ಪ್ರವಾಹ ಪೀಡಿತ ಪ್ರದೇಶಕ್ಕೆ ಎನ್ಎಸ್ಎಫ್ ತಂಡ ಭೇಟಿ

0
124

ಮೂಡಲಗಿ : ನದಿ ತೀರದ ಪ್ರವಾಹದಿಂದ ಜಲಾವೃತಗೊಂಡಿರುವ ಅವರಾದಿ, ಅರಳಿಮಟ್ಟಿ, ಸುಣಧೋಳಿ, ಹುಣಶ್ಯಾಳ ಪಿ.ವೈ, ತಿಗಡಿ, ಬೀಸನಕೊಪ್ಪ ಗ್ರಾಮಗಳಿಗೆ ಸೋಮವಾರದಂದು ಟೀಂ ಎನ್.ಎಸ್.ಎಫ್ ಭೇಟಿ ನೀಡಿತು.

ಪ್ರವಾಹದಿಂದ ಆತಂಕಕ್ಕೆ ಸಿಲುಕಿರುವ ಸಂತ್ರಸ್ತ ಕುಟುಂಬಗಳಿಗೆ ಸಾಂತ್ವನ ಸೂಚಿಸಿರುವ ತಂಡವು, ಅಗತ್ಯವಾದ ನೆರವಿನ ಹಸ್ತ ಚಾಚಿತು. ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ನದಿ ತೀರದ ಗ್ರಾಮಗಳಿಗೆ ನಾಲ್ಕು ತಂಡಗಳನ್ನಾಗಿ ರಚಿಸಿದ್ದು, ಸಂತ್ರಸ್ತರಿಗೆ ಯಾವುದೇ ರೀತಿಯ ಸಮಸ್ಯೆಗಳು ಬಾರದಂತೆ ಅವರನ್ನು ಸುರಕ್ಷಿತ ತಾಣಕ್ಕೆ ಸ್ಥಳಾಂತರಿಸಲು ಎಲ್ಲ ರೀತಿಯ ಕ್ರಮಗಳನ್ನು ಕೈಕೊಳ್ಳಲಾಗಿದೆ. ಪ್ರವಾಹದಿಂದ ಹಾನಿಗೊಳಗಾದ ಕುಟುಂಬಗಳಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಕನಿಕರ ಭಾವನೆಗಳನ್ನು ಹೊಂದಿ ಸಾಂತ್ವನ ಹೇಳುತ್ತಿದ್ದಾರೆ. ಪ್ರತಿ ಕ್ಷಣ ಕ್ಷಣಕ್ಕೂ ನದಿ ತೀರದ ಸಂತ್ರಸ್ತರ ಸಮಸ್ಯೆಗಳ ಬಗ್ಗೆ ವರದಿಯನ್ನು ಪಡೆಯುತ್ತಿದ್ದಾರೆ. ಸಂತ್ರಸ್ತರಿಗೆ ಅಗತ್ಯವಿರುವ ಕಾಳಜಿ ಕೇಂದ್ರಗಳನ್ನು ಈಗಾಗಲೇ ಎಲ್ಲ ಕಡೆಗಳಲ್ಲೂ ಆರಂಭಿಸಲಾಗಿದೆ ಎಂದು ಶಾಸಕರ ಆಪ್ತ ಸಹಾಯಕ ಭಾಸ್ಕರ್ ರಾವ್ ಅವರು ಮಾಹಿತಿ ನೀಡಿದರು.

    ನ್ಯಾಯವಾದಿಗಳಾದ ಮಲ್ಲನಗೌಡ ಪಾಟೀಲ, ಸಿ.ಎಲ್. ನಾಯಿಕ, ಮುಖಂಡರಾದ ಹೆಚ್. ಎಸ್. ಪಾಟೀಲ, ಪ್ರಕಾಶ ಕಾಳಶೆಟ್ಟಿ, ಹಣಮಂತ ಚನ್ನಾಳ,ಜಗದೀಶ ಡೊಳ್ಳಿ, ದುಂಡಪ್ಪ ಕಲ್ಲಾರ, ಬಸಪ್ಪ ಗಿರಡ್ಡಿ, ಬಸವರಾಜ ಸಾರಾಪೂರ, ಹಣಮಂತ ರಡೇರಟ್ಡಿ, ದುಂಡಪ್ಪ ಪಾಟೀಲ, ಬಸಪ್ಪ ಬಾರಕಿ, ಅರ್ಜುನ ಜಿಡ್ಡಿಮನಿ, ಪ್ರಕಾಶ ಪಾಟೀಲ, ಗೋಪಾಲ ಬಿಳ್ಳೂರ, ಸಿದ್ದಪ್ಪ ದೇವರಮನಿ, ಸಿದ್ದಾರೂಢ ಕಮತಿ, ಹಣಮಂತ ಅಂಬಿ, ಯಲ್ಲಪ್ಪ ಹೂಲಿಕಟ್ಟಿ, ರಫೀಕ ಲಾಡಖಾನ, ಅಲ್ಲಪ್ಪ ಖಾನಪ್ಪಗೋಳ, ಹಣಮಂತ ನಾಯಿಕ, ಸಿದ್ರಾಯಿ ಬಿರಡಿ, ಬಸವರಾಜ ಪಾಟೀಲ, ಉಸ್ತುವಾರಿ ಅಧಿಕಾರಿಗಳಾದ ಎಂ.ಎಸ್.ನಾಗನ್ನವರ, ಯಲ್ಲಪ್ಪ ಗದಾಡಿ, ಮಾಲದಿನ್ನಿ, ಪಿಡಿಓಗಳು, ಗ್ರಾಮ ಆಡಳಿತ ಅಧಿಕಾರಿಗಳು, ಗ್ರಾಮ ಪಂಚಾಯತಿ ಸದಸ್ಯರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.