spot_img
spot_img

ಸಾಮಾಜಿಕ ಪಿಂಚಣಿ ರೂ. ೨ ಸಾವಿರಕ್ಕೆ ಹೆಚ್ಚಿಸಲು ಕಡಾಡಿ ಆಗ್ರಹ

Must Read

spot_img
- Advertisement -

ಬೆಳಗಾವಿ: ರಾಷ್ಟ್ರೀಯ ಸಾಮಾಜಿಕ ನೆರವು ಕಾರ್ಯಕ್ರಮ ಕೇಂದ್ರ ಸರ್ಕಾರದ ಪ್ರಾಯೋಜಿತ ಯೋಜನೆಯಾಗಿದ್ದು, ವೃದ್ಧರು, ವಿಧವೆಯರು ಮತ್ತು ವಿಕಲಚೇತನರಿಗೆ ಸಾಮಾಜಿಕ ಪಿಂಚಣಿಗಳ ರೂಪದಲ್ಲಿ ಫಲಾನುಭವಿಗಳು ತಿಂಗಳಿಗೆ 1000 ರೂಪಾಯಿಗಳ ಪಿಂಚಣಿಯನ್ನು ಪಡೆಯುತ್ತಿದ್ದಾರೆ. ಈ ಸಹಾಯಧನದ ಮೊತ್ತವನ್ನು ತಿಂಗಳಿಗೆ 2000 ರೂ.ಗೆ ಹೆಚ್ಚಿಸಬೇಕೆಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಅವರು ರಾಜ್ಯಸಭೆಯ ಚಳಿಗಾಲ ಅಧಿವೇಶನದ ವಿಶೇಷ ವೇಳೆಯಲ್ಲಿ ಸರ್ಕಾರಕ್ಕೆ ವಿನಂತಿಸಿದರು.

ರಾಷ್ಟ್ರೀಯ ಸಾಮಾಜಿಕ ನೆರವು ಕಾರ್ಯಕ್ರಮವು 3.09 ಕೋಟಿ ಬಿಪಿಎಲ್ ಫಲಾನುಭವಿಗಳ ಅಗತ್ಯಗಳನ್ನು ಪೂರೈಸುತ್ತದೆ ಮತ್ತು ಪ್ರಸ್ತುತ, ಅರ್ಹ ವೃದ್ಧರು, ವಿಧವೆಯರು ಮತ್ತು ಅಂಗವಿಕಲರಿಗೆ ರೂ. 200  ರಿಂದ 500 ರವರೆಗಿನ ಮಾಸಿಕ ಪಿಂಚಣಿ ನೀಡುವ ಈ ಮೊತ್ತವು ತುಂಬಾ ಕಡಿಮೆಯಾಗಿದೆ. ಸುಮಿತ್ ಬೋಸ್ ಸಮಿತಿ (2012), ನೀತಿ ಆಯೋಗ (2016), ಮೌಲ್ಯಮಾಪನ ಅಧ್ಯಯನ (2020) ಹೆಚ್ಚಿಸಲು ಶಿಫಾರಸ್ಸು ಮಾಡಿದ್ದು ಗ್ರಾಮೀಣಾಭಿವೃದ್ಧಿ ಇಲಾಖೆಯ ಎಲ್ಲಾ ಯೋಜನೆಗಳಲ್ಲಿ ಪಿಂಚಣಿ ಮೊತ್ತವನ್ನು ಹೆಚ್ಚಿಸುವುದರಿಂದ ಸಮಾಜದ ಬಡವರು ಮತ್ತು ವೃದ್ಧರು ಪ್ರಯೋಜನ ಪಡೆಯುತ್ತಾರೆ ಎಂದರು.

- Advertisement -
- Advertisement -

Latest News

ಪ್ಲಾಸ್ಟಿಕ್ ತ್ಯಾಜ್ಯ ಮುಕ್ತ ಗ್ರಾಮ ಆಂದೋಲನಕ್ಕೆ ಚಾಲನೆ

ಮೂಡಲಗಿ : ಕಳೆದ ಶನಿವಾರದಂದು ಗೋಸಬಾಳದ ಸರಕಾರಿ ಕೆ.ಹೆಚ್.ಪಿ.ಎಸ್ ಮತ್ತು ಉನ್ನತೀಕರಿಸಿದ ಪ್ರೌಢ ಶಾಲೆಯಲ್ಲಿ ಸಾಲುಮರದ ತಿಮ್ಮಕ್ಕ ಇಕೋ ಕ್ಲಬ್ ವತಿಯಿಂದ ಪ್ಲಾಸ್ಟಿಕ್ ತ್ಯಾಜ್ಯ ಮುಕ್ತ...
- Advertisement -

More Articles Like This

- Advertisement -
close
error: Content is protected !!
Join WhatsApp Group