Monthly Archives: January, 2023

ಗ್ರಾಮೀಣ ಪ್ರದೇಶಗಳಲ್ಲೂ ಹೆಚ್ಚಿದ ಆಂಗ್ಲ ಭಾಷಾ ನಾಮಫಲಕಗಳ ಹಾವಳಿ: ಡಾ.ಭೇರ್ಯ ರಾಮಕುಮಾರ್ ದೂರು

ಗ್ರಾಮೀಣ ಪ್ರದೇಶಗಳಲ್ಲೂ  ಆಂಗ್ಲ ಭಾಷಾ ನಾಮಫಲಕಗಳ ಹಾವಳಿ ಆರಂಭಗೊಂಡಿದ್ದು, ಕನ್ನಡ ಭಾಷೆಯ ಬಗ್ಗೆ ನಾಮಫಲಕಗಳಲ್ಲಿ ಅಸಡ್ಡೆ ತೋರಲಾಗುತ್ತಿದೆ ಎಂದು ಹಿರಿಯ ಸಾಹಿತಿ,ಪತ್ರಕರ್ತರಾದ ಡಾ.ಭೇರ್ಯ ರಾಮಕುಮಾರ್ ಆರೋಪಿಸಿದ್ದಾರೆ.ಈ ಬಗ್ಗೆ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕನ್ನಡ ಅಭಿವೃದ್ದಿ ಪ್ರಾಧಿಕಾರಗಳಿಗೆ ದೂರು ನೀಡಿರುವ ಅವರು ಮೈಸೂರು ಜಿಲ್ಲೆ ಕೆ.ಆರ್.ನಗರ ಟೌನ್ ನಲ್ಲಿ ಮೈಸೂರು-ಹಾಸನ ರಸ್ತೆಯಲ್ಲಿರುವ ಪೆಟ್ರೊಲ್ ಬಂಕ್...

ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ದಾಖಲೆಯ ಅಂತರದ ವಿಜಯಕ್ಕೆ ಶ್ರಮಿಸಿ- ದೇಶಪಾಂಡೆ

ಗೋಕಾಕ- ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಗೆಲುವು ನಿಶ್ಚಿತ. ಆದರೆ ಅವರ ದಾಖಲೆಯ ಗೆಲುವಿನ ಅಂತರವನ್ನು ಇಡೀ ರಾಜ್ಯವೇ ನೋಡುವಂತಾಗಲು ಕಾರ್ಯಕರ್ತರು ಶ್ರಮಿಸಬೇಕೆಂದು ಬಿಜೆಪಿ ಜಿಲ್ಲಾ ಪ್ರ.ಕಾರ್ಯದರ್ಶಿ ಸಂದೀಪ ದೇಶಪಾಂಡೆ ಹೇಳಿದರು.ಇಲ್ಲಿನ ಎನ್ಎಸ್ಎಫ್ ಕಚೇರಿಯಲ್ಲಿ ಅರಭಾವಿ ಬಿಜೆಪಿ ಮಂಡಲದಿಂದ  ವಿಜಯ ಸಂಕಲ್ಪ ಅಭಿಯಾನದ ಪ್ರಯುಕ್ತ ಜರುಗಿದ ಶಕ್ತಿ ಕೇಂದ್ರಗಳ ಪ್ರಮುಖರು ಮತ್ತು ಶಕ್ತಿ...

ನಾವೇಕೆ ನೈಸರ್ಗಿಕ ಕೃಷಿ ಮಾಡಬೇಕು?

ಒಬ್ಬರ ಅನ್ನವನ್ನು ಕಿತ್ತುಕೊಂಡು ಮತ್ತೊಬ್ಬರು ತಿನ್ನಲು ಬೋಧಿಸುವ ಆಧುನಿಕ ನಾಗರಿಕತೆಯ ಕರಾಳ ಛಾಯೆಯಿಂದ ರೈತ ಹೊರಬರಲು ನೈಸರ್ಗಿಕ ಕೃಷಿಯನ್ನು ಮಾಡಬೇಕಿದೆ. ಹಲವು ದಶಕಗಳಿಂದ ಆಧುನಿಕ ಕೃಷಿ ಹೆಸರಿನಲ್ಲಿ ಭೂಮಿಯನ್ನು ನಿರ್ಜೀವಮಾಡಿಬಿಟ್ಟಿದ್ದು, ಇಂತಹ ನಿರ್ಜೀವ ಮಣ್ಣಿಗೆ ಮರು ಜೀವ ತುಂಬುವ ಅಗತ್ಯವಿದೆ. ಬರಿ ಮನುಕುಲದ ಉಳಿವಿಗೆ ಮಾತ್ರವಲ್ಲ. ಇಡೀ ಜೀವ ಸಂಕುಲದ ಉಳಿವಿಗೆ ನೈಸರ್ಗಿಕ ಕೃಷಿಯ...

ಅರಭಾವಿ ಕಾಂಗ್ರೆಸ್; ಮನೆಯೊಂದು ಮೂರು ಬಾಗಿಲು !

ಮೂಡಲಗಿ: ಅರಭಾವಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಪರಿಸ್ಥಿತಿ ಮನೆಯೊಂದು ಮೂರು ಬಾಗಿಲಾದಂತಾಗಿದೆ ಎಂಬಂಥ ಮಾತುಗಳು ಕ್ಷೇತ್ರದಾದ್ಯಂತ ಕೇಳಿಬರುತ್ತಿದೆ.ಇದಕ್ಕೆ ಪುಷ್ಠಿ ಕೊಡುವಂತೆ ದಿ.೧೮ ರಂದು ಮೂಡಲಗಿಯ ಮಡ್ಡಿ ಈರಣ್ಣ ದೇವಸ್ಥಾನದಲ್ಲಿ ಕಾಂಗ್ರೆಸ್ ನಾಯಕ ಅರವಿಂದ ದಳವಾಯಿಯವರ ನೇತೃತ್ವದಲ್ಲಿ ಅರಭಾವಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ವಕ್ತಾರ ಹಾಗೂ ಕಾರ್ಯದರ್ಶಿಗಳ ನೇಮಕ ಸಭೆ ನಡೆದಿದ್ದು ಇದರಲ್ಲಿ ಪ್ರಮುಖರಾದ ಲಕ್ಕಣ್ಣ ಸವಸುದ್ದಿ,...

ಭಾರತೀಯರ ಸಂಪತ್ತು ಗೋಮಾತಾ; ಅದರ ರಕ್ಷಣೆಗೆ ನಾವೆಲ್ಲರೂ ಕಂಕಣಬದ್ಧರಾಗಬೇಕು: ಸಂಸ್ಕೃತಿ ಚಿಂತಕ ಡಾ. ಗುರುರಾಜ ಪೋಶೆಟ್ಟಿಹಳ್ಳಿ ಅಭಿಮತ

ಬೆಳಗಾವಿ: ಗೋಮಾತೆಯ ಒಂದೊಂದು  ಅವಯವದಲ್ಲಿಯೂ ದೇವತೆಗಳು  ನೆಲೆಸಿದ್ದಾರೆ. ಅಂತಹ ಕಾಮಧೇನುವಿನ  ಸೇವೆ ಮಾಡುವುದು ನಮ್ಮೆಲ್ಲರಕರ್ತವ್ಯವಾಗಿದೆ. ಗೋವಿನ ಪ್ರತಿಯೊಂದು  ವಸ್ತು ಅನೇಕ ಬಗೆಯಲ್ಲಿ ಉಪಯೋಗಕ್ಕೆಬರುತ್ತದೆ. ಗೋಸಂತತಿಯನ್ನು  ನಾವೆಲ್ಲರೂ  ಉಳಿಸಿ ಬೆಳೆಸಬೇಕಾಗಿದೆ ಎಂದು ಸಂಸ್ಕೃತಿ ಚಿಂತಕ ಡಾ. ಗುರುರಾಜ ಪೋಶೆಟ್ಟಿಹಳ್ಳಿಅಭಿಪ್ರಾಯ ಪಟ್ಟರು.    ಬೆಳಗಾವಿಯ ಭೂಕೈಲಾಸ ಪುಣ್ಯಕ್ಷೇತ್ರ ಮುಕ್ತಿಮಠದಲ್ಲಿ ಜಾತ್ರಾ ಮಹೋತ್ಸವದ  ಅಂಗವಾಗಿ ನಡೆಯುತ್ತಿರುವ ಧರ್ಮಸಭೆಯ ಗೋಮಾತಾ ದೇವೋಭವಕಾರ್ಯಕ್ರಮದಲ್ಲಿ ಆಶಯ ಭಾಷಣಮಾಡುತ್ತಾ ಅವರು ನುಡಿದರು.           ಇದೇ ಸಂದರ್ಭದಲ್ಲಿ  ಶ್ರೀ ಕ್ಷೇತ್ರ ಮುಕ್ತಿ ಮಠದ ಪೀಠಾಧ್ಯಕ್ಷರಾದಧರ್ಮಶ್ರೀ ತಪೋರತ್ನ ಶಿವಸಿದ್ಧಸೋಮೇಶ್ವರ ಶಿವಾಚಾರ್ಯ  ಮಹಾಸ್ವಾಮಿಗಳು ಡಾ. ಗುರುರಾಜಪೋಶೆಟ್ಟಿಹಳ್ಳಿರವರ ಸಾಂಸ್ಕೃತಿಕಪರಿಚಾರಿಕೆಗೆ ‘ವಿದ್ಯಾ ವಾರಿಧಿ’   ಎಂಬಉಪಾಧಿ ಸಹಿತ ಸನ್ಮಾನಿಸಿದರು. ಶಹಬಂದರನ ಸಮಾಜ ಸೇವಕ ಮತ್ತು ಕರ್ನಾಟಕ ರಕ್ಷಣಾ ವೇದಿಕೆ  ಬೆಳಗಾವಿ ಜಿಲ್ಲೆ ಉಪಾಧ್ಯಕ್ಷ ರಾಜು ಮ.ನಾಶಿಪುಡಿ ಮೊದಲಾದವರು...

ತಾಯಿ ಮಕ್ಕಳ ಸಂದೇಹಾತ್ಮಕ ಸಾವು

  ಬೀದರ್ ನಲ್ಲಿ  ಒಂದು ಮನಕಲಕುವ ಘಟನೆ ಬೀದರ - ನೇಣು ಬಿಗಿದ ಸ್ಥಿತಿಯಲ್ಲಿ ತಾಯಿ, ಮಲಗಿದ್ದ ಸ್ಥಳದಲ್ಲೇ ಇಬ್ಬರು ಮಕ್ಕಳು ಶವವಾಗಿ ಪತ್ತೆಯಾಗಿರುವ ಮನಕಲಕುವ ಘಟನೆ ಬೀದರನಿಂದ ವರದಿಯಾಗಿದೆ.ಬೀದರ್ ನ ಭಾಲ್ಕಿ ತಾಲೂಕಿನ ನೀಲಮನಳ್ಳಿ ತಾಂಡಾದಲ್ಲಿ ಘಟನೆ ನಡೆದಿದ್ದು.ಮೀರಾಬಾಯಿ ದಯಾನಂದ(೨೪) ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದ್ದು ಅದೇ ಕೋಣೆಯಲ್ಲಿ ನಾಲ್ಕು ವರ್ಷ, ೨.೫ ವರ್ಷದ...

ಕೇಂದ್ರೀಯ ಪರೀಕ್ಷೆಗಳು ಕನ್ನಡದಲ್ಲಿಯೇ ನಡೆಸಲು ಕೇಂದ್ರ ಸರ್ಕಾರಕ್ಕೆ ಶಾಸಕ ಬಾಲಚಂದ್ರ ಜಾರಕಿಹೊಳಿ ಮನವಿ

ಕನ್ನಡದಲ್ಲಿ ಪರೀಕ್ಷೆಗಳು ನಡೆದರೇ ಕನ್ನಡಿಗರಿಗೆ ಹೆಚ್ಚಿನ ಪ್ರಮಾಣದಲ್ಲಿ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ ಶಿವಾಪೂರ(ಹ) ಗ್ರಾಮದಲ್ಲಿ ಜರುಗಿದ ಮೂಡಲಗಿ ತಾಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿದ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಶಿವಾಪೂರ(ಹ)(ತಾ:ಮೂಡಲಗಿ: ಪಾರಿಜಾತ ಪಿತಾಮಹ ಕುಲಗೋಡ ತಮ್ಮಣ್ಣ ವೇದಿಕೆ : ಕೇಂದ್ರ ಸರ್ಕಾರದ ಅಧೀನದಲ್ಲಿ ನಡೆಯುತ್ತಿರುವ ಸ್ಪರ್ಧಾತ್ಮಕ ಪರೀಕ್ಷೆಗಳು ಕನ್ನಡದಲ್ಲಿಯೇ ನಡೆಯಬೇಕು. ಇದರಿಂದ ನಮ್ಮ ರಾಜ್ಯದ ಅಭ್ಯರ್ಥಿಗಳಿಗೆ...

ಖದಿರಾ

ಖದಿರಾ ದಶಮೂಲ ಅರಿಷ್ಟದಲ್ಲಿ ಉಪಯೋಗಿಸುವ ಒಂದು ಮೂಲ.ದೈವಿಕವಾಗಿ ಯಜ್ಞದಲ್ಲಿ ಉಪಯೋಗ.ಗಿಡದಲ್ಲಿ ಮುಳ್ಳು ಹೊಂದಿದ್ದರು ತುಂಬಾ ಔಷಧೀಯ ಗುಣವನ್ನೂ ಹೊಂದಿದೆ.ಇದರ ಸೊಪ್ಪು ಚಕ್ಕೆ ಕಾಯಿ ಇವುಗಳು ಹೆಚ್ಚು ಔಷಧಿಯ ರೂಪದಲ್ಲಿ ಉಪಯುಕ್ತ.ಚಕ್ಕೆಯನ್ನು ಕುದಿಸಿ ಕಷಾಯ ಮಾಡಿ ಬೆಲ್ಲ ಹಾಕಿ ಕುಡಿಯುವುದರಿಂದ ಕೆಮ್ಮು ನಿವಾರಣೆ ಆಗುತ್ತದೆ. ಚಕ್ಕೆಯನ್ನು ಎಣ್ಣೆಯಲ್ಲಿ ಕುದಿಸಿ ಹಚ್ಚುವುದರಿಂದ ಚರ್ಮರೋಗ ನಿವಾರಣೆಯಾಗುತ್ತದೆ. ಚಕ್ಕೆಯ...

ಯಶಸ್ಸಿಗೆ ಸಾಮರ್ಥ್ಯ ಮತ್ತು ಪ್ರಯತ್ನ ಮುಖ್ಯ: ಡಾ.ಶಿವಕುಮಾರ ಸ್ವಾಮೀಜಿ

ಮೂಡಲಗಿ: ದೊಡ್ಡ ದೊಡ್ಡವರ ಮಾತುಗಳನ್ನು ಕೇಳಿದರೆ ಮನುಷ್ಯ ದೊಡ್ಡ ವ್ಯಕ್ತಿಯಾಗುವುದಿಲ್ಲ,  ಬದಲಾಗಿ ದೊಡ್ಡ ದೊಡ್ಡ ಕನಸುಗಳನ್ನು ಕಾಣಬೇಕು, ಆ ಕನಸಿನ ಮೇಲೆ ಆತ್ಮವಿಶ್ವಾಸ ಇರಬೇಕು, ಜೊತೆ ಜೊತೆಗೆ ತ್ಯಾಗ ಮನೋಭಾವದಿಂದ ನೀತಿ ಮಾರ್ಗದಲ್ಲಿ ಸಾಮರ್ಥ್ಯವನ್ನು ಬೆಳೆಸಿಕೊಳ್ಳುತ್ತ ಪ್ರಯತ್ನಶೀಲರಾಗ ಬೇಕು ಆಗ ಕೀರ್ತಿ ಗೌರವಗಳು ನಮ್ಮನ್ನು ಹುಡುಕಿಕೊಂಡು ಬರುತ್ತವೆ ಎಂದು ಬೀದರ್ ಚಿದಂಬರಾಶ್ರಮ ಸಿದ್ಧಾರೂಢ ಮಠದ...

ಲೋಕ ಕಲ್ಯಾಣಕ್ಕಾಗಿ ಹೋಮ ಹವನ

ಗುರ್ಲಾಪೂರ: ಸಮೀಪದ ಇಟ್ನಾಳ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಮಾರ್ತಾಂಡ ಮಲ್ಲಯ್ಯ ದೇವಸ್ಥಾನದಲ್ಲಿ ಮಕರ ಸಂಕ್ರಾಂತಿ ನಿಮಿತ್ತ ಸಕಲ ಜೀವರಾಶಿಗಳ ಲೋಕ ಕಲ್ಯಾಣಕ್ಕಾಗಿ ಮಾರ್ತಾಂಡ ಮಲ್ಲಯ್ಯ ಆರಾಧಕರಾದ ಶ್ರೀ ಸಿದ್ಧೇಶ್ವರ ಶರಣರ ಸಾನ್ನಿಧ್ಯದಲ್ಲಿ ಹೋಮ ಹವನದ ಮಹಾಪೂಜೆ ನೇರವೆರಿಸಲಾಯಿತು.ದಿನವಿಡಿ ಭಜನೆ ಚೌಡಕಿ ಪದ ಇನ್ನೂ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಸಾವಿರಾರು ಭಕ್ತರು ತಮ್ಮ...
- Advertisement -spot_img

Latest News

ಪ್ರಗತಿಪರ ಕೃಷಿಕರು ನಟರು ಪುಟ್ಟಸ್ವಾಮಿಗೌಡ ಆರ್.ಕೆ.

ಪುಟ್ಟಸ್ವಾಮಿಗೌಡ ಆರ್. ಕೆ. ರಂಗಭೂಮಿ ನಟ ಪ್ರಗತಿ ಪರ ಕೃಷಿಕರು. ಮೊನ್ನೆ ಮೈಸೂರಿನಲ್ಲಿ ಚೆನ್ನರಾಯಪಟ್ಟಣದ ಡಾ.ಚಂದ್ರ ಕಾಳೇನಹಳ್ಳಿ ರಚನೆ ನಿರ್ವಹಣೆಯಲ್ಲಿ ದಸರಾ ಉತ್ಸವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ...
- Advertisement -spot_img
error: Content is protected !!
Join WhatsApp Group