ಕವನ
ರಕ್ಷಾ ಬಂಧನ
ಪ್ರೀತಿ ತುಂಬಿದ ಬದುಕು ಜೀವನ ಸಾಗಿಸುವ ಗುರಿ... ಅಣ್ಣ ನನಗೆ ಬೇಕು...
ಸುಖ ಶಾಂತಿ ನೆಮ್ಮದಿ ಶಾಂತಿ ತಂದಿದೆ.
ಕಷ್ಟದಲ್ಲಿ ಜೀವನ ಸಾಗಿಸುವ ಗುರಿ ಕಲಿಸಿದೆ
ಧೈರ್ಯ, ಮಮತೆ, ಪ್ರೀತಿ ತುಂಬಿದ ವಾತ್ಸಲ್ಯ ಭಾವನೆ ಮೂಡುತ್ತದೆ.
ನನ್ನ ದನಿ ಇನಿ ಪ್ರೀತಿ ನಮ್ಮ ಅಣ್ಣಂದಿರು
ಸದಾ ನನ್ನ ಉಸಿರು ಕೊಟ್ಟ ರಕ್ತ ಸಂಬಂಧ ಎಂದಿಗೂ ನಾ ಮರೆಯಲಾರೆ...
ತಂಗಿಯ ಉಸಿರು ಅಣ್ಣಂದಿರ...
ಕವನ
*ರಕ್ಷಾಬಂಧನ*
ಅಣ್ಣ-ತಂಗಿಯರ ಅನುಬಂಧ
ಜೀವ ಜೀವದ ಭಾವಾನುಬಂಧ
ಅದುವೇ ಈ ರಕ್ಷಾಬಂಧನ
ಆರತಿಯ ಬೆಳಗಿ ಹರಸುವರು
ಸದಾ ನಮ್ಮಿಂದ ರಕ್ಷಣೆಯ ಬೇಡುವರು
ನಮ್ಮ ಪ್ರೀತಿಯ ಸಹೋದರಿಯರು
ಪ್ರೀತಿಯ ಉಡುಗೊರೆಯ ಪಡೆಯುತಾ
ಸದಾ ರಕ್ಷಣೆಯ ವರವ ಬೇಡುತಾ
ಹರಸುವರು ಅಣ್ಣನ ಜೀವನ ಬದುಕುತಾಕಷ್ಟ-ಸುಖಗಳನು ಹಂಚಿಕೊಳ್ಳುತಾ
ಸದಾ ಒಳಿತನ್ನೇ ಬಯಸುತಾ
ಬೆಳಗುವರು ಸಹೋದರರ ಬಾಳನು ನಲಿಯುತಾ
ವರ್ಷಕ್ಕೊಮ್ಮೆ ಬರುವ ಈ ರಕ್ಷಾಬಂಧನ
ಸಹೋದರ ಸಂಬಂಧದ ಬಿಗಿಬಂಧನ
ಬಾಂಧವ್ಯ ಗಟ್ಟಿಗೊಳಿಸುವ ಪ್ರೇಮ ಬಂಧನಶಿವಕುಮಾರ ಕೋಡಿಹಾಳ
ಮೂಡಲಗಿ
ಕವನ
ರಕ್ಷಾಬಂಧನ
ಬಂಧನದಿಂದುಸಿದಾನಂದ ಜನ್ಮ ಜನ್ಮಾಂತರಗಳಿಂದ
ಅನವರತ ಮಧುರ ಸಂಬಂಧ
ಈ ಋಣಾನುಬಂಧll
ಗುರು ಬಂಧು ಬಳಗವೆಲ್ಲ
ಸತಿ ಸುತ ಸ್ನೇಹಿತರೆಲ್ಲ
ಜೀವನ ಯಾತ್ರೆಯಲಿ ಸಂದಿಸುವರೆಲ್ಲ
ಬಂಧನ ಮಂದಿರ ಕಟ್ಟುವರೆಲ್ಲll
ಹೊಸೆಯುವ ನೂಲಿನೆಳೆಯಲ್ಲ
ಬೆಸೆಯುವ ಲೋಹಗಳಲ್ಲ
ಹೃದಯಗಳ ಮಿಡಿತವೆಲ್ಲ
ಬಂಧನ ದೇವರ ಅನುಗ್ರಹವೆಲ್ಲ ll
ಬಂದು ಹೋಗುವ ಸಂಭ್ರಮವಲ್ಲ
ಅಗೋಚರ ಭಾವ ಬಂಧನವೆಲ್ಲ
ಅಗಣಿತ ಪ್ರೇಮ ಸಾಕ್ಷಾತ್ಕಾರವೆಲ್ಲ
ಈ ರಕ್ಷಾಬಂಧನ ಅನುಪಮವೆಲ್ಲllಶಿವಪ್ಪ ವ ಕಾಕೋಳ ಶಿಕ್ಷಕರು, ನೆಲೋಗಲ್ಲ
(ಎಸ್ವಿಕೆ ಸೂರಣಗಿ) 8970668017
ಕವನ
ಸ್ವರ ಗೀತೆ ಅನ್ನದಾತ
ಅ ನ್ನದಾತ ಜಗಕೆ ನೀನು ಭಾಗ್ಯದಾತ
ಆ ಳಾಗಿ ದುಡಿದು ಅನ್ನ ನಮಗೆ ನೀಡುವಾತ/
ಇ ಲ್ಲ ನಿನಗೆ ದುಡಿಮೆಯಿಂದ ವಿಶ್ರಾಂತಿ
ಈ ಗಲೂ ಜಗ ನಂಬಿದೆ ನಿನ್ನ ಹಸಿರು ಕ್ರಾಂತಿ/
ಉ ತ್ತಿ ಬಿತ್ತಿ ಬೆಳೆಯ ಕೊಡುವೆ ನೀ ನಮ್ಮಪ್ಪ
ಊ ಟ ಮಾಡುವಾಗ ನಾ ನಿನ್ನ ನೆನೆವೆನಪ್ಪ/
ಋ ಷಿಗಳಂತೆ ಸ್ವಾರ್ಥವಿರದ ಬದುಕು ನಿನ್ನದು
ಎ ಷ್ಟು ಕಷ್ಟ...
ಕವನ
ಹಾಯ್ಕುಗಳು
ಸ್ವಾತಂತ್ರ್ಯಕ್ಕಾಗಿ
ಪಟ್ಟ ಕಷ್ಟ ಅಷ್ಟಿಷ್ಟೇ
ಜ್ಞಾಪಿಸಿಕೊಳ್ಳಿ..
ದೇಶಕ್ಕೆ ಪ್ರಾಣ
ನೀಡಿ ಮರೆಯಾದರೂ
ಅಮರರಾದ್ರು..
ತರೆಮರೆಯ
ಮಾಣಿಕ್ಯಗಳದೆಷ್ಟೋ
ಲೆಕ್ಕವೇ ಇಲ್ಲ..
ನಿಸ್ವಾರ್ಥ ಸೇವೆ
ಆದರ್ಶಜೀವಿಗಳು
ಭಾರತೀಯರು..
ಅವರಲ್ಲಿಲ್ಲ
ಪ್ರಚಾರದ ಬಯಕೆ
ಢಂಬಾಚಾರಿಕೆ..
ಒಂದೇ ಆಶಯ
ಸ್ವಾತಂತ್ರ್ಯದ ದೀವಿಗೆ
ಹಚ್ಚಲೇ ಬೇಕು..
ಸ್ವಾತಂತ್ರ್ಯವನ್ನು
ಪಡೆದೇ ತೀರಿದರು
ವೀರ ಪುತ್ರರು..
ದೇಶಕೆ ಇಂದು
ವಜ್ರ ಮಹೋತ್ಸವದ
ಸಡಗರವು...ಶ್ರೀಮತಿ ಜ್ಯೋತಿ ಕೋಟಗಿ.
ಕವನ
“ಅಮೃತ” ಸ್ವಾತಂತ್ರ್ಯೋತ್ಸವ ದ ಕವಿತೆಗಳು
🇮🇳ಸ್ವಾತಂತ್ರ್ಯ🇮🇳
ಸ್ವಾತಂತ್ರ್ಯ ಸಿಕ್ಕಿತು ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿತು
ಆಂಗ್ಲರ ದಾಸ್ಯದಿಂದ ನಮಗೆ ಸ್ವಾತಂತ್ರ್ಯ ಸಿಕ್ಕಿತು
ದೇಶಕ್ಕೆ ಸಿಕ್ಕ ಸ್ವಾತಂತ್ರ್ಯ ಮೋಸಕ್ಕೆ ಸಿಗಲಿಲ್ಲ
ಮಾತಿಗೆ ಸಿಕ್ಕ ಸ್ವಾತಂತ್ರ್ಯ ಮೌನಕ್ಕೆ ಸಿಗಲಿಲ್ಲ
ಹಣಕ್ಕೆ ಸಿಕ್ಕ ಸ್ವಾತಂತ್ರ್ಯ ಗುಣಕ್ಕೆ ಸಿಗಲಿಲ್ಲ
ಭಾಷೆಗೆ ಸಿಕ್ಕ ಸ್ವಾತಂತ್ರ್ಯ ಭಾಷೆಯ ಬಳಕೆಗೆ ಸಿಗಲಿಲ್ಲ
||ಸ್ವಾತಂತ್ರ್ಯ ಸಿಕ್ಕಿತು ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿತು||
ಧನಿಕರಿಗೆ ಸಿಕ್ಕ ಸ್ವಾತಂತ್ರ್ಯ ದಲಿತರಿಗೆ ಸಿಗಲಿಲ್ಲ
ಅರಸರಿಗೆ ಸಿಕ್ಕ ಸ್ವಾತಂತ್ರ್ಯ ಪ್ರಜೆಗಳಿಗೆ ಸಿಗಲಿಲ್ಲ
ಕನಸಿಗೆ ಸಿಕ್ಕ...
ಕವನ
ಸದೃಢ ಭಾರತ ಕಟ್ಟೋಣ
ಸುತ್ತಲೂ ಸಾಂಕ್ರಾಮಿಕ ರೋಗದ ಕಗ್ಗತ್ತಲು,
ದಿನನಿತ್ಯವೂ ಸಾವುಗಳ ಆಕ್ರಂದನ ,
ಬಡವರ-ರೋಗಿಗಳ ಆಕ್ರಂದನ ,
ಶಾಲೆಯತ್ತ ತೆರಳದ ಮಕ್ಕಳು,
ಕೆಲಸಗಳ ಬಿಟ್ಟು ಜೀವದಾಸೆಗಾಗಿ
ಮನೆಯಲ್ಲಿ ಬಂಧಿಯಾದ ಶ್ರೀಸಾಮಾನ್ಯರು.....
ಯುವ ಜನರೇ , ಏತಕೆ ಆತಂಕ ?
ಕಗ್ಗತ್ತಲ ನೋಡಿ ಬೆಚ್ಚಬೇಡಿ ; ಬೆದರಬೇಡಿ ,
ನಾಳೆ ಅಭ್ಯುದಯದ ಸೂರ್ಯ ಉದಯಿಸುತ್ತಾನೆ ,
ಇಂದಿನ ಆತಂಕದ ಕಗ್ಗತ್ತಲ ನಿವಾರಿಸುತ್ತಾನೆ ,
ಆತಂಕಗಳ ತ್ಯಜಿಸಿ ,ಸುಂದರ ನಾಳೆಗಳ ನಂಬಿಕೆಯಿಡಿ...
ಭವಿಷ್ಯದ...
ಕವನ
ವೃದ್ಧನ ಹೃದಯ
ಆ ದಾರಿಯ ಉದ್ದಕ್ಕೂ ಕೇಕೆ ಹಾಕಿತು ವೃದ್ಧನ ಹೃದಯ ಸಂಬಂಧಗಳ ನೆನೆದು ಕಂಬನಿಯ ಮಿಡಿದು
ನಾನೇ ಸಾಕಿದ ಮಕ್ಕಳು ನೋಡಿಕೊಳ್ಳಲು ಆಗದೆ ಹೊರದಬ್ಬಿದ್ದಾರೆ ಜವಾಬ್ದಾರಿ ಮರೆತು ಹಣದ ಬೆನ್ನುಹತ್ತಿ
ಸಪ್ತಪದಿ ತುಳಿದು ನನ್ನೊಂದಿಗೆ ನಡೆದು ಬಂದವಳು ನನ್ನನ್ನು ಯಾವತ್ತೋ ಬಿಟ್ಟು ಬಾರದ ಲೋಕಕ್ಕೆ ಹೊರಟು ಹೋದಳು ಭಯಾನಕ ಕಾಯಿಲೆಗೆ ತುತ್ತಾಗಿ
ಸೊಸೆ ಮಕ್ಕಳು ಹೊರದಬ್ಬಿದ್ದಾರೆ ಜಗಳವಾಡಿ ಭೂಮಿಗೆ...
ಕವನ
ಶ್ರಾವಣ
ಭೂಮಿಯನ್ನೆಲ್ಲ ಬಿತ್ತಿ ಹಸಿರುಗೊಳಿಸಿ
ಬಾನನ್ನೆಲ್ಲ ಮೋಡಗಳಿಂದ ಶೃಂಗರಿಸಿ
ಕೇದಿಗೆ ಸೇವಂತಿಗೆಗಳನ್ನೆಲ್ಲ ಅರಳಿಸಿ
ಶ್ರಾವಣ ಮಾಸ ಬಂತು ಸಂಭ್ರಮಿಸಿ
ಜಿಟಿ ಜಿಟಿ ಮಳೆಯ ತಂಪಿನಲಿ
ಚಿಗುರಿನಿಂತ ಬಳ್ಳಿಗಳ ಕಂಪಿನಲಿ
ಚಿಟ್ಟೆ ದುಂಬೆಗಳಾಟದ ನರ್ತನದಲಿ
ಶ್ರಾವಣಮಾಸ ಬಲು ಹಿಗ್ಗು ಬದುಕಿನಲಿ
ಕೇದಿಗೆ ,ಸಸಿಗಳ ಶೃಂಗಾರ ನಾರಿಯರಲಿ
ಜನಪದ ಕ್ರೀಡೆಗಳ ರಂಗು ಪುರುಷರಲಿ
ಜೋಕಾಲಿ ಜೀಕುವ ಹರುಷ ಮಕ್ಕಳಲಿ
ಸಂಭ್ರಮವೋ ಸಂಭ್ರಮ ಶ್ರಾವಣದ ಹಸಿರಿನಲಿ
ಹೊಸ ಉಡುಗೆ ತೊಟ್ಟ ಆನಂದದಲಿ
ಹಾಲೆರೆಯಲು ಹೋಗುವರು ಹೊಲದಲಿ
ದಾರಿಯುದ್ದ ಹಸಿರು ಕಣ್ತುಂಬಿಕೊಳ್ಳುತಲಿ
ನಡೆವರು...
ಕವನ
ಭೀಮ ಅವಾವಾಸ್ಯೆ.
ದೀಪ ಜ್ಯೋತಿಯ ಹಬ್ಬ
ಭೀಮ ಅಮಾವಾಸ್ಯೆಯ ಹಬ್ಬ
ಆಯುವೃದ್ಧಿಗೆ ವರ ಬೇಡುವ ಹಬ್ಬ
ಪಾರ್ವತಿ ಪರಮೇಶ್ವರರ ಪ್ರೀತಿಗೊಳಿಸುವ ಹಬ್ಬ
ಕನ್ಯೆ ನಾರಿಯರಾದಿ ದೀಪ ಬೆಳಗಿಸಿ
ದಾರ ಗಂಟುಗಳ್ಹಾಕಿ ಪೂಜಿಸಿ ಭಂಡಾರವಡೆವ ಹಬ್ಬ
ದರಿದ್ರತೆಯ ನೀಗಿಸಿಕೊಳ್ಳುವ ಹಬ್ಬ
ಸಾಲು ಹಬ್ಬಗಳಿಗೆ ಮಂಗಲ ಕೇಳುವ ಹಬ್ಬ
ಭಕ್ತಿಯಲ್ಲಿ ಪೂಜಿಸಿ ಪತಿ ಆಯುವೃದ್ಧಿಗೆ
ಮನೆತನದ ಅಭಿವೃದ್ಧಿಗೆ ಲೋಕದಿ
ಪತಿವೃತೆಯ ವೃತ ಮಹಿಮೆಯ
ತಿಳಿದು ತಿಳಿಸಿ ಶುಭ ಕೋರುವ ಹಬ್ಬ.
ರಾಧಾ ಶಾಮರಾವ.
ಧಾರವಾಡ
Latest News
ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು
ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...



