದಾಸರು ದಾಸ ಸಾಹಿತ್ಯ ದ ಧ್ರುವ ತಾರೆ ಎಂದು ವಿದ್ವಾನ್ ಕರ್ನೂಲು ಶ್ರೀನಿವಾಸಾಚಾರ್ಯರು ನೆರೆದಿದ್ದ ಭಕ್ತರಿಗೆ ತಿಳಿಸಿದರು.ನಗರದ...

ಗುರ್ಲಾಪೂರ : ಶವ ಚಿತಾಗಾರಕ್ಕಾಗಿ ಮನವಿ

  ಮೂಡಲಗಿ: -ತಾಲೂಕಿನ ಗುರ್ಲಾಪೂರದಲ್ಲಿ ಶವಸಂಸ್ಕಾರಕ್ಕಾಗಿ ಸೂಕ್ತ ಚಿತಾಗಾರ ಇಲ್ಲದೆ ತೊಂದರೆಯಾಗುತ್ತಿದೆ ಎಂದು ಸ್ಥಳೀಯ  ಶಿವಾಜಿ ಗ್ರಾಮೀಣ ಅಭಿವೃದ್ಧಿ ಸೇವಾ ಸಂಘಟನೆಯಿಂದ ಮೂಡಲಗಿ ಪುರಸಭೆ ಮುಖ್ಯಾಧಿಕಾರಿಗಳಾದ ತುಕಾರಾಮ ಮಾದರ ಅವರಿಗೆ ಶವ ಚಿತಗಾರ ನಿರ್ಮಾಣದ ಬಗ್ಗೆ ಮನವಿ ಸಲ್ಲಿಸಲಾಯಿತು.      ಗುರ್ಲಾಪೂರದಲ್ಲಿ ಸುಮಾರು 300 ಕುಟುಂಬಗಳಿದ್ದು, ಶವ ಚಿತಾಗಾರ ಇಲ್ಲದೆ ಸಮಸ್ಯೆಯಾಗುತ್ತಿರುವುದು. ಹಿಂದೆ...

ವಚನ ಅಧ್ಯಯನ ವೇದಿಕೆ ಮತ್ತು ಅಕ್ಕನ ಅರಿವು ಸದಸ್ಯರ ಕೃತಿ ಬಿಡುಗಡೆ ಸಮಾರಂಭ

ಅನುಭವ ಮಂಟಪ ಅಭಿವೃದ್ಧಿ ಪ್ರಾಧಿಕಾರ ಮತ್ತು ಬಸವ ತಿಳಿವಳಿಕೆ ಮತ್ತು ಅಧ್ಯಯನ ಕೇಂದ್ರ - ಪುಣೆ ಇದರ ವತಿಯಿಂದ ಬಸವಕಲ್ಯಾಣದಲ್ಲಿ 10 ನೆಯ ತಾರೀಕು ರವಿವಾರ ಅಕ್ಕನ ಅರಿವು ಮತ್ತು ವಚನ ಅಧ್ಯಯನ ವೇದಿಕೆಯ ಸದಸ್ಯರ ಒಟ್ಟು ಐದು ಪುಸ್ತಕಗಳು ಬಿಡುಗಡೆಯಾದವು.ಕಾರ್ಯಕ್ರಮದಲ್ಲಿ ಮೊದಲಿಗೆ ಡಾ. ಮೃತ್ಯುಂಜಯ ಶೆಟ್ಟರ ಅವರು ವಚನ ಪ್ರಾರ್ಥನೆ ನಡೆಸಿಕೊಟ್ಟರು. ನಂತರ...

ಎಸ್‌ಪಿಬಿ ಗಾನ ರಸಾಯನ-೩ ಯಶಸ್ವಿ ಪ್ರದರ್ಶನ

ಮೈಸೂರಿನ ಶಾರದಾದೇವಿನಗರದಲ್ಲಿರುವ ಗಾನ ಚಂದನ ಕಲಾಬಳಗದ ವತಿಯಿಂದ ಇತ್ತೀಚೆಗೆ ನಾದಬ್ರಹ್ಮ ಸಭಾಂಗಣದಲ್ಲಿ ಎಸ್‌ಪಿಬಿ ಗಾನ ರಸಾಯನ-೩ ಕಾರ್ಯಕ್ರಮವನ್ನು ಮಾಜಿ ನಗರಪಾಲಿಕೆ ಸದಸ್ಯ ಮ.ವಿ.ರಾಮಪ್ರಸಾದ್ ಅವರು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.ಕಾಳಿದಾಸ ರಸ್ತೆಯಲ್ಲಿರುವ ಶ್ರೀ ಲಕ್ಷ್ಮಿ ನರಸಿಂಹಸ್ವಾಮಿ ದೇವಸ್ಥಾನದ ಮುಖ್ಯಸ್ಥ ಕೆ.ಆರ್.ಯೋಗನರಸಿಂಹನ್ (ಮುರುಳಿ ಅಯ್ಯಂಗಾರ್), ಮಾಜಿ ನಗರಪಾಲಿಕೆ ಸದಸ್ಯ ಎಂ.ಡಿ.ಪಾರ್ಥಸಾರಥಿ, ಸಂಸ್ಥೆ ಸಂಸ್ಥಾಪಕ ಆರ್.ಸುಧೀಂದ್ರ, ಆರ್.ನಟರಾಜ್,...

ಕವನ : ಚಿಂಚಣಿಯ ಚಿಜ್ಯೋತಿ

ಚಿಂಚಣಿಯ ಚಿಜ್ಯೋತಿಗದುಗಿನ ಗುರುಗಳ ಪಡಿನೆರಳಾಗಿ ಕನ್ನಡ -ಕನ್ನಡಿಗ-ಕರ್ನಾಟಕ ಕೈಂಕರ್ಯಕ್ಕೆ ಕಟಿಬದ್ಧರಾಗಿ ಸಮಾಜ ಸೇವಾ ದೀಕ್ಷೆಗೆ ಕಂಕಣಬದ್ಧರಾದ ತಾವು- ಎರಡೂವರೆ ದಶಕಗಳ ಕಾಲ ಗಡಿನಾಡಿನ ಗಡಿಗೆಯಲ್ಲಿ ಕನ್ನಡದ ಅಡುಗೆ ಮಾಡಿ ಪ್ರೀತಿಯಿಂದ ಉಣಬಡಿಸಿ ಕನ್ನಡಿಗರಂತರಂಗದಲಿ ಅಂತಃಕರಣದ ಭಾಗವಾದಿರಿ.ನಡೆಯೊಳಗೆ ನುಡಿ ನುಡಿಯೊಳಗೆ ನಡೆ ಈ ಉಭಯಗಳಲಿ ಕನ್ನಡವನೆ ತುಂಬಿ ಗಡಿಯ ಅಡಿಅಡಿಗಳಲಿ ಕನ್ನಡ ಡಿಂಡಿಮವ ಮೊಳಗಿಸುತ ಅನ್ನ ಭಾಷಿಕರೆದೆಗಳಲಿ ಕನ್ನಡವ ಬಿತ್ತಿ ಬೆಳೆದು ಸಂಭ್ರಮಿಸಿದ ತಾವು ಚಿಂಚಣಿಯ ಚಿಜ್ಯೋತಿಯಾಗಿ ಕನ್ನಡಿಗರ ಕಣ್ಮಣಿಯಾಗಿ ಕಂಗೊಳಿಸಿದಿರಿ.'ಬಸವ ಕನ್ನಡ 'ವೆಂಬ ಷಡಕ್ಷರಿ ಮಂತ್ರವನು ಜಪಿಸುತ್ತ, ಅವುಗಳನೆ ಶ್ರೀ ಮಠದ ಕಾಯಕವಾಗಿರಿಸಿಕೊಂಡ ತಾವು ಕನ್ನಡ ಮಠದ ಕನ್ನಡದ ಸ್ವಾಮೀಜಿಯಾಗಿ ಕನ್ನಡ ಸಾರಸ್ವತ ಲೋಕದಲಿ ಕನ್ನಡ ಸುವರ್ಣ ಪುಷ್ಪಗಳನ್ನರಳಿಸಿ ಧ್ರುವತಾರೆಯಂದದಿ ಮಿನುಗುತಿರುವಿರಿ.ಶ್ರೀಪಾದ ಕುಂಬಾರ, ಚಿಕ್ಕೋಡಿ.

ಬೀದರ್ ನಲ್ಲಿ ಬೆಳಂಬೆಳಗ್ಗೆ ಲೋಕಾಯುಕ್ತ ದಾಳಿ

ಬೀದರ್ ನಲ್ಲಿ ಬೆಳಂಬೆಳಗ್ಗೆ ಲೋಕಾಯುಕ್ತ ದಾಳಿಬೀದರ - ಅಕ್ರಮ ಆಸ್ತಿ ಗಳಿಕೆ ಆರೋಪಗಳು ಬಂದ ಹಿನ್ನೆಲೆ ಜಿಲ್ಲಾ ತರಬೇತಿ ಕೇಂದ್ರದ ಅಧಿಕಾರಿ ನಿವಾಸ ಹಾಗೂ ಕಚೇರಿ ಮೇಲೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ದಾಳಿ ನಡೆದಿದೆ.ಎರಡು ಕಡೆ ದಾಳಿ ಮಾಡಿ ಭ್ರಷ್ಟ ಅಧಿಕಾರಿಗೆ ಲೋಕಾಯುಕ್ತ ಪೋಲಿಸರು ಶಾಕ್ ಮುಟ್ಟಿಸಿದ್ದಾರೆ. ಜಿಲ್ಲಾ ತರಬೇತಿ ಕೇಂದ್ರದ ಅಧಿಕಾರಿ ರವೀಂದ್ರ ರೊಟ್ಟೆ...

ಶತಮಾನದ ಸಂತರು ಕೃತಿ ಲೋಕಾರ್ಪಣೆ

ಹುಬ್ಬಳ್ಳಿ:ಹುಬ್ಬಳ್ಳಿಯ ಬೆಂಗೇರಿ ಸೆಂಟ್ರಲ್ ಸಂತೆ ಮೈದಾನದಲ್ಲಿ "ಪವರ ಆಫ್ ಯೂಥ್ಸ ಫೌಂಡೇಶನ್ನ"ವರು ಹಮ್ಮಿಕೊಂಡಿದ್ದ "ಕನ್ನಡ ರಾಜ್ಯೋತ್ಸವ ನಾಡಹಬ್ಬ" ಕಾರ್ಯಕ್ರಮ ಇತ್ತೀಚೆಗೆ ಅದ್ದೂರಿಯಾಗಿ ಜರುಗಿತು. ಈ ಕಾರ್ಯಕ್ರಮದಲ್ಲಿ ಸಮಾಜ ಸೇವಕರಿಗೆ ಸಾಹಿತಿಗಳಿಗೆ ವಿವಿಧ ಕಲಾವಿದರಿಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತುಕಾರ್ಯಕ್ರಮದ ಉದ್ಘಾಟನೆಯನ್ನು ಡಾ. ವಿ ಎಸ್ ಪ್ರಸಾದ ರವರು ನೆರವೇರಿಸಿದರು ಕಾರ್ಯಕ್ರಮ ನಡೆಯುವ ಬಗ್ಗೆ ಮಾತನಾಡುತ್ತ...

ವಿವೇಕ ಪಬ್ಲಿಕ್ ಶಾಲೆಯಲ್ಲಿ ಯಶಸ್ವಿ ವಿಜ್ಞಾನ ಮೇಳ

ಸಿಂದಗಿ - ಬೇರೆ ಬೇರೆ ಬಣ್ಣಗಳು ಮಿಶ್ರಣವಾದಾಗ ಅವುಗಳನ್ನು ಬೇರ್ಪಡಿಸುವುದು ಹೇಗೆ, ಆಪ್ಟಿಕಲ್ ಫೈಬರ್ ಗಳ ಮೂಲಕ ಸಾವಿರಾರು ಸಿಗ್ನಲ್ ಗಳನ್ನು ಕಳಿಸಬಹುದಾದ, ಶೆಲ್ ಮೂಲಕ ಮೋಟಾರು ಚಾಲನೆ ಮಾಡುವುದು, ಮನೆ ಮದ್ದುಗಳನ್ನ ಬಳಕೆ ಮಾಡಿಕೊಂಡು ಆರೋಗ್ಯವಾಗಿರುವುದು.. ಹೀಗೆ ಹಲವು ವೈಜ್ಞಾನಿಕ ವಿಷಯಗಳ ಮೂಲಕ ವಿದ್ಯಾರ್ಥಿಗಳೇ ವಿವರಿಸುವುದು, ಜೊತೆಗೆ ಬೇರೆ ಬೇರೆ ಶಾಲೆಗಳ ವಿದ್ಯಾರ್ಥಿಗಳು...
- Advertisement -spot_img

Latest News

ಬಸವಕಲ್ಯಾಣ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಹೈಡ್ರಾಮಾ

ಕಾಂಗ್ರೆಸ್ ಕೌನ್ಸಿಲರ್‌ಗಳ ಮಧ್ಯೆ ಗಲಾಟೆಬೀದರ - ಬಸವಕಲ್ಯಾಣ ನಗರದಲ್ಲಿ ಟಿಪ್ಪು ಸುಲ್ತಾನ್ ಚೌಕ ನಾಮಕರಣ ವಿಚಾರದಲ್ಲಿ ಕಾಂಗ್ರೆಸ್ ಸದಸ್ಯರ ನಡುವೆ ಗಲಾಟೆ ಉಂಟಾಗಿ ಕೈ ಕೈ...
- Advertisement -spot_img
error: Content is protected !!
Join WhatsApp Group