ಬೀದರ: ಮೂಲ ಬಿಜೆಪಿಯವರಿಗಷ್ಟೇ ಟಿಕೆಟ್ ಕೊಡಬೇಕು ಶರಣು ಸಲಗರ ಗೆ ಟಿಕೆಟ್ ಕೊಡಬಾರದು ಎಂದು ಜಿಲ್ಲೆಯ ಬಸವಕಲ್ಯಾಣದಲ್ಲಿ ಬಂಡಾಯವೊಂದು ತಲೆಯೆತ್ತಿದ್ದು ಶಾಸಕ ಸಲಗರ ಅವರಿಗೆ ಕಂಟಕ ಪ್ರಾಯವಾಗಲಿದೆ.
ಇದರಿಂದ ಬಸವಣ್ಣನ ನಾಡಿನಲ್ಲಿ ಬಿಜೆಪಿ ಬಚಾವೊ ಆಂದೋಲನ ಶುರುವಾದಂತಾಗಿದೆ. ಕ್ಷೇತ್ರದಲ್ಲಿ ಒಳಗಿನವರು ಹೊರಗಿನವರು ಎಂಬ ಕೂಗು ಕೇಳಿಬರುತ್ತಿದ್ದು ಬಸವಕಲ್ಯಾಣ ಶಾಸಕ ಶರಣು ಸಲಗರ ವಿರುದ್ಧ ಬಿಜೆಪಿ ಮೂಲ ಕಾರ್ಯಕರ್ತರಿಂದ...
ಒಂದೂರಲ್ಲಿ ತಾಯಿ ಮಗ ಇದ್ದರು. ತಾಯಿ ಅವರಿವರ ಮನೆಯ ಕಸಮುಸುರೆ ತೊಳೆದು ತಂದುದರಲ್ಲಿ ಮನೆಗೆ ಬಂದವರಿಗೆ ದಾನ ಮಾಡಿ, ಉಳಿದುದನ್ನು ಇಬ್ಬರೂ ತಿನ್ನುತ್ತಿದ್ದರು.
ಒಂದೊಂದು ದಿನ ಬಹಳ ಮಂದಿ ಭಿಕ್ಷೆಗೆ ಬಂದರೆ ಮಗನಿಗಷ್ಟು ಇಟ್ಟು ತನ್ನ ಪಾಲಿನ ಅನ್ನವನ್ನೂ ದಾನ ಮಾಡುತ್ತಿದ್ದಳು. ಮಗ ಹೀಗೇ ಬೆಳೆದು ದೊಡ್ಡವನಾದ. ವಯಸ್ಸಿಗೆ ಬಂದ. ತಾಯಿ ಬರೇ ಅನ್ನದಾನವೊಂದನ್ನು ಬಿಟ್ಟಿದ್ದರೆ...
ಮೂಡಲಗಿ: ಮೂಡಲಗಿ ಶೈಕ್ಷಣಿಕ ವಲಯದಲ್ಲಿ ಈ ಸಲ ಒಟ್ಟು 7161 ವಿದ್ಯಾರ್ಥಿಗಳು ಎಸ್ಎಸ್ಎಲ್ ಸಿ ಪರೀಕ್ಷೆ ಬರೆಯಲಿದ್ದಾರೆ. ಪರೀಕ್ಷೆಗಾಗಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ ಮನ್ನಿಕೇರಿ ಹೇಳಿದರು.
ಅವರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ 2022-23ನೆಯ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯ ಪೂರ್ವ ಭಾವಿ ಸಭೆ ನಡೆಸಿ ಮಾಹಿತಿ ನೀಡಿದರು.
(1) ವಲಯದಲ್ಲಿ ಪರೀಕ್ಷೆ ನಡೆಯುವ ಕೇಂದ್ರಗಳು...
ಬೆಂಗಳೂರು: ತೀವ್ರ ಕುತೂಹಲ ಕೆರಳಿಸಿದ್ದ ರಾಜ್ಯ ವಿಧಾನಸಭಾ ಚುನಾವಣೆಯ ಘೋಷಣೆಯಾಗಿದ್ದು ಒಂದೇ ಹಂತದಲ್ಲಿ ಎಲ್ಲ ೨೨೪ ಸ್ಥಾನಗಳಿಗೆ ಚುನಾವಣೆ ಮುಗಿಸಿ ಬಿಡಲಿದೆ ಚುನಾವಣಾ ಆಯೋಗ.
ಚುನಾವಣೆಯ ಅಧಿಸೂಚನೆಯನ್ನು ಏಪ್ರಿಲ್ ೧೩ ರಂದು ಹೊರಡಿಸಲಾಗುತ್ತಿದ್ದು ಏ. ೨೦ ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ, ಏ.೨೧ ರಂದು ನಾಮಪತ್ರ ಪರಿಶೀಲನೆ, ನಾಮಪತ್ರ ಹಿಂಪಡೆಯಲು ಕೊನೆಯ ದಿನ ಏ....
ರಾಜ್ಯದ ಸಮಗ್ರ ಅಭಿವೃದ್ಧಿ ಬಿಜೆಪಿಯಿಂದ ಮಾತ್ರ ಸಾಧ್ಯ - ಬಸವರಾಜ ಬೊಮ್ಮಾಯಿ
ಗೋಕಾಕ: ನಮ್ಮ ಸರಕಾರ ರೈತರು, ಮಹಿಳೆಯರು, ದುರ್ಬಲರ ಏಳ್ಗೆಗಾಗಿ ಸಾಕಷ್ಟು ಪ್ರಗತಿಪರ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದು ಬೆಳಗಾವಿ ಜಿಲ್ಲೆಯ ಸಮಗ್ರ ನೀರಾವರಿ ಯೋಜನೆಗಳಿಗಾಗಿ ೫೫೦೦ ಕೋಟಿ ರೂಪಾಯಿಗಳನ್ನು ಒದಗಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು, ಮಂಗಳವಾರದಂದು ನಗರದ ಮಹರ್ಷಿ ವಾಲ್ಮೀಕಿ ಕ್ರೀಡಾಂಗಣದಲ್ಲಿ ಗೋಕಾಕ...
ಚುನಾವಣೆಯ ಹೊಸ್ತಿಲಲ್ಲಿ ಅಸಮಾಧಾನದ ಹೊಗೆ
ಮೂಡಲಗಿ: ಅರಭಾವಿ ಹಾಗೂ ಗೋಕಾಕ ಕ್ಷೇತ್ರಗಳಲ್ಲಿ ಜಾರಕಿಹೊಳಿ ಸಹೋದರರು ಮೂಡಿಸಿದ ರಾಜಕೀಯದ ಛಾಪು ಜೋರಾಗೇ ಇದ್ದರೂ ತಮ್ಮದೇ ಪಕ್ಷದ ನಾಯಕರನ್ನು ಈ ಸಹೋದರರು ಸಮಾರಂಭಗಳಲ್ಲಿ ಉಪೇಕ್ಷೆ ಮಾಡಿ, ನಿರ್ಲಕ್ಷ್ಯ ಮಾಡಿ ಅವಮಾನ ಮಾಡುತ್ತಿದ್ದಾರೆ ಎಂಬ ಅಸಮಾಧಾನದ ಹೊಗೆ ಎರಡೂ ಕ್ಷೇತ್ರಗಳಲ್ಲಿ ಹರಿದಾಡುತ್ತಿದ್ದು ಇದು ಚುನಾವಣೆಯಲ್ಲಿ ಯಾವ ರೀತಿಯ ಪರಿಣಾಮ ಬೀರುತ್ತದೆಯೆಂಬುದು ಲೆಕ್ಕಕ್ಕೆ...
ಬೀದರ: ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಕೈಗೊಂಡ ಕಾಮಗಾರಿಯ ಬಿಲ್ ಪಾವತಿಗೆ ಗ್ರಾಮ ಪಂಚಾಯತ್ ಅಧಿಕಾರಿ ಲಂಚದ ಬೇಡಿಕೆ ಇಟ್ಟಿದ್ದರಿಂದ ಬೇಸತ್ತ ರೈತನೊಬ್ಬ ಲಂಚದ ಹಣದ ಬದಲಿಗೆ ತನ್ನ 2 ಎತ್ತುಗಳನ್ನೇ ಲಂಚದ ರೂಪದಲ್ಲಿ ನೀಡಲು ತಾಲ್ಲೂಕು ಪಂಚಾಯತ್ಗೆ ಆಗಮಿಸಿದ ಪ್ರಸಂಗ ಜರುಗಿದೆ.
ಗಡಿ ಜಿಲ್ಲೆ ಬೀದರನ ಬಸವಕಲ್ಯಾಣದಲ್ಲಿ ನಡೆದ ಒಂದು ಘಟನೆ...
ಬೀದರ: ರಾಜ್ಯದಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳ ದುರಾಡಳಿತದಿಂದ ಜನ ಕಣ್ಣೀರು ಹಾಕಿದ್ದಾರೆ ಇದೀಗ ಬದಲಾವಣೆಗಾಗಿ ಆಮ್ ಆದ್ಮಿ ಪಕ್ಷಕ್ಕೆ ಜನ ಬೆಂಬಲಿಸಲಿದ್ದಾರೆ ನಮ್ಮ ಪಕ್ಷ ಅಧಿಕಾರಕ್ಕೆ ಬಂದ ನಂತರ ದೆಹಲಿ, ಪಂಜಾಬ ಮಾದರಿ ಕರ್ನಾಟಕ ಬದಲಾವಣೆ ಮಾಡುತ್ತೇವೆ ಹೀಗಾಗಿ ಜನ ನಮ್ಮನ್ನು ಬೆಂಬಲಿಸಿ ಅಧಿಕಾರ ನೀಡಬೇಕು ಎಂದು ಕನ್ನಡ ಚಿತ್ರ ಹಾಸ್ಯ ನಟ ಆಮ್ ಆದ್ಮಿ...
ಸಿಂದಗಿ: ಧಾರ್ಮಿಕ ಅಲ್ಪಸಂಖ್ಯಾತರನ್ನು ಹಿಂದುಳಿದ ವರ್ಗ 2ಬಿ ಇಂದ ಕೈಬಿಟ್ಟ ಹಿನ್ನೆಲೆ ಕರ್ನಾಟಕ ರಾಜ್ಯ ಬಿಜೆಪಿ ಸರ್ಕಾರವು ಸಂಪುಟ ಸಭೆಯಲ್ಲಿ ಕೆಲವೊಂದಿಷ್ಟು ಕಾನೂನು ತಿದ್ದುಪಡಿ ಮಾಡಿದ್ದು ಅದರಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ 4% 2ಬಿ ಮೀಸಲಾತಿಯನ್ನು ತೆಗೆದು 2ಸಿ ಹಾಗೂ 2ಡಿ ಒಕ್ಕಲಿಗ, ಪಂಚಮಸಾಲಿ ಸಮುದಾಯಗಳಿಗೆ ತಲಾ 2% ಕೊಟ್ಟಿದ್ದು ಅಸಾಂವಿಧಾನಿಕವಾಗಿದೆ ಎಂದು ಬಿಎಸ್ಪಿ ಪಕ್ಷದ...
ಸೃಷ್ಟಿಯ ಮಡಿಲಲ್ಲಿ ಸೌಂದರ್ಯ ಹಾಸು ಹೊಕ್ಕಿದೆ. ಅದರ ಹೃದಯದಲ್ಲಿರುವ ಆನಂದವನ್ನು ಪರಿಪೋಷಿಸಿ ಅದನ್ನು ಅಸ್ತಿತ್ವದಲ್ಲಿರುವ ಎಲ್ಲ ಮಾರ್ಗಗಳಲ್ಲಿ ಅಭಿವ್ಯಕ್ತಗೊಳಿಸುವುದೇ ಸೃಜನಶೀಲತೆ. ಇತರ ಪ್ರಾಣಿಗಳಿಗೂ ನಮಗೂ ಇರುವ ದೊಡ್ಡ ಭಿನ್ನತೆಯಲ್ಲಿ ಅದೂ ಒಂದು.
ದೇವರು ನಮಗಿತ್ತ ದೊಡ್ಡ ಕಾಣಿಕೆ. ಸೃಜನಶೀಲತೆಯ ಹೆಸರಿನಲ್ಲಿ ವೈಜ್ಞಾನಿಕ ಸಂಶೋಧನೆಗಳ ಸಹಾಯದಿಂದ ತಂತ್ರಜ್ಞಾನದ ಸಿರಿಯನ್ನು ಹೆಚ್ಚಿಸಿದ್ದೇವೆ. ಆದರೆ ಜೀವನದ ಮೌಲ್ಯಗಳನ್ನು ಮರೆಯುತ್ತಿದ್ದೇವೆ.
ದೇವ ನಿರ್ಮಾಣದ...
೨೦೧೧ ರಲ್ಲಿ ಧಾರವಾಡದಲ್ಲಿ “ಅಪ್ನಾದೇಶ” ಎಂಬ ಸಂಘಟನೆ ಜನ್ಮ ತಾಳಿತು.ಇದಕ್ಕೆ ಸ್ಪೂರ್ತಿ ಅಂದಿನ ಐ.ಎ.ಎಸ್. ಅಧಿಕಾರಿ ಭರತಲಾಲ್ ಮೀನಾ. ಶಿಕ್ಷಕರು, ಸಮಾಜ ಚಿಂತಕರು, ನ್ಯಾಯವಾದಿಗಳು, ವಿವಿಧ...