ಕವನ
ಸವಿ ಮನನಾನೇಕೆ ಹಚ್ಚಿಕೊಳ್ಳಲಿ ?
ಮೊಗಕೆ ಬಣ್ಣ !
ಅಳಿಸುವೆ ಹಚ್ಚಿದ ಬಣ್ಣವನು
ಬದುಕ ಬವಣೆಯನು
ದೂಡಿಏರಲಾರೆ ನೀ ಏರಿದ ಆನೆಗೆ
ನಾನೇಕೆ ಆಸೆ ಪಡಲಿ ?
ನಿಂತು ನೋಡುವೆ
ನೀ ಹತ್ತಿ ಸಾಗುವ ಅಂಬಾರಿಯನು
ದೂರದಿ ನಿಂತು ತಟ್ಟುವೆ ಚಪ್ಪಾಳೆನಾನೆಂದೂ ಕಚ್ಚಾಡಿದವಳಲ್ಲ
ನಾಯಿಕುನ್ನಿಯಂತೆ !
ಹರಿದು ಹಂಚಿ ತಿನ್ನುವುದನು
ಕಲಿಸಿರುವ ನನ್ನ ಹೆತ್ತಪ್ಪಸ್ವಾಭಿಮಾನದ ಬದುಕು
ಬೊಗಳುವ ನಾಯಿಗೂ
ಬಿಚ್ಚಿ ಹಾಕಿದ ನನ್ನಪ್ಪ !
ನನ್ನವ್ವ ಕಟ್ಟಿದ ರೊಟ್ಟಿ ಬುತ್ತಿನಾನೆಂದೂ ಕರುಬಿದವಳಲ್ಲ
ಬದುಕಿನ ಪಥವ ತೋರುವಳು
ತಿರುಗಿ...
ಕವನ
ನೀನು ನಾನು
_________________ನೀನು ನಾನು
ನಾನು ನೀನು
ದೈವ ಬೆಸೆದ
ಜಾಲವುಹೃದಯ ಭಾಷೆ
ಅರಿವ ಮನಕೆ
ಪ್ರೀತಿ ಬೆರಸಿದ
ಭಾವವುನೋವು ಮರೆತು
ನಗುವ ಕಲೆಗೆ
ಕಣ್ಣು ಬೆರೆತ
ನೋಟವುದೂರ ಗುರಿಯ
ಹೆಜ್ಜೆ ಪಯಣದಿ
ಕೂಡಿ ಹಾಡುವ
ರಾಗವುಕಷ್ಟ ಸುಖಕೆ
ದಾರಿ ಹುಡುಕುವ
ನಮ್ಮ ಬಾಳ
ಬಟ್ಟೆಯುಯಾರಿರದ ಹಾದಿಯಲಿ
_____________________
ನಿನ್ನ ಮುಗುಳು ನಗೆ
ಸರಳ ಭಾವ
ಜೀವ ಜಾಲದ
ಬಂಧನಕಲ್ಪನೆಯ ಬೆನ್ನೇರಿ,
ಕನಸುಗಳ ಲೋಕದಿ
ಬಣ್ಣದ ಬದುಕು
ನಾನು ಬದುಕಲಾರೆಮನಸಿಗೆ ಹಿತ
ನಿನ್ನ ಮಧುರ ಮಾತು
ಕೊರೆವ ಚಳಿಯಲ್ಲಿ
ಬಿಸಿ ಅಪ್ಪುಗೆ ಸುಖಬಾ ಹೋಗೋಣ
ನಾನು ನೀನು
ಯಾರಿರದ ಹಾದಿಯಲಿ
ಸ್ನೇಹ ಪ್ರೀತಿಯ ಹಂಚಿ
______________________
ಡಾ. ಶಶಿಕಾಂತ ಪಟ್ಟಣ...
ಕವನ
ಗೆಳತಿ ಅಂದರೆ ನೀನೆಯೆನು ?
------------------------------------
ಸೂರ್ಯ ಮೂಡುವ ಮುನ್ನ.
ಪ್ರೀತಿ ಅರಳಿದ ಉಷೆ ಚಿನ್ನ.
ಸೂರೆಗೊಂಡೆ ನೀನು ನನ್ನ
ಭಾವ ತುಂಬಿದ ಜೀವನ .
ಮನಕೆ ಮನ ಕೂಡಿಕೊಂಡಿತು
ಸ್ಫೂರ್ತಿ ಚಿಲುಮೆ ಚೇತನ .
ನೀನು ನಡೆವ ದಾರಿಯಲ್ಲಿ
ನಗೆಯ ಮಲ್ಲಿಗೆ ಚಂದನ .
ಮಧುರ ದಿನವು ನೀರಿಕ್ಷೆಯ
ನಮ್ಮ ಬಾಳು ನಂದನ .
ನಿನ್ನ ನೋಡುತ ಮರೆಯುವೆ
ನಾನು ಭೂಮಿಯೆ೦ಬ ಸದನ
ಏಕೆ ಜಗಳ ವಾದ ಕದನ
ನೀನು ಸ್ವರ್ಗದ ಬಂಧನ .
ನಿನ್ನ...
ಕವನ
ಕನಕ ಹಂಬಲಿಸಿದಂತೆದಾಸನಾ ಮೊರೆಯ ಕೃಷ್ಣ/
ಆದರದಿ ಆಲಿಸುವಂತೆ/
ಶ್ರೀಶನಾ ಒಲುಮೆಗೆ ತಾ/
ಕನಕ ಹಂಬಲಿಸಿದಂತೆ//ಕೊಳಲನೂದಿ ದಾಮೋದರ
ಮರೆಯಾಗಿ ಹೋದಂತೆ/
ರಾಗದಿ ಹೊಮ್ಮುವ ತುಡಿತಕೆ/ ಶ್ಯಾಮನು ತಾಳ ಹಾಕಿದಂತೆ//ಬೃಂದಾವನದಿ ಮುರಳಿ/
ಕೋಲಾಟಕೆ ಕರೆದಂತೆ/
ಸುಳಿವೇ ತೋರದೆ ಅನೀಶ/
ಬೆಣ್ಣೆ ಕದ್ದ ನವನೀತನಂತೆ//ಅಲ್ಲೊಮ್ಮೆ ಇಲ್ಲೊಮ್ಮೆ ಹರಿ/
ಕಳ್ಳಾಟವ ಆಡುತಿರುವಂತೆ
ಹಾಡಿಹಾಡಿ ಬೆವರಿದ...
ಕವನ
ಕವನ : ಭಕ್ತಿ ಪಂಥದ ಆದ್ಯ ಪ್ರವರ್ತಕ ಕನಕದಾಸ
ಭಕ್ತಿ ಪಂಥದ ಆದ್ಯ ಪ್ರವರ್ತಕ ಕನಕದಾಸಕನ್ನಡ ನಾಡುನುಡಿ ಕಂಡ ಭಕ್ತಾಗ್ರೇಸರ ಅಗ್ರಗಣ್ಯ ನೇತಾರ ಕನಕದಾಸ,
ತನ್ನ ಸರ್ವಸ್ವವನ್ನೂ ತ್ಯಾಗ ಮಾಡಿ ವೈರಾಗ್ಯ ಮೂರ್ತಿಯಾದ ಧಾರ್ಮಿಕ ಲೋಕದ ಮಾನಸ,ಸಮಾಜದಲ್ಲಿಡಗಿದ್ದ ಮೂಢನಂಬಿಕೆಗಳ ವಿರುದ್ಧ ಸಮಾಜಕ್ಕೆ ವಿಶೇಷ ಬೆಳಕು ಚೆಲ್ಲಿದ ದಾಸಶ್ರೇಷ್ಠ,
ತಿರುಪತಿ ತಿಮ್ಮಪ್ಪನ ಆಶಿರ್ವಾದಿಂದ ಜನಿಸಿದ ಮಹಾಮಹಿಮನು ದಾಸಲೋಕಕೆ ವಿಶಿಷ್ಟಕಾಗಿನೆಲೆಯಾದಿ ಕೇಶವರಾಯನ ಪರಮಭಕ್ತನಾಗಿ ಕಾಯಕಲ್ಪ ನೀಡಿದ ಸಾಕಾರಮೂರ್ತಿ,
ತನ್ನಲ್ಲಿದ್ದ ಸಂಪತ್ತನ್ನು ದಾನ...
ಕವನ
ಕಿಕ್ ಔಟ್ ಹನಿಗಳು1.. ಬೀಡಿ ಸೇದಬೇಡಿ
ಎಂದಳು ಬಿಟ್ಟೆ
ಗುಟಕ ತಿಂದರೆ ಕ್ಯಾನ್ಸರ್
ಹೆದರಿಸಿದಳು ಬಿಟ್ಟೆ
ಹೆಂಡ ಕುಡಿಯಬೇಡಿರೆಂದು
ಬೇಡಿಕೊಂಡಳು
ಹೆಂಡ ಬಿಡಲಿಲ್ಲ
ಹೆಂಡತಿ ಬಿಟ್ಟೆ
--
2..ಹೆಂಡ ಕುಡಿದುಹೋದರೆ
ಹೆಂಡತಿ ಬಾಗಿಲು ತೆಗೆಯುವುದಿಲ್ಲ
ಅದಕ್ಕೆ
ನಾನು ರಾತ್ರಿ ಕುಡಿಯುವುದಿಲ್ಲ
ಹಗಲು ಹೇಳುವುದಿಲ್ಲ3.. ನಮ್ಮೂರ
ಸಾಲ ಮಾಡುವ ಸಿದ್ದರಾಮ
ಸಾಲ ಕೊಡುವ ಕೋದಂಡರಾಮ
ಇಬ್ಬರೂ ಒಂದನ್ನಂತೂ
ಬಿಡುವುದಿಲ್ಲ
ಸಿದ್ದರಾಮ ಕುಡಿಯುವುದು ಬಿಡುವುದಿಲ್ಲ
ಕೋದಂಡರಾಮ ಬಡ್ಡಿ ಬಿಡುವುದಿಲ್ಲ4.. ನಮ್ಮೂರಿನಲ್ಲಿ ಉದ್ದಾರವಾದವರು
ದಾಸಪ್ಪ ಆಂಡ್ ಸನ್ಸ್
ಹಾಳಾದವರು
ಕುಡಿತದ ದಾಸರು.
--
ಗೊರೂರು ಅನಂತರಾಜು
ಹಾಸನ
9449462879
ಕವನ
ಹೃದಯ ಮಾತು ಕೇಳಿಮಿಡಿವ ಹೃದಯ
ನಿಲ್ಲುವುದು ಗೊತ್ತಿಲ್ಲ
ದುಡಿವ ಜೀವ
ಮಣ್ಣಾಗುವುದು ತಿಳಿದಿಲ್ಲ.ಬಣ್ಣನೆಗೆ ನಿಲುಕದ ಜೀವ
ಬಣ್ಣದ ಮಾತಿಗೆ ಮರುಳಾಯಿತಲ್ಲ
ಒಮ್ಮೆ ಕಣ್ಣ ಬೆಳಕು
ಮಗದೊಮ್ಮೆ ಮಸುಕು.ಅದರ ಸಿಹಿ ಮಾತು
ಉದರ ಕಹಿ ಸಂಪತ್ತು
ತಿರುಗಣಿಯ ಬದುಕು
ಉಬ್ಬು ತಬ್ಬುಗಳಲಿ ಜೀಕು.ಆವೇಗದ ಸನ್ನೆ
ಮರೆತ ನನ್ನನ್ನೇ
ಕಲಿತು ಬಿಡಬೇಕು
ಅನುಭವಿಸುತ ನೂಕು.ಕೆರಳಿ ಕೆಂಡವೇಕೆ
ಬೆರಳೆಣಿಕೆಯ ಜೀವನಕೆ
ನೆರಳು ಬೆಳಕಿನ ಆಟಕೆ
ಕೊರಳು ಹಿಸುಕುವುದೇಕೆ.ತೆರಳುವುದು ನಿಶ್ಚಿತ
ನಂಬಿಕೆಯೇ ಭಗವಂತ
ನೆಮ್ಮದಿಯ ನಿಟ್ಟುಸಿರಾಗಲಿ
ಸಾಧನೆಯ ಪಥವಾಗಲಿ.ಸದ್ದಿಲ್ಲದೇ ಬಾನೆತ್ತರಕ್ಕೆ ಏರು
ಸುದ್ದಿ ಬಿತ್ತರವಾಗಲಿ
ಬಿದ್ದೆ ಎಂದು ಕುಗ್ಗದೇ
ಶೋಧನೆಯ...
ಕವನ
ಬಿಟ್ಟು ಬಿಡುಮರೆಯಾಗಿ ಬಿಡು
ಅಮವಾಸ್ಯೆಯ ಚಂದ್ರನಹಾಗೆ
ತೊರೆದು ಬಿಡು
ನಿನ್ನ ಆದರಿಸದವರನು.ತೆರೆಯೆಳೆದು ಬಿಡು
ದೂಷಿಸುವವರನು ಕಡೆಗಣಿಸಿ
ಮೇರೆ ಮೀರಿಬಿಡು
ನಿನ್ನದಲ್ಲದ ತಪ್ಪಿಗೆ ಒಪ್ಪಿಸಿದವರನು.ಗೆರೆಯೆಳೆದು ಬಿಡು
ಅವಕಾಶವಾದಿಗಳ ದೂರಿಕರಿಸಿ
ತಾರೆಯಂತಾಗಿ ಬಿಡು
ಬೇರೆಯಾದವರು ಹಪಹಪಿಸುವಂತಾಗಿ.ಕೆರೆ ಕಟ್ಟೆಯಾಗಿ ಬಿಡು
ಬಸವಳಿದವರ ಸಂತೈಸುವಿಕೆಯಲಿ
ನೆರವಾಗಿ ಬಿಡು
ನೆರೆಮನೆಯವರು ನನ್ನವರೆಂದು ಓಲೈಸುವಂತಾಗಿ.ತೆರಳಿ ಬಿಡು
ನರಳುವ ಮನ್ನವೇ
ಬೆರಳಾಗಿ ಬಿಡು
ಕರುಳ ಕುಡಿಯ ಮಮತೆಗೆ.ಸರಳಾಗಿ ಬಿಡು
ನಂಬಿಕೆ ದ್ರೋಹ ಬಗೆದವರಿಗೆ
ಹೊರಳಿ ಬಿಡು
ಬೇಡದ ವಸ್ತುಗಳ ಆಹ್ವಾನಕೆ.ಬಿಟ್ಟು ಬಿಡು
ರಾಗ ದ್ವೆಷಗಳ ನಡೆಯ
ಕೊಟ್ಟು ಬಿಡು
ಒಲವಾಮೃತದ ಸುಧೆ.ಕೊಟ್ಟು ಬಿಡು
ನಿನ್ನದಲ್ಲದ ವಸ್ತುವ
ಹೊಟ್ಟು...
ಕವನ
ಹುಟ್ಟುಹಬ್ಬಇಂದು ಅವಳ
ಹುಟ್ಟುಹಬ್ಬ
ಜನಿಸಿದಳು
ಮಗಳಾಗಿ ಮನೆಗೆ
ಗೆಳತಿಯಾದಳು ನನಗೆ
ತಾಯಿ ಮಮತೆ ವಾತ್ಸಲ್ಯ
ನನ್ನ ಜೀವದ ಕೊನೆಗೆ
ಕೈ ಹಿಡಿದು ನಡೆಸಿದಳು
ಪ್ರತಿ ಘಳಿಗೆ
ಸಗ್ಗ ಸುಖ ಸೋಪಾನ
ನಮ್ಮ ಸುಂದರ ಗೂಡಿಗೆ
ಸತ್ಯ ಸಮತೆ ಪ್ರೀತಿ
ಅವಳು ಜ್ಞಾನ ದೀವಿಗೆ
ಗಟ್ಟಿ ಹಿಡಿದಳು
ಯಶದ ಏಣಿ
ನಿತ್ಯ ನಗೆಯು
ಮುತ್ತು ಸವಿ ಬಾಳಿಗೆ
ಬದುಕು ಗೆದ್ದೇನು
ಅವಳ ದೇಣಿಗೆ
ಬುದ್ಧ ಬಸವರ ಬೆಳಕು
ಇಂದು ನಾಳಿಗೆ
ನೂರು ವರುಷ ಬಾಳು
ನೀನು ನನ್ನ ದೇವತೆ
______________________
*ಡಾ ಶಶಿಕಾಂತ ಪಟ್ಟಣ ರಾಮದುರ್ಗ*
ಕವನ
ಚಿಂಚಣಿಯ ಚಿಜ್ಯೋತಿಗದುಗಿನ ಗುರುಗಳ
ಪಡಿನೆರಳಾಗಿ
ಕನ್ನಡ -ಕನ್ನಡಿಗ-ಕರ್ನಾಟಕ
ಕೈಂಕರ್ಯಕ್ಕೆ ಕಟಿಬದ್ಧರಾಗಿ
ಸಮಾಜ ಸೇವಾ ದೀಕ್ಷೆಗೆ
ಕಂಕಣಬದ್ಧರಾದ
ತಾವು-
ಎರಡೂವರೆ ದಶಕಗಳ ಕಾಲ
ಗಡಿನಾಡಿನ ಗಡಿಗೆಯಲ್ಲಿ
ಕನ್ನಡದ ಅಡುಗೆ ಮಾಡಿ
ಪ್ರೀತಿಯಿಂದ ಉಣಬಡಿಸಿ
ಕನ್ನಡಿಗರಂತರಂಗದಲಿ
ಅಂತಃಕರಣದ
ಭಾಗವಾದಿರಿ.ನಡೆಯೊಳಗೆ ನುಡಿ
ನುಡಿಯೊಳಗೆ ನಡೆ
ಈ ಉಭಯಗಳಲಿ
ಕನ್ನಡವನೆ ತುಂಬಿ
ಗಡಿಯ ಅಡಿಅಡಿಗಳಲಿ
ಕನ್ನಡ ಡಿಂಡಿಮವ
ಮೊಳಗಿಸುತ
ಅನ್ನ ಭಾಷಿಕರೆದೆಗಳಲಿ
ಕನ್ನಡವ ಬಿತ್ತಿ ಬೆಳೆದು
ಸಂಭ್ರಮಿಸಿದ
ತಾವು
ಚಿಂಚಣಿಯ ಚಿಜ್ಯೋತಿಯಾಗಿ
ಕನ್ನಡಿಗರ ಕಣ್ಮಣಿಯಾಗಿ
ಕಂಗೊಳಿಸಿದಿರಿ.'ಬಸವ ಕನ್ನಡ 'ವೆಂಬ
ಷಡಕ್ಷರಿ ಮಂತ್ರವನು
ಜಪಿಸುತ್ತ, ಅವುಗಳನೆ
ಶ್ರೀ ಮಠದ
ಕಾಯಕವಾಗಿರಿಸಿಕೊಂಡ
ತಾವು
ಕನ್ನಡ ಮಠದ
ಕನ್ನಡದ ಸ್ವಾಮೀಜಿಯಾಗಿ
ಕನ್ನಡ ಸಾರಸ್ವತ
ಲೋಕದಲಿ
ಕನ್ನಡ ಸುವರ್ಣ
ಪುಷ್ಪಗಳನ್ನರಳಿಸಿ
ಧ್ರುವತಾರೆಯಂದದಿ
ಮಿನುಗುತಿರುವಿರಿ.ಶ್ರೀಪಾದ ಕುಂಬಾರ, ಚಿಕ್ಕೋಡಿ.
Latest News
ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು
ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...



