ಕವನ
ಪಲ್ಲವಿಯಾಗಿ
______________
ಬಂದು ಬಿಡೆ
ನನ್ನ ಮುದ್ದೆ
ಬಂದು ಬಿಡು
ನನ್ನ ಜೊತೆಗಾಗಿ
ಗತಕಾಲದ ಬೇಸರಕೆ
ತಂಪು ನಗೆಯಾಗಿ
ಬಂದು ಬಿಡು
ನನ್ನೆದೆಯ ಗೀತೆಗೆ
ಇಂಚರದ ದನಿಯಾಗಿ
ಬದುಕಿನ ಕತ್ತಲೆಗೆ
ಹೊಂಗಿರಣ ಬೆಳಕಾಗಿ
ಬಂದು ಬಿಡು
ನಗುಮೊಗದ
ಕಿರುನಗೆಯು ನೀನಾಗಿ
ಕಂಗಳಲಿ ಉದಯಿಸುವ
ಕಾಂತಿಯಾಗಿ
ಬಂದು ಬಿಡು ನೀ
ನನ್ನೆದೆಯ ಕನಸುಗಳ
ಉಸಿರಾಗ ಬೇಕು
ಹೃದಯದ ಬಯಕೆಗೆ
ತನ್ನೆಳಲು ಬನವಾಗ ಬೇಕು
ನೀನಿರ ಬೇಕು ಎನ್ನ ಬಾಳ ಗೀತೆಗೆ
ಸ್ವರ ಪ್ರಾಸ ಪಲ್ಲವಿಯಾಗಿ______________________
ಗಾಯತ್ರಿ ಸಾಕೇನವರ ಗದಗ
ಕವನ
ಯಾರು ಹೋಗುವರು ವೈಕುಂಠಕ್ಕೆ ಹೇಳೆಂದು
ವ್ಯಾಸರಾಯರು ಕೇಳೆ ಕನಕನಂದು
ನಾನು ಹೋದರೆ ಮಾತ್ರ ಹೋದೇನು ಎಂದನುಡಿ
ಸ್ಮೃತಿಪಟಲದಲ್ಲಿರಲಿ - ಎಮ್ಮೆತಮ್ಮಶಬ್ಧಾರ್ಥ
ಸ್ಮೃತಿಪಟಲ - ನೆನಪಿನ ಪರದೆತಾತ್ಪರ್ಯ
ದಾಸಕೂಟವನ್ನು ನಡೆಸುತಿದ್ದ ವ್ಯಾಸರಾಯ ಗುರುಗಳಲ್ಲಿದ್ದ
ಕನಕದಾಸರನ್ನು ಶಿಷ್ಯರೆಲ್ಲರು ಆತನ ಸಾಧನೆಯನ್ನು ಕುರಿತು
ಮತ್ಸರದಿಂದ ಟೀಕಿಸುತ್ತಿದ್ದರು. ಇದನ್ನರಿತ ಗುರುಗಳು
ಪರೀಕ್ಷೆಮಾಡಿ ಕನಕದಾಸರನ್ನು ಪ್ರಶ್ನೆ ಮಾಡಿದರು. ನಮ್ಮಲ್ಲಿ
ಯಾರು ವೈಕುಂಠಕ್ಕೆ ಹೋಗುವರು ಎಂದು ಕೇಳಿದರು. ಆಗ
ಕನಕದಾಸರು ಯಾರು ಹೋಗುವುದಿಲ್ಲ ಎಂದರು. ಹಾಗಾದರೆ ಗುರುಗಳು...
ಕವನ
ಬರಿಯುಸುಕು ಬರಿಬಿಸಿಲು ನೀರಿಲ್ಲ ನೆರಳಿಲ್ಲ
ಹುರುಳಿಲ್ಲ ಸಂಸಾರ ಮರಳುಗಾಡು
ಮೃಗಜಲವ ಬೆನ್ನತ್ತಿ ಹೋಗದಿರು, ನೀ ಹುಡುಕು
ಶಾಂತಿಯೋಯಾಸಿಸ್ಸು - ಎಮ್ಮೆತಮ್ಮಶಬ್ಧಾರ್ಥ
ಮೃಗಜಲ - ಬಿಸಿಲುಗುದುರೆ,ಮರಳುಗಾಡಿನಲ್ಲಿ ನೀರಿದೆ ಎಂದು ಬಿಸಿಲಿನಲ್ಲಿ ಕಾಣಿಸುತ್ತದೆ. ಆದರೆ ಅದು ಭ್ರಮೆ.
ಓಯಾಸಿಸ್(Oasis) - ಮರುಳುಗಾಡಿನಲ್ಲಿ ನೀರಿರುವ ಹಸುರಿನ ತಾಣ ಅಥವಾ ತೋಟ.ತಾತ್ಪರ್ಯ
ಸಂಸಾರವೆಂಬುವುದು ಮರಳು,ಬಿಸಿಲು ತುಂಬಿದ ಮತ್ತು
ನೀರು ನೆರಳುಗಳಿಲ್ಲದ ಮರುಭೂಮಿ. ಅಲ್ಲಿ ದೂರದಲ್ಲಿ
ಬಿಸಿಲುಗುದುರೆ ತೋರಿ ನೀರಿದೆ ಎಂದು ಭ್ರಮೆ...
ಕವನ
ಸ್ನೇಹಸ್ನೇಹ ಇದು ಬರೀ ಪದವಲ್ಲ
ಜೀವನ ಮೌಲ್ಯ ಗಳ ಬೆಸುಗೆ
ಪರಸ್ಪರರ ನಡುವೆ ನಂಬಿಕೆ
ಮೂಡಿ ಬರಲು ಸ್ನೇಹ ಅಮರಕೃಷ್ಣ ಸುಧಾಮರ ಸ್ನೇಹ ಅಜರಾಮರ
ನಿಷ್ಕಲ್ಮಶ ಮನಗಳ ಭಾವ
ಬಡವ ಬಲ್ಲಿದರೆನ್ನದ ಪ್ರೀತಿ
ಆತ್ಮ ಸಂಬಂಧ ಬೆರೆಸಿದ ಭಾವಸ್ನೇಹ ವೆನಲು ಬಂದಿರುವ ಕಷ್ಟ ದೂರಾಗುವುದು
ಜಾತಿ ಮತ ಪಂಥಗಳ ಮೀರಿದ ಬಂಧ
ಬದುಕಿನ ಶ್ರೇಷ್ಠ ಉಡುಗೊರೆ ಸ್ನೇಹಸ್ವಾರ್ಥವಿಲ್ಲದ ಪ್ರೀತಿ ಈ ಸ್ನೇಹ
ದೇಶ ಭಾಷೆ ಎಲ್ಲೆಯ ದಾಟಿ
ಬೆಳೆದ...
ಕವನ
ಪ್ರಕೃತಿಗೆ ವಿನಮ್ರ ಬೇಡಿಕೆಬಿಸಿಲಿನಿಂದ ಬಸವಳಿದ
ಭೂರಮೆಯ ತಣಿಸಲು
ಬಂದ ಮಾಯಾವಿ ಮಳೆಯೇ
ಏಕಿಷ್ಟು ಕ್ರೂರ ವರ್ತನೆ ?ಧರೆಯ ಮೇಲಿನ ಸ್ವರ್ಗವೆನಿಸಿದ
ವಯನಾಡನ್ನು
ನರಕಕ್ಕೆ ಸಮ ಮಾಡಿಬಿಟ್ಟು
ಬದುಕನ್ನು ನಾಶ ಮಾಡಿದ
ಪಾಶಾವಿಯೇ
ಏಕೀ ಮುನಿಸು ಹೇಳು ?ನೀನಿರುವುದೇ ನಮಗಾಗಿ
ಎಂಬ ಮಾನವನ ಅಟ್ಟಹಾಸಕ್ಕೆ
ಪಾಠ ಕಲಿಸಲು
ಸುಖಪಡುತ್ತಿದ್ದ ನಮ್ಮವರ
ಬದುಕು ಬರ್ಬರವಾಗಿಸಿ
ಯಾವ ಸುಖ ಕಂಡೆ
ಹೇಳು ಮೇಘ ಮಂದಾರವೇ?ಹಸುಗೂಸು, ಹೆತ್ತ ತಾಯಿ, ಹಿರಿಯರು ಕಿರಿಯರೆನ್ನದೇ
ಆಸ್ತಿ ಪಾಸ್ತಿ ಎಲ್ಲಾ ನುಂಗಿ
ನೀರು ಕುಡಿದೆ
ನಾವು ಬದುಕುವುದು ಇಷ್ಟವಿಲ್ಲವೇ
ಹೇಳು...
ಕವನ
ಬದುಕುನಾವು ಬದುಕೋಣ
ಇತರರನ್ನು ಬದುಕಲು
ಬಿಡೋಣ!ಈ ಪ್ರಪಂಚವು
ಬರೀ ಮಾನವನ
ಸ್ವತ್ತಲ್ಲ
ಎಲ್ಲ ಪ್ರಾಣಿ ಪಕ್ಷಿ
ಜಲಚರಗಳ
ಸ್ವತ್ತುಈ ಭೂಮಿ ಮೇಲಿನ
ಹಕ್ಕು
ಬರೀ ಮಾನವನದಲ್ಲ
ಈ ಭೂಮಿ ಮೇಲೆ
ವಾಸಿಸುತ್ತಿರುವ ಎಲ್ಲರಿಗೂ
ಇದೆ ಹಕ್ಕುಹುಟ್ಟಿದ ಮೇಲೆ
ಎಲ್ಲ ಜೀವಿಗಳು
ತಮ್ಮ ಸಂತತಿಯನು
ಬೆಳೆಸಿಕೊಂಡು ಹೋಗುವುದು
ಪ್ರಕೃತಿ ನಿಯಮಆದರೆ ಪ್ರಕೃತಿಯನ್ನೇ
ಕಬಳಿಸಿ
ಪ್ರಕೃತಿಯ ನಿಯಮವನ್ನೇ
ಗಾಳಿಗೆ ತೂರಿ ಮನಬಂದಂತೆ
ಮನುಜ ತನ್ನ ಸ್ವಾರ್ಥಕ್ಕೆ
ಬಳಸಿಕೊಳ್ಳುತ್ತಿರುವುದು
ವಿಪರ್ಯಾಸವೇ ಸರಿಈ ಭೂಮಿಯ ಮೇಲಿನ
ಸಂಪತ್ತಿಗೆ
ತಂದೊಡ್ಡುತ್ತಿರುವನು
ವಿಪತ್ತು
ಈ ಮನುಜ
ಕರಗುತ್ತಿದೆ ಕಣಜ
ಭೂಮಿ ವಿನಾಶದತ್ತ ಸಾಗುತ್ತಿರುವುದು
ಈ ಮನುಜನ ಕೃತ್ಯದಿಂದ
ಈ ಮನುಜನ ದೌರ್ಜನ್ಯದಿಂದ!ಈ ಭೂ ಸಂಪತ್ತನ್ನು
ಎಲ್ಲ ಪಶು,...
ಕವನ
ಯುದ್ಧ ಬೇಡಯುದ್ಧ ಬೇಡ
ಬುದ್ಧ ಬರಲಿ
ಶುದ್ಧ ಬದುಕು
ಕಾಣುವದ್ವೇಷ ಮರೆತು
ಬಸವ ಬರಲಿ
ದುಡಿದು ತಿನ್ನಲು
ಕಲಿಯುವಕ್ರೂರತನ ಬಿಟ್ಟು
ಕರೆಯಬೇಕು ಮಹಾವೀರನ
ಶಾಂತಿ ಮಂತ್ರವ
ಜಪಿಸಲುಸಮತೆ ಪ್ರೀತಿ ಪಸರಿಸಲು
ಅಂಬೇಡ್ಕರ್ ರ
ಸಂವಿಧಾನ ಮತ್ತೆ ಓದು
ಮಾಡ ಬೇಕುಗುಲಾಮಗಿರಿಗೆ ಕೊನೆ ಹೇಳಿ
ಸ್ವಾಭಿಮಾನ ಮೆರೆಯುವ
ಬಾಪು ಕನಸಿನ ಗ್ರಾಮ ಭಾರತ
ನಾವು ಗಟ್ಟಿಗೊಳಿಸುವಡಾ ಶಶಿಕಾಂತ ಪಟ್ಟಣ ರಾಮದುರ್ಗ
ಕವನ
ಬಸವಣ್ಣ ನಿನ್ನ ಹೆಸರಲಿಬಸವಣ್ಣ
ಶತ ಶತಮಾನ ಕಳೆದವು
ಕತ್ತಲು ಕಗ್ಗತ್ತಲು.
ಮೇಲೆ ಕಾರ್ಮೋಡ
ಮಿಣುಕು ಬೆಳಕಿನ ಮಧ್ಯೆ
ನಡುಕ ಹುಟ್ಟುವ ಪಯಣ.
ನಿನ್ನ ಹೆಸರಲ್ಲಿ
ಕಾವಿಗಳ ಕಾಟ
ಜಾತ್ರೆ ಯಾತ್ರೆ
ಮೋಜು ಮಸ್ತಿ
ಮಠದ ಮುಂದೆ
ನಿಂತಿಲ್ಲ ಕುಸ್ತಿ
ನಿಮ್ಮ ವಚನ
ತಿರುಚಿದ್ದಾರೆ ಕದ್ದಿದ್ದಾರೆ
ಆದರೂ ಮೆರೆಯುತ್ತಾರೆ .
ನಿನ್ನ ಧರ್ಮಕ್ಕೆ ನಡೆದವು
ಅಬ್ಬರದ ಸಮಾವೇಶ
ಹಾಕಿದೆವು ಕೂಗು ಕೇಕೆ
ಸಿಗಲಿಲ್ಲ ಮಾನ್ಯತೆ
ಹೀಗಾಗಿ ಈಗ
ಕೋರ್ಟ್ ನಲ್ಲಿ ವ್ಯಾಜ್ಯ
ನೀನು ಬರಬೇಕು
ಸಾಕ್ಷಿ ಹೇಳಲು .
ಬೇರೆ ಬೇರೆ ಎಂದವರೇ
ಈಗ ಒಂದು ಎಂದು
ಕೈ ಕೈ ಮಿಲಾಯಿಸಿದೆವು...
ಕವನ
ಕೆನೆಯಾದ ಭಾವಹಾಲು ಹೃದಯದ ತುಂಬ
ಹರಿದ ನಿನ್ನ ಪ್ರೀತಿಯ
ಸ್ನೇಹ ಪರಿಮಳ ಭಾವವು...
ಸವಿ ಸಕ್ಕರೆಯಾಗಿ ಮನ
ಅಕ್ಕರೆಯಲಿ ಕರಗಿ
ಒಂದಾಗಿ ಮಧುರ ಜೀವವು...ಎದೆ ಕಡಲಲಿ ಹೊಮ್ಮಿ
ಹಾಡುವ ನೀನು ಬರೆದ
ನೂರು ಕವನದಲೆಗಳು..
ಮೌನವಾಗಿ ಮಾತು ಮರೆತು
ಹೆಪ್ಪುಗಟ್ಟಿವೆ ಉಪ್ಪು ನೀರ
ನೋವ ಒಡಲಲಿ ಒಲವದು...ಸಾವಿರ ಮಾತಿನ ಬಾಣ
ತೂರಿ ಹೃದಯ ಗಾಯ
ಕುದಿವ ಕಡಲ ಆಗರ...
ಮುಚ್ಚಿದೆದೆಯ ಕದವ
ತೆರೆಯದ ಕಲ್ಲು ಹೃದಯ
ನಡುಗಿತು ಭಾವ ಸಾಗರ.ಬಿತ್ತಿದ ಭಾವ ಬೀಜ
ಮೊಳೆತು ಚಿಗುರು ಪರಿಮಳ..
ಕುದಿದು...
ಕವನ
ನಾವು ನಮ್ಮವರುಬಾಳ ದಾರಿ ಸಾಗುತಿದೆ ದಿನನಿತ್ಯ ತಪ್ಪದೆ
ಪಯಣದ ಅಂತ್ಯವೂ ಇನ್ನೂ ಕಾಣದಾಗಿದೆ
ಕಷ್ಟ ಸುಖಗಳ ಮನವು ಅನುಭವಿಸಿದೆ
ಕಾರಣ ಸಿಗದೆ ಪಯಣ ಮತ್ತೆ ನಿಂತಿದೆಬದುಕಿನ ಪಯಣದಲ್ಲಿ ಸಿಕ್ಕರು ಹಲವರು
ನೋವು ನಲಿವನು ಕೆಲವರು ಹಂಚಿಕೊಂಡರು
ನಂಬಿದವರು ಮನಕೆ ಖುಷಿಯ ಕೊಟ್ಟರು
ಮಿಕ್ಕವರು ಬೆನ್ನಿಗೆ ಚೂರಿ ಹಾಕಿದರುಪ್ರೀತಿ ಪ್ರೇಮದ ಅರ್ಥವೇ ಗೊತ್ತಿಲ್ಲದವರು
ಬದುಕನ್ನೇ ಹಾಳು ಮಾಡಿ ಬೆಂಕಿ ಇಟ್ಟವರು
ಇವುಗಳ ಮಧ್ಯೆ ಬದುಕನ್ನೇ ಮೆಟ್ಟಿ ನಿಂತರು
ಅವರೇ...
Latest News
ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು
ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...



