ಕವನ

ಕವನ : ಮಣ್ಣಿನ ಅಳಲು

ಮಣ್ಣಿನ ಅಳಲುನಾನು ಸಧೃಢವಾಗಿದ್ದಾಗ ಎಷ್ಟು ಹುಲುಸು ಹಸಿರು ಬಾಳೆ ತೆಂಗು ಸೊಬಗು ಭೂಮಿ ದೇವತೆ ಎಂಬ ಗೌರವ ಪೂಜೆನದಿ ಹಳ್ಳಗಳು ಕೊಚ್ಚಿದವು ನಾನೀಗ ನದಿ ಸಮುದ್ರದ ಮಡಿಲು ಸೇರಿದೆ ಹಣದ ಆಸೆಗೆ ರಾಸಾಯನಿಕ ವಿಷದ ಗೊಬ್ಬರಕಬ್ಬು ಸಿಹಿ ಅಲ್ಲ ನನ್ನ ಬರಡು ಮಾಡಿದ ಕಹಿ ನಿತ್ಯ ಬಂಜೆಯಾಗುತ್ತಿದ್ದೇನೆ ಮುಂದೊಮ್ಮೆ ನನ್ನೊಡಲಲಿ ಹುಲ್ಲು ಹುಟ್ಟದುನನ್ನೆದೆಯ ಮೇಲೆ ಸಿಮೆಂಟ್ ಜೆಲ್ಲಿ ಕಲ್ಲು ಡಾಂಬರನಲ್ಲಿ ನನ್ನ ಹೂತು ಬಿಟ್ಟರು ಉಸಿರುಗಟ್ಟಿದೆ ಸಾಯದೆ ಬದುಕಿರುವೆಕೆರೆ ಹಳ್ಳಗಳಿಗ ಮಾಯ ಅವುಗಳ ಮೇಲೆ ಕಾಂಕ್ರೀಟ್ ಕಾಡು ಮುಗಿಲು ಮುಟ್ಟುವ...

ಕವನ : ಮಾಗಿಯ ಚಳಿ

ಮಾಗಿಯ ಚಳಿಚಳಿ ಎಂದರೆ ರತಿ ಸುಖದ ಸಮೃದ್ಧ ಕಾಲವಲ್ಲ, ಕಾಯ್ದಿರುವ ಧರೆಯನ್ನರಸಿದ ಸುಸಂಸ್ಕೃತದ ಸಂಭ್ರಮ ಬಿಚ್ಚಿದ ದೇಹಗಳೆಲ್ಲ ಮುಚ್ಚಿಕೊಂಡು ಕೂಡ್ರಿಸುವ ಸಂಪ್ರದಾಯದ ಸೊಗಸುಮಾಘ ಮಾಸದ ನಡುಗುವ ಚಳಿಯಲಿ ವೃಕ್ಷದಿಂದ ದೂರಾದ ಬೀಜದಂತೆ ಇನಿಯಳ ನೆನಪಲಿ ಸುತ್ತಿದ ಕತ್ತಲ ಬೀಗಲು ಹೊಕ್ಕ ಹಾಸಿಗೆಲಿ ಅನಂತವಾಗಲು ಕೊರೆಯುವ ಚಳಿ ಕಾಲವಾಯಿತುಆನಂದದ ರಸಗಂಗೆಯಲಿ ತೇಲಾಡುವ ಮನಗಳು ವಿಶ್ವಾಮಿತ್ರನಾದರೂ ರಸ ವಿರಸಕ್ಕೆ ತಿರುಗಿ ದುಂಬಿಯ ಮನಕೆ ಜೇನಾಗುವುದು ಮಿಲನದಲ್ಲಿ ಎಲ್ಲಿ ಯೋಗ, ಯೋಗ್ಯ?ತಂಪಾದ ಮಾರುತಗಳು ಕಾಯ ಸೋಕಿ ಜೀವ ಹಿಂಡುತಿವೆ ಈ ಇರುಳ...

ಕವನ : ಹೆಗ್ಗಳಿಕೆ ಮತ್ತು ಬಿಕ್ಕಳಿಕೆ

ಹೆಗ್ಗಳಿಕೆ ಮತ್ತು ಬಿಕ್ಕಳಿಕೆ -------------------------------- ತೂರಿ ಬರುತ್ತವೆ ಹಾರಿ ಬರುತ್ತವೆ ಪ್ರಶಸ್ತಿ ಪುರಸ್ಕಾರಗಳು . ಕಳ್ಳರಿಗೆ ಕಾಕರಿಗೆ ಸುಳ್ಳರಿಗೆ ಮಳ್ಳರಿಗೆ ಪ್ರವಚನದಲ್ಲಿ ಕಿರುಚುವವರಿಗೆ ವಚನ ತಿದ್ದುವವರಿಗೆ ಕದಿಯುವವರಿಗೆ ಬಸವನ ಹೆಸರಲಿ ಕೊಳ್ಳೆ ಹೊಡೆವವರಿಗೆ ಧರ್ಮದ ಗುಂಗು ಹಚ್ಚುವವರಿಗೆ ತಲೆಯ ಮೇಲೆ ಗ್ರಂಥವಿಟ್ಟು ಹೆಜ್ಜೆ ಹಾಕಿ ಕುಣಿಯುವವರಿಗೆ . ಮುಖವಾಡ ಸೋಗು ಹಾಕುವವರಿಗೆ ಬಣ್ಣ ಬಳಿದು ನಟಿಸುವವರಿಗೆ ಸುಲಿಗೆ ಮಾಡುವವರಿಗೆ ಅಕ್ಕ ಅಣ್ಣ ಶರಣರೆಂಬ ಡಂಬಕರಿಗೆ ಲಿಂಗ ತತ್ವ ಮಾರಿಕೊಂಡವರಿಗೆ ಬಸವ ದ್ರೋಹ ಮಾಡುವವರಿಗೆ ಜಂಗಮ ಕೊಂದು ಸ್ಥಾವರ ಸಲುಹುವವರಿಗೆ ಬರುತ್ತವೆ ಪ್ರಶಸ್ತಿ ಸನ್ಮಾನಗಳು ಬಿಟ್ಟಿ ಶಾಲು...

ಕವನ : ಬಸವ ಪಥಕೆ ಹೆಜ್ಜೆ

ಬಸವ ಪಥಕೆ ಹೆಜ್ಜೆನಾವಿಬ್ಬರು ಕೂಡಿ ಕೊಂಡೆವು ಇದು ದೇವರ ಇಚ್ಛೆಯು ಬಳಸಿ ಸ್ನೇಹ ಪ್ರೀತಿ ಒಲುಮೆ ಬಾಳ ಬಾಂದಾರ ಕಟ್ಟಲುಬಾನ ತುಂಬ ಶಶಿಯ ನಗೆಯು ಚಕೋರಿ ಹಾಡಿತು ಕತ್ತಲು ಪ್ರೇಮವೊಂದೇ ಭಾಷೆ ಹಾಲು ಜೇನಿನ ಬಟ್ಟಲುಬಿಸಿಲು ಮರೆತು ಮೋಡ ಕವಿಯಿತು ಹಗಲು ಇರುಳು ಮಳೆಯ ಹನಿಯು ಹದ ಗೊಂಡಿತು ನೆಲ ಗಿಡ ಮರ ನೆಟ್ಟಲುಬಾರೆ ನೀನು ನನ್ನ ಜೀವ ಮುಗುಳು ಚೆಲುವಿನ ಮಲ್ಲಿಗೆ ಇಕೋ ನಿನಗೆ ಸಮಯ ಬಂದು ಹೃದಯ ತಟ್ಟಲುಜೋಡಿ ಜೀವ ದೂರ ಪಯಣ ಬೇಡ ಬಳಲಿಕೆ ಜೀವವು ಬಸವ ಪಥಕೆ ಹೆಜ್ಜೆ ನಮ್ಮ ಗುರಿ ಮುಟ್ಟಲು ________________________*ಡಾ ಶಶಿಕಾಂತ...

ಕವನ : ಭ್ರೂಣ ಬರೆದ ಕವಿತೆ

ಭ್ರೂಣ ಬರೆದ ಕವಿತೆ -------------------------- ನಾನು ಕಣ್ಣು ತೆರೆಯದ ಮಾಂಸ ಮುದ್ದೆ ತಾಯಿ ಎನ್ನುವ ಗರ್ಭದಲಿ ನಾನು ಮೂಡಿದಾಗ ಎಲ್ಲರಿಗೂ ಸಂಭ್ರಮ ನನ್ನ ಹೊತ್ತವಳಿಗೆ ಸಿಂಗಾರ ಆರತಿ ಮಾಲೆ ದಂಡೇ ಮನೆಯಲ್ಲಿ ಹಿರಿ ಹಿರಿ ಹಿಗ್ಗಿದರು ಹಿರಿಯರು ಕಿರಿಯರು ನನ್ನ ಸೃಷ್ಟಿಗೆ ಕಾರಣರಾದ ಗಂಡ ಹೆಂಡತಿಯರ ಆತುರ ವೈದ್ಯರ ಭೇಟಿ ಸಲಹೆ ಅಂದು ತಾಯಿಯ ಗರ್ಭದ ತಪಾಸಣೆ ಲಿಂಗ ನಿರ್ಧಾರದ ಯತ್ನ ... ನನಗೆ ಗೊತ್ತೇ ಇಲ್ಲ ನಾನು ಹೆಣ್ಣೆಂದು ನನಗೂ ಕನಸು ಇದ್ದವು ಹೊರಗೆ ಬಂದು ಎಲ್ಲರೊಡನೆ ಬೆರೆಯುವ ನಲಿಯುವ ಕ್ಷಣಗಳ ಕಾಯುತ್ತಿದ್ದೆ ಆದರೆ ಗಂಡ ಹೆಂಡತಿಯರ ಕಠೋರ ನಿರ್ಣಯ ನನ್ನ ತೆಗೆದು ತೊಟ್ಟಿಗೆ ಬಿಸಾಕುವ ಪ್ರಯತ್ನ ಅಂದು ಸಂಜೆ ವೈದ್ಯರ ಕತ್ತರಿ ಚಾಕು ಅವ್ವನ ಹೊಟ್ಟೆ ಸೀಳಿದರು . ಮೌನವಾಗಿ ಮಲಗಿದ್ದ ನನ್ನನು ಕರುಳ...

ಕವನ : ಭರವಸೆಯ ಬಂಧು ಅಪ್ಪ

ಭರವಸೆಯ ಬಂಧು ಅಪ್ಪನನಗೆ ಯಾವತ್ತೂ ಕಣ್ಣೀರೇ ಗೊತ್ತಿಲ್ಲ ಕಾರಣ ನಿಮ್ಮ ಬೆವರ ಹನಿ ನಿಂತಿಲ್ಲ ಉಸಿರಿಗೆ ಹೆಸರು ನೀಡಿದವನು ನೀನು ನಿಮ್ಮ ಹೆಸರುಳಿಸುವ ಮಗನಾಗುವೆ ನಾನುಭರವಸೆ ಎಂದರೆ ಅಪ್ಪ ಜವಾಬ್ದಾರಿ ಎಂದರೆ ಅಪ್ಪ ಪ್ರಯತ್ನ ಅಂದರೆ ಅಪ್ಪ ಕಾಳಜಿ ಅಂದರೆ ಅಪ್ಪನಿನಗಾಗಿ ಎಂದೆಂದಿಗೂ ನೀ ದುಡಿಯಲಿಲ್ಲ ಯಾವುದಕ್ಕೂ ಕೊರತೆ ಮಾಡಲಿಲ್ಲ ನಿನ್ನ ದುಃಖವ ನಮಗೆ ಹೇಳಲಿಲ್ಲ ಬಾಳಿನ ಉದ್ದಕ್ಕೂ ನೋವನ್ನು ನುಂಗಿದೆಯಲ್ಲನಾ ಮರವಾದರೆ ನೀ ಬೇರು ಆದೆ ನಾ...

ಕವನ : ಶುಭ್ರ ಬೆಳಕು

ಶುಭ್ರ ಬೆಳಕುಎನಿತು ಮನದ ಭಾವ ವಿಷಾದಿಸಿತು ಆರೋಪ ಮಿಥ್ಯಾರೋಪದಲಿ ಕಂಗೆಟ್ಟಿತು ಇದಿರ ಹಳಿಯಲು ಬೇಡ ತನ್ನ ಬಣ್ಣಿಸಲು ಬೇಡ ಬಸವ ವಾಕ್ಯ ಮರೆತು ಸಾಗಿತು ಮನದ ಇರುಳು ಬೇಗೆ ಸವೆಸಿ ಬೆಳಗು ಹರಿದಿದೆ ವಿಶಾಲ ಮನಕೆ ರವಿ ಉದಯದಿ ಹೊಳೆಯುತ್ತಿದೆ ಜಗ ಕಾಯದಲಿ ಕಾಯಕ ಹೊತ್ತು ಮೂಡಿ ನಿಂತಿದೆ ಉದಯರಾಗಕೆ ನಿತ್ಯ ಹೊಸ ಉಲ್ಲಾಸದಿ ಕಳೆ ಕಟ್ಟಿದೆ ನಿನ್ನಲ್ಲಿ ಶುಭ್ರ ವಸ್ತ್ರ ಧಾರೆಯ ಮನಕೆ ಕಸ ಕಡ್ಡಿ ಆಚೆ ಹಾಕು ಎದೆಯ ಬಾಂದಳದಲಿ ಶುಭ್ರ ಬೆಳಕು ಹರಿಸು ಪಾಚಿಗಟ್ಟಿದೆ ತನುವಿನಲಿ ಕಿಲುಬು ಗಟ್ಟಲು ಬೇಡ ಹೊತ್ತಿ ಉರಿಸು ದಿವ್ಯ...

ಕವನ : ಡಾ. ಕಲಬುರ್ಗಿ ಎಂಬತ್ತಾರು

ಡಾ. ಕಲಬುರ್ಗಿ ಎಂಬತ್ತಾರು -------------------------- ಬರ ಬರ ಬಿಸಿಲು ಬಿರುಕಲು ಭೂಮಿ ಮಳೆಯಿಲ್ಲ ನೀರಿಲ್ಲ ಮನೆ ಹೊಲ ಹಳ್ಳ ಬಿರಿದು ಬೆಳೆದನು ದಿಟ್ಟ ಮಲ್ಲಪ್ಪ . ಅಧ್ಯಯನ ಸಂಶೋಧನೆ ಕನ್ನಡ ಬಸವಣ್ಣ ನಾಟಕ ಸಂಗೀತದ ಗೀಳು ನೇರ ನುಡಿ ಸಂಘರ್ಷ ಒಳಗೊಳಗೇ ಕೊರಗುವ ಮೃದು ಮನ ಹಾಸ್ಯ ಹರಟೆ ಸಂವಾದ ಚಿಂತನೆ ಯೋಜನೆಗಳು. ಅಂದು ಕುಹುಕಿಗಳು ಗುಂಡಿಕ್ಕಿ ಕೊಂದರು ಸತ್ತದ್ದು ವ್ಯಕ್ತಿ ಸತ್ಯವಲ್ಲ ಡಾ. ಕಲಬುರ್ಗಿ ಒಂಟಿ ಮರ ಕನ್ನಡದ ಕೊಲಂಬಸ್ ಎಂಟು ದಶಕದ ನೆನಪು ಎಂಟು ಶತಕದ ನೆರಳು. ಎಂ ಎಂ ಕಲಬುರ್ಗಿ ಅಮರ ರಹೇ ------------------------------- *ಡಾ.ಶಶಿಕಾಂತ.ಪಟ್ಟಣ...

ಕವನ : ನಿನ್ನ ಮಡಿಲಲ್ಲಿ

ನಿನ್ನ ಮಡಿಲಲ್ಲಿನಿನ್ನ ಮಡಿಲಲ್ಲಿ ಮಗುವಾಗುವಾಸೆ ನೀನು ಲಾಲಿ ಹಾಡುವುದನು ಕೇಳಿ ಮಲಗುವ ಆಸೆ ಚಂದಿರನು ತೋರಿಸಿ ನಿನ್ನ ಕೈ ತುತ್ತು ಉಣ್ಣುವ ಆಸೆ ನಿನ್ನ ಮೇಲೆ ಕುಳಿತು ಅನೆ ಅಂಬಾರಿ ಕೂಸುಮರಿ ಎಂದು ಆಡುವ ಆಸೆ ನಿನ್ನ ಅಕ್ಕರೆಯ ಮಾತು ಕೇಳಲು ಚಂದ ನಿನ್ನ ಹಾಡು ಕಿವಿಗಳಿಗೆ ಅಂದ ನೀನು ಮುಡಿದಿರುವ ಮಲ್ಲಿಗೆ ಎಲ್ಲೆಡೆ ಬೀರುವುದು ಕಂಪು ಸಂಗೀತ ಸ್ವರಗಳ ಇಂಪುಅಪ್ಪಿ ಮುತ್ತು ಕೊಟ್ಟು ಪ್ರೀತಿಯ ಕಂದಾ ಎಂದು ಕರೆದಾಗ ನನಗೆ ಸ್ವರ್ಗ ಸುಖನಿನ್ನ ಸುಖ ದುಃಖವನ್ನು ನಿವಾರಿಸುವ...

ಕವನ : ಉಳಿಸ ಬನ್ನಿ ಕನ್ನಡ

ಉಳಿಸ ಬನ್ನಿ ಕನ್ನಡಉಳಿಸ ಬನ್ನಿ ಉಳಿಸ ಬನ್ನಿ ಉಳಿಸ ಬನ್ನಿ ಕನ್ನಡ ಇರಲಿ ಬೇರೆ ಭಾಷೆ ಪ್ರೇಮ ಅಗ್ರ ಪಟ್ಟ ಕನ್ನಡಬಸವ ಹರಿಹರ ರಾಘವಾ0ಕ ಕವಿ ನುಡಿಯು ಕನ್ನಡ ಹಕ್ಕಬುಕ್ಕ ರಾಷ್ಟಕೂಟ ಚಾಲುಕ್ಯ ಹೊಯ್ಸಳ ಗಂಗ ಕದಂಬರ ಕನ್ನಡಕಾವೇರಿಯಿಂದ ಗೋದಾವರಿವರೆಗಿನ ಸೀಮೆ ದಾಟಿದ ಕನ್ನಡ ಕೃಷ್ಣ ತುಂಗೆ ಮಲಪ್ರಭೆ ಭೀಮೆ ಘಟಪ್ರಭೆ. ಸಿಹಿ ನೀರಿನ ಕನ್ನಡಕಾಕೊಸ್ಥನ ಹಲ್ಮಿಡಿ ಬಾದಾಮಿಯ ಕಲೆಯ ಬಲೆ ಶಾಸನದ ಕನ್ನಡ ವಿಶ್ವ ಪ್ರೇಮ ಮನೆಯ ಮಾತು ಜಗದ ಬೆಳಕು ಕನ್ನಡಉಳಿಸ ಬನ್ನಿ ಉಳಿಸ ಬನ್ನಿ ಉಳಿಸ ಬನ್ನಿ ಕನ್ನಡ ______________________ *ಡಾ ಶಶಿಕಾಂತ ಪಟ್ಟಣ...
- Advertisement -spot_img

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...
- Advertisement -spot_img
error: Content is protected !!
Join WhatsApp Group