ಶುಭೋದಯ
ಚಂದನವನದ
ಶುಭೋದಯದಲಿ
ಮೂಡಿಬಂದಿರಿ ನೀವು
ಅಗಾಧ ವ್ಯಕ್ತಿತ್ವದ
ಮೇರುಪರ್ವತದ ನಿಲುವಿನಲಿ
ವಚನದಾರ್ಶನಿಕರಾಗಿ
ಎಲ್ಲರ ಮನ ಮುಟ್ಟಿದಿರಿ
ಇಂದು
ತಿಳಿಹೇಳಿದಿರಿ ಔಷಧಿ
ಆರೋಗ್ಯ ಕೃಷಿಯ ಕುರಿತು
ಮನನಮಾಡಿಸಿದಿರಿ
ವಚನಸಾರದ ಒಳಾರ್ಥಗಳ
ಹೆಮ್ಮೆಯಿಂದ ಹಂಚಿಕೊಂಡಿರಿ
ಅಕ್ಕನ ಅರಿವಿನ ಉಪನ್ಯಾಸಗಳ
ಅದಕ್ಕಾಗಿ ದುಡಿವವರ ಹೆಸರುಗಳ
ಕವಿಯಾಗಿ ಕುವೆಂಪು ಅವರ
ನೆನಪಿಸುತ್ತಾ
ನಿಸರ್ಗಪ್ರೇಮಿಯಾಗಿ
ಪ್ರಾಣಿ -ಪಕ್ಷಿ ಸಂಕುಲವನ್ನು
ಪ್ರೀತಿಸುವುದ ಅರುಹಿದಿರಿ
ಭಾವುಕರಾದಿರಿ
ಅವ್ವನ ಮಾತೃ ಹೃದಯವನ್ನು
ತಂದೆಯ ಕಳಕಳಿಯ
ನೆನೆದು
ಅಭಿಮಾನದಿಂದ ಹೇಳಿದಿರಿ
ಧರ್ಮಪತ್ನಿಯ
ಸಹಕಾರ ಮನೋಭಾವವ
ಮೂಡಿಬಂದಿರಿ
ಶುಭೋದಯದಲಿ ಇಂದು
ನಮ್ಮೆಲ್ಲರ ಹೆಮ್ಮೆಯ
ಮಾರ್ಗದರ್ಶಕರಾಗಿ
ಬುದ್ಧ -ಬಸವ - ಅಂಬೇಡ್ಕರರ
ಶರಣತತ್ವದ ನಿಜವಾದ ಹರಿಕಾರರಾಗಿ
ಸುಧಾ ಪಾಟೀಲ
ಬೆಳಗಾವಿ
ಮಗನೇ ನಾ ಸತ್ರ ನನ್ನ ಎಲ್ಲಿ ಸುಡ್ತಿಯೋ
ಮೂಲ ಕತೆ: ಮಧುನಾಯ್ಕ ಲಂಬಾಣಿ, ಹೂವಿನಹಡಗಲಿ
ರಂಗ ರೂಪಾಂತರ: ಗೊರೂರು ಅನಂತರಾಜು, ಹಾಸನ.
ದೃಶ್ಯ; ೧ (ಊರ ದೇವರ ಗುಡಿ. ಪೂಜಾರಿ ಕಸ ಗುಡಿಸುತ್ತಿರುವನು)
ಹಿನ್ನೆಲೆ ಧ್ವನಿ: ಕೈಯಾಗ ಕಸಬರಗಿ ಹಿಡಕೊಂಡು ಗುಡಿಮುಂದ್ಲ ಕಸ ದೂರಸರಿಸುತ್ತಿದ್ದಾನಲ್ಲ ಈ ಪೂಜಾರಿ ಈತನ್ನೊಳಗಿನ ಕಸ ಮಾತ್ರ ರಾಶಿ ರಾಶಿ ಬಿದ್ದು ಕೊಳಿತಿತ್ತು. ಗುಡಿ ಮುಂದಿರುವ...
ಭೂಮಿಯ ಫಲವತ್ತತೆಗಾಗಿ ನಂದಿಕೃಷಿಯ ಪುನುರುತ್ಥಾನ ಇಂದಿನ ಅವಶ್ಯಕತೆಯಾಗಿದ್ದು, ಮುಂದಿನ ಪೀಳಿಗೆಗೆ ಬೇಕಾಗುವ ರಾಸಾಯನಿಕ ಮುಕ್ತ ಆಹಾರ ಧಾನ್ಯ ಬೆಳೆಯಲು ನಂದಿ ಆಧಾರಿತ ಕೃಷಿಯಿಂದ್ರ ಮಾತ್ರ ಸಾಧ್ಯವೆಂಬ ವಾಸ್ತವದ ಹಿನ್ನೆಲೆಯಲ್ಲಿ ನಂದಿಕೃಷಿ ಪುನರುತ್ಥಾನಕ್ಕಾಗಿ ಗದಗ ಜಿಲ್ಲೆಯ ಡೋಣಿ ಸಮೀಪದ ಕಪ್ಪತಗುಡ್ಡದ ಮಡಿಲಲ್ಲಿರುವ ಶ್ರೀ ನಂದಿವೇರಿ ಸಂಸ್ಥಾನ ಮಠದಿಂದ ಆಯೋಜಿಸಲಾಗುತ್ತಿರುವ ನಿರಂತರ ಆಂದೋಲನವು ಗ್ರಾಮ ಗ್ರಾಮಕ್ಕೆ ತಲುಪಿ...
ಉತ್ತರಪ್ರದೇಶದ ಪ್ರಯಾಗ ರಾಜ್ ದಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳ ದಿನದಿನಕ್ಕೂ ಅತ್ಯಂತ ಆಕರ್ಷಣೀಯ ಹಾಗೂ ಸನಾತನಿಯಾಗುತ್ತ ನಡೆದಿದೆ. ೧೪೪ ವರ್ಷಗಳಿಗೊಮ್ಮೆ ನಡೆಯುವ, ಗಂಗಾ ಯಮುನಾ ಸರಸ್ವತಿ ನದಿಗಳ ಸಂಗಮವಾಗಿರುವ ಈ ಪುಣ್ಯ ಭೂಮಿಯಲ್ಲಿ ನಡೆಯುತ್ತಿರುವ ಈ ಕುಂಭಮೇಳದಲ್ಲಿ ಮೌನಿ ಅಮಾವಾಸ್ಯೆಯ ದಿನ ಸುಮಾರು ೧೦ ಕೋಟಿ ಜನ ಶಾಹಿ ಸ್ನಾನ ಮಾಡಲಿದ್ದಾರೆ ಎಂದು ಅಂದಾಜಿಸಲಾಗಿದೆ.
ಕುಂಭ...
ದೀ ಪಕ ಬಿಳ್ಳೂರ ಅವರು ಬೆಳಗಾವಿ ಜಿಲ್ಲೆಯ ಅಥಣಿಯವರು, ವೃತ್ತಿಯಿಂದ ಬಿ.ಇ. (ಮೆಕ್ಯಾನಿಕಲ್) ಇಂಜಿನೀಯರ್, ಆದರೂ ಪ್ರವೃತ್ತಿಯಲ್ಲಿ ಲೇಖಕ, ಕವಿ ಹೃದಯರು. ಇವರ ತಂದೆಯವರ ಎಲ್ಲ ಕವನಗಳನ್ನು ಕವನ ಸಂಕಲನವಾಗಿ ಪ್ರಕಟಿಸಿದರು. ಇವರ ಪರಿಚಯ ಕಾಗವಾಡದ ಸಾಹಿತ್ಯ ಸಮ್ಮೇಳನ ಪೂರ್ವದಲ್ಲಿ ಆಯಿತು. ತಂದೆಯ ಋಣವನ್ನು ಕೃತಿ ಪ್ರಕಟಣೆ ಮೂಲಕ ತೀರಿಸುತ್ತಿರುವದು ನಮಗೆಲ್ಲ ಹೆಮ್ಮೆಯ...
ಮಿಜರೋರಾಂ ಕೇಂದ್ರಿಯ ವಿಶ್ವವಿದ್ಯಾಲಯದ ಪ್ರೊ. ಕೆ. ವಿದ್ಯಾಸಾಗರ ರಡ್ಡಿ ಅಭಿಪ್ರಾಯ
ಮೂಡಲಗಿ: ‘ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಜಗತ್ತನ್ನು ಎದುರಿಸುವಲ್ಲಿ ಸಮರ್ಥರನ್ನಾಗಿಸುವ ನಿಟ್ಟಿನಲ್ಲಿ ಮೂಡಲಗಿ ಶಿಕ್ಷಣ ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯವು ಶೈಕ್ಷಣಿಕವಾಗಿ ಶ್ಲಾಘನೀಯ ಕಾರ್ಯ ಮಾಡುತ್ತಲಿದೆ’ ಎಂದು ಮಿಜೋರಾಂ ಕೇಂದ್ರಿಯ ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ಅಧ್ಯಯನ ಪೀಠದ ಪ್ರಾಧ್ಯಾಪಕ ಪ್ರೊ. ಕೆ. ವಿದ್ಯಾಸಾಗರ ರೆಡ್ಡಿ...
ಬೆಂಗಳೂರು- ವಿಶ್ವದ ಶ್ರೇಷ್ಠ ಸಾಹಿತ್ಯ ಹೇಗೆ ಪ್ರತಿಯೊಬ್ಬ ಮನುಷ್ಯನ ಘನತೆಯನ್ನು ಎತ್ತಿ ಹಿಡಿಯುತ್ತದೆಯೋ ಹಾಗೆಯೇ ನಮ್ಮ ಭಾರತದ ಸಂವಿಧಾನವೂ ಕೂಡ ಕೆಲವೇ ಜನರ ಘನತೆಯನ್ನು ಮಾತ್ರ ಎತ್ತಿಹಿಡಿಯುವ ಮತ್ತು ರಕ್ಷಿಸುವ ಕೆಲಸ ಮಾಡುವುದಿಲ್ಲ ಬದಲಾಗಿ ಭಾರತದ ನೆಲದಲ್ಲಿರುವ ಪ್ರತಿಯೊಬ್ಬ ಮನುಷ್ಯನ ಘನತೆಯನ್ನು ಎತ್ತಿಹಿಡಿದು ರಕ್ಷಣೆ ಮಾಡುತ್ತದೆ ಎಂದು ಕಥೆಗಾರರೂ ಹಾಗೂ ಚಿಂತಕರಾದ ಡಾ.ಸರ್ಜಾಶಂಕರ್ ಹರಳಿಮಠ...
ಕಾದರವಳ್ಳಿ ಎಸ್ ವಿ ಕುಲಕರ್ಣಿ ಸರಕಾರಿ ಪ್ರೌಢಶಾಲೆಗೆ 2024-25 ನೇ ಸಾಲಿನ ಸಿಎಸ್ಆರ್ ಯೋಜನೆಯಲ್ಲಿ ಬ್ಲೂಪೈನ್ ಸೋಲಾರ್ ಎನರ್ಜಿ ಕಂಪನಿ ಹಾಗೂ ಜೀವನ ಪ್ರಕಾಶ ಚಾರಿಟೇಬಲ್ ಸೊಸೈಟಿ ದೆಹಲಿ ವತಿಯಿಂದ ಐದು ನೂರು ಲೀಟರ್ ನೀರಿನ ಶುದ್ಧೀಕರಣ ಸಾಮರ್ಥ್ಯದ ಶುದ್ಧ ಕುಡಿಯುವ ನೀರಿನ ಘಟಕವನ್ನು ಪೂರೈಕೆ ಮಾಡಲಾಯಿತು.
ಸ್ಥಳೀಯ ಪ್ರದೇಶಗಳ ಅಭಿವೃದ್ಧಿ ದೃಷ್ಟಿಯಿಂದ ಶಾಲೆಗಳಿಗೆ ಬೇಕಾಗುವಂತಹ...
ಒಂದು ಸುಡುಗಾಡು ಕಥೆ.
ಮೂಲ ಕಥೆ: ಮಧು ನಾಯ್ಕ ಲಂಬಾಣಿ, ಹೂವಿನಹಡಗಲಿ.
ರಂಗ ರೂಪಾಂತರ: ಗೊರೂರು ಅನಂತರಾಜು, ಹಾಸನ.
ದೃಶ್ಯ-೧ ( ಆ ಊರಿನ ಜನರೆಲ್ಲಾ ಒಂದು ಕಡೆ ಸೇರಿದ್ದಾರೆ)
ಅಧಿಕಾರಿ: ಎಲ್ಲರೂ ಸುತ್ತಲೂ ಕುಂತಕೋ ಬೇಕು. ಗಲಾಟೆ ಮಾಡ್ಬಾರ‍್ದು. ಸಾಹೇಬ್ರು ಏನ್ ಹೇಳ್ತಾರ ಕೇಳ್ಕೋಬೇಕು. ಅವರು ಯಾರಿಗೆ ಪ್ರಶ್ನೆ ಕೇಳ್ತಾರ ಅವರು ಉತ್ತರ ಕೊಡ್ಬೇಕು ತಿಳಿತಾ.? ಊರ...