ಕವನ

ಕವನ : ನಾಜೂಕು ನಜರು

ನಾಜೂಕು ನಜರುನಿನ್ನ ಆ ಸೌಂದರ್ಯವ ಕಂಡ ಈ ನನ್ನ ನಾಜೂಕು ನಜರಿಗೂ ಜೀಕುವ ಭಾವಲಹರಿಗೂ ಸಲ್ಲದ ಪೈಪೋಟಿಯೊಂದು ಸದ್ದಿಲ್ಲದೆ ಅಲೆಯ ಎಬ್ಬಿಸಿರಲು, ಆ ಸಲ್ಲಾಪವ ಲೇಖನಿಗೆ ವರ್ಗಾಯಿಸುವುದೋ ಬೇಡವೋ ಎಂಬ ಹೊಸಗೊಂದಲದ ಗೂಡೊಂದು ಸದ್ದಮಾಡುತ್ತಲೇ ತನ್ನೆಡೆಗೆ ನನ್ನನ್ನು ಸೆಳೆಯುತಿದೆ...ಸೆಳೆವ ಗೊಂದಲದ ಗೂಡೆಡೆಗೆ ಹೋಗಲೋ ಅದಾಗಲೇ ಸೆಳೆದ ಕಾವ್ಯದ ಅಮಲಿನಲ್ಲಿ ಮುಳುಗಲೋ, ಮತ್ತೊಂದು ಗೊಂದಲ ಮರಿ ಹಾಕಿ ನನ್ನೆಡೆ ನೋಡಿ ಮುಸಿನಗಲು, ಆ ನಿನ್ನ ಸೆಳೆದ ಸೌಂದರ್ಯ ನನ್ನಿಂದ ದೂರ ಸಾಗಿಯಾಗಿತ್ತು...ನನ್ನೆಡೆ ಕಿರುನಗೆಯ ಬೀರಿ ತುಸುದೂರ ನಿಂತಿದ್ದ ಕವಿತೆಗೆ ನಾನು ಸೋತಾಗಿತ್ತು...ಈ ಕಾವ್ಯಾಗ್ನಿಯ ಬೆರಳುಗಳು ಕವಿತೆಯ ತಕಧಿಮಿತಕ್ಕೆ ಸಿದ್ಧವಾಗಿ ಕಾವ್ಯಕ್ಕೆ ಮುನ್ನುಡಿಯ...

ಕವನ : ಬಹಾದ್ದೂರ್ – ಬಾಪೂಜಿ

ಬಹಾದ್ದೂರ್- ಬಾಪೂಜಿಭಾರತ ಮಾತೆಯ ಪಾಪು ನೀನೇ ನಮ್ಮಯ ಬಾಪೂಜಿ ಭಾರತಾಂಬೆಯ ಶಕ್ತಿಯ ಸೊಂಪು ನೀನೇ ನಮ್ಮಯ ಶಾಸ್ತ್ರೀಜೀನಿಮ್ಮಯ ಈ ಜನುಮ ದಿನ ಭಾರತೀಯರ ಸಂತಸದ ಕ್ಷಣ ಸಂಭ್ರಮದಿ ಸೇರಿ ನಾವುಗಳೆಲ್ಲ ಸ್ಮರಿಸೋಣ ಈ ದಿವ್ಯ ಚೇತನಗಳಜಾತಿ ಧರ್ಮ ಮತಗಳ ಕೊಂದು ಭಾರತೀಯರು ನಾವೆಲ್ಲ ಒಂದು ಭಾವೈಕ್ಯತೆಯಲಿ ಕೂಡಿ ಬಾಳುವೆವು ಭೇಧ ಭಾವಗಳ ತೊರೆದುಶಾಂತಿ ಅಹಿಂಸೆ ನಿಮ್ಮಯ ಪಾಠ ನಮ್ಮ ಬಾಳಿಗೆ ರಸದೂಟ ದಾರಿ ದೀಪವು ನಮಗೆಲ್ಲ ಆ ದಿಟ್ಟತನದ ನಿಮ್ಮ ಹೋರಾಟರೈತ,...

ಕವನ : ಗಾಂಧಿಯನೇಕೆ ಕೊಂದರು ?

ಗಾಂಧಿಯನೇಕೆ ಕೊಂದರು ?ಸತ್ಯ ಶಾಂತಿ ನ್ಯಾಯ ಮೂರ್ತಿ ಗಾಂಧಿಯನೇಕೆ ಕೊಂದರು ? ಎಷ್ಟೋ ವರುಷಗಳ ಹಿಂದೆ ನನ್ನ ಮುಗ್ಧ ಮಗನ ಪ್ರಶ್ನೆಯುದಶಕ ಕಳೆಯಿತು ಉತ್ತರ ಹುಡುಕಲು ಕೊನೆಗೂ ಸಿಕ್ಕಿತು ಕಾರಣ ಬಿಚ್ಚಿ ಹೇಳಿದೆ ನನ್ನ ಮಗನಿಗೆ ನಿಜದ ನಿಲುವಿನ ಹೂರಣಬಾಪು ಸರಳ ಸಮತೆ ಪ್ರಿಯ ಕೈಗೆ ಕೊಟ್ಟನು ಸ್ವಾತಂತ್ರ್ಯ ದಾಸ್ಯ ತೊಲಗಿಸಿ ದೇಸಿ ಚರಕ ನೂಲು ನೂತನು ಭಾರತಸುಳ್ಳು ಎಂದೂ ಹೇಳಲಿಲ್ಲ ಕೋಮು ಗಲಭೆ ಮಾಡಲಿಲ್ಲ ಜಾತಿ ಧರ್ಮದ ದ್ವೇಷ...

ಕವನ : ಭಗತ್ ಗೆ ಗಲ್ಲು

ಭಗತ್ ಗೆ ಗಲ್ಲುಅಂದು ಕತ್ತಲು ಹರಿದಿರಲಿಲ್ಲ. ಮಧ್ಯ ರಾತ್ರಿ ಗುಸು ಗುಸು ಮಾತು ಸೆರೆವಾಸದ ಮನೆ ಸ್ಮಶಾನ ಕೆಂಪು ಮೋತಿಯವರಿಗೂ ದುಗುಡ ಒಳಗೊಳಗೆ ಕಳವಳ ಮುಖದ ಮೇಲೆ ಚಿಗುರು ಗಡ್ಡಮೀಸೆ ಹಸೆ ಮಣಿ ಏರಿರಲಿಲ್ಲ, ಕಂಕಣ ಕಟ್ಟಿಲ್ಲ ಬೇಡಲಿಲ್ಲ ಜೀವ ಭಿಕ್ಷೆ, ಪ್ರಾಣ ದಯೆ . ಬರೆದು ಮುಗಿಸಿದ ದಿನಚರಿ ಸಾವಿನ ಅಧಿಕಾರಿಯ ಕೈಕುಲುಕಿದ ಮುಗುಳು ನಗೆ ಮಂದಹಾಸ ನೋಟ ಬಾಡಿರಲಿಲ್ಲ ಮುಖದ ಚೇತನ ನಡೆದರು ಸಾವಿನ ಕುಣಿಕೆಗೆ ಸಂತಸದಿ ಭಗತ್ ಸುಖದೇವ...

ಕವನಗಳು

ನಿಲ್ಲದ ನಗೆಚಿಕ್ಕವನಾಗಿದ್ದಾಗ ಪ್ರಪಂಚ ನೋಡಿ ಎಲ್ಲರೂ ನನ್ನವರೆಂದು ಸಂತೋಷದಿಂದ ನಗು ನಗುತ್ತಿದ್ದೆ, ವಯಸ್ಸಾದಂತೆ ಸಮಾಜದ ಎಲ್ಲರೂ ಆಸ್ತಿ,ಅಂತಸ್ತು, ಸ್ವಾರ್ಥಗಳ ಬೇಲಿ ಹಾಕಿಕೊಂಡಿದ್ದ ನೋಡಿ ವಿಷಾದದ ನಗು ನಗಲಾರಂಭಿಸಿದೆ ಅದೇಕೋ ಏನೋ ಇನ್ನೂ ನಗು ನಿಲ್ಲಿಸಲಾಗಿಲ್ಲ, ನಂಗೊಂದು ಹೆದರಿಕೆ ನಾನೂ ಸಹ ನಗೆ ನಿಲ್ಲಿಸದ ಲಾಫಿಂಗ್ ಬುದ್ಧ ಆಗಿ ಬಿಡುತ್ತೇನೋ ಅಂತ..ವಾಸ್ತವಬಾಯಲ್ಲಿ ಜೇನುತುಪ್ಪ ಸುರಿಸುತ್ತಾ ಹೃದಯದಲ್ಲಿ ವಿಷ ಹರಿಸುವ ಕಾರ್ಕೋಟಕ ಮನುಜರ ಕಂಡಾಗ ಪರೋಪಕಾರ ಮಾಡಲೂ ಹೇಸಿಗೆ..ನೋವಿನ ತುತ್ತತುದಿಯಲ್ಲಿ ಎಲ್ಲೋ ಬೆಳಕು ಕಾಣಿಸಿದಾಗ, ಮಾಡಿದ ಸೇವೆಗೆ ಯಾರೋ ಸಹೃದಯರು ಆತ್ಮಪೂರ್ವಕ ಮೆಚ್ಚುಗೆ ನೀಡಿದಾಗ, ಮತ್ತೆ ಕತ್ತಲಿಗೆ ಬೆಳಕು...

ಕವನಗಳು

ಸಾಯುವದಿಲ್ಲಭಾವನೆಗಳು ಸಾಯುವದಿಲ್ಲ ಕಾರಣ ಹೃದಯ ನೆನಪುಗಳ ಎರಕದಲ್ಲಿ ಕನಸುಗಳಿಗೆ ಜೀವ ನೀಡುತ್ತವೆ ಕಥೆ ಕಾವ್ಯಕವನ ಶಬ್ದಗಳ ಜಾತ್ರೆ ಪ್ರೀತಿ ಇದ್ದಲ್ಲಿ ಹೃದಯ ಸೋಲುತ್ತಲೆ ಇರುತ್ತದೆ. ಸೋತ ನೋವಿಲ್ಲ ಗೆದ್ದವರ ಮೊಗದಲ್ಲಿನ ಮುಗುಳು ನಗೆಯ ನಿರೀಕ್ಷೆಯ ಸಂತಸ ಸಂಭ್ರಮ ನಿತ್ಯವೆನಗೆಹುಡುಕಿ ಕೊಳ್ಳುವ _________________ಒಲುಮೆಗಾಗಿ ನಾವಿಬ್ಬರೂ ಹೀಗೆ ಸೋಲುತ್ತಲೆ ಗೆಲುವು ಕಾಣೋಣನೀನು ನಾನು ಹುಡುಕಿ ಕೊಳ್ಳುವ ಕಳೆದು ಹೋದ ಸ್ನೇಹ ಪ್ರೀತಿಯಒಮ್ಮೆ ಸುಖ ಒಮ್ಮೆ ದುಃಖ ಸಮರಸ ಭಾವ ನಮ್ಮ ಜೀವನಸಿಹಿ ಕಹಿ ಒಗರು ಹುಳಿ ಬಾನ ನಡುವಿನ ನಗೆ ಚಂದ್ರಮಕಪ್ಪು ನೆಲದಿ ಬಯಕೆ ಬೀಜ ಹೊಸ ಫಸಲಿನ ಗೊನೆ ತೆನೆಬಾಳ ಬೇಕು ನೂರು ವರುಷ ಚೆಲುವು ಗೆಲುವಿನ ಹೃದಯ ಹರುಷ _____________________ ಡಾ. ಶಶಿಕಾಂತ ಪಟ್ಟಣ ರಾಮದುರ್ಗ

ಕವನ : ನೀನಿರುವೆ

ನೀನಿರುವೆಇಲ್ಲ ನೀನು ಅರಮನೆಯಲ್ಲಿ ಗುರುಮನೆಯಲ್ಲಿ ಭವ್ಯ ಕಟ್ಟಡಗಳಲ್ಲಿ ಅಲ್ಲಿಯೇ ಗಟ್ಟಿಯಾಗಿ ನೆಲೆಸಿರುವೆ ಎನ್ನುವ ನಿನ್ನ ಭ್ರಮೆ ನಿನಗಾಗಿ ಹಪ ಹಪಿಸುತಿದೆ ಈ ಜೀವ ನೀನಿಲ್ಲ ಅಲ್ಲಿ ನೀನಿರುವೆ ನನ್ನ ಕನಸುಗಳಲ್ಲಿ ಕವನಗಳಲ್ಲಿ ಭಾವ ಜೀವ ಪ್ರೀತಿಯಲಿ ಉಸಿರಿನಲಿ ಬೆಚ್ಚಗೆ ಕುಳಿತಿರುವೆ ನನ್ನೆದೆಯ ಗೂಡಲ್ಲಿ ಸ್ನೇಹ ಪ್ರೀತಿಯ ಜೀವ ನೆಲೆ ಸೆಲೆಯಲ್ಲಿ _____________________ *ಡಾ ಶಶಿಕಾಂತ ಪಟ್ಟಣ ರಾಮದುರ್ಗ*

ಕವನ : ಕಳಂಕ

ಕಳಂಕಭಾರತ ಮಾತೆಯ ಕನಸಿನ ಕೂಸಿಗೆ ಹಚ್ಚದಿರಿ ಕೊಲೆ,ಸುಲಿಗೆ,ಅತ್ಯಾಚಾರವೆಂಬ ಕಳಂಕ ಭಾರತಮಾತೆಯು ಪವಿತ್ರಳೆನ್ನುವಿರಿ ಆ ಪಾವಿತ್ರ್ಯತೆ ನಮ್ಮಲ್ಲಿ ಎಳ್ಕಾಳಷ್ಟು ಕಾಣಲಿಲ್ಲ.ಮೂರೊತ್ತಿನ ಊಟಕ್ಕೆ ದಾರಿಮಾಡಿ ಕೊಟ್ಟರೆ, ಭಾರತಮಾತೆ ಸ್ವತ್ತು ನಮ್ಮದೆಂದು ಸೊಕ್ಕಿನಿಂದ ಬೀಗುವಿರಿ.....ಲವ್ ಜಿಹಾದ್ ಆಮಿಷಗಳಿಗೆ ಹಿಂದೂ ಸ್ತ್ರೀಯರನ್ನು, ಮನವೊಲಿಸಿ ದುಡ್ಡಿನ ಆಮಿಷಕ್ಕೆ ಕೊಲೆ ಮಾಡುವನಿಮ್ಮ ಹೇಡಿತನಕ್ಕೆ ರಾಣಿ ಚನ್ನಮ್ಮ, ಓನಕೆ ಓಬವ್ವ,      ಮದರ್ ತೆರೆಸಾ, ಪಿ.ಟಿ.ಉಷಾರಂಥ ದಿಟ್ಟ ಮಹಿಳೆಯರ ದಿಕ್ಕಾರವಿರಲಿ.......ಅಪ್ಪಂದಿರ ಆಸೆಗೆ ಅಮ್ಮನ ಕನಸಿಗೆ ಕೊಳ್ಳಿಇಟ್ಟು...

ಕವನ : ಊಸರವಳ್ಳಿಯ ಆತ್ಮಹತ್ಯೆ

ಊಸರವಳ್ಳಿ ಆತ್ಮಹತ್ಯೆಕಾಡಿನಲ್ಲಿ ಒಂಟಿ ಬದುಕು ಹೊಟ್ಟೆಗಾಗಿ ಬಣ್ಣ ಬದಲಿಸುತ್ತಿತ್ತು ನಿರುಪದ್ರವ ಜೀವಿ ಊಸರವಳ್ಳಿ ಶ್ರೀಗಂಧ ಕಳ್ಳರು ಕಾಡಿಗೆ ಬೆಂಕಿ ಗಣಿ ಲೂಟಿ ಮರಳು ದಂಧೆ ಹುಲಿ ಚರ್ಮ ಆನೆ ಕೊಂಬಿನ ಭರ್ಜರಿ ಮಾರಾಟ ಕೆರೆ ಹಳ್ಳ ನದಿ ಅತಿಕ್ರಮಣ ಲೋಕಾಯುಕ್ತದಿಂದ ಎಸ ಆಯ್ ಟಿ ಯಿಂದ ಕ್ಲೀನ್ ಚಿಟ್ ಪ್ರಾಮಾಣಿಕರು ಚುನಾವಣಾ ಬಂದಾಗ ಶ್ವೇತ ಶುಭ್ರ ಖಾದಿ ಜುಬ್ಬ ಬುದ್ಧ ಬಸವ ಗಾಂಧಿ ಹಬ್ಬ ಸಂವಿಧಾನ ಹೆಸರಲ್ಲಿ ಮಂತ್ರಿಯಾಗಿ ಪ್ರಮಾಣ ವಚನ ಬೇಸರಗೊಂಡಿತು ಊಸರವಳ್ಳಿ ಒಂದು ದಿನ ಬೆಳ್ಳಂಬೆಳಿಗ್ಗೆ ಮರಕ್ಕೆ ಹಗ್ಗ ಬಿಗಿದು ಆತ್ಮಹತ್ಯೆ ಮಾಡಿಕೊಂಡಿತ್ತು . ಕೈಯಲ್ಲಿ ಏನೋ...

ಕವನ ; ಮುಗ್ಧ ಮನಸು

ಮುಗ್ಧ ಮನಸುಮುಗ್ದ ಮನಸ್ಸಿನ ಪುಟ್ಟ ಕಂದವೊಂದು ಗ್ರಾಮ ದೇವಿಯ ಗುಡಿಯ ಜಗಲಿಯಲಿ ಶಾಲೆಯ ಪಠ್ಯವ ಓದುತಲಿತ್ತು,ಬರೆಯುತಲಿತ್ತು.ನಿಷ್ಕಲ್ಮಶ ಮನಸ್ಸಿನ ಮೌನ ಭಾವದಿ ಓದುತ, ಬರೆಯುತ, ಮೊಗದ ಮಂದಹಾಸದಿ ಕಣ್ಣು ಪಿಳಿಪಿಳಿ ಪಿಳುಕಿಸುತ್ತಿತ್ತುಅಮ್ಮನ ಆಸೆಗೆ ಅಪ್ಪನ ಕನಸಿಗೆ ಬಣ್ಣವ ತೀಡುತ ಅಕ್ಷರಾಭ್ಯಾಸವ ಕಲಿಯುತಲಿತ್ತು. ಅಕ್ಷರ ಕಲಿಸಿದ ಗುರುವಿಗೆ ಗರ್ವದಿ ವಂದನೆ ತಿಳಿಸುತಲಿತ್ತು.ಮಗ್ದ ಮನಸ್ಸಿನ ಪುಟ್ಟ ಗೂಡಲಿ ಡಾಕ್ಟರ್, ಇಂಜಿನಿಯರ್, ಪೋಲಿಸ್, ಪೈಲಟ್ ಆಗುವ...
- Advertisement -spot_img

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...
- Advertisement -spot_img
error: Content is protected !!
Join WhatsApp Group