ಕವನ

ಕವನ : ಸುಣಧೋಳಿಯ ಶ್ರೀಗುರು

ಸುಣದೋಳಿಯ ಶ್ರೀ ಗುರುಗಟ್ಟಿ ಇರಲಿ ತಂಗಿ ನಿನ್ನ ಭಾವ ಭಂಗಿ ನಾನು 'ದೊಡ್ಡಾಕೆಂದು ಕುಣಿಬ್ಯಾಡ ಹಿಗ್ಗಿ ಗುರುವಿನ ಮರೆತು ಮಾಡಬ್ಯಾಡ ನೀ ಸುಗ್ಗಿ|| ಪ ||ಮನದ ಮೈಲಿಗೆ ತೊಳಕೋರ ಶಿರಬಾಗಿ ನಾನು 'ಹೋದರೆ ವರವಾಗಿ ಶಿವಯೋಗಿ ಹೀನ ದುರ‍್ಗುಣಗಳನ್ನು ನೀ ನೀಗಿ ಬಂದರೆ ಅಪ್ಪಿಕೊಳ್ಳದೆ ಬಿಡದಿಹನು ಶಿವಯೋಗಿಸತಿಸುತರ ಚಿಂತ್ಯಾಗ ಯತಿವರನ ಮರತ್ಯಾಕ ಪಂಚಾಕ್ಷರಿ ಮಂತ್ರ ಪಠಿಸಿದರ ಸಾಕ ಸುಣದೋಳಿ ಯೋಗಿ ಬರತಾನ ಹಂತ್ಯಾಕಹಗ್ಗವಿಲ್ಲದ ತೇರ ಹಿಗ್ಗಿಲೆ...

ಕವನ : ದೇವ ಮಾನವ ಬಾಬಾ ಸಾಹೇಬ 

ದೇವ ಮಾನವ ಬಾಬಾ ಸಾಹೇಬ  ಆ ದೇವರನ್ನು ಕಂಡಿಲ್ಲ ನಾವು ದೇವರನ್ನು ನಿಮ್ಮಲ್ಲಿಯೇ ಕಂಡು ಕೊಂಡೆವು ನಾವು ಅಕ್ಷರಶಃ ದೈವೀ ಗುಣಗಳನ್ನು ಮೈಗೂಡಿಸಿಕೊಂಡ ನಿಜವಾದ ದೇವರು ನೀವು ದೇವತಾ ಮನುಷ್ಯರು ನೀವು ಮನುಜರೆಲ್ಲ ಒಂದೇ ನಮ್ಮಲ್ಲಿ ಹರಿವ ರಕ್ತ ಒಂದೇ ಈ ಭೂಮಿಯ ಬೆಳಕು, ಹರಿಯುವ ನೀರು ಒಂದೇ ಎಂದು ಸಮಾನತೆಯ ಮಾನವೀಯತೆಯ ತತ್ವಗಳನು ಎಲ್ಲರಿಗೂ ತಿಳಿಸಿದ ದೇವರು ನೀವು. ಹಿಂದುಳಿದ ಸಮಾಜಕ್ಕಷ್ಟೇ ಅಲ್ಲದೇ ಮಹಿಳೆಯರ ಮತ್ತು               ...

ಎರಡು ಕವನಗಳು

 ಮಹಾಮನೆಯ ಮಹಾಮಗಳು _____________________ ಮಹಾಮನೆಯ ಮಗಳು ಉರಿಯು೦ಡ ಕರ್ಪುರ ಕದಳಿಯ ಕತ್ತಲೆಯ ಬೆಳಗುವ ಮಹಾಬೆಳಗು ಅಕ್ಕರೆಯ ಅಕ್ಕ ಮಹಾದೇವಿಯಕ್ಕ ತೊರೆದು ಕೌಶಿಕನರಮನೆ ಹೊರಟಳು ಕಲ್ಯಾಣಕೆ ತುಂಡು ಕಂಬಳಿ ಹೊತ್ತು ತವರ ಮೋಹವ ಬಿಟ್ಟು ತರು ಗುಲ್ಮ ಲತೆ ಹೂವು ಪಶು ಪಕ್ಷಿ ದುಂಬಿಯ ಸ್ನೇಹ ತೊಟ್ಟು ಮಗಳೆ೦ದು ಕರೆದೊಯ್ದ ಅನುಭವದ ಮಂಟಪಕೆ ಅಣ್ಣ ಬಸವಣ್ಣ ಶರಣರ ದಂಡು ಅಲ್ಲಮರ ಪ್ರಶ್ನೆಗೆ ಕೊಟ್ಟಳು ಉತ್ತರ ಅಪರೂಪದ ಅನುಭಾವ ಚೆಲುವಿನ ಚಿತ್ಕಳೆ ಜ್ಞಾನದ ಜ್ಯೋತಿ ಉಡತಡಿಯ ಉಡುಗೊರೆ ಕಲ್ಯಾಣದ ಐಸಿರಿ ಶ್ರೀಶೈಲಕೆ ನಡೆ ನಿಂತಳು ಗುರು ಲಿಂಗವಿಡಿದು ಚೆನ್ನಮಲ್ಲಿಕಾರ್ಜುನರ ನೆರಳು ಮಹಾಮನೆಯ...

ಎರಡು ಕವನಗಳು

ಇದ್ದ ಅಲ್ಲಮ ಇಲ್ಲದಂತೆ  ------------------------------ ಕಲ್ಯಾಣ ಹಣತೆ ಭಕ್ತಿ ರಸ ತೈಲ ಅನುಭವ ಅಬ್ಬರ ಚಿಂತನೆ ಹೊರಗೆ ದುಡಿ ಮದ್ದಳೆ ಸದ್ದು ಒಳಗೊಳಗೆ ಮಿಡಿವ ತಂತಿ ಕಾಣಲಾಗದ ತೋರಬಾರದ ಮಹಾ ಘನವ ತೋರಿ ಅರಿವು ಮರೆಯ ಜಾಣ. ಅಂಧ ಮೌಡ್ಯಕೆ ಬಾಣ ಜಗದ ಭೂತಲದ ಕಾಲಜ್ಞಾನ ಶಬ್ದದೊಳಗಿನ ಮಹಾ ನಿಶಬ್ದ ಬೀಜದೊಳಗಿನ ಉಲಿವ ಮರ. ವ್ಯೋಮ ಕಾಯದ ಬಯಲು ಮಂತ್ರ ಗೌಪ್ಯದ ಮುನ್ನುಡಿ ಅನುಭೂತಿಯ ಕನ್ನಡಿ ಅಲ್ಲಾನ ಆಗಮನ ಲಾಮಾನ ನಿರ್ಗಮನ ಮಧ್ಯ ಅಲ್ಲಮ ನಿನ್ನ ಜನನ ಜ್ಞಾನದ ಚಿಜ್ಜ್ಯೋತಿ ವೈರಾಗ್ಯದ ಮೂರುತಿ ವಚನಗಳ...

ಕವನ : ಬಿಡದಿರಿ ನಮ್ಮತನ

ಬಿಡದಿರಿ ನಮ್ಮತನ ತನ್ನತನವ ಬಿಟ್ಟು ತನ್ನದಲ್ಲದಕೆ ಹರಿ ಬಿಟ್ಟು ಕನ್ನಿಕೆಯ ಹಿಂದೋಡಿ ಕುನ್ನಿಯಂತಾಗಬೇಕೆ ಮೋಡಿ. ನಮ್ಮೊಳಗಿನದ ಸರಿಸಿ ಪರರದಕೆ ಮೋಹಿಸಿ ದಾಹ ತೀರಿದ ಮೇಲೆ ಎಡ ಬಿಡಂಗಿಯಾಗಬೇಕೆ. ಹರಸುವರು ಮೊದಲು ಹೌಹಾರ ಬೇಡ ಆರಿಸಿ ನೋಡೋಮ್ಮೆ ತಾರಸಿಯ ಹತ್ತಿಸಿ ಒದೆಯುವರು. ಮತ್ತಿನ ರಂಗು ತೋರಿಸಿ ರಂಗಿನಾಟ ಆಡುವರು ಕುಣಿಸುತಿಹರು ಮನ ಬಂದಂತೆ ದಂಗಾಗದಿರು ಹಂಗು ತೊರೆದು. ನೆಪ ಒಡ್ಡಿ ಕರೆವರು ಕೊರಳ ಕೊಯ್ಯುವರು ಪರ ಮೋಹ ತರವಲ್ಲ ಓರೆ ಕೊರೆಗಳು ಸಹಜ ತಿದ್ದಿ ಮುಂದೆ ನಡೆ.ರೇಷ್ಮಾ ಕಂದಕೂರ ಶಿಕ್ಷಕಿ ಸಿಂಧನೂರು

ಕವನ : ಡಯಾಲಿಸಿಸ್ ಕೊಠಡಿಯಲ್ಲಿ….

ಡಯಾಲಿಸಿಸ್ ಕೊಠಡಿಯಲ್ಲಿ ಒಂದು ಚಿಂತನೆ..ಮನದೊಳಗೆ ಹುತ್ತ ಗಟ್ಟಿ, ಆಲೋಚನೆಗಳ ಹೆಪ್ಪಾಗಿಸುವ ಸ್ವಾರ್ಥ,ಭ್ರಷ್ಟತೆ,ಹೀನ ಚಿಂತನೆಗಳ ಬೇರು ಸಹಿತ ತೆಗೆದು ಬಿಡಲು ಒಮ್ಮೆ ಇಡೀ ಮನಸ್ಸನ್ನು ಡಯಾಲಿಸಿಸ್ ಮಾಡಿಸಿಬಿಡು, ಸಮಾಜವನ್ನು ನೋಡುವ ನಿನ್ನ ಹೀನ ದೃಷ್ಟಿಯನ್ನೊಮ್ಮೆ ಬದಲಿಸಿಬಿಡಲು ನಿನ್ನ ದೃಷ್ಟಿಕೋನಕ್ಕೆ ಮುಚ್ಚಿರುವ ಸ್ವಾರ್ಥ,ಅಹಂಕಾರಗಳ ಪೊರೆಯ ಒಮ್ಮೆ ತೆಗೆದುಬಿಡು, ನಿನ್ನ ಮನದ ಸ್ವಾರ್ಥದ ಕಳೆಯ ಈ ಕ್ಷಣದಲ್ಲೇ ಕಳೆದುಬಿಡು, ಕಾಡುತ್ತಿರುವ ಹಳೆಯ ಮಲಿನ ನೆನಪುಗಳ ಬೇರು ಸಹಿತ ತೆಗೆಯಲು ನೆನಪಿಗೆ ಒಂದು ಶಸ್ತ್ರ ಚಿಕಿತ್ಸೆ ಮಾಡಿಸಿಬಿಡು, ನಿನ್ನ ಬದುಕ ಸಾರ್ಥಕಗೊಳಿಸಿಬಿಡುಡಾ..ಭೇರ್ಯ ರಾಮಕುಮಾರ್

ಕವನ :ನನ್ನ ಧ್ವನಿ ಕೇಳದು

ನನ್ನ ಧ್ವನಿ ಕೇಳದು ______________ ಗೆಳೆಯರೇನಾನು ಒದರುತ್ತಿದ್ದೇನೆ ಚೀರುತ್ತಿದ್ದೇನೆ ಕೂಗುತ್ತಿದ್ದೇನೆ ನಿಮಗೇಕೆ ಕೇಳಲೊಲ್ಲದುನೀವು ಸದ್ದು ಗದ್ದಲದ ಸಂತೆಯಲ್ಲಿರಬಹುದು ನನ್ನ ಧ್ವನಿ ಕೇಳದುನೀವು ಗಾಢ ನಿದ್ರೆಯಲ್ಲಿ ಗೊರಕೆ ಹೊಡೆಯುತ್ತಿರಬಹುದು ನನ್ನ ಧ್ವನಿ ಕೇಳದುನೀವು ಜಾತ್ರೆಯ ಕುಣಿತದಲ್ಲಿ ಸೋಗು ವೇಷವ ಹಾಕಿದ್ದೀರಿ ನನ್ನ ಧ್ವನಿ ಕೇಳದುಕಳೆದು ಹೋಗಿರುವಿರಿ ಜೀವನ ಸಮಸ್ಯೆಗಳಲ್ಲಿ ನನ್ನ ಧ್ವನಿ ಕೇಳದುನೀವು ಸತ್ತಿರ ಬಹುದು ಮಸಣದ ಗೋರಿಯಲ್ಲಿ ನನ್ನ ಧ್ವನಿ ಕೇಳದುನೀವು ಕಿವುಡರಿರಬಹುದು ಕಿಟಕಿಯಾಚಿನ ಶಬ್ದ ನನ್ನ ಧ್ವನಿ ಕೇಳದುಎಷ್ಟೋ ವರುಷವಾಯಿತು ನಾನು ಕೂಗುತ್ತಿದ್ದೇನೆ ನಿರಂತರ ನನ್ನ ಧ್ವನಿ ಕೇಳದುಇಂಕಿಲಾಬ್...

ಕವನಗಳು

ಬಸವನೆಂಬುದೇ ಮಂತ್ರ -------------------------------- ದಿನ ದಲಿತರ ಅಪ್ಪಿಕೊಂಡನು ನ್ಯಾಯ ನಿಷ್ಠುರಿ ಬಸವನು ಜಾತಿ ಭೇದ ತೊಡೆದು ಹಾಕಿ ಶಾಂತಿ ಸಮತೆ ಕೊಟ್ಟನು ವರ್ಗ ವರ್ಣ ಕಿತ್ತು ಹಾಕಿ ಲಿಂಗ ಭೇದವ ತೊರೆದನು ಗುಡಿ ಗೋಪುರ ಜಡ ಜಗಕೆ ಕೊನೆ ಹೇಳಿದ ಧೀರ ಬಸವನು . ಕಾವಿ ಮಠವ ಬೇಡವೆಂದ ದುಡಿಮೆ ದೇವರೆಂದ ಬಸವ ಶ್ರಮವೇ ತಪವು ಜಪವೆಂದನು ಕಾಯವೇ ಕೈಲಾಸವೆಂದನು ವಚನ ಶಾಸ್ತ್ರ, ಪ್ರಬಲ ಅಸ್ತ್ರ ಗಣಾಚಾರವೇ ಮಾರ್ಗವು ಸತ್ಯ ದರ್ಶನ ಷಟಸ್ಥಲವು ಬಸವ ಬಯಲು ಮೋಕ್ಷವು ಬಸವನೆಂಬುದೇ ಮಂತ್ರ...

ಕವನ : ಜೀವನ ಸತ್ಯ

 ಜೀವನ ಸತ್ಯ ಬೇವಿನ ಬೀಜವನ್ನು ನೆಟ್ಟರೆ ಬೇವು ಮಾತ್ರ ಬೆಳೆಯುತ್ತದೆ, ಸುಳ್ಳಿನ ನೆರಳಿನಲ್ಲಿ ಸತ್ಯ ಬೆಳೆಯುವುದಿಲ್ಲ.ಎಳ್ಳು ಬಿತ್ತಿದರೆ ಸಾಸಿವೆ ಬೆಳೆಯುವುದಿಲ್ಲ, ಕರ್ಮವೇ ಫಲ ಎಂದು ಜಗತ್ತು ಅರಿಯುವುದಿಲ್ಲ.ಕಲ್ಲಿನ ಮೆಟ್ಟಿಲು ಹತ್ತಿದರೆ ಗುಡ್ಡ ಶಿಖರವಾಗುವುದಿಲ್ಲ, ಶ್ರಮವಿಲ್ಲದೆ ಯಶಸ್ಸು ಸುಲಭದ ಹಾದಿಯಲ್ಲನೀರು ಹರಿದರೆ ನದಿಯಾಗಿ ಹೊಳೆಯಬಹುದು, ಆದರೆ ಗಾಳಿಗೆ ತೇಲಿದ ಹಡಗು ದಿಕ್ಕಿಲ್ಲದೆ ಅಲೆದಾಡುತ್ತದೆ.ಸ್ವಾರ್ಥದ ಹಿತವು ಸತ್ಯದ ಹಿತವಾಗಲಾರದು,...

ಎರಡು ಕವನಗಳು

ಸಂಗಾತಿ ________ನನ್ನ ನಿನ್ನ ಬೆಸೆದವರು ಅಲ್ಲ ಅಪ್ಪ ಅಮ್ಮ ಬಂಧು ಬಳಗ ಮೇಲಿರುವ ಯಜಮಾನ ಭಾಷೆ ಬರೆದನು ಕೂಡಿ ನಡೆಯಲು ಅರಿತು ಬಾಳಲು ಮನವ ಅರಿಯಲು ಜೀವ ಜೀವಕೆ ನೀನೆನಗೆ ಸವಿ ಸಂಗಾತಿ _________ನಾನು ಬೇವು _______________ನಾನು ಬೇವು ನೀನು ಬೆಲ್ಲ ಕಳೆವ ಕ್ಷಣವೇ ಯುಗ ಯುಗಾದಿನೋವು ಮರೆತು ನಗೆಯ ಹರಿಸಿ ಬಿಸಿ ಅಪ್ಪುಗೆ ನವರಾತ್ರಿನೀನು ಎಣ್ಣೆ ನಾನು ಬತ್ತಿ ಪ್ರೀತಿ ಒಲವೇ ದೀಪಾವಳಿನೋವು ಮರೆತು ನಗೆಯ ಹರಿಸಿ ಸ್ನೇಹ ಒಲವು ಸಂಕ್ರಾಂತಿಮೈ ಮುರಿದು ಹೊಲದಿ ದುಡಿವ ನಮ್ಮ ಹೆಜ್ಜೆ ನವರಾತ್ರಿಹುಟ್ಟು ಸಂಭ್ರಮ ಸಾವು ಸೂತಕ ಬದುಕು ನಿತ್ಯ ಮಹಾನವಮಿ _____________________ ಡಾ ಶಶಿಕಾಂತ ಪಟ್ಟಣ ರಾಮದುರ್ಗ
- Advertisement -spot_img

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...
- Advertisement -spot_img
error: Content is protected !!
Join WhatsApp Group