- Advertisement -
ಮೈಸೂರು -ನಗರದ ಸರಸ್ವತಿಪುರಂನಲ್ಲಿರುವ ಜ್ಞಾನೋದಯ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಕು.ರಿವ ಮಾನ್ಯ ಎಂ. ಇವರು ೬ನೇ ಅಂತಾರಾಷ್ಟ್ರೀಯ ಕರಾಟೆ ಮುಕ್ತ ಚಾಂಪಿಯನ್‌ಷಿಪ್-೨೦೨೪ರ ೭೬ ಕೆಜಿಯೊಳಗಿನ ‘ಕುಮಿತೆ’ ಹಾಗೂ ೧೯ ವರ್ಷದೊಳಗಿನ ‘ಕತಾ’ ವಿಭಾಗದಲ್ಲಿ ಭಾಗವಹಿಸಿ ಪ್ರಥಮ ಬಹುಮಾನ ಪಡೆದಿರುತ್ತಾರೆ.
ಈ ಸ್ಪರ್ಧೆಯು ಭಾರತ, ಶ್ರೀಲಂಕಾ, ಇಂಡೋನೇಷ್ಯಾ, ಓಮನ್, ಇರಾನ್, ಮಲೇಷಿಯಾ ರಾಷ್ಟ್ರಗಳ ಸಂಯುಕ್ತಾಶ್ರಯದಲ್ಲಿ ಇತ್ತೀಚೆಗೆ ನಡೆಯಿತು.
ರಿವ ಮಾನ್ಯ ಕರ್ನಾಟಕದಿಂದ ಎರಡೂ ವಿಭಾಗಗಳಲ್ಲಿ ಸ್ಪರ್ಧಿಸಿ, ಅಂತಾರಾಷ್ಟ್ರೀಯ ಬಹುಮಾನ ಪಡೆದ ವಿದ್ಯಾರ್ಥಿನಿಯಾಗಿದ್ದು, ರಾಷ್ಟ್ರ, ರಾಜ್ಯ ಹಾಗೂ ಕಾಲೇಜಿಗೆ ಕೀರ್ತಿ ತಂದ ರಿವ ಮಾನ್ಯ ಎಂ. ಅವರನ್ನು ಕಾಲೇಜು ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ-ಬೋಧಕೇತರ ವರ್ಗ ಹಾಗೂ ವಿದ್ಯಾರ್ಥಿಗಳು ಅಭಿನಂದನೆ ಸಲ್ಲಿಸಿ, ವಿದ್ಯಾರ್ಥಿಗಳು ಹೀಗೆ ಇನ್ನೂ ಹೆಚ್ಚಿನ ರೀತಯಲ್ಲಿ ಸಾಧನೆ ಮಾಡಲಿ ಎಂದು ಹಾರೈಸಿದ್ದಾರೆ.
- Advertisement -