ಪ್ರವಾಹ ಸಂತ್ರಸ್ತರೊಂದಿಗೆ ನಾವಿದ್ದೇವೆ – ಲಕ್ಕಣ್ಣ ಸವಸುದ್ದಿ

0
271

ಮೂಡಲಗಿ – ಮುಳುಗಡೆಗೆ ತುತ್ತಾಗಿರುವ ಮೂಡಲಗಿ ಮತ್ತು ಗೋಕಾಕ ತಾಲೂಕಿನ ಜನತೆಗೆ ಧೈರ್ಯ ತುಂಬಲು ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಆದೇಶದಂತೆ ನಾವು ಕಟಿಬದ್ಧರಾಗದ್ದೇವೆ ಎಂದು ಕಾಂಗ್ರೆಸ್ ಮುಖಂಡ ಲಕ್ಕಣ್ಣ ಸವಸುದ್ದಿ ಹೇಳಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ಸೋಮವಾರ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ಗೋಕಾಕ ತಾಲೂಕಿನ ದಂಡಿನಮಾರ್ಗ ಹಾಗೂ ಮೂಡಲಗಿ ತಾಲೂಕಿನ ಇತರೆ ಹಳ್ಳಿಗಳ ಜನರೊಂದಿಗೆ ನಾವು ಸಂಪರ್ಕದಲ್ಲಿದ್ದೇವೆ. ಸಂಕಷ್ಟಕ್ಕೆ ಒಳಗಾದ ಜನರಿಗೆ ಎಲ್ಲ  ಸೌಲಭ್ಯಗಳನ್ನು ಒದಗಿಸಲು ನಾವು ಕೆಲಸ ಮಾಡುತ್ತೇವೆ ಎಂದರು.

ಜಿಲ್ಲೆಯ ಸಂಸದರು ದಿಲ್ಲಿಯನ್ನು ಬಿಟ್ಟು ಸಂತ್ರಸ್ತರ ಕಡೆಗೆ ಬರಬೇಕು, ಶಾಸಕರು ಬೆಂಗಳೂರನ್ನು ಬಿಟ್ಟು ಬರಬೇಕು.ಇದಲ್ಲದೆ ಕ್ಷೇತ್ರದಲ್ಲಿ ಮೂಲ ಸೌಕರ್ಯಗಳ ಕೊರತೆ ಇದೆ. ಎರಡೂ ಕ್ಷೇತ್ರಗಳ ಬಗ್ಗೆ ಮುಖ್ಯಮಂತ್ರಿ ಗಳಿಗೆ ವಿಶೇಷ ಕಾಳಜಿ ಇದೆ ಬರಗಾಲದಲ್ಲಿಯೂ ಅವರು ೩೨ ಲಕ್ಷದ ಪರಿಹಾರ ಕೊಟ್ಟಿದ್ದಾರೆ. ಈಗಲೂ ಸಂತ್ರಸ್ತರಿಗೆ ಯಾವುದೇ ರೀತಿಯ ಕೊರತೆಯಾಗದಂತೆ ನೋಡಿಕೊಳ್ಳಲು ಆದೇಶ ಮಾಡಿದ್ದಾರೆ. ಸ್ಥಳೀಯ ಶಾಸಕರು ಸಂಸದರು ಕೂಡ ಜನತೆಯತ್ತ ಆಗಮಿಸಿ ಜನರ ಕಷ್ಟ ಸುಖ ಆಲಿಸಬೇಕು ಎಂದರು.

ಶಾಸಕರು ಕೇವಲ ತಮ್ಮ ಹಿಂಬಾಲಕರನ್ನು ಮುಳುಗಡೆ ಪ್ರದೇಶಕ್ಕೆ ಕಳಿಸಿಕೊಡುತ್ತಿದ್ದಾರೆ ಇದರಿಂದ ಯಾವುದೇ ಪ್ರಯೋಜನವಿಲ್ಲ. ಜನರ ಸಂಕಷ್ಟ ಆಲಿಸಲು ತಾಲೂಕಾಡಳಿತ ಹಾಗೂ ಜಿಲ್ಲಾಡಳಿತದ ಜೊತೆ ಶಾಸಕರು ಸ್ವತಃ ನಿಂತು ಜನರಿಗೆ ಧೈರ್ಯ ತುಂಬಬೇಕು ಎಂದು ಲಕ್ಕಣ್ಣ ಸವಸುದ್ದಿ ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಹಣಮಂತ ಮುಗಳಖೋಡ, ಮಲ್ಲಪ್ಪ ಹಾದಿಮನಿ, ಸಿದ್ದು ಮರಡಿ, ಮಹಾಲಿಂಗಯ್ಯ ನಂದಗಾಂವಮಠ ಉಪಸ್ಥಿತರಿದ್ದರು