Uncategorized
ಜಗಳವಾಡುವುದೊಂದು ಸುಗುಣವೆಂದೆನಬೇಡ
ಲಾಭವಿಲ್ಲದರಿಂದ ನಷ್ಟವುಂಟು
ಮನದ ನೆಮ್ಮದಿ ಕೆಡಿಸಿ ನರಕಯಾತನೆ ಕೊಡುವ
ಜಗಳವನೆ ಕಡೆಗಣಿಸು- ಎಮ್ಮೆತಮ್ಮಶಬ್ಧಾರ್ಥ
ಸುಗುಣ = ಒಳ್ಳೆಯ ಗುಣ. ನೆಮ್ಮದಿ = ಸಮಾಧಾನತಾತ್ಪರ್ಯ
ಬೇರೆಯವರೊಂದಿಗೆ ಗುದ್ದಾಡುವುದು , ತಂಟೆತಕರಾರು ಮಾಡುವುದು ಒಳ್ಳೆಯ ಗುಣದ ಲಕ್ಷಣವಲ್ಲ.ಅಂದರೆ ಜಗಳ
ಮಾಡುವುದು ದುರ್ಗುಣದ ಲಕ್ಷಣ. ಅದರಿಂದ ಬರಿ ನಷ್ಟವೆ ಹೊರತು ಯಾವುದೆ ಲಾಭವಿಲ್ಲ. ಜಗಳದಿಂದ ಕೋಪ
ಉಂಟಾಗುತ್ತದೆ. ಕೋಪದಿಂದ ದೇಹವೆಲ್ಲ ಕಂಪಿಸುತ್ತದೆ.
ಕೈಕಾಲುಗಳು ನಡುಗುತ್ತವೆ.ಬಾಯಾರಿಕೆ ಉಂಟಾಗುತ್ತದೆ.
ಇದರಿಂದ ಆರೋಗ್ಯದಲ್ಲಿ...
Uncategorized
ಕತ್ತಲಾಗಿದೆಯೆಂದು ಕೈಕಟ್ಟಿ ಕೂಡದಿರು
ನೀ ನಡೆವ ಹಾದಿಯಲಿ ಹೆಜ್ಜೆಹಾಕು
ಮುಂಬೆಳಕ ತೋರುವನು ಮುಂದಡಿಯನಿಡಿಸುವನು
ಕರುಣಾಳು ಕೈಬಿಡನು - ಎಮ್ಮೆತಮ್ಮಶಬ್ಧಾರ್ಥ
ಕೈಕಟ್ಟಿಕೂಡು = ಸೋಮಾರಿಯಾಗಿ ಕೂಡು. ಹಾದಿ = ದಾರಿತಾತ್ಪರ್ಯ
ಗಾಢವಾದ ಕತ್ತಲಿದೆಯೆಂದು ಸುಮ್ಮನೆ ಕೂತುಕೊಳ್ಳಬೇಡ.
ದಾರಿ ನಡೆಯುತ್ತ ಹೋದಂತೆ ಕತ್ತಲಲ್ಲಿ ಕೊಂಚ ಕೊಂಚ ಬೆಳಕು ದಾರಿಯಲ್ಲಿ ಕಾಣುತ್ತದೆ. ಹಾಗೆ ಮಂದಮುಂದಕ್ಕೆ ಹೋದಂತೆ ಬೆಳ್ಳಿಚುಕ್ಕಿ ಮೂಡುತ್ತದೆ ಮತ್ತು ಮೂಡಲಲ್ಲಿ ಮುಂಬೆಳಕು ಬೀರುತ್ತ ಸೂರ್ಯದೇವ ಉದಯಿಸುತ್ತಾನೆ....
Uncategorized
ಎಲ್ಲಕಡೆ ನೆಲವೆಲ್ಲ ಹಚ್ಚ ಹಸಿರಾಗಿರಲು
ಕುರಿಯ ಮನ ಸೆಳೆಯುವುದು ತಿನ್ನಲೆಂದು
ತಿಂದು ಕೊಬ್ಬಿದ ಮೇಲೆ ಕೊಂದು ತಿನ್ನುವ ಕುರುಬ
ಕುರಿ ನೀನು ಕುರುಬನವ - ಎಮ್ಮೆತಮ್ಮ||೧೫೦||ತಾತ್ಪರ್ಯ
ಸುತ್ತಮುತ್ತ ಹಸಿರು ಬೆಳೆದಿದ್ದರೆ ಕುರಿ ತಿನ್ನಲು ಆಸೆಪಡುತ್ತದೆ.
ಆ ಕುರಿ ತಿಂದು ದಷ್ಟಪುಷ್ಟವಾಗಿ ಬೆಳೆದರೆ ಕುರುಬ ಅದನ್ನು
ಕೊಂದು ಅದರ ಮಾಂಸವನ್ನು ತಿನ್ನುತ್ತಾನೆ. ಹಾಗೆ ಮನುಷ್ಯ
ಕೂಡ ಕುರಿಯಿದ್ದಂತೆ. ಆತನ ಮುಂದೆ ರೂಪ,ರಸ, ಗಂಧ, ಶಬ್ಧ, ಸ್ಪರ್ಶ...
Uncategorized
ಬಟ್ಟೆತೊಳೆಯುವವನಗಸ ಮನೆಕಟ್ಟುವನೊಡ್ಡ
ಒಡವೆಗಳ ಮಾಡುವವನಕ್ಕಸಾಲಿ
ಮಣ್ಣಿಂದ ಮಡಕೆಗಳ ಮಾಡುವವ ಕುಂಬಾರ
ಕಸುಬಿಂದ ಕುಲವಾಯ್ತು - ಎಮ್ಮೆತಮ್ಮಶಬ್ಧಾರ್ಥ
ಮಡಕೆ = ಗಡಿಗೆ. ಕಸುಬು = ಕೆಲಸತಾತ್ಪರ್ಯ
ಪ್ರತಿಯೊಂದು ಊರಿನಲ್ಲಿ ಹಲವಾರು ಕೆಲಸಗಳನ್ನು ಮಾಡುವ ಜನರಿರುತ್ತಾರೆ. ಬೇಸಾಯ ಮಾಡುವವನು ಒಕ್ಕಲಿಗ, ಮನೆಯ ಕಟ್ಟುವವನು ಒಡ್ಡ, ಬಟ್ಟೆ ತೊಳೆಯುವವನು ಅಗಸ, ಒಡವೆ
ಮಾಡುವವನು ಅಕ್ಕಸಾಲಿ, ಕಟ್ಟಿಗೆ ಕೆಲಸ ಮಾಡುವವನು ಕಮ್ಮಾರ, ಮಣ್ಣಿನಿಂದ ಗಡಿಗೆ ಮಾಡುವವನು ಕುಂಬಾರ
ಹೀಗೆ ಉಪ್ಪಾರ,...
Uncategorized
ಏಸುಕ್ರಿಸ್ತನು ಬಡಗಿ ಪ್ರಭುದೇವ ನಟುವರನು
ವ್ಯಾಸನಂಬಿಗ ವಾಲ್ಮೀಕಿ ಬೇಡ
ಹುಟ್ಟಿಬಂದಂಥ ಕುಲ ಯಾವುದಾದರೇನು ?
ದೇವಕುಲದವರಿವರು- ಎಮ್ಮೆತಮ್ಮಶಬ್ಧಾರ್ಥ
ನಟುವರ = ನಾಟ್ಯ ಕಲಿಸುವವ.ಏಸುಕ್ರಿಸ್ತನ ತಂದೆ ಮರಕೆಲಸ ಮಾಡುತ್ತಿದ್ದನು. ಹೀಗಾಗಿ
ಕ್ರಿಸ್ತನು ಬಡಗೇರ ಕುಲಕ್ಕೆ ಸೇರಿದವನು. ಅಲ್ಲಮಪ್ರಭುವಿನ
ತಂದೆ ನಾಟ್ಯ ಕಲಿಸುತ್ತಿದ್ದನು. ಅಲ್ಲಮ ನಟುವರ ಕುಲಕ್ಕೆ
ಸೇರಿದವನು. ವ್ಯಾಸನ ತಾಯಿ ಸತ್ಯವತಿ ಮೀನಗಾರನ ಮಗಳು. ದೋಣಿ ನಡೆಸುತ್ತಿದ್ದ ಈಕೆಗೆ ಪರಾಶರ ಮುನಿಯಿಂದ
ವ್ಯಾಸನ ಜನನವಾದ ಕಾರಣ ವ್ಯಾಸ...
Uncategorized
ದೂರಾಗಿ ದುಃಖಿಸುವ ಶ್ರೀರಾಮಸೀತೆಯರ
ಒಂದುಗೂಡಿಸಿಬಿಟ್ಟ ವಾಯುಪುತ್ರ
ಅಗಲಿರುವ ಜೀವಾತ್ಮ ಪರಾಮಾತ್ಮರೈಕ್ಯಕ್ಕೆ
ಪವನಜನೆ ಕಾರಣನು - ಎಮ್ಮೆತಮ್ಮಶಬ್ಧಾರ್ಥ
ವಾಯುಪುತ್ರ = ಹನುಮಂತ. ಪವನಜ = ಆಂಜನೇಯತಾತ್ಪರ್ಯ
ಇದು ರಾಮಾಯಣದಲ್ಲಿ ಬರುವ ಹನುಮಂತನ ಪ್ರಸಂಗ.
ಸೀತೆಯನ್ನು ರಾವಣ ಅಪಹರಣ ಮಾಡಿಕೊಂಡುಹೋಗಿ
ಲಂಕೆಯ ಅಶೋಕವನದಲ್ಲಿ ಇಟ್ಟಿದ್ದ. ಸೀತೆ ಅಲ್ಲಿ ದುಃಖಿಸುತ್ತ
ಕಾಲ ಕಳೆಯುತ್ತಿದ್ದಳು. ಆಗ ಹುಡುಕುತ್ತ ಕಿಷ್ಕಿಂದೆಗೆ ಬಂದ
ರಾಮಲಕ್ಷ್ಮಣರಿಗೆ ಹನುಮಂತ ಮತ್ತು ಸುಗ್ರೀವ ಸ್ನೇಹಿರಾದರು.ಸೀತೆಯನ್ನು ಹುಡುಕಲು ಸುಗ್ರೀವ ಹನುಮಂತನನ್ನು...
Uncategorized
ಸೀರೆಯನು ಸೆಳೆವಾಗ ಮೊಲೆಮೇಲೆ ಕೈಯಿಟ್ಟು
ದ್ರೌಪದಿಯು ಕರೆಯೆ ಬರಲಿಲ್ಲ ಕೃಷ್ಣ
ಕೈಯೆತ್ತಿ ಕರೆದಾಗ ಬಂದು ಮಾನವ ಕಾದ
ನಂಬಿ ಕರೆದರೆ ಬರುವ - ಎಮ್ಮೆತಮ್ಮಶಬ್ಧಾರ್ಥ
ಕಾದ = ಕಾಯ್ದ, ಕಾಪಾಡಿದತಾತ್ಪರ್ಯ
ಮಹಾಭಾರತದ ಸಭಾಪರ್ವದಲ್ಲಿ ವಸ್ತ್ರಾಪಹರಣ ಪ್ರಸಂಗ ಬರುತ್ತದೆ. ಧರ್ಮರಾಯನು ದುರ್ಯೋಧನನೊಂದಿಗೆ
ಜೂಜಾಟವಾಡಿ ತನ್ನ ರಾಜ್ಯ ತಮ್ಮಂದಿರನ್ನು ಮತ್ತು ದ್ರೌಪದಿಯನ್ನು ಪಣಕ್ಕಿಟ್ಟು ಸೋಲುತ್ತಾನೆ. ಆಗ ದುರ್ಯೋಧನ ತನ್ನ ತಮ್ಮ ದುಶ್ಯಾಸನನಿಗೆ ದ್ರೌಪದಿಯನ್ನು
ಎಳೆದುತರಲು ಆದೇಶಿಸುತ್ತಾನೆ....
Uncategorized
ಅನ್ಯಮತಗಳನೆಂದು ಖಂಡನೆಯ ಮಾಡದಿರು
ನಿನ್ನ ಮತ ಮೇಲೆಂದು ಮಂಡಿಸದಿರು
ಎಲ್ಲ ಮತ ಸರ್ವ ಜನ ಸುಖಕಾಗಿ ಹಿತಕಾಗಿ
ಹೆಚ್ಚು ಕಡಿಮೆಗಳಿಲ್ಲ - ಎಮ್ಮೆತಮ್ಮಶಬ್ಧಾರ್ಥ
ಖಂಡನೆ = ನಿಂದನೆ .ಮಂಡಿಸು = ವಿಷಯವನ್ನು ಮುಂದಿಡುತಾತ್ಪರ್ಯ
ಬೇರೆ ಧರ್ಮಗಳನ್ನು ಮತ್ತು ಬೇರೆ ಧರ್ಮೀಯರನ್ನು ನಿಂದನೆ
ಮಾಡಬಾರದು. ನನ್ನ ಧರ್ಮವೇ ಶ್ರೇಷ್ಠವೆಂದು ಗರ್ವದಿಂದ
ಮಾತನಾಡಬೇಡ. ಇದರಿಂದ ಸಮಾಜದಲ್ಲಿ ಘರ್ಷಣೆಗೆ
ಕಾರಣವಾಗುತ್ತದೆ. ಅಶಾಂತಿ, ಗಲಭೆಗಳುಂಟಾಗಿ ಮನುಷ್ಯರಿಗೆ ಮತ್ತು ಆಸ್ತಿಪಾಸ್ತಿಗೆ ಹಾನಿಯುಂಟಾಗುತ್ತದೆ. ಪರಧರ್ಮಗಳ...
Uncategorized
ಸತಿಸುತರು ಧನಕನಕ ಮನೆಮಹಡಿ ಹೊಲಗದ್ದೆ
ಮಾನವನ ಪೀಡಿಸುವ ಮಾಯೆಯಲ್ಲ
ಬೇಕೆಂದು ಹಾತೊರೆವ ಮನಸಿನೊಳಗಿರುವಂಥ
ಮಹದಾಸೆ ಮಹಾಮಾಯೆ - ಎಮ್ಮೆತಮ್ಮಶಬ್ಧಾರ್ಥ. ...
Uncategorized
ರವಿಯ ಕಿರಣವ ಕೊಂಡು ತಂಪು ಬೆಳದಿಂಗಳನು
ಚಂದಿರನು ನೀಡುವನು ರಾತ್ರಿಯಲ್ಲಿ
ಹರನ ಕರುಣೆಯ ಪಡೆದು ಹಂಚುವನು ಜಗಕೆಲ್ಲ
ಗುರುದೇವನಿಂಥವನು -ಎಮ್ಮೆತಮ್ಮಶಬ್ಧಾರ್ಥ
ರವಿ= ಸೂರ್ಯ. ಹರ = ಶಿವತಾತ್ಪರ್ಯಸೂರ್ಯನ ಬಿಸಿಲಿನ ಬೆಳಕನ್ನು ಪಡೆದು ಪ್ರತಿಬಿಂಬಿಸಿ ರಾತ್ರಿ
ತಂಪಾದ ಬೆಳದಿಂಗಳನ್ನು ಚಂದ್ರ ಭೂಮಿಗೆ ನೀಡುತ್ತಾನೆ.
ಹಾಗೆ ಗುರುವಾದವನು ದೇವರ ಪ್ರೀತಿ, ಕರುಣೆ ಜ್ಞಾನ,ಪಡೆದು
ಜಗತ್ತಿನ ಜನರಿಗೆ ಹಂಚುತ್ತಾನೆ. ಬೆಳದಿಂಗಳು ಶಾಂತಿ
ಸಮಾಧಾನ, ಸುಜ್ಞಾನದ ಸಂಕೇತ ಮತ್ತು ರಾತ್ರಿಯ ಕತ್ತಲು
ಅಜ್ಞಾನದ...
Latest News
ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು
ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...



