ಎಂ.ಕೆ. ಹುಬ್ಬಳ್ಳಿ: ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದಿಂದ ನೀಡುವ ‘ಗಡಿನಾಡ ಚೇತನ ರಾಜ್ಯ ಪ್ರಶಸ್ತಿ’ಗೆ ಆಯ್ಕೆಯಾದ ಬೆಳಗಾವಿಯ ಹಿರಿಯ ಸಾಹಿತಿ, ರಂಗಕರ್ಮಿ, ಶಿಕ್ಷಣ ತಜ್ಞ ಪ್ರೊ.ಬಿ.ಎಸ್.ಗವಿಮಠ ಅವರನ್ನು ಸನ್ಮಾನಿಸಲಾಯಿತು.
ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಮೋಹನ ಬಸನಗೌಡ ಪಾಟೀಲ ಮಾತನಾಡಿ, ನಾಡು, ನುಡಿ, ಸಾಹಿತ್ಯ ಹಾಗೂ ಕನ್ನಡ ಭಾಷೆಗಾಗಿ ಸೇವೆ...
ಸಿಂದಗಿ: ಇತ್ತಿಚೆಗೆ ಮರಗೂರ ಸಕ್ಕರೆ ಕಾರ್ಖಾನೆಯ ನಿರ್ದೆಶಕರ ಚುನಾವಣೆ ಜರುಗಿತು. ಸಿಂದಗಿ ತಾಲೂಕಿನ ಹೂನಳ್ಳಿ ಗ್ರಾಮದ ಮಾಜಿ ಜಿಪಂ ಸದಸ್ಯ ಸಿದ್ದರಾಮ ಪಾಟೀಲ ಅವರ ಧರ್ಮಪತ್ನಿ ಸರೋಜಿನಿ ಪಾಟೀಲರು ಅತ್ಯಧಿಕ ಮತಗಳ ಅಂತರದಿಂದ ಆಯ್ಕೆಯಾಗಿದ್ದಾರೆ. ಅವರಿಗೆ ತಾಲೂಕಿನ ಪಂಚಮಸಾಲಿ ಸಮಾಜವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ತಾಲೂಕಾಧ್ಯಕ್ಷ ಎಂ.ಎಂ.ಹಂಗರಗಿ, ಪ್ರಧಾನ ಕಾರ್ಯದರ್ಶಿ ಆನಂದ ಶಾಬಾದಿ, ಮೀಸಲಾತಿ...
ಮೂಡಲಗಿ - ಪಟ್ಟಣದ ಯುವ ಗಾಯಕ ಪ್ರಜ್ವಲ್ ಪುಟಾಣಿ, ಇವನ ಸ್ವರ ಮಾಧುರ್ಯಕ್ಕೆ ಪ್ರೇಕ್ಷಕರು ಮನಸೋಲದವರೆ ಇಲ್ಲ.
ಈತನ ಗಾಯನ ಹಾಗೂ ಸಾಹಿತ್ಯದ ಹಿರಿಮೆಗೆ ಒಲಿದು ಬಂದ ಪ್ರಶಸ್ತಿ.
ಧಾರವಾಡದ ಕನ್ನಡ ಸಾಹಿತ್ಯ ಪರಿಷತ್ತು ಆರ್.ಎನ್.ಶಟ್ಟಿ ಕ್ರೀಡಾಂಗಣದಲ್ಲಿ ನಡೆದ ಚೇತನ ಫೌಂಡೇಶನ್ ಕರ್ನಾಟಕ ಸಾಮ್ರಾಟ ಇವರು ಪ್ರಜ್ವಲ್ ಯವ ಗಾಯಕನನ್ನು ಗುರ್ತಿಸಿ, ಗಾನ ಗಂಧರ್ವ ಡಾllಪಂಡಿತ ಪುಟ್ಟರಾಜ...
‘ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಬೇಕು’
ಮೂಡಲಗಿ: ‘ಶಾಲಾ ಮಕ್ಕಳು ವಿಜ್ಞಾನ, ತಂತ್ರಜ್ಞಾನ ಮತ್ತು ಸಂಶೋಧನಾ ಪ್ರಕ್ರಿಯೆಯಲ್ಲಿ ತೊಡಗುವಂಥ ಕಾರ್ಯಚಟುವಟಿಕೆಗಳು ಶಾಲೆಗಳಲ್ಲಿ ನಿರಂತರವಾಗಿ ನಡೆಯಬೇಕು’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ ಮನ್ನಿಕೇರಿ ಹೇಳಿದರು.
ಮೂಡಲಗಿ ತಾಲ್ಲೂಕಿನ ವಡೇರಹಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗ್ರಾಮ ಪಂಚಾಯ್ತಿಯಿಂದ ರೂ. 2 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಡಾ. ಎ.ಪಿ.ಜಿ. ಅಬ್ದುಲ್‍ಕಲಾಂ...
ಚಾಮರಾಜನಗರ-88ನೇ ತ್ರಿಮೂರ್ತಿ ಶಿವ ಜಯಂತಿ ಮಹೋತ್ಸವ ಹಾಗೂ ವಿಶ್ವ ಪ್ರಸಿದ್ದ ದ್ವಾದಶ ಜ್ಯೋತಿರ್ಲಿಂಗಗಳ ಪುಣ್ಯ ದರ್ಶನ ಮೇಳ ಉದ್ಘಾಟನಾ ಸಮಾರಂಭ ಮಾ 6 ರಂದು ಸಂಜೆ 4ಕ್ಕೆ ಪ್ರಮುಖ ಬೀದಿಗಳಲ್ಲಿ ಜಿಲ್ಲೆಯ ರಾಜಯೋಗ ವಿದ್ಯಾರ್ಥಿಗಳಿಂದ ಶಾಂತಿ ಶೋಭಾ ಯಾತ್ರೆ, 5.30 ಕ್ಕೆ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗ ನಡೆಯಲಿದೆ ಎಂದು ಸ್ವಾಮಿ ವಿವೇಕಾನಂದ ರಾಷ್ಟ್ರ ರಾಜ್ಯ...
ಬೆಳಗಾವಿ: ಹತ್ತು ವರ್ಷಗಳ ಹಿಂದೆ ಜಗತ್ತಿನಲ್ಲಿ ದುರ್ಬಲ ಆರ್ಥಿಕತೆಯ ರಾಷ್ಟ್ರ ಎಂದೇ ಬಿಂಬಿತವಾಗಿದ್ದ ಭಾರತ, ಈಗ ಪ್ರಧಾನಿ ನರೇಂದ್ರ ಮೋದಿ ಅವರ ದಕ್ಷ, ಸಮರ್ಥ ಆಡಳಿತದ ಪರಿಣಾಮ ಐದನೇ ಶಕ್ತಿಯುತ ರಾಷ್ಟ್ರ ವಾಗಿ ಹೊರಹೊಮ್ಮಿದೆ. ಇದನ್ನು ಮೂರನೇ ಸ್ಥಾನಕ್ಕೆ ಕೊಂಡೊಯ್ಯುವ ಗುರಿ ಹೊಂದಲಾಗಿದೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದ್ದಾರೆ.
ಬೆಳಗಾವಿ ಆಂಜನೇಯ ನಗರ...
ಹುನಗುಂದ: ಬಾಗಲಕೋಟಿ ಜಿಲ್ಲೆಯ ಹಿರಿಯ ಪತ್ರಕರ್ತ ರಾಮ ಮನಗೂಳಿ ನಿಧನದ ಹಿನ್ನೆಲೆಯಲಿ ಹುನಗುಂದ ಕಾರ್ಯ ನಿರತ ಪತ್ರಕರ್ತರ ಸಂಘದಿ೦ದ ಶ್ರದ್ದಾಂಜಲಿ ಅರ್ಪಿಸಲಾಯಿತು.
ಶನಿವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ದಿ.ರಾಮ ಮನಗೂಳಿ ಅವರ ಶ್ರದ್ದಾಂಜಲಿ ಸಭೆ ಮತ್ತು ನುಡಿ ನಮನ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಮಲ್ಲಿಕಾರ್ಜುನ ದರಗಾದ ಮಾತನಾಡಿ, ದಿ.ರಾಮ ಮನಗೂಳಿ ಪತ್ರಿಕಾರಂಗದಲ್ಲಿ ಅವರಿಗೆ ಅವರೇ ಸಾಟಿಯಾಗಿದ್ದರು,...
ಜಿಎಸ್‍ಎಸ್ ಎಂದೇ ಖ್ಯಾತಿ ಪಡೆದ ಜಿ.ಎಸ್.ಶಿವರುದ್ರಪ್ಪನವರು ಕನ್ನಡ ಸಾಹಿತ್ಯದಲ್ಲಿ ಪ್ರಬುದ್ಧ ವಿಮರ್ಶಕರು. ಗೋವಿಂದ ಪೈ, ಕುವೆಂಪು ನಂತರ 2006ರಲ್ಲಿ ರಾಷ್ಟ್ರಕವಿ ಗೌರವಕ್ಕೆ ಪಾತ್ರರಾದವರು. ಸಮನ್ವಯ ಕವಿ ಎಂದೇ ಗುರುತಿಸಲ್ಪಟ್ಟ ಜಿ.ಎಸ್.ಎಸ್.ರವರ ಕಾವ್ಯದಲ್ಲಿ ಬದುಕು ಮತ್ತು ಚಿಂತನೆಗಳು ಅನಾವರಣಗೊಂಡಿವೆ ಎಂದು ಶಿಕ್ಷಕಿ ಕಲಾವಿದೆ ರಾಣ ಚರಾಶ್ರೀ ತಿಳಿಸಿದರು.
ಹಾಸನದ ಆದಿಚುಂಚನಗಿರಿ ಕಲ್ಯಾಣ ಮಂಟಪ ಪಕ್ಕದ ಗಣಪತಿ ದೇವಸ್ಥಾನ...
ಸವದತ್ತಿಃ ಇಲ್ಲಿಯ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯಲದಲ್ಲಿ ಸಮನ್ವಯ ಶಿಕ್ಷಣ ಸಂಪನ್ಮೂಲ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕ ಸಾಹಿತಿ ವೈ.ಬಿ.ಕಡಕೋಳ ಅಪ್ನಾದೇಶ ಫೌಂಡೇಶನ್ ನ ನೂತನ ಅಧ್ಯಕ್ಷರಾಗಿ ಆಯ್ಕೆ ಆಗಿರುವರು.
೨೦೧೧ ರಲ್ಲಿ ಧಾರವಾಡದಲ್ಲಿ “ಅಪ್ನಾದೇಶ” ಎಂಬ ಸಂಘಟನೆ ಜನ್ಮ ತಾಳಿತು. ಇದಕ್ಕೆ ಸ್ಪೂರ್ತಿ ಅಂದಿನ ಐ.ಎ.ಎಸ್. ಅಧಿಕಾರಿ ಭರತಲಾಲ್ ಮೀನಾ. ಶಿಕ್ಷಕರು, ಸಮಾಜ ಚಿಂತಕರು, ನ್ಯಾಯವಾದಿಗಳು,...
ಹಿಂದೂಸ್ಥಾನಿ ಸಂಗೀತದ ಗಾನಸಾಮ್ರಾಜ್ಞಿ ಎನಿಸಿದ್ದ ಗಂಗೂಬಾಯಿ ಹಾನಗಲ್ ಅವರು ಹುಟ್ಟಿದ ದಿನ ಮಾರ್ಚ್ 5. ಅಂದಿನ ದಿನದಲ್ಲಿ ಮೈಸೂರಿನಲ್ಲಿ ಬದುಕನ್ನು ಕಳೆದ ನಮಗೆ ಹಿಂದೂಸ್ಥಾನಿ ಸಂಗೀತದ ಹೆಚ್ಚು ಪರಿಚಯವಿರಲಿಲ್ಲ. ದಸರೆಯ ಸಂದರ್ಭದಲ್ಲಿ ಮೈಸೂರಿನ ಅರಮನೆಯಲ್ಲಿ ದೀಪಗಳೆಲ್ಲಾ ಜಗಮಗಿಸುತ್ತಿದ್ದ ಒಂದು ದಿನ ಆ ಇಡೀ ವಾತಾವರಣವನ್ನೆಲ್ಲಾ ತಮ್ಮ ದೇವಗಾನದಲ್ಲಿ ತುಂಬಿಸುತ್ತಿದ್ದ ಗಂಗೂಬಾಯಿ ಹಾನಗಲ್ಲರ ಮೋಡಿ ನಮ್ಮನ್ನೆಲ್ಲಾ...
ಹನಿಗವನಗಳು
1) ಸುಳ್ಳುಗಾರರು
ಹತ್ತು ನಾಲಿಗೆಯ
ರಾವಣ ಹೇಳಲಿಲ್ಲ
ಒಂದು ಸುಳ್ಳು
ಒಂದೇ ನಾಲಿಗೆಯ
ರಾಜಕಾರಣಿ ಹೇಳುತ್ತಾನೆ
ದಿನಕ್ಕತ್ತು ಸುಳ್ಳು!
2) ಶೀಲಾ
ನೆರೆಮನೆ ಶೀಲಾ
ಪರ ಪುರುಷರೊಡನೆ
ಸೇರಿ
ಹೆಸರು ಕೆಡಿಸಿಕೊಂಡಳು
3) ಟಿವಿ ಹಾವಳಿ
ಮನೆಯಲ್ಲಿ
ಟಿವಿ ಮುಂದೆ
ಸದಾ ಇರುವ
ವಿದ್ಯಾ ರ್ಥಿಗಳು
ಶಾಲೆಯಲ್ಲಿ
ಹಿಂದೆ ಬೀಳುವರು.
4) ವಾಸ್ತವ
ಕಟ್ಟುವವು...