spot_img
spot_img

Mudalagi: ಆರೋಗ್ಯವಂತ ಜೀವನಕ್ಕೆ ಯೋಗ ಸಹಕಾರಿ-ಪಿಎಸ್‍ಐ ಬಾಲದಂಡಿ

Must Read

- Advertisement -

ಮೂಡಲಗಿ: ಇಂದಿನ ಒತ್ತಡದ ಜೀವನ ಶೈಲಿ, ವಿಷಪೂರಿತ  ಆಹಾರ ಸೇವನೆ, ದೈಹಿಕ ಚಟುವಟಿಕೆಗಳಿಲ್ಲದ  ಜೀವನ ವಿಧಾನದಿಂದಾಗಿ ಇಂದು ಮನುಷ್ಯನಿಗೆ ರೋಗರುಜಿನಗಳು ಅಂಟಿಕೊಳ್ಳುವದರೊಂದಿಗೆ ಮನುಷ್ಯನ ಆಯುಷ್ಯ ಕಡಿಮೆಯಾಗುತ್ತದೆ ಕಾರಣ ಆರೋಗ್ಯವಂತ ಜೀವನಕ್ಕೆ ಯೋಗ ಸಹಕಾರಿಯಾಗಿದೆ ಎಂದು ಮೂಡಲಗಿ ಪಿಎಸ್‍ಐ ಹಾಲಪ್ಪ ಬಾಲದಂಡಿ ಆಭಿಪ್ರಾಯ ಪಟ್ಟರು.

ಅವರು ಬುಧವಾರದಂದು ಪಟ್ಟಣದ ಮೂಡಲಗಿ ಶಿಕ್ಷಣ ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಾಹಾವಿದ್ಯಾಲಯ, ಬಿ.ಪಿ.ಎಡ್ ಹಾಗೂ ಎಂ.ಪಿ.ಎಡ್ ಮಹಾವಿದ್ಯಾಲಯ, ಎಸ್.ಎಸ್.ಆರ್ ಪ್ರೌಢ ಮತ್ತು ಪಿಯು ಕಾಲೇಜು, ಪ್ರಾಥಮಿಕ ಶಾಲೆ ಹಾಗೂ ಮಂಜುನಾಥ ಸೈನಿಕ ತರಬೇತಿ ಕೇಂದ್ರ ಆಶ್ರಯದಲ್ಲಿ ಹಮ್ಮಿಕೊಂಡಿದ್ದ 9ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು.

- Advertisement -

ಎಸ್.ಎಸ್.ಆರ್ ಪ.ಪೂ ಕಾಲೇಜಿನ ಉಪನ್ಯಾಸಕ ಪ್ರೊ.ಅಮರೀಶಗೌಡ ಪಾಟೀಲ, ಬಿ.ಪಿಎಡ್ ಎಂ.ಪಿ.ಎಡ್ ಮಹಾವಿದ್ಯಾಲಯದ ಎಲ್.ಬಿ. ಮನ್ನಾಪೂರ ಅವರ ಮಾರ್ಗದರ್ಶನದಲ್ಲಿ ಪದ್ಮಾಸನ, ವಜ್ರಾಸನ, ತಾಡಾಸನ, ಅರ್ಧಚಕ್ರಾಸನ, ಎಕಪಾದಾಸನ, ತ್ರಿಕೋನಾಸನ, ಭದ್ರಾಸನ ಸೇರಿದಂತೆ ವಿವಿಧ ಆಸನಗಳನ್ನು ಆಡಳಿತ ಮಂಡಳಿ  ಸದಸ್ಯರು, ಶಿಕ್ಷಕರು, ವಿದ್ಯಾರ್ಥಿಗಳು, ಮಂಜುನಾಥ ಸೈನಿಕ ತರಬೇತಿ ಕೇಂದ್ರ ಶಿಬಿರಾರ್ಥಿಗಳು, ಪೊಲೀಸ್ ಸಿಬ್ಬಂದಿಗಳು ಸಾರ್ವಜನಿಕರು ಹಾಕಿದರು. 

ಸಮಾರಂಭದ ಅಧ್ಯಕ್ಷತೆಯನ್ನು ಮೂಡಲಗಿ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಎಸ್.ಆರ್.ಸೋನವಾಲಕರ ವಹಿಸಿದ್ದರು. ವೇದಿಕೆಯಲ್ಲಿ ಸಂಸ್ಥೆಯ ನಿರ್ದೇಶಕರಾದ ರವೀಂದ್ರ ಸೋನವಾಲಕರ, ಬಿ.ಎಚ್.ಸೋನವಾಲಕರ, ಮಂಜುನಾಥ ಕೇಂದ್ರ ಮುಖ್ಯಸ್ಥ ಲಕ್ಷ್ಮಣ ಅಡಿಹುಡಿ ಉಪಸ್ಥಿತರಿದ್ದರು. 

ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ.ಸಂಗಮೇಶ ಗುಜಗೊಂಡ ಪ್ರಾಸ್ತಾವಿಕವಾಗಿ ಮಾತನಾಡಿದರು, ಪ್ರೊ.ಸುರೇಶ ಚಿತ್ರಗಾರ ಮತ್ತು ಭೀಮಶಿ ಬಡಗನ್ನವರ ನಿರೂಪಿಸಿದರು, ವಂದಿಸಿದರು.

- Advertisement -
- Advertisement -

Latest News

‘ಕೆಲವರು’ ದೇಶದ ಹೆಸರು ಕೆಡಿಸುತ್ತಿದ್ದಾರೆ – ನರೇಂದ್ರ ಮೋದಿ

ಹೊಸದೆಹಲಿ - ಕೆಲವರು ಮನಸಲ್ಲಿ ಅಸಹ್ಯವನ್ನಿಟ್ಟುಕೊಂಡು ದೇಶದ ಹೆಸರು ಕೆಡಿಸುತ್ತಿದ್ದಾರೆ ಎಂದು ಪ್ರಧಾನಿ ಮೋದಿ ಕಳೆದ ವಾರ ಅಮೇರಿಕದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾಷಣದ...
- Advertisement -

More Articles Like This

- Advertisement -
close
error: Content is protected !!
Join WhatsApp Group