spot_img
spot_img

ಆರೋಗ್ಯ ಸೇವೆಯಲ್ಲಿ ಪ್ರಾಮಾಣಿಕತೆ-ಕಳಕಳಿ ಬಹು ಮುಖ್ಯ – ಶ್ರೀ ಶಿವಾನಂದ ಗುರೂಜಿ

Must Read

- Advertisement -

ರಮೇಶ್ ಪಿ.ಎಂ. ರವರಿಗೆ ಸನ್ಮಾನ

ಬೆಳಗಾವಿ: ಪೂರ್ವಜನ್ಮದ ಪುಣ್ಯವಿದ್ದವರಿಗೆ ಮಾತ್ರ ಆರೋಗ್ಯ ಇಲಾಖೆಯಲ್ಲಿ ಸೇವೆ ಮಾಡುವ ಭಾಗ್ಯ ಲಭಿಸಿರುತ್ತದೆ. ಅನೇಕ ಜನ ಹಲವಾರು ರೋಗಗಳಿಂದ ಬಳಲುತ್ತಾ ಜೀವನದಲ್ಲಿ ತೊಂದರೆ ಅನುಭವಿಸುತ್ತಿರುವವರು ಬಡ ಜನರು ಸರಕಾರಿ ಆಸ್ಪತ್ರೆಗೆ ಬರುತ್ತಾರೆ. ಈಗಿನ ದಿನಗಳಲ್ಲಿ ಖಾಸಗಿ ಆರೋಗ್ಯ ಸಂಸ್ಥೆಗಳಲ್ಲಿ ಆರೋಗ್ಯ ಸೇವೆ ಅತ್ಯಂತ ದುಬಾರಿಯಾಗಿದ್ದು ಸರಕಾರಿ ಆಸ್ಪತ್ರೆಗೆ ಬರುವ ಬಡವ ಬಲ್ಲಿದ ಜನರಿಗೆ ಆರೋಗ್ಯ ಇಲಾಖೆಯವರು ಪ್ರಾಮಾಣಿಕತೆಯಿಂದ ಕಳಕಳಿಯನ್ನಿಟ್ಟುಕೊಂಡು ಸೇವೆ ನೀಡಿದಾಗ ಮಾತ್ರ ನಮ್ಮ ಸಮಾಜ ಸಂತೋಷದಿಂದ ಇರಲು ಸಾಧ್ಯವೆಂದು ನಿಲಜಿಯ ಅಲೌಕಿಕ ಧ್ಯಾನ ಮಂದಿರದ ಶ್ರೀ ಶಿವಾನಂದ ಗುರೂಜಿ ಆರ್ಶಿವಚನ ನೀಡುತ್ತಾ ಅಭಿಪ್ರಾಯಪಟ್ಟರು.

ನಿಲಜಿಯ ಅಲೌಕಿಕ ಧ್ಯಾನ ಮಂದಿರದಲ್ಲಿ ಯುಕ್ತಿ ಪೌಂಡೇಶನ್, ಆಶ್ರಯ ಪೌಂಡೇಶನ್ ಮತ್ತು ಅಲೌಕಿಕ ಧ್ಯಾನ ಮಂದಿರ ನಿಲಜಿ ಇವರುಗಳ ಸಂಯುಕ್ತಾಶ್ರಯದಲ್ಲಿ ಕಸಾಪ ಖಾನಾಪೂರ ತಾಲೂಕಾ ಗೌರವ ಕಾರ್ಯದರ್ಶಿ ಕಿರಣ ಸಾವಂತನವರ ಇವರ ನೇತೃತ್ವದಲ್ಲಿ ಆಯೋಜಿಸಿದ್ದ ಆರೋಗ್ಯ ಮತ್ತು ಕು.ಕ ಇಲಾಖೆ ಬೆಂಗಳೂರು ನಿರ್ದೇಶನಾಲಯದ ಕಛೇರಿ ಅಧೀಕ್ಷಕ ರಮೇಶ ಪಿ.ಎಂ. ರವರು ಕರ್ನಾಟಕ ರಾಜ್ಯ ಸರಕಾರಿ ನೌಕರ ಸಂಘ ಬೆಂಗಳೂರು ರಾಜ್ಯಪರಿಷತ್ ಸದಸ್ಯರಾಗಿ ಬಹುಮತದಿಂದ ಜಯಗಳಿಸಿದ ಹಿನ್ನಲೆಯಲ್ಲಿ ಗೌರವ ಸನ್ಮಾನ ಮತ್ತು ಗುರುಕುಲ ವಿದ್ಯಾರ್ಥಿಗಳು ಆಶ್ರಯ ಪೌಂಡೇಶನ್ ಬೆಳಗಾವಿಯ ವಿಶೇಷ ಮಕ್ಕಳ ಜೊತೆಗೂಡಿ ಗೋವು ಸೇವೆಯ ಕಾರ್ಯಕ್ರಮದ ಸಾನ್ನಿಧ್ಯವನ್ನು ವಹಿಸಿ ಅವರು ಮಾತನಾಡಿದರು.

- Advertisement -

ಕಾರ್ಯಕಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಕ.ರಾ.ಸ.ನೌ ಸಂಘದ ರಾಜ್ಯಪರಿಷತ್ ಸದಸ್ಯ ರಮೇಶ ಪಿ.ಎಂ. ನೌಕರ ಸಂಘದ ಮುಖಾಂತರ ಆರೋಗ್ಯ ಇಲಾಖೆಯ ಸಮಸ್ಯೆಗಳ ಬಗ್ಗೆ ಹೆಚ್ಚಿನ ಗಮನ ನೀಡುವುದರೊಂದಿಗೆ ನಿರಂತರವಾಗಿ ಅನ್ಯಾಯದ ವಿರುದ್ದ ಹೋರಾಟದೊಂದಿಗೆ ಸಾರ್ವಜನಿಕ ಸೇವೆಗೂ ಹೆಚ್ಚಿನ ಮಹತ್ವ ನೀಡುವುದಾಗಿ ಹೇಳಿದರು.

ಆಶ್ರಯ ಪೌಂಡೇಶನ್ ಬೆಳಗಾವಿ ಅಧ್ಯಕ್ಷೆ ಶ್ರೀಮತಿ ನಾಗರತ್ನಾ ರಾಮಗೌಡ ರವರನ್ನೂ ಅವರ ಸಾಮಾಜಿಕ ಸೇವೆಯನ್ನು ಗಣನೆಗೆ ತೆಗೆದುಕೊಂಡು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಕಳೆದ ಹಲವು ವರ್ಷಗಳಿಂದ ಹೆಚ್.ಐ.ವಿ ಪೀಡಿತ 18 ವರ್ಷ ಮೆಲ್ಪಟ್ಟ ಯುವತಿಯರನ್ನು ಆಶ್ರಯ ಪೌಂಢೇಶನ್ ವತಿಯಿಂದ ಶಿಕ್ಷಣ ವಸತಿಯೊಂದಿಗೆ ಸಂಪೂರ್ಣ ಜವಾವ್ದಾರಿಯನ್ನು ವಹಿಸಿಕೊಂಡು ಸೇವೆ ಸಲ್ಲಿಸಲಾಗುತ್ತಿದೆ. ಈ ಕಾರ್ಯಕ್ಕೆ ಸಾರ್ವಜನಿಕರ ಸಹಾಯ ಸಹಕಾರ ಅತ್ಯಗತ್ಯವಾಗಿದೆ ಎಂದರು.

- Advertisement -

ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಸರಕಾರಿ ನೌಕರ ಸಂಘದ ಸವದತ್ತಿ ತಾಲೂಕಿನ ನಿರ್ದೇಶಕರುಗಳಾದ ಸುಭಾಸ ಹುಜರತ್ತಿ, ಶಶಿಧರ ಉಪ್ಪಿನ, ಹನಮಂತ ಪಚ್ಚಿನವರ, ಮಂಜುನಾಥ ಜಡಗನ್ನವರ, ಆರೋಗ್ಯ ಇಲಾಖೆಯ ನಿರ್ದೇಶನಾಲಯದ ನಂದೀಶಕುಮಾರ, ಸುಮಂತಕುಮಾರ, ರಮೇಶ, ನಾಗೇಂದ್ರ, ಇನ್ನಿತರರು ಉಪಸ್ಥಿತರಿದ್ದರು.

ಮೊದಲಿಗೆ ಕಿರಣ ಸಾವಂತನವರ ಸ್ವಾಗತಿಸಿದರು. ಎಸ್.ಬಿ.ಮೇಳೆದ ವಂದಿಸಿದರು. ಆಕಾಶ ಥಬಾಜ ಕಾರ್ಯಕ್ರಮ ನಿರೂಪಿಸಿದರು.

*ಮಾಹಿತಿ:ವರದಿ:*
ಆಕಾಶ್ ಅರವಿಂದ ಥಬಾಜ
ಬೆಳಗಾವಿ
9448634208
9035419700

*ಪೋಟೋ ಕ್ಯಾಪ್ಶನ್:* ಆರೋಗ್ಯ ಮತ್ತು ಕು.ಕ ಇಲಾಖೆ ಬೆಂಗಳೂರು ನಿರ್ದೇಶನಾಲಯದ ಕಛೇರಿ ಅಧೀಕ್ಷಕ ರಮೇಶ ಪಿ.ಎಂ. ರವರು ಕರ್ನಾಟಕ ರಾಜ್ಯ ಸರಕಾರಿ ನೌಕರ ಸಂಘ ಬೆಂಗಳೂರು ರಾಜ್ಯಪರಿಷತ್ ಸದಸ್ಯರಾಗಿ ಬಹುಮತದಿಂದ ಜಯಗಳಿಸಿದ ಹಿನ್ನಲೆಯಲ್ಲಿ ಅಲೌಕಿಕ ಧ್ಯಾನÀ ಮಂದಿರದ ಪೂಜ್ಯ ಶ್ರೀ ಶಿವಾನಂದ ಗುರೂಜಿ ಸಾನಿಧ್ಯದಲ್ಲಿ ಗೌರವ ಸನ್ಮಾನ. ಕಿರಣ ಸಾವಂತನವರ, ಆಕಾಶ ಥಬಾಜ, ಎಸ್.ಬಿ.ಮೇಳೆದ, ಶ್ರೀಮತಿ ನಾಗರತ್ನಾ ರಾಮಗೌಡ ಹಾಗೂ ಇನ್ನೀತರರನ್ನು ಚಿತ್ರದಲ್ಲಿ ಕಾಣಬಹುದು.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ವಚನ ವಿಶ್ಲೇಷಣೆ : ಕಾಯದ ಜೀವದ ಹೊಲಿಗೆ

*ಕಾಯದ ಜೀವದ ಹೊಲಿಗೆ* ----------------------------------- ದೇಹಭಾವವಳಿದಲ್ಲದೆ ಜೀವಭಾವವಳಿಯದು. ಜೀವಭಾವವಳಿದಲ್ಲದೆ ಭಕ್ತಿಭಾವವಳವಡದು. ಭಕ್ತಿಭಾವವಳವಟ್ಟಲ್ಲದೆ ಅರಿವು ತಲೆದೋರದು. ಅರಿವು ತಲೆದೋರಿದಲ್ಲದೆ ಕುರುಹು ನಷ್ಟವಾಗದು. ಕುರುಹು ನಷ್ಟವಾದಲ್ಲದೆ ಮಾಯೆ ಹಿಂಗದು. ಇದು ಕಾರಣ; ಕಾಯದ ಜೀವದ ಹೊಲಿಗೆಯ ಅಳಿವ ಭೇದವ ತಿಳಿಯಬಲ್ಲಡೆ ಗುಹೇಶ್ವರಲಿಂಗದ...
- Advertisement -

More Articles Like This

- Advertisement -
close
error: Content is protected !!
Join WhatsApp Group