Uncategorized

ಸರ್ವಜ್ಞ ಸಾರ : ದೇವರ ಅಸ್ಥಿತ್ವ ಮತ್ತು ಸೃಷ್ಟಿ

ದೇವರ ಅಸ್ತಿತ್ವ ಮತ್ತು ಸೃಷ್ಟಿಚಿತ್ರವನು‌ ನವಿಲೊಳು ವಿಚಿತ್ರವನು ಗಗನದೊಳು ಪತ್ರ ಪುಷ್ಪಗಳ ವಿವಿಧ ವರ್ಣಗಳಿಂದ ಚಿತ್ರಿಸಿದವರಾರು ? ಸರ್ವಜ್ಞಈ ಸೃಷ್ಟಿಯಲ್ಲಿ ಅನೇಕ ಅದ್ಭುತಗಳಿವೆ.ಅದಕ್ಕೆ ಕಾರಣ ಕಣ್ಣಿಗೆ ಕಾಣದ ಶಕ್ತಿಯಿದೆ.ಅದುವೆ ದೇವರು ಎಂದು ಸರ್ವಜ್ಞ‌ನ ಸಂದೇಶ. ಭೂತಭೂತಗಳು ಕೂಡಿ‌ ಅದ್ಭುತವು‌ ಜನಿಸಿತ್ತು ಎಂದು ಅಲ್ಲಮ ಹೇಳುವಂತೆ ಪಂಚಭೂತಗಳಿಂದ ಜಗತ್ತು, ಜೀವಿಗಳು ಸೃಷ್ಟಿಯಾದವು. ಆದರೆ ಅವುಗಳ ಹಿಂದೆ ದೇವ ಇದ್ದಾನೆ. ಪ್ರಕೃತಿ ಪುರುಷರಿಂದ ಜಗತ್ತು‌ ಉಂಟಾಯಿತು. ಪಕ್ಷಿಗಳಲ್ಲಿ...

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ

 ವದನದಲಿ ನಗೆಯಿರಲಿ ಮಾತಿನಲಿ ಸೊಗವಿರಲಿ ಹೃದಯದಲಿ ತುಂಬಿರಲಿ ಪ್ರೀತಿಕರುಣೆ ಸಕಲರಿಗೆ ಲೇಸಾಗಲೆಂದೆಂಬ ಮನವಿರಲಿ ಇದುವೆ ಜೀವನಯೋಗ‌ - ಎಮ್ಮೆತಮ್ಮಶಬ್ಧಾರ್ಥ ವದನ = ಮುಖ.ಸೊಗ = ಸುಖ. ಕ್ಷೇಮ. ಲೇಸು = ಒಳಿತುತಾತ್ಪರ್ಯ ನಾವು ಸುಖಕರವಾಗಿ ಬದುಕಬೇಕಾದರೆ ನಾಲ್ಕು‌ ಗುಣಗಳನ್ನು ಅಳವಡಿಸಿಕೊಳ್ಳಬೇಕೆಂದು ಈ‌ ಕಗ್ಗ‌ ಹೇಳುತ್ತಿದೆ. ಮೊದಲನೆಯದು ಮುಖದಲ್ಲಿ ಸದಾ ನಗೆಯಿರಬೇಕು. ನಾವು ನಗುತ್ತಿದ್ದರೆ ನಗಿಸುತ್ತಿದ್ದರೆ ಎಲ್ಲರು‌ ನಗುತ್ತ ನಮ್ಮ ಕಡೆಗೆ ಆಕರ್ಷಿತರಾಗುವರು.ಆದರೆ ಅಳುತ್ತಿದ್ದರೆ ಯಾರು...

ಸರ್ವಜ್ಞ ಸಾರ : ಇಂಗ್ಲೀಷರ ಬಗ್ಗೆ ಕಾಲಜ್ಞಾನ

 ಹೆಂಗಸರ ಹೋಲುವ‌ ಮಂಗನ ತಲೆಯವರು ಸಂಗಮಕೆ ಬಂದು ನಿಂದಿಹರು‌ ರಾಜ್ಯವನು ನುಂಗಿ ಬಿಟ್ಟಾರು ಸರ್ವಜ್ಞನಮ್ಮ ದೇಶಕ್ಕೆ ಇಂಗ್ಲೀಷರು ಬರುವ ಮುನ್ಸೂಚನೆಯನ್ನು ಸರ್ವಜ್ಞ ಕಾಲಜ್ಞಾನದಲ್ಲಿ‌ ಹೇಳಿದ್ದಾನೆ ಹೆಂಗಸರ ಮುಖ ಮತ್ತು ಕೋತಿಯ ಹೋಲುವ‌ ಜನರು‌ ನಮ್ಮ ನಾಡಿಗೆ ಬಂದು‌ ಇಡೀ ದೇಶವನ್ನು ಆಕ್ರಮಿಸುತ್ತಾರೆ . ಅವರೆ ಇಂಗ್ಲೀಷರು.ಕಾಲು ಕುಪ್ಪಸದವರು‌ ಮೇಲೆ‌ ಟೊಪ್ಪಿಗೆಯವರು ಬಾಲೆಯರ ಮುಖದ ಕಪಿಗಳು‌ ಶ್ರೀರಂಗ ವಾಳ ಹೋದಾರು ಸರ್ವಜ್ಞಕಾಲಿನಲ್ಲಿ ಕಾಲುಚೀಲ socks ಹಾಕಿಕೊಂಡು...

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ

 ಸಮತೆ ಹೇಳಿದ ಯೇಸು ಶಿಲುಬೆಯನ್ನೇರಿದನು ಸಮತೆ ಹೇಳಿದ ಬಸವನಸುನೀಗಿದ ಸಮತೆ ಹೇಳಿದ ಗಾಂಧಿ ಗುಂಡಿಗಾಹುತಿಯಾದ ಸಮತೆಯನು ಸಹಿಸ ನರ - ಎಮ್ಮೆತಮ್ಮಶಬ್ಧಾರ್ಥ ಸಮತೆ = ಸಮಾನತೆ. ಅಸುನೀಗು = ಪ್ರಾಣಬಿಡು ಗುಂಡಿಗಾಹುತಿ = ಬಂದೂಕಿನ‌ ಗುಂಡಿಗೆ ಬಲಿಭಾವಾರ್ಥಹಲ್ಲಿಗೆ  ಹಲ್ಲು ಕಣ್ಣಿಗೆ ಕಣ್ಣು ಶಿಕ್ಷೆಯ ಬದಲಾಗಿ ಏಸು ಬಲಗೆನ್ನೆಗೆ ಹೊಡೆದವರಿಗೆ ಎಡಗೆನ್ನೆ ಒಡ್ಡಿರಿ. ವೇಶ್ಯೆ ಪಾಪಿಯಲ್ಲ ಅದಕ್ಕೆ ಗಂಡಸರು ಸಹ ಪಾಪಿಗಳು.ನಾವೆಲ್ಲರು ದೇವರ...

ಸರ್ವಜ್ಞ ಸಾರ ; ಯೋಗಿಯ ಯೋಗ್ಯತೆ

ಮೊಲೆಯಿಲ್ಲದಾ ಆವು ತಲೆಯಲ್ಲಿ ಕರೆದಿಹುದು                ಸಲೆ ನೆಲೆಯನರಿದು ಕರೆದುಂಬ ಯೋಗಿಯ    ಕುಲ‌ನಾಶವೆಂದ - ಸರ್ವಜ್ಞಮೊಲೆಯಿಲ್ಲದ ಆಕಳು ತಲೆಯಲ್ಲಿ‌ ಕರೆದಿಹುದು‌ ಎಂದರೆ ಶಿರದಲ್ಲಿಯ ಸಹಸ್ರಾರ ಚಕ್ರದಿಂದ ಸ್ರವಿಸುವ ಮೆಲೋಟೊನ್ ರಸ.  ಇದು ಧ್ಯಾನಮಾಡುವುದರಿಂದ ಅಥವಾ ಶಿವಯೋಗ ಮಾಡುವುದರಿಂದ ಮೆದುಳಿನಲ್ಲಿ‌ ಬಿಡುಗಡೆ ಆಗುತ್ತದೆ.ಅದು ಬಿಡುಗಡೆಯಾದರೆ ಮಾನಸಿಕ ಆನಂದ‌...

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ

 ಭಕ್ತಿಯಿಂದಲಿ ಶಬರಿ ಶ್ರೀರಾಮನಾಗಮನ ನಿತ್ಯ ಕಾದಳು ಹಲವು ಸಂವತ್ಸರ ಮುಂದೊಂದು ದಿನ ದೇವನೊಲಿದು ಬರುವುದು ಖಚಿತ ಶ್ರದ್ಧೆಯಲಿ ಶಕ್ತಿಯಿದೆ - ಎಮ್ಮೆತಮ್ಮಶಬ್ಧಾರ್ಥ ಸಂವತ್ಸರ =ವರುಷ, ವರ್ಷ. ಶ್ರದ್ಧೆ = ಭಕ್ತಿ, ನಂಬುಗೆ, ಬಯಕೆತಾತ್ಪರ್ಯ ಶಬರಿ ಬೇಡ ಜನಾಂಗದ ನಿಷಾಧ ಬುಡಕಟ್ಟಿಗೆ ಸೇರಿದ ಒಬ್ಬ ಮಹಿಳೆ.ಆಕೆಯ ಮದುವೆಯ ಹಿಂದಿನ ದಿನ ನೂರಾರು ಕುರಿಗಳನ್ನು ಬಲಿಕೊಡಲು ತಂದೆ ಏರ್ಪಡಿಸುತ್ತಾನೆ. ಆಗ ಆಕೆಗೆ ಸಂಕಟವುಂಟಾಗಿ ಮದುವೆಯ ದಿನ ಜಿಗುಪ್ಸೆಯಿಂದ...

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ

 ಯಾವ ದೇಶದಿ‌ ಬೆಳೆದ ಹಣ್ಣಾದರೇನಂತೆ? ಕಚ್ಚಿ ತಿಂದದರ ಸವಿರುಚಿಯ ನೋಡು ಕವಿಕಾಲಮತಭಾಷೆದೇಶಗಳ ಗಣಿಸದೆಯೆ ಸತ್ಕಾವ್ಯಗಳನೋದು - ಎಮ್ಮೆತಮ್ಮಶಬ್ಧಾರ್ಥ ಗಣಿಸು = ಎಣಿಸು. ಸತ್ಕಾವ್ಯ = ಉತ್ತಮ ಕಾವ್ಯತಾತ್ಪರ್ಯ ಸವಿಯಾದ ಹಣ್ಣು ಯಾವ ದೇಶದಲ್ಲಿ ಬೆಳೆದರೇನು ? ಯಾರು ಬೆಳೆಸಿದರೇನು? ಅದನ್ನು ತಿಂದು ರುಚಿ ನೋಡಬೇಕು. ತಿಂದು ಸಂತೃಪ್ತಿ ಹೊಂದಿ ಸಂತೋಷಪಡಬೇಕು. ಹಾಗೆ ಉತ್ತಮ ಕಾವ್ಯವನ್ನು ಯಾವ ಕವಿ ಬರೆದರೇನು ? ಯಾವ ಕಾಲದಲ್ಲಿ‌ ಬರೆದೇನು?...

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ

 ಯಾರ ತೋಟದಿ ಬೆಳೆದ ಕಬ್ಬಾದರೇನೆಂತೆ ? ಸುಲಿದು ತಿಂದದರ ರಸಹೀರಿ ನೋಡು ಯಾವ ಧರ್ಮದ ಗ್ರಂಥವಾಗಿದ್ದರೇನಂತೆ ? ಗ್ರಹಿಸದರ ಸಾರವನು‌ - ಎಮ್ಮೆತಮ್ಮಶಬ್ಧಾರ್ಥ ಗ್ರಹಿಸು = ಸ್ವೀಕರಿಸು, ತಿಳಿ, ಅರಿತಾತ್ಪರ್ಯ ತೋಟದ ಮಾಲಿಕ ಯಾರಿದ್ದರೇನು ? ಆ ತೋಟದಲ್ಲಿ ಬೆಳೆದ ಕಬ್ಬು ಯಾವುದಾದರು ಸರಿ. ಮೊದಲು ಸಿಪ್ಪೆ ಸುಲಿದು ತಿಂದು ರಸವನ್ನು ಮಾತ್ರ ಸವಿದು ನುಂಗು.ಮತ್ತೆ ಆ ಸಿಪ್ಪೆಯನ್ನು ಉಗುಳಿಬಿಡು. ಕಬ್ಬಿನ ರಸ ಹೀರಿ ಕುಡಿದರೆ ಅದು...

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ

 ಜೈಲಿನಲಿ ಬಂಧಿಯಾಗಿರುವೆಲ್ಲ ಕೈದಿಗಳು ಕತ್ತಲೆಯ ಕೋಣೆಯಲಿ ದುಃಖಿಸುತಿರೆ ಕೈದಿಯೊಬ್ಬನು ಚುಕ್ಕಿ ನೋಡಿ ನಲಿಯುವ ಹಾಗೆ ಬುವಿಯೊಳಾನಂದದಿರು - ಎಮ್ಮೆತಮ್ಮಶಬ್ಧಾರ್ಥ ಬುವಿ = ಭೂಮಿತಾತ್ಪರ್ಯ ಸೆರೆಮನೆಯಲ್ಲಿ‌‌ ಬಂಧನಕ್ಕೀಡಾದ ಕೈದಿಗಳು‌ ರಾತ್ರಿ ಕತ್ತಲೆ ಕೋಣೆಯಲ್ಲಿ ನಿದ್ರೆ ಬಾರದೆ ದುಃಖಿಸುತ್ತಾರೆ.‌ಆದರೆ ಅವರಲ್ಲಿ ಒಬ್ಬನು ಜಾಣ ಮಾತ್ರ ಕಂಬಿಯ‌ ಮುಖಾಂತರ ಗಗನದಲ್ಲಿ ಮಿನುಗುವ ನಕ್ಷತ್ರಗಳನ್ನು‌ ನೋಡಿ ಸಂತೋಷಪಡುತ್ತಾನೆ. ಹಾಗೆ ನಾವು ಸಂಸಾರವೆಂಬ‌ ಬಂಧಿಖಾನೆಯಲ್ಲಿ‌ ಬಂಧನಕ್ಕೀಡಾಗಿ ಅಜ್ಞಾನದಿಂದ ದುಃಖಮಾಡುತ್ತೇವೆ. ನಿಜವಾಗಿ ಜಾಣರಾದ‌ ಮಹಾತ್ಮರು ದೇವನನ್ನು‌ ಧ್ಯಾನಿಸುತ್ತ‌ ಪರಮಾನಂದ ಸುಖದಲ್ಲಿ ಇರುತ್ತಾರೆ....

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ

 ನೆನಪಿದೆಯೆ ನೀನಳುತ ಧರೆಗಿಳಿದು ಬಂದಾಗ ಬಂಧುಬಾಂಧವರೆಲ್ಲ‌ ನಕ್ಕರಂದು ನೆನಪಿರಲಿ‌ ಲೋಕವನು‌ ಬಿಡುವಾಗ ಜನರಳಲಿ ನಗೆಮೊಗದಿ ನೀ ಸಾಗು - ಎಮ್ಮೆತಮ್ಮಶಬ್ಧಾರ್ಥ ಧರೆ = ಭೂಮಿತಾತ್ಪರ್ಯ ತಾಯಿಯ ಗರ್ಭದಲ್ಲಿ ಅನೇಕ ಹುಳುಗಳ ಕಡಿತದಿಂದ ಒದ್ದಾಡಿ ಮಲಮೂತ್ರದ ಹೊಲಸಿನಲ್ಲಿ ಹೊರಳಾಡಿ ಪ್ರಸೂತಿ ವಾಯು ಜೋರಾಗಿ ಬರಸಿಡಿಲಿನಂತೆ ಹೊಡೆಯೆ ನೋವಿನಿಂದ ಹೊರಬಂದೆ. ತಾಯಿಯ ಹೊಟ್ಟೆಯಲ್ಲಿ ಬೆಚ್ಚಗಿದ್ದು ಹೊರಬಂದ ಕೂಡಲೆ ತಣ್ಣನೆಯ ಅನುಭವವಾಗಲು, ಉಸಿರು ಮೊದಲ ಬಾರಿಗೆ...
- Advertisement -spot_img

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...
- Advertisement -spot_img
error: Content is protected !!
Join WhatsApp Group