ಕವನ : ಕರುನಾಡಿನ ಒಡೆಯರು

0
193

ಕರುನಾಡಿನ ಒಡೆಯರು
—————————
ಸತ್ಯ ಹೇಳಲು ಹೆದರಲಿಲ್ಲ
ನಿತ್ಯ ಮುಕ್ತಿಯ ಶರಣರು.
ಸದ್ದು ಮಾಡದೆ ಯುದ್ಧ ಮಾಡಿ
ಮಣ್ಣಿನಲ್ಲಿ ಮಡಿದರು .

ವರ್ಗ ವರ್ಣದ ಕಸವ ಕಿತ್ತು
ಸಮತೆ ಸಸಿಯನ್ನು ನೆಟ್ಟರು
ಸತ್ಯ ಶಾಂತಿ ವಿಶ್ವ ಪ್ರೀತಿ
ಮನುಜ ಪಥಕೆ ನಡೆದರು.

ಶ್ರಮಿಕರೆಲ್ಲ ದುಡಿದು ಬಂದರು
ಕೂಡಿ ಹಂಚಿ ತಿಂದರು.
ದಯೆ ಧರ್ಮ ಭಾಷೆ ನುಡಿದರು
ಹೊಸ ಮುನ್ನುಡಿ ಬರೆದರು.

ಶರಣ ಶರಣೆಯರು ಖಡ್ಗವೆತ್ತಿ
ವಚನ ಕಾಯ್ದು ಕೊಟ್ಟರು.
ಅಪ್ಪ ಬಸವನ ಕನಸಿನಂತೆ
ಕ್ರಾಂತಿ ಕಹಳೆ ದುಡಿಯ ಬಡಿದರು.

ಎತ್ತ ಹೋದರು ನನ್ನ ಶರಣರು ?
ಸತ್ತು ಬದುಕಿದ ಯೋಧರು
ಬಯಲಿನೊಳಗೆ ಬಯಲಾದರು.
ಕರುನಾಡಿನ ಒಡೆಯರು.
————————————-
ಡಾ.ಶಶಿಕಾಂತ.ಪಟ್ಟಣ -ಪೂನಾ