Uncategorized
ಪಾಪಗಳ ಮಾಡದಪ್ಪಗಳಾರು ಲೋಕದಲಿ ?
ಪಾಪ ಮಾಡಿದೆನೆಂಬ ಚಿಂತೆಯೇಕೆ ?
ಪಾಪಿ ಪಶ್ಚಾತ್ತಾಪಪಟ್ಟಂದು ತೊಲಗೀತು
ಅದಕಿಂತ ತಪವಿಹುದೆ ? - ಎಮ್ಮೆತಮ್ಮಶಬ್ಧಾರ್ಥ
ತಪ = ತಪಸ್ಸುತಾತ್ಪರ್ಯ
ಈ ಜಗತ್ತಿನಲ್ಲಿ ಪಾಪಮಾಡದ ಮಾನವರು ಯಾರು ಇಲ್ಲ.
ಎಲ್ಲರು ಒಂದಿಲ್ಲೊಂದು ಪಾಪ ಮಾಡಿದವರೆ. ತಪ್ಪು ಮಾಡಿ
ಅಪರಾಧ ಭಾವನೆಯಿಂದ ಚಿಂತೆಮಾಡಬಾರದು. ಆದರೆ
ತಿಳಿಯದೆ ಮಾಡಿದ ತಪ್ಪನ್ನು ಒಪ್ಪಿಕೊಂಡುಬಿಟ್ಟರೆ ಅಥವಾ
ಪರಿತಾಪಪಟ್ಟರೆ ಅದರಿಂದ ಬಿಡುಗಡೆ ಪಡೆಯಬಹುದು.
ಪಶ್ಚಾತ್ತಾಪ ಪಟ್ಟರೆ ಅದು ಅಂತರಂಗ ಪರಿಶುದ್ಧಗೊಳಿಸುವ
ತಪಸ್ಸಾಗಿ...
Uncategorized
ಗ್ರಹಗತಿಯ ನಡೆಸುವುದು ತಾರೆಗಳ ಹೊಳೆಸುವುದು
ಸೂರ್ಯಚಂದ್ರಾದಿಗಳ ಬೆಳಗಿಸುವುದು
ಸಸ್ಯಸಂಕುಲ ಜೀವರಾಶಿಗಳ ಬೆಳೆಸುವುದು
ದೈವದದ್ಭುತ ಲೀಲೆ - ಎಮ್ಮೆತಮ್ಮಶಬ್ಧಾರ್ಥ
ಗ್ರಹಗತಿ = ಗ್ರಹಗಳ ಚಲನೆ. ತಾರೆ = ಚುಕ್ಕಿ.ಸಂಕುಲ = ಗುಂಪು ರಾಶಿ = ಗುಂಪು. ಲೀಲೆ = ಆಟ, ವಿಲಾಸತಾತ್ಪರ್ಯ
ಆಕಾಶದಲ್ಲಿರುವ ಗ್ರಹಗಳನ್ನು ಸೂರ್ಯನ ಸುತ್ತ ಮತ್ತು
ತನ್ನ ಸುತ್ತ ಸುತ್ತುವಂತೆ ಮಾಡುತ್ತಿದೆ. ಅಸಂಖ್ಯಾತ ನಕ್ಷತ್ರಗಳನ್ನು ಮಿಣಮಿಣ ಮಿನುಗುವಂತೆ ಮಾಡುತ್ತಿದೆ. ಸೂರ್ಯ ಮತ್ತು...
Uncategorized
ಅಂತಪ್ಪುದಿಂತಪ್ಪುದೆಂತಪ್ಪುದೆನಬೇಡ
ಚಿಂತಿಸುತ ಕಾಲವನು ಕಳೆಯಬೇಡ
ಎಂತಾದರೇನಂತೆ ಸಿದ್ಧನಿರು ಸಹಿಸಲಿಕೆ
ಸಂತೈಸುತಾತ್ಮವನು - ಎಮ್ಮೆತಮ್ಮಶಬ್ಧಾರ್ಥ
ಅಂತಪ್ಪುದು = ಹಾಗೆ ಆಗುವುದು. ಇಂತಪ್ಪುದು = ಹೀಗೆ ಆಗುವುದು.ಎಂತಪ್ಪುದು = ಹೇಗಾಗುವುದು.ಎಂತು = ಹೇಗೆನಾಳೆ ಹಾಗಾವುದು , ಹೀಗಾವುದು, ಹೇಗಾಗುವುದು ಎಂದು
ಕಳವಳಪಡಬೇಡ. ಅದೇ ಚಿಂತೆಯಲಿ ಸಮಯವನ್ನು ಹಾಳುಮಾಡಬೇಡ. ಮುಂದೆ ಹೇಗಾವುದೆನ್ನುವುದನ್ನು ಯಾರು ತಿಳಿದಿದ್ದಾರೆ. ಏನೇ ಬರಲಿ ಅದನ್ನು ಎದುರಿಸಲು ತಯಾರು ಇರಬೇಕು. ಬಂದದ್ದನ್ನು ಒಪ್ಪಿಕೊಂಡು...
Uncategorized
ಎಲ್ಲ ಜನರಿಗೆ ಬೇಕು ನಕ್ಕು ನಗಿಸುವ ಧರ್ಮ
ಈ ಧರ್ಮದೊಳಗಿಲ್ಲ ಜಾತಿಪಂಥ
ಸಂತೋಷಪಡಿಸುವುದೆ ನಿಜವಾದ ಶಿವಪೂಜೆ
ಬಲ್ಲವರ ಮಾತಿಷ್ಟೆ - ಎಮ್ಮೆತಮ್ಮತಾತ್ಪರ್ಯ
ಪಂಥ - ಮತ. ಬಲ್ಲವರು = ತಿಳಿದವರು, ಜ್ಞಾನಿಗಳುನಗು ಮಾನವನಿಗೆ ದೇವರು ಕೊಟ್ಟ ವರ. ಏಕೆಂದರೆ
ಯಾವ ಪ್ರಾಣಿಗಳಲ್ಲಿಲ್ಲದ ನಗು ಮಾನವನಲ್ಲಿ ಮಾತ್ರ ಇದೆ.
ನಗಿಸುವವನನ್ನು ಎಲ್ಲ ಜನರು ಇಷ್ಟಪಡುತ್ತಾರೆ. ಇದು
ಕೂಡ ಧರ್ಮವೆ. ಏಕೆಂದರೆ ಧರ್ಮಗಳೆಲ್ಲ ಮಾನವನಿಗೆ
ಸುಖಶಾಂತಿ ಕೊಡುವಂತೆ ಇದು...
Uncategorized
ಅವರಿವರ ದೋಷಗಳನೆಣಿಸಿ ದೂಷಿಸಬೇಡ
ನಿನ್ನ ಗುಣದೋಷಗಳ ತಿಳಿದುನೋಡು
ಜನರ ತಪ್ಪನುಕಂಡು ತೆಪ್ಪಗಿರುವುದೆ ಲೇಸು
ಶಾಂತಿಗಿದೆ ಸನ್ಮಾರ್ಗ- ಎಮ್ಮೆತಮ್ಮಶಬ್ಧಾರ್ಥ
ದೋಷ = ಕೆಟ್ಟಗುಣ. ತೆಪ್ಪಗೆ = ಸುಮ್ಮನೆ.
ಸನ್ಮಾರ್ಗ = ಒಳ್ಳೆಯ ಮಾರ್ಗತಾತ್ಪರ್ಯ
ಇನ್ನೊಬ್ಬರ ಕೆಟ್ಟಗುಣಗಳನ್ನು ಕಂಡು ನಿಂದಿಸಬೇಡ.
ಮೊದಲು ನಿನ್ನಲ್ಲಿರುವ ಗುಣದೋಷಗಳ ತಿಳಿದುಕೊಂಡು
ತಿದ್ದಿಕೊಳ್ಳಬೇಕು. ಲೋಕವನ್ನು ತಿದ್ದಲು ಲೋಕನಾಥನಿಗೆ
ಸಾಧ್ಯವಾಗಿಲ್ಲ. ಹಾವಿಗೆ ಹಾಲೆರೆದಷ್ಟು ಅದು ವಿಷವನ್ನು
ಉತ್ಪತ್ತಿಮಾಡುತ್ತದೆ. ಹಾಗೆ ಬುದ್ಧಿವಾದದ ಮಾತು ಹೇಳಿದರೆ
ಅವರ ಕೋಪ ಹೆಚ್ಚಾಗುತ್ತದೆ ಹೊರತು
ಶಾಂತವಾಗುವುದಿಲ್ಲ....
Uncategorized
ಬಿಸಿಲು ಬೇಗೆಯನುಂಡು ತಂಪು ಬೆಳದಿಂಗಳನು
ಚೆಲ್ಲುವನು ಚಂದಿರನು ಧರೆಯ ಮೇಲೆ
ದುಃಖದುಗುಡವ ನುಂಗಿ ಸುಖವ ಕೊಡುವರು ಜಗಕೆ
ಸಜ್ಜನರ ಪರಿಯಿಂತು - ಎಮ್ಮೆತಮ್ಮಶಬ್ಧಾರ್ಥ
ಬೇಗೆ - ಬೆಂಕಿ, ಉರಿ, ತಾಪ, ಸಂಕಟ . ಧರೆ - ಭೂಮಿ
ದುಗುಡ - ಚಿಂತೆ, ಆತಂಕ,ತಾತ್ಪರ್ಯ
ಚಂದ್ರ ಸೂರ್ಯನ ಪ್ರಖರವಾದ ಬಿಸಿಲು ತನ್ನ ಮೈಮೇಲೆ
ಬಿದ್ದರು ಅದನ್ನು ಸಹಿಸಿಕೊಂಡು ಕನ್ನಡಿಯಂಥ ತನ್ನ ಮೈಯಲ್ಲಿ ಪ್ರತಿಬಿಂಬಿಸಿ ತಂಪಾದ ಹಿತವಾದ...
Uncategorized
ಜನರ ಕಷ್ಟವ ಕಂಡು ಕರಗುವಂಥೆದೆಯಿಲ್ಲ
ಮೌನದಿಂದೆಲ್ಲವನು ನೋಡುತಿಹುದು
ಇಂಥ ಕಲ್ಲಿಗೆ ದೇವರೆಂದೇಕೆ ಕರೆಯುವುದು ?
ಶಿಲೆಯಲ್ಲಿ ಶಿವನಿಲ್ಲ - ಎಮ್ಮೆತಮ್ಮ ಶಬ್ಧಾರ್ಥ
ಶಿಲೆ = ಕಲ್ಲುತಾತ್ಪರ್ಯ
ಜಡವಾಗಿರುವ ಕಲ್ಲಿನಿಂದ ಮೂರ್ತಿ ಕೆತ್ತಿ ಗುಡಿಯಲ್ಲಿ
ಪ್ರತಿಷ್ಟಾಪಿದ ಮೂರ್ತಿ ದೇವರಲ್ಲ. ಏಕೆಂದರೆ ದೇವನ
ನೆನಪಿಗಾಗಿ ನಾವು ರೂಪಿಸಿಕೊಂಡ ಕುರುಹು ಮಾತ್ರ.
ನಾವು ಆ ಮೂರ್ತಿಯಲ್ಲಿ ಇಟ್ಟ ನಂಬಿಕೆಯೆ ದೇವರು.
ಆದಕಾರಣ ನಮ್ಮ ಭಾವದಲ್ಲಿ ದೇವರಿರುತ್ತಾನೆ.ಅಂಥ
ದೇವರ ಮೂರ್ತಿಗೆ ಜನಗಳ ಕಷ್ಟಕಾರ್ಪಣ್ಯಗಳನ್ನು.ಕಂಡು
ಕನಿಕರದಿಂದ ಸ್ಪಂದಿಸುವ ಹೃದಯವಿರುವುದಿಲ್ಲ....
Uncategorized
ಪರರ ಕಷ್ಟವ ಕಂಡು ಕರಗುವೆದೆಯೊಂದುಂಟು
ಸಂತೈಸುವಂಥೆರಡು ನುಡಿಗಳುಂಟು
ಒಳಿತಾಗಲೆಂದೆಂಬ ಮತ್ತೊಂದು ಮನವುಂಟು
ಸಜ್ಜನನೆ ಸರ್ವೇಶ - ಎಮ್ಮೆತಮ್ಮ ಶಬ್ಧಾರ್ಥ
ಸಂತೈಸು = ಸಮಾಧಾನಪಡಿಸು. ಸಜ್ಜನ = ಒಳ್ಳೆಯವನು
ಸರ್ವೇಶ = ಪರಮೇಶ, ಜಗದೀಶ.ತಾತ್ಪರ್ಯ
ನಿಜವಾದ ಮನುಷ್ಯನ ಮೂರು ಉತ್ತಮ ಗುಣಗಳನ್ನು
ಈ ಕಗ್ಗ ಉಸುರುತ್ತದೆ ಮತ್ತು ಉಸಿರಾಡುತ್ತದೆ.
ಇನ್ನೊಬ್ಬರ ಕಷ್ಟಗಳನ್ನು ಕಂಡು ಹೃದಯ ಕರಗಿ ಅವರಿಗೆ
ಸಹಾಯ ಮಾಡುವ ಗುಣವುಳ್ಳವನೆ ನಿಜವಾದ
ಮಾನವ. ಬರಿ ಮಾನವನಲ್ಲ ಮಹಾಮಾನವ. ಅವರ ದುಃಖಗಳನ್ನು...
Uncategorized
ಸಂತಸದಿ ನಗುವಾಗ ದುಃಖದಿಂದಳುವಾಗ
ಮನ ಹಗುರವಾಗುವುದು ನೀರು ಸುರಿದು
ದಿಟ್ಟಿಸುತ ಮೂರ್ತಿಯನು ಕಣ್ಣೀರನಿಳಿಸಿದರೆ
ಮನ ನಿರುಮ್ಮಳವಹುದು - ಎಮ್ಮೆತಮ್ಮಶಬ್ಧಾರ್ಥ
ದಿಟ್ಟಿಸು = ನಿಟ್ಟಿಸು, ನಿರೀಕ್ಷಣೆ ಮಾಡು, ಕಣ್ಣಿಟ್ಟು ನೋಡು
ನಿರುಮ್ಮಳ = ನಿಶ್ಚಿಂತೆ, ಉಮ್ಮಳರಹಿತ, ದುಃಖರಹಿತತಾತ್ಪರ್ಯಆನಂದವಾದಾಗ ಕಣ್ಣ ಕಡೆಯಲ್ಲಿ ಸುಖದ ಪನ್ನೀರು ಇಳಿಯುತ್ತವೆ. ದುಃಖವಾದಾಗ ಕಣ್ಣ ಬುಡದಲ್ಲಿ (ಮೂಗಿನ
ತುದಿಯಲ್ಲಿ) ಕಣ್ಣೀರು ಇಳಿಯುತ್ತವೆ.ನಮ್ಮ ಮನಸ್ಸಿನ ಒತ್ತಡ ಕಳೆಯಲು ದೇವರು ಮಾಡಿದ ಒಂದು ಸರಳ...
Uncategorized
ಗುಡುಗುಸಿಡಿಲುಗಳೊಮ್ಮೆ ಮೋಡಮಿಂಚುಗಳೊಮ್ಮೆ
ರವಿಯೊಮ್ಮೆ ಶಶಿಯೊಮ್ಮೆ ವರ್ಷವೊಮ್ಮೆ
ಮಳೆಬಿಲ್ಲು ಮತ್ತೊಮ್ಮೆ ತಾರೆಗಳು ಮಗುದೊಮ್ಮೆ
ಜೀವನದ ಬಾನಿನಲಿ - ಎಮ್ಮೆತಮ್ಮ ಶಬ್ಧಾರ್ಥ
ರವಿ = ಸೂರ್ಯ. ಶಶಿ =ಚಂದ್ರ. ವರ್ಷ = ಮಳೆ
ಮಳೆಬಿಲ್ಲು = ಕಾಮನಬಿಲ್ಲು. ತಾರೆ = ಚುಕ್ಕಿ. ಬಾನು= ಗಗನತಾತ್ಪರ್ಯ
ಈ ಪ್ರಕೃತಿಯಲ್ಲಿ ನಿತ್ಯ ಅನೇಕ ಬದಲಾವಣೆಗಳಾಗುತ್ತವೆ.
ಆಕಾಶದಲ್ಲಿ ಒಮ್ಮೆ ಗುಡುಗುತ್ತದೆ ಮತ್ತು ಸಿಡಿಲು ಹೊಡೆಯುತ್ತದೆ. ಮತ್ತೆ ಮೋಡಗಳು ಮಿಂಚುತ್ತವೆ.
ಒಮ್ಮೊಮ್ಮೆ ಹಗಲು ಸೂರ್ಯನುದಿಸುತ್ತಾನೆ ,...
Latest News
ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು
ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...



