Uncategorized

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ  

 ವಿಧಿ ಕೊಟ್ಟ ಪಾತ್ರಗಳ ಚೆನ್ನಾಗಿಯಭಿನಯಿಸು ಲೋಕವಿದೆ ನಾಟಕದ ರಂಗಸ್ಥಳ ಮನಸಿನಾಲಯದೊಳಗೆ ನೀನೆ ನೀನಾಗಿದ್ದು ನಿಜದ ನೆಲೆಯರಿತುಕೋ - ಎಮ್ಮೆತಮ್ಮಶಬ್ಧಾರ್ಥ ವಿಧಿ = ಬ್ರಹ್ಮ, ಸೃಷ್ಟಿಕರ್ತತಾತ್ಪರ್ಯಈ ಜಗತ್ತು ಒಂದು‌ ನಾಟಕದ ರಂಗಸ್ಥಳ. ಸೂರ್ಯಚಂದ್ರರೆ ದೀಪಗಳು. ಆಕಾಶವೆ ದೃಶ್ಯಾವಳಿಯ ಪರದೆ.‌ ಸೃಷ್ಟಿಕರ್ತನು ಒಬ್ಬೊಬ್ಬರಿಗೊಂದೊಂದು ಪಾತ್ರ ಕೊಟ್ಟಿದ್ದಾನೆ. ನಾವೆಲ್ಲರು ಪಾತ್ರಧಾರಿಗಳು. ಸೃಷ್ಟಿಕರ್ತನೆ ತರಬೇತುದಾರನು. ಅವನು ಕೊಟ್ಟ ಪಾತ್ರಗಳನ್ನು ಚೆನ್ನಾಗಿ ಅಭಿನಯಿಸಬೇಕು. ತಂದೆ ತಾಯಿಯ ಪಾತ್ರ, ಅಣ್ಣತಮ್ಮರ ಪಾತ್ರ, ಅಕ್ಕತಂಗಿಯರ...

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ  

 ಕದಿಯದಿರು ಕಿನಿಯದಿರು ಹಳಿಯದಿರು ಹುಸಿಯದಿರು ಕರುಬದಿರು ಪರರೇಳ್ಗೆಯನ್ನು ಕಂಡು ಕೊಲ್ಲದಿರು ಜೀವಿಗಳ ಕೊಳ್ಳದಿರು ಸುರೆಮಾಂಸ ಸದ್ಧರ್ಮ ಸೂತ್ರವಿದು - ಎಮ್ಮೆತಮ್ಮಶಬ್ಧಾರ್ಥ ಕಿನಿ = ಕೋಪಿಸು, ಮುನಿ. ಹಳಿ = ದೂಷಿಸು, ನಿಂದಿಸು ಹುಸಿ = ಸುಳ್ಳು ಹೇಳು. ಕರುಬು = ಹೊಟ್ಟಕಿಚ್ಚುಪಡುತಾತ್ಪರ್ಯ ಇನ್ನೊಬ್ಬರ ವಸ್ತುಗಳನ್ನು ಕಳ್ಳತನ ಮಾಡಬಾರದು. ಅದರಿಂದ ಕಳೆದುಕೊಂಡವರ ಶಾಪ ತಗುಲುತ್ತದೆ. ಬೇರೆಯವರ ಮೇಲೆ ಕೋಪಿಸಿಕೊಳ್ಳಬಾರದು. ಕೋಪದಿಂದ ದೇಹದಲ್ಲಿ ರಕ್ತದ ಏರೊತ್ತಡ ಉಂಟಾಗಿ ಆರೋಗ್ಯದಲ್ಲಿ ಏರುಪೇರಾಗುತ್ತದೆ. ಇನ್ನೊಬ್ಬರನ್ನು...

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ  

 ಸಕಲರಿಗೆ ಸಮನಾಗಿ ಬೆಳಕು ನೀಡುವ ಸೂರ್ಯ ಎಲ್ಲರನು ಸಲಹುವಳು ಭೂಮಿತಾಯಿ ಅಖಿಲರಿಗೆ ಸಮನಾಗಿ ಸೂಸುತಿವೆ ಮಳೆಗಾಳಿ ಸಮಭಾವ ನಿನಗಿರಲಿ - ಎಮ್ಮೆತಮ್ಮಶಬ್ಧಾರ್ಥ ಅಖಿಲ‌ = ಸಕಲ, ಎಲ್ಲಜಗವ ಬೆಳಗುವ ಸೂರ್ಯನು ಇವರು ಕೆಟ್ಟವರು ಇವರು ಒಳ್ಳೆಯವರು ಎಂದು ವಿಚಾರ ಮಾಡಿ ಬೆಳಕು ಕೊಡುವುದಿಲ್ಲ. ಎಲ್ಲರಿಗೆ ಸೂರ್ಯಸಮಾನವಾಗಿ ಬೆಳಕು ನೀಡುತ್ತಾನೆ. ಹಾಗೆ ಭೂಮಿ ಯಾರಲ್ಲಿ‌ ಭೇದವೆಣಿಸದೆ ಎಲ್ಲರಿಗೂ ಅನ್ನ‌ನೀರನ್ನು ಕೊಟ್ಟು ಪೋಷಣೆಮಾಡುತ್ತಾಳೆ....

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ  

 ಮನೆಯೊಳಗೆ ಕಸಬಳಿದು ನೀರಿಂದ ನೆಲದೊಳೆದು ಅಂಗಳದಿ ರಂಗವಲ್ಲಿಯನು ಹಾಕಿ ಬಾಗಿಲನು ತೆರೆದಿಟ್ಟು ಸಂಭ್ರಮದಿ ಸ್ವಾಗತಿಸು ಒಳಬರುವನಾಗತಿಥಿ - ಎಮ್ಮೆತಮ್ಮತಾತ್ಪರ್ಯ ಮನೆಯ ಒಳಗೆಹೊರಗೆ ಕಸಗೂಡಿಸಿ ಸ್ವಚ್ಛವಾಗಿಡಬೇಕು. ಮತ್ತೆ ನೀರಿನಿಂದ ಮನೆಯಲ್ಲಿಯ‌ ನೆಲದ‌ ಬಂಡೆಗಳನ್ನು ಬಟ್ಟೆಯಿಂದ ಚೆನ್ನಾಗಿ‌ ಒರೆಸಿ ಥಳಥಳ‌ ಹೊಳೆಯುವಂತೆ ಮಾಡಬೇಕು. ಹಾಗೆ ಮನೆಯ ಮುಂದಿನ ಅಂಗಳಕ್ಕೆ ನೀರು ಚಿಮುಕಿಸಿ ಚಳೆಕೊಡಬೇಕು. ಮತ್ತೆ ಅಂಗಳದಲ್ಲಿ ರಂಗೋಲಿ ಬರೆದು ಸಿಂಗರಿಸಬೇಕು. ಬಾಗಿಲಿನ ಹೊಸತಿಲು ತೊಳೆದು ಅರಿಷಿಣ ಕುಂಕುಮ ಹಚ್ಚಬೇಕು. ಮತ್ತೆ ಸುವಾಸನೆಭರಿತ...

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ  

 ಸತಿಯೆಂಬ ಸೆರೆಕುಡಿದು ಧನವೆಂಬ ಚೇಳ್ಕಡಿದು ಹೊಲಗದ್ದೆಮನೆಯೆಂಬ ಭೂತಹಿಡಿದು ತನುವೆಂಬ ಮರನೇರಿ ಹುಚ್ಚೆದ್ದು ಕುಣಿಯುತಿದೆ ಮನವೆಂಬ ಮರ್ಕಟವು - ಎಮ್ಮೆತಮ್ಮ||೧೦೮||ಶಬ್ಧಾರ್ಥ ಭೂತ = ದೆವ್ವ. ತನು = ದೇಹ. ಮರ್ಕಟ = ಕೋತಿ,ಮಂಗತಾತ್ಪರ್ಯ ಹೆಣ್ಣು, ಹೊನ್ನು , ಮಣ್ಣು ಈ‌ ಮೂರು‌ ಮಾನವನನ್ನು ಕಾಡುವ ಅಪಾಯಕಾರಿಗಳು. ಪತ್ನಿಯ ಮೇಲಿನ ಮೋಹವೆಂಬುದು ಮದ್ಯವಿದ್ದಂತೆ. ಅದರ ಸೇವನೆಯಿಂದ ತಲೆಗೆ ಅಮಲೇರುತ್ತದೆ. ಅಂದರೆ ಅಜ್ಞಾನ ವಕ್ಕರಿಸುತ್ತದೆ. ಸಂಪತ್ತು ಕೂಡ ಚೇಳು...

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ  

 ತಂದೆತಾಯಿಗಳಿಲ್ಲ ಬಂಧುಬಾಂಧವರಿಲ್ಲ ಪರದೇಸಿ ತಾನೆಂದು ದುಃಖವಿಲ್ಲ ಸಂತಸದಿ ಕೂಗುವುದು ಕೋಗಿಲೆ ವಸಂತದಲಿ ಕಲಿಯಬೇಕದರಿಂದ - ಎಮ್ಮೆತಮ್ಮ ಶಬ್ಧಾರ್ಥ ಪರದೇಸಿ = ಅನಾಥ, ದಿಕ್ಕಿಲ್ಲದವನುತಾತ್ಪರ್ಯ ಕೋಗಿಲೆಗಳು ಎಂದೂ ಗೂಡು ಕಟ್ಟುವುದಿಲ್ಲ. ಗಂಡು ಕೋಗಿಲೆ ಗೂಡಿನಲ್ಲಿ ಕೂತ ಕಾಗೆಯನ್ನು ಗೂಡಿನಿಂದ ಬೇರೆಡೆಗೆ ಕರೆದೊಯ್ಯುತ್ತದೆ.ಅದೆ ಸಮಯದಲ್ಲಿ‌ ಹೆಣ್ಣು‌ ಕೋಗಿಲೆ‌ ಬಂದು ಕಾಗೆಯ ಗೂಡಿನಲ್ಲಿ ಮೊಟ್ಟೆ ಇಟ್ಟು ಹೋಗುತ್ತದೆ. ಕಾಗೆ ತನ್ನ ಮೊಟ್ಟೆಗಳ‌ ಜೊತೆಗೆ ಕೋಗಿಲೆ ಮೊಟ್ಟೆ ತನ್ನದೆಂದು‌...

ಎಮ್ಮೆ ತಮ್ಮನ ಕಗ್ಗದ ತಾತ್ಪರ್ಯ  

 ಅಂಜದಿರು ಅಳುಕದಿರು‌ ಕುಂದದಿರು ಕುಸಿಯದಿರು ಮುಂದೇನು ಗತಿಯೆಂದು ಚಿಂತಿಸದಿರು ಲೋಕದೊಳಗಿರುವೆಲ್ಲ‌ ಜೀವಿಗಳ ಸಾಕುವವ ನಿನ್ನ ಕೈಬಿಡಲಾರ - ಎಮ್ಮೆತಮ್ಮಶಬ್ಧಾರ್ಥ ಕುಂದದಿರು = ಕುಗ್ಗದಿರು. ಕುಸಿಯದಿರು = ಹಿಂಜರಿಯದಿರುತಾತ್ಪರ್ಯ ಮುಂದಿನ ಜೀವನ ಹೇಗೋ‌ ಏನೋ‌ ಎಂದು‌ ಆತಂಕಪಡದಿರು. ಎಂಥ ಕಷ್ಟ ಬರುವುದೋ ಏನೋ‌‌ ಎಂದು ಹೆದರಿಕೊಳ್ಳದಿರು. ಕಷ್ಟಗಳು ಬಂದವೆಂದು ನಡುಗಿ ಮುದುಡಿಕೊಳ್ಳದಿರು. ಆ ಕಷ್ಟಕಾರ್ಪಣ್ಯಗಳಿಗೆ ಕುಗ್ಗಿಹೋಗದಿರು ಮತ್ತು ಹಿಂಜರಿಯದಿರು ಪ್ರಪಂಚದ ಎಲ್ಲ ಜೀವಿಗಳಿಗೆ ಸರಿಯಾದ...

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ  

 ಕಳ್ಳಕಾಕರು ಬಂದು ಕದ್ದೊಯ್ದರೆನ್ನದಿರು ಧನಕನಕ ಹೋಯ್ತೆಂದು ಚಿಂತಿಸದಿರು ಅಲ್ಲಿ ಭೋಗಿಸುವವನು ಇಲ್ಲಿ ಭೋಗಿಸುವವನು ಆ ದೇವನೊಬ್ಬವನೆ - ಎಮ್ಮೆತಮ್ಮಶಬ್ಧಾರ್ಥ ಭೋಗಿಸುವವನು = ಅನುಭವಿಸುವವನುತಾತ್ಪರ್ಯ ಯಾರಾದರು ಕಳ್ಳರು ಬಂದು ನಿನ್ನ ವಸ್ತ್ರ ಒಡವೆ ಧನಕನಕ ಕಳ್ಳತನ ಮಾಡಿದರೆ ಚಿಂತೆ ಮಾಡಬೇಡ. ಅಂಥ ಚಿಂತೆಯಿಂದ ಆರೋಗ್ಯದಲ್ಲಿ ಏರುಪೇರಾಗುತ್ತದೆ. ಆದಕಾರಣ ಹೋದದ್ದು ಹೋಯಿತು ಮತ್ತೆ ಬರುವುದಿಲ್ಲ ಎಂದು ಅರ್ಥಮಾಡಿಕೊಂಡು ಚಿಂತಿಸುವುದನ್ನು ಬಿಡಬೇಕು. ಎಲ್ಲರಲ್ಲಿ ಆ ಪರಮಾತ್ಮನು ವಾಸವಾಗಿದ್ದಾನೆ ಎಂದು ಸಮಾಧಾನಪಡಬೇಕು....

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ  

 ಜೇಡಬಲೆ ಕಟ್ಟುತಿದೆ ಕಸತುಂಬಿ ತುಳುಕುತಿದೆ ಇಲಿಗಳೋಡಾಡುತಿವೆ ತೂತುಕೊರೆದು ಇರುವೆಗಳು ಹರಿದಾಡಿ ಮಾಳಿಗೆಯು ಸೋರುತಿದೆ ಮನೆಯೊಡೆಯನಲ್ಲಿಲ್ಲ - ಎಮ್ಮೆತಮ್ಮಶಬ್ಧಾರ್ಥ ಮನೆಯೊಡೆಯ = ಮನೆಯ ಮಾಲಕತಾತ್ಪರ್ಯ ಮನೆ ಮಾಡದೆ ಹೋಯ್ತು ಹೊಲ‌ ನೋಡದೆ‌ ಹೋಯ್ತು ಎಂಬ ಒಂದು ಗಾದೆ ಮಾತಿದೆ. ಮನೆಯೊಳಗೆ ಒಡೆಯನಿದ್ದು ಮನೆಯನ್ನು‌ ಸದಾ ಶುಚಿಯಾಗಿ ಇಟ್ಟುಕೊಳ್ಳದಿದ್ದರೆ ಪಾಳುಬಿದ್ದು ಹೋಗುತ್ತದೆ. ಆ ಮನೆಯಲ್ಲಿ ಜೇಡರ ಹುಳುಗಳು ಬಲೆ ಕಟ್ಟುತ್ತವೆ. ದಿನ ನಿತ್ಯ ಕಸತುಂಬಿ ತುಳುಕಾಡುತ್ತದೆ. ಇಲಿಹೆಗ್ಗಣಗಳು...

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ  

 ಮಂದಿರ ಮಸೀದಿಗಳು ಗುಡಿಗುರುದ್ವಾರಗಳು ಮಠಬಸದಿಚರ್ಚುಚೈತ್ಯಾಲಯಗಳು ಪ್ರತ್ಯೇಕಗೊಳಿಸುವವು ವೈಷಮ್ಯ ಬೆಳೆಸುವವು ಬಿಟ್ಟು ಬಾ ಹೊರಗೆ ನೀ - ಎಮ್ಮೆತಮ್ಮಶಬ್ಧಾರ್ಥ ವೈಷಮ್ಯ = ದ್ವೇಷತಾತ್ಪರ್ಯ ಜಗತ್ತಿನ‌ ತುಂಬ ಅವರವರ ಧರ್ಮದಾಚರಣೆಗಾಗಿ ಸಾಕಷ್ಟು ಮಂದಿರಗಳು, ಮಸೀದಿಗಳು, ಗುಡಿಗಳು, ಗುರುದ್ವಾರಗಳು, ಮಠಗಳು, ಬಸದಿಗಳು, ಚರ್ಚುಗಳು, ಚೈತ್ಯಾಲಯಗಳು ಇದ್ದಾವೆ. ಮಠ ಮಂದಿರ ಗುಡಿಗಳಲ್ಲಿ ಹಿಂದುಗಳು ಪೂಜೆ ಸಲ್ಲಿಸುತ್ತಾರೆ. ಮಸೀದಿಗಳಲ್ಲಿ ಮುಸಲ್ಮಾನರು ನಮಾಜು ಮಾಡುತ್ತಾರೆ. ಗುರುದ್ವಾರಗಳಲ್ಲಿ ಸಿಖ್ಖರು ಗುರುಗ್ರಂಥ ಪಠಣ ಮಾಡುತ್ತಾರೆ. ಬಸದಿಗಳಲ್ಲಿ‌ ಜೈನರು ಜಿನನ ಪೂಜಿಸುತ್ತಾರೆ. ಚರ್ಚುಗಳಲ್ಲಿ ಕ್ರೈಸ್ತರು...
- Advertisement -spot_img

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...
- Advertisement -spot_img
error: Content is protected !!
Join WhatsApp Group