ನಿಂತಿದ್ದ ಟ್ರ್ಯಾಕ್ಟರ್‌ಗೆ ಬೈಕ್‌ ಡಿಕ್ಕಿ ಸ್ಥಳದಲ್ಲೇ ಹಾಸ್ಟೆಲ್‌ ವಾರ್ಡನ್‌ ಸಾವು

0
266

ಬೀದರ – ಕೆಟ್ಟು ನಿಂತಿದ್ದ ಟ್ರ್ಯಾಕ್ಟರ್‌ ಗೆ ಹಿಂದುಗಡೆಯಿಂದ ಬಂದ ಬೈಕ್ ಢಿಕ್ಕಿಯಾಗಿ ವಸತಿ ನಿಲಯದ ಮೇಲ್ವಿಚಾರಕರೊಬ್ಬರು ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಬೀದರ್‌ ತಾಲೂಕಿನ ಹೊನ್ನಿಕೇರಿ ಕ್ರಾಸ್‌ ಬಳಿ ನಡೆದಿದೆ.

 ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯದ ವಾರ್ಡನ್ ದೇಸುರಾವ ರಾಠೋಡ್ (40) ಮೃತಪಟ್ಟ ದುರ್ದೈವಿ.

ಮೃತರು ಭಾಲ್ಕಿ ತಾಲೂಕಿನ ಲಖನಗಾಂವ ಗ್ರಾಮದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯದ ವಾರ್ಡನ್ ಹಾಗೂ ಭಾಲ್ಕಿ ಪಟ್ಟಣದ ವಸತಿ ನಿಲಯದ ಪ್ರಭಾರಿ ಮೇಲ್ವಿಚಾರಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಕರ್ತವ್ಯ ಮುಗಿಸಿ ಹೊರಡುವಾಗ ದಾರಿ ಮಧ್ಯೆ ಕೆಟ್ಟು ನಿಂತಿದ್ದ ಟ್ರ್ಯಾಕ್ಟರ್ ಗೆ ಡಿಕ್ಕಿ ಹೊಡೆದ ಪರಿಣಾಮ ಸಾವು ಸಂಭವಿಸಿದೆ.

ಘಟನೆಗೆ ಸಂಬಂಧಿಸಿದಂತೆ ಜನವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ವರದಿ: ನಂದಕುಮಾರ ಕರಂಜೆ, ಬೀದರ