spot_img
spot_img

ಕಳ್ಳರ ಕೈಯಲ್ಲಿ ಕಸಾಪ -ಅರ್ಥ ಕಳೆದುಕೊಳ್ಳುತ್ತಿರುವ ಸಾಹಿತ್ಯ ಸಮ್ಮೇಳನ

Must Read

spot_img
- Advertisement -

ಸಾಹಿತ್ಯವೆನ್ನುವುದು ಒಂದು ಸೃಜನಶೀಲ ಮನಸ್ಸಿನ ಸುಂದರ ಅಭಿವ್ಯಕ್ತಿ. ಇದಕ್ಕೆಂದೇ ಕನ್ನಡ ಕವಿಗಳು ಸಾಹಿತಿಗಳು ನಾಲ್ವಡಿ ಕೃಷ್ಣರಾಜ ಒಡೆಯರ ಅವರ ಸಹಾಯದಿಂದ ಕನ್ನಡ ಸಾಹಿತ್ಯ ಪರಿಷತ್ ಆರಂಭಿಸಿದರು . ಬ್ರಿಟಿಷರ ಕಾಲದಲ್ಲಿ ಕನ್ನಡ ಪರ ಜನಪರ ಸಮಾಜಮುಖಿ ಕಾರ್ಯದ ಪ್ರಬಲ ಮಾಧ್ಯಮವೇ ಸಾಹಿತ್ಯ .

ಭಾರತದ ಸ್ವಾತಂತ್ರ್ಯ ಕರ್ನಾಟಕ ಏಕೀಕರಣದಲ್ಲಿ ಕನ್ನಡ ಸಾಹಿತ್ಯದ ಪಾತ್ರ ಬಹು ದೊಡ್ಡದು. ಕುವೆಂಪು ಬೇಂದ್ರೆ ಕಾರಂತ ಮಾಸ್ತಿ ಗೋಕಾಕ ಮುಂತಾದ ಬಹು ದೊಡ್ಡ ದೈತ್ಯ ಪ್ರತಿಭೆಗಳ ಕನ್ನಡ ಸಾಹಿತ್ಯ ಸಮ್ಮೇಳನಗಳು ಇತ್ತೀಚೆಗೆ ಅರ್ಥ ಕಳೆದು ಕೊಳ್ಳುತ್ತಿವೆ. ಅದಕ್ಕೆ ಮುಖ್ಯ ಕಾರಣಗಳು ಲಂಚಗುಳಿತನ, ಜಾತೀಯತೆ, ಪಕ್ಷಪಾತ ಮತ್ತು ಮುಖ್ಯವಾಗಿ ಉತ್ತರ ಕರ್ನಾಟಕದ ಕವಿಗಳ ಸಾಹಿತ್ಯ ಸಂಸ್ಕೃತಿಯ ಸಂಪೂರ್ಣ ನಿರ್ಲಕ್ಷ್ಯ.

ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಆತ್ಮಾವಲೋಕನ ಮಾಡಿಕೊಳ್ಳಬೇಕು ಇತ್ತೀಚೆಗೆ ಜಗದೀಶ ಕೊಪ್ಪ ಅವರು ಹಾವೇರಿ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಡೆದ ಪ್ರಕಾಂಡ ಭ್ರಷ್ಟಾಚಾರದ ಬಗ್ಗೆ ವಿವರವಾಗಿ ತಿಳಿಸಿದ್ದಾರೆ. ಇದಕ್ಕೆ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಡೋಜ ಡಾ ಮಹೇಶ ಜೋಶಿ ಅವರು ಉತ್ತರಿಸಬೇಕು. ಜಿಲ್ಲಾ ಸಾಹಿತ್ಯ ಸಮ್ಮೇಳನ, ತಾಲೂಕ ಸಾಹಿತ್ಯ ಸಮ್ಮೇಳನ ಕೇಂದ್ರ ಸಾಹಿತ್ಯ ಸಮ್ಮೇಳನಗಳು ಕೇವಲ ಒಂದು ಜಾತ್ರೆ ರಾಜಕಾರಣಿಗಳ ಸಾಹಿತಿಗಳ ಸಂಭ್ರಮವನ್ನು ಹೊರತು ಪಡಿಸಿದರೆ ಕ್ರಿಯಾಶೀಲ ಕಾರ್ಯ ನಡೆದಿಲ್ಲ. ಕನ್ನಡ ಸಾಹಿತ್ಯ ಪರಿಷತ್ತಿನ ಮ್ಯಾಗಜಿನ್ ಮುಚ್ಚಿತು. ಕನ್ನಡ ಸಾಹಿತ್ಯ ಪರಿಷತ್ತಿನ ಕೊಠಡಿ ಮತ್ತು ಕಟ್ಟಡಗಳ ಆಂತರಿಕ ವಿನ್ಯಾಸಕ್ಕೆ ದುಡ್ಡು ಸುರಿಯುವುದು ಸಾಹಿತ್ಯ ಸಮ್ಮೇಳನಗಳ ಹೆಸರಿನಲ್ಲಿ ಹಣ ಕೊಳ್ಳೆ ಹೊಡೆಯುವುದು ಯಾವ ಪುರುಷಾರ್ಥಕ್ಕೆ ?
ರಾಜಕಾರಣಿಗಳು ಸಮ್ಮೇಳನಕ್ಕೆ ಹತ್ತಾರು ಕೋಟಿ ದುಡ್ಡು ಕೊಡುತ್ತಾರೆ. ಇತ್ತೀಚಿನ ದಿನಗಳಲ್ಲಿ ಅಲ್ಲಿ ದೊಡ್ಡ ಪ್ರಮಾಣದ ಲಂಚಗುಳಿತನ ನಡೆದಿದೆ ಎಂಬ ಆರೋಪ ಕೇಳಿ ಬರುತ್ತದೆ. ಪ್ರಗತಿಪರ ಚಿಂತಕರು ಸಾಹಿತಿಗಳು ಏಕೆ ಮೌನವಾಗಿದ್ದಾರೆ ?

- Advertisement -

ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಅವರು ನಡೆಸುವ ಸಮ್ಮೇಳನಗಳು ಕೇವಲ ಸಾಹಿತ್ಯ ಪರಿಷತ್ತಿನ ಸದಸ್ಯರಿಗಷ್ಟೇ ಸೀಮಿತವಲ್ಲ. ಕಾರಣ ಸಾರ್ವಜನಿಕರ ತೆರಿಗೆಯ ದುಡ್ಡನ್ನೇ ಸಾಹಿತ್ಯ ಸಮ್ಮೇಳನಕ್ಕೆ ಕೊಡುತ್ತಾರೆ. ಹೀಗಾಗಿ ಪಾರದರ್ಶಕತೆ ಮುಖ್ಯ ದುಡ್ಡು ಕೊಳ್ಳೆ ಹೊಡೆಯಲು ಸಾಹಿತ್ಯ ಸಮ್ಮೇಳನಗಳನ್ನು ಮಾಡುವುದು ಬೇಡ.

ಗಡಿ ಸಮಸ್ಯೆ ಇನ್ನೂ ಇತ್ಯರ್ಥವಾಗಿಲ್ಲ, ಕಾವೇರಿಯ ನದಿ ನೀರಿನ ಹಂಚಿಕೆಯ ವಿಷಯ ಕೇಂದ್ರ ಸರಕಾರದ ಮಲತಾಯಿ ಧೋರಣೆ ಕಸಾಪಕ್ಕೆ ಸಂಬಧವಿಲ್ಲವೇ ? ಅಕ್ರಮ ಗಣಿಗಾರಿಕೆ , ಪ್ರಾದೇಶಿಕ ಅಸಮತೋಲನ ,ಕನ್ನಡಿಗರ ನಿರುದ್ಯೋಗ ಸಮಸ್ಯೆ ,ಡಾ ನಂಜುಂಡಪ್ಪ ವರದಿ, ಡಾ ಸರೋಜಿನಿ ಮಹಿಷಿ ವರದಿ ಅನುಷ್ಠಾನ ಎಲ್ಲಿಯವರೆಗೆ ಬಂದಿವೆ. ಕನ್ನಡ ಸಾಹಿತ್ಯ ಸಮ್ಮೇಳನಗಳು ಬರೀ ಸಾಹಿತ್ಯಕ್ಕೆ ಮಾತ್ರ ಸೀಮಿತವಾಗದೆ ನೆಲ ಜಲ ಸಂಸ್ಕೃತಿಯ ಸಂರಕ್ಷಣೆಗೆ ಮುಂದಾಗಬೇಕು.
ಜಯ ಭಾರತ ಜನನಿಯ ತನುಜಾತೆ ಎಂದು ಹಾಡಿದ ಕುವೆಂಪು ಅವರ ಈ ಗೀತೆಯ ಗೌರವ ಕಾಪಾಡುವ ಕಾರ್ಯ ನಮ್ಮೆಲ್ಲರ ಕರ್ತವ್ಯವಾಗಲಿ. ಸಾಹಿತ್ಯ ಸಮ್ಮೇಳನದ ಅವ್ಯವಹಾರದ ಬಗ್ಗೆ ಯಾರಾದರೂ ಪ್ರಶ್ನೆ ಕೇಳಿದರೆ ಅವರನ್ನು ಅವರ ಸದಸ್ಯತ್ವವನ್ನು ಕಸಾಪದಿಂದ ವಜಾಗೊಳಿಸುವ ಸರ್ವಾಧಿಕಾರ ನಿಜಕ್ಕೂ ಖಂಡನೀಯ. ಸಾಹಿತ್ಯ ಸಮ್ಮೇಳನಗಳು ಎಲ್ಲ ಹಿರಿಯ ಕಿರಿಯ ಸಾಹಿತಿಗಳ ಒಮ್ಮನಸ್ಸಿನ ಸಮ್ಮೇಳನವಾಗಲಿ ಎಲ್ಲಿಯೂ ಅಪಸ್ವರ ಬರಬಾರದು .

ಕರ್ನಾಟಕ ಸರಕಾರದ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಇತ್ತ ಗಮನ ಹರಿಸಬೇಕು. ಕನ್ನಡ ಸಂಸ್ಕೃತಿ ಇಲಾಖೆ ಎಚ್ಚರವಾಗಬೇಕು.

ಡಾ.ಶಶಿಕಾಂತ ಪಟ್ಟಣ ರಾಮದುರ್ಗ

- Advertisement -
- Advertisement -

Latest News

ಜಮೀರ್ ಖಾನ್ ಒಬ್ಬ ಹುಚ್ಚ – ರಟಗಲ್ ಶ್ರೀಗಳು

ಬೀದರ - ಜಮೀರ ಖಾನ್ ಏನ್ ಮಾತನಾಡುತ್ತಾನೋ ಅವನಿಗೇ ತಿಳಿಯೋದಿಲ್ಲ ಆತ ಒಬ್ಬ ಹುಚ್ಚನಂತೆ ಇದ್ದಾನೆ ಅಂಥವನಿಗೆ ಸಿದ್ಧರಾಮಯ್ಯ ಬೆಂಬಲ ಕೊಡುತ್ತಿದ್ದಾರೆ ಎಂದು ರಟಗಲ್ ಶ್ರೀಗಳು...
- Advertisement -

More Articles Like This

- Advertisement -
close
error: Content is protected !!
Join WhatsApp Group