Uncategorized
ಎಡೆಬಿಡದೆ ಗಡಿಯಾರ ಸತತ ದುಡಿಯುವ ಹಾಗೆ
ಸೋಮಾರಿತನಬೇಡ ಕೆಲಸಮಾಡು
ಕಿಂಚಿತ್ತು ಕಂಪಿಸದ ಕಲ್ಲುಬಂಡೆಯ ಹಾಗೆ
ಧ್ಯಾನದಲಿ ಕೂತುಬಿಡು - ಎಮ್ಮೆತಮ್ಮಶಬ್ಧಾರ್ಥ
ಎಡೆಬಿಡದೆ =ನಡುವೆ ಬಿಡದೆ, ಕಿಂಚಿತ್ತು = ಕೊಂಚ
ಕಂಪಿಸು = ನಡುಗು, ಅಲುಗಾಡುತಾತ್ಪರ್ಯ
ಹೇಗೆ ಗಡಿಯಾರ ೨೪ ತಾಸು ಸತತ ಕೆಲಸ ಮಾಡುತ್ತದೆ
ಹಾಗೆ ಮನುಷ್ಯ ಯಾವಾಗಲು ಚಟುವಟಿಕೆಯಿಂದ ಇರಬೇಕು.
ಇಲ್ಲದಿದ್ದರೆ ಅನೇಕ ಯೋಚನೆಗಳು ಕಾಡತೊಡಗುತ್ತವೆ.
Idle mind is devil's workshop (ಸೋಮಾರಿಯ ತಲೆ...
Uncategorized
ತಿಂಥಿಣಿಯ ಮೌನೇಶ ಕೊಡೆಕಲ್ಲು ಬಸವಣ್ಣ
ಮತ್ತೆ ಸಾವಳಗಿ ಶಿವಲಿಂಗೇಶ್ವರ
ಹಿಂದುಮುಸ್ಲಿಮ್ಮರಲಿ ಸೌಹಾರ್ದ ಬೆಳೆಸಿದರು
ಇಂಥವರು ಬೇಕೀಗ - ಎಮ್ಮೆತಮ್ಮತಾತ್ಪರ್ಯ
ನಮ್ಮ ದೇಶಕ್ಕೆ ವಲಸೆ ಬಂದ ಮುಸ್ಲಿಮ್ಮರ ಮತ್ತು ಹಿಂದುಗಳ
ನಡುವೆ ಘರ್ಷಣೆಗಳು ನಡೆಯುತ್ತಿದ್ದವು. ಇವರಿಬ್ಬರಲ್ಲಿ
ಐಕ್ಯತೆ ತರಲಿಕ್ಕಾಗಿ ಅನೇಕ ಶರಣರು, ಅವದೂತರು, ಆರೂಢರು ಅದ್ವೈತಿಗಳು, ಮತ್ತು ಸೂಫಿ ಸಂತರು ಶ್ರಮಿಸಿದ್ದಾರೆ. ಅಂಥವರಲ್ಲಿ ತಿಂಥಿಣಿಯ ಮೌನೇಶ್ವರರು, ಕೊಡೆಕಲ್ಲು ಬಸವಣ್ಣನವರು ಮತ್ತು ಸಾವಳಿಗಿ ಶಿವಲಿಂಗೇಶ್ವರ
ಶಿರಹಟ್ಟಿಯ ಫಕೀರಸ್ವಾಮಿಗಳು,...
Uncategorized
ದೇವಮಂದಿರದಲ್ಲಿ ಶಹನಾಯಿ ನುಡಿಸುತಿರೆ
ಬಿಸ್ಮಿಲ್ಲ ಖಾನರಿಗೆ ದೇವ ಕಂಡ
ಪೂಜೆಗಿಂತಲು ಮಿಗಿಲು ನಾದಾನುಸಂಧಾನ
ನಾದ ಬ್ರಹ್ಮಾನಂದ - ಎಮ್ಮೆತಮ್ಮಶಬ್ಧಾರ್ಥ
ನಾದ = ಸಂಗೀತದ ಧ್ವನಿ ತರಂಗ . ಅನುಸಂಧಾನ = ಧ್ಯಾನ
ಬ್ರಹ್ಮಾನಂದ= ಬ್ರಹ್ಮ ಸಾಕ್ಷಾತ್ಕಾರದಿಂದಾದ ಸಂತೋಷತಾತ್ಪರ್ಯ
ಬಿಸ್ಮಿಲ್ ಖಾನ್ ಅವರ ಚಿಕ್ಕಪ್ಪ ಅಲಿ ಬಕ್ಷ್ ವಿಲಾಯತು ಅವರಲ್ಲಿ ಶಹನಾಯಿ ತರಬೇತಿಯನ್ನು ಪಡೆದರು. ಚಿಕ್ಕಪ್ಪ ವಾರಣಾಸಿಯ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಶಹನಾಯಿ ಬಾರಿಸುತ್ತಿದ್ದರು. ಮುಂದೆ ಬಿಸ್ಮಿಲ್...
Uncategorized
ದುಡ್ಡಿಲ್ಲವೆಂದೇಕೆ ಕೈಚೆಲ್ಲಿ ಕೂಡುವುದು
ಸೇವೆಯನು ಮಾಡಲಿಕೆ ಮನಸು ಮುಖ್ಯ
ನೀರುಣಿಸಿ ಬೆಳೆಸಿದಳು ಸಾಲುಮರ ತಿಮ್ಮಕ್ಕ
ನಿಸ್ವಾರ್ಥ ನಿಜಸೇವೆ - ಎಮ್ಮೆತಮ್ಮಶಬ್ಧಾರ್ಥ
ಕೈಚೆಲ್ಲು = ಅಸಹಾಯಕತೆಯಿಂದ ಕಾರ್ಯ ವಿಮುಖನಾಗು
ನಿಸ್ವಾರ್ಥ = ಪರಹಿತ ಬಯಸುವ ಪ್ರವೃತ್ತಿ , ಫಲಾಪೇಕ್ಷೆಯಿಲ್ಲದತಾತ್ಪರ್ಯ
ಯಾವುದಾದರು ಸಾಧನೆ ಮಾಡಬೇಕಾದರೆ ದುಡ್ಡು ಬೇಕು.
ಆದರೆ ದುಡ್ಡಿಲ್ಲವೆಂದು ಕಾರ್ಯ ಸಾಧಿಸಲು ಸಾಧ್ಯವಿಲ್ಲವೆಂದು ವಿಮುಖನಾಗಬಾರದು. ಜಗತ್ತಿನಲ್ಲಿ ಸೇವೆ ಮಾಡಲು ಅನೇಕ ಮಾರ್ಗಗಳಿವೆ. ಸೇವೆ ಮಾಡಲು ಮುಖ್ಯವಾಗಿ...
Uncategorized
ಹಾಕಿದನ್ನವನುಂಡು ಬಾಲವಲ್ಲಾಡಿಸುತ
ಸೂಚಿಸುವುದೊಡೆಯನಿಗೆ ಧನ್ಯವಾದ
ಆ ನಾಯಿಗಿಂತ ಕಡೆ ನೀಚ ಮಾನವನಿವನು
ಸ್ಮರಿಸನುಪಕಾರವನು - ಎಮ್ಮೆತಮ್ಮಶಬ್ಧಾರ್ಥ
ಸೂಚಿಸು = ಸಂಜ್ಞೆಯ ಮೂಲಕ ತಿಳಿಯಪಡಿಸು.
ನೀಚ = ಕೆಟ್ಟ. ಸ್ಮರಿಸು = ನೆನೆಸು. ಉಪಕಾರ = ಸಹಾಯತಾತ್ಪರ್ಯ
ಪ್ರೀತಿಯಿಂದ ಅನ್ನಹಾಕಿ ಸಾಕಿ ಬೆಳೆಸಿದ ಯಜಮಾನನನ್ನು
ಕಂಡರೆ ನಾಯಿ ಬಾಲವನ್ನು ಅಲ್ಲಾಡಿಸುತ್ತ ಕೃತಜ್ಞತೆಯನ್ನು
ತಿಳಿಯಪಡಿಸುತ್ತದೆ. ಅದಕ್ಕೆ ನಾಯಿಯನ್ನು ನಿಯತ್ತಿನ
ಪ್ರಾಣಿಯೆಂದು ಕರೆಯುತ್ತಾರೆ. ಆದರೆ ಅಂಥ ನಿಯತ್ತಿನ
ಪ್ರಾಣಿಗಿಂತ ನಿಯತ್ತಿಲ್ಲದ ಮನುಷ್ಯ ಕೆಟ್ಟವನು....
Uncategorized
ಯಾವ ಧರ್ಮದಿ ನೀನು ಜನಿಸಿಬಂದಿರಲೇನು?
ನೀನ್ಯಾವ ಧರ್ಮದವನಾದರೇನು ?
ಪ್ರೀತಿ ಮಾತುಗಳಿರಲಿ ನೀತಿ ನಡೆತೆಗಳಿರಲಿ
ಆಚಾರ ಧರ್ಮವೆಲೊ - ಎಮ್ಮೆತಮ್ಮಶಬ್ಧಾರ್ಥ
ಆಚಾರ = ಒಳ್ಳೆಯ ನಡತೆತಾತ್ಪರ್ಯ
ಯಾವ ಧರ್ಮ ಆಚರಿಸುವ ನಿನ್ನ ತಂದೆ ತಾಯಿಗಳಲ್ಲಿ ನೀನು
ಜನಿಸಿಬಂದರೇನು ಮತ್ತು ನೀನು ಯಾವ ಧರ್ಮವನ್ನು
ಆಚರಿಸುವನಾದರೇನು? ನೀನು ಹುಟ್ಟಿದ ಧರ್ಮ ಮತ್ತು
ಆಚರಿಸುವ ಧರ್ಮ ಯಾವುದಾದರು ಇರಲಿ.ಆದರೆ
ಸಕಲ ಜೀವಾತ್ಮರನ್ನು ಪ್ರೀತಿಯಿಂದ ಕಂಡು ಮಾತಾಡಿಸಬೇಕು.ಒಳ್ಳೆಯ ನಡೆ ನುಡಿ ನೀತಿ...
Uncategorized
ಅವ ಹಿಂದು ಅವ ಜೈನ ಅವ ಬೌದ್ಧ ಅವ ಸಿಖ್ಖ
ಅವ ಕ್ರೈಸ್ತ ಅವ ಮಹಮದೀಯನೆಂದು
ದಯಮಾಡಿ ಕರೆಯದಿರು ಬೇರೆಯವರೆನ್ನದಿರು
ಅವರು ನಮ್ಮವರೆನ್ನು - ಎಮ್ಮೆತಮ್ಮಶಬ್ಧಾರ್ಥ
ಮಹಮದೀಯ = ಮುಸಲ್ಮಾನತಾತ್ಪರ್ಯ
ಜಗತ್ತಿನಲ್ಲಿ ಹಿಂದು, ಜೈನ, ಬೌದ್ಧ, ಸಿಖ್ಖ, ಕ್ರೈಸ್ತ, ಇಸ್ಲಾಂ,
ಮುಂತಾದ ಧರ್ಮಗಳಿವೆ. ವೇದೋಪನಿಷತ್ತುಗಳನ್ನು
ಓದುವವರು ಹಿಂದುಗಳು, ಜಿನಾಗಮ ಓದುವವರು ಜೈನರು,
ತ್ರಿಪಿಟಿಕಾ ಓದುವವರು ಬೌದ್ಧರು, ಗುರುಗ್ರಂಥ ಸಾಹೇಬ ಓದುವವರು ಸಿಖ್ಖರು, ಬೈಬಲ್ ಓದುವವರು ಕ್ರೈಸ್ತರು,...
Uncategorized
ಪಟ್ಟಣಕೆ ದಾರಿಯಿದೆ ತೋರಿಸುವ ಫಲಕವಿದೆ
ನಡೆದುಹೋದರೆ ಮಾತ್ರ ತಲುಪಬಹುದು
ದೇವಪಥ ತೋರಿಸುವ ಗುರುದೇವನಿದ್ದರೂ
ಸಾಧಿಸುವ ಛಲಬೇಕು - ಎಮ್ಮೆತಮ್ಮಶಬ್ಧಾರ್ಥ
ಫಲಕ = ದಾರಿ ತೋರಿಸುವ ಹಲಗೆ. ಮಾರ್ಗಸೂಚಿತಾತ್ಪರ್ಯ
ಒಂದು ನಗರಕ್ಕೆ ಹೋಗುವ ಮಾರ್ಗವನ್ನು ತೋರಿಸಲು
ಒಂದು ಹಲಗೆಯಲ್ಲಿ ಅಥವಾ ಬಂಡೆಗಲ್ಲಿನಲ್ಲಿ ಬರೆದು ನಿಲ್ಲಿಸಿರುತ್ತಾರೆ. ಅದನ್ನು ನೋಡಿ ತಿಳಿದುಕೊಂಡು ತೋರಿದ
ದಾರಿಯಲ್ಲಿ ಚಲಿಸಿದರೆ ನಾವು ಮುಟ್ಟಬೇಕಾದ ಪಟ್ಟಣವನ್ನು
ತಲುಪಬಹುದು. ಹಾಗೆ ದೇವರನ್ನು ಕಾಣುವ ಮಾರ್ಗವನ್ನು
ತಿಳಿಸುವ ಗುರುದೇವನೊಬ್ಬನಿದ್ದರೂ ಕೂಡ...
Uncategorized
ಎಣ್ಣೆಯಿದೆ ಎಳ್ಳಿನಲಿ ಬೆಣ್ಣೆಯಿದೆ ಹಾಲಿನಲಿ
ಚಿನ್ನವಿದೆ ಬೆಳ್ಳಿಯಿದೆ ಮಣ್ಣಿನಲ್ಲಿ
ಬೆಂಕಿಯಿದೆ ಕಲ್ಲಿನಲಿ ತೇಜವಿದೆ ಕಣ್ಣಿನಲಿ
ದೇಹದಲಿ ದೇವನಿವ - ಎಮ್ಮೆತಮ್ಮಶಬ್ಧಾರ್ಥ
ಚಿನ್ನ = ಬಂಗಾರ. ತೇಜ = ಕಾಂತಿ, ಹೊಳಪು, ಬೆಳಕು.ತಾತ್ಪರ್ಯ
ಎಳ್ಳುಕಾಳಿನಲ್ಲಿ ಎಳ್ಳೆಣ್ಣೆ ಇರುತ್ತದೆ. ಆ ಎಳ್ಳುಕಾಳುಗಳನ್ನು
ಗಾಣದಲ್ಲಿ ಹಾಕಿ ಹಿಂಡಿ ತೆಗೆಯುತ್ತಾರೆ. (ಎಳ್ಳೆಣ್ಣೆ ಒಳ್ಳೆಣ್ಣೆ ಆಯಿತು. ತಿಲದಿಂದ ತೈಲವಾಯಿತು) ಅದೇರೀತಿ ಹಾಲಿನಲ್ಲಿ ಬೆಣ್ಣೆ ಇರುತ್ತದೆ. ಹಾಲನ್ನು ಕಾಸಿ ಹೆಪ್ಪುಹಾಕಿ ಮೊಸರು...
Uncategorized
ಬಿಳಿಕರಿಯ ಭವಿಭಕ್ತ ಮೇಲ್ಜಾತಿ ಕೀಳ್ಜಾತಿ
ಕಾಫರ್ಮುಸಲ್ಮಾನ ಹಿಂದು ಮ್ಲೇಂಛ
ಇನ್ಫಿಡಲ್ ಈಸಾಯಿ ಭೇದಭಾವಗಳೇಕೆ ?
ಮಾನವತೆ ಮೊದಲಿರಲಿ- ಎಮ್ಮೆತಮ್ಮ||೧೫೩||ಶಬ್ಧಾರ್ಥ
ಭವಿ =ವೀರಶೈವನಲ್ಲದವ.ಕಾಫರ್ =ಅಲ್ಲಾನಲ್ಲಿ ನಂಬಿಕಿಲ್ಲದವ
ಮ್ಲೇಂಛ = ಸಂಸ್ಕೃತನಲ್ಲದವ. ಇನ್ಫಿಡಲ್ = ದೇವರಲ್ಲಿ
ನಂಬಿಕಿಲ್ಲದವತಾತ್ಪರ್ಯ
ಬಿಳಿಯ ಬಣ್ಣದ ಯುರೋಪಿಯನ್ನರು ಮತ್ತು ಕರಿಯ ಬಣ್ಣದ
ಆಫ್ರಿಕನ್ನರು, ಶಿವಭಕ್ತರು ಮತ್ತು ಶಿವಭಕ್ತರಲ್ಲದವರು, ಶ್ರೇಷ್ಠ
ಜಾತಿಯವರು ಮತ್ತು ಕೀಳು ಜಾತಿಯವರು, ಕಾಫೀರರು
ಮತ್ತು ಮುಸಲ್ಮಾನರು, ಹಿಂದುಗಳು ಮತ್ತು ಅಸಂಸ್ಕೃತರು,
ದೇವಧರ್ಮದಲ್ಲಿ ನಂಬಿಕೆಯಿಲ್ಲದ ನಾಸ್ತಿಕರು ಮತ್ತು...
Latest News
ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು
ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...



