spot_img
spot_img

ಗ್ರಾಮೀಣ ಮಹಿಳೆಯರಿಗೆ ಆರ್ಥಿಕ ನೆರವು ಒದಗಿಸಿದ ದಾಲ್ಮಿಯಾ ಭಾರತ್ ಫೌಂಡೇಶನ್

Must Read

- Advertisement -

ಬೆಳಗಾವಿ : ದಾಲ್ಮಿಯಾ ಸಿಮೆಂಟ್ (ಭಾರತ್) ಲಿಮಿಟೆಡ್ (ಡಿಸಿಬಿಎಲ್) ಸಂಸ್ಥೆಯ ಸಿಎಸ್ಆರ್ ಅಂಗವಾದ ದಾಲ್ಮಿಯಾ ಭಾರತ್ ಫೌಂಡೇಶನ್ (ಡಿಬಿಎಫ್) ಗ್ರಾಮೀಣ ಭಾಗದ ಜನರಿಗೆ ನೆರವು ನೀಡುವ ಉದ್ದೇಶದ ಭಾಗವಾಗಿ ಬೆಳಗಾವಿಯ ಯಾದವಾಡದಲ್ಲಿರುವ ಸ್ವ-ಸಹಾಯ ಗುಂಪುಗಳ (ಎಸ್‌ಎಚ್‌ಜಿ) ಒಕ್ಕೂಟವಾದ ಉನ್ನತಿ ಗ್ರಾಮಾಭಿವೃದ್ಧಿ ಸಂಘಕ್ಕೆ ರೂ.4 ಲಕ್ಷಗಳ ಆರ್ಥಿಕ ಸಹಾಯವನ್ನು ಮಾಡಿದೆ.

10 ಸ್ವಸಹಾಯ ಸಂಘಗಳ 116 ಸದಸ್ಯರು ಈ ಆರ್ಥಿಕ ಸಹಾಯದ ಪ್ರಯೋಜನ ಪಡೆದುಕೊಳ್ಳಲಿದ್ದಾರೆ. ಅವರು ಈ ನೆರವು ಪಡೆದುಕೊಳ್ಳುವ ಮೂಲಕ ಹೊಸ ಉದ್ಯಮ ಸ್ಥಾಪನೆ, ವ್ಯಾಪಾರ ವಿಸ್ತರಣೆ, ಜಾನುವಾರು ಖರೀದಿ, ಕೃಷಿ ಬಲವರ್ಧನೆ ಇತ್ಯಾದಿ ಮಾಡಿಕೊಳ್ಳಬಹುದಾಗಿದೆ.

ಈ ನಿಧಿಯನ್ನು ಆವರ್ತನ ಸಾಲವಾಗಿ ಬಳಸಲಾಗುತ್ತಿದ್ದು, ತಿಂಗಳಿಗೆ ಕನಿಷ್ಠ ದರ ಶೇ.1ರಷ್ಟು ನಾಮಮಾತ್ರ ಬಡ್ಡಿದರ ವಿಧಿಸಲಾಗುತ್ತದೆ. ಈ ಸಾಲದ ಮೂಲಕ ಸದಸ್ಯರು ಆದಾಯ ಗಳಿಕೆಯ ಕಾರ್ಯಗಳನ್ನು ಆರಂಭಿಸಿ ಸುಸ್ಥಿರ ಜೀವನ ಸಾಗಿಸಬಹುದಾಗಿದೆ. ಈ ಯೋಜನೆಯು ಸ್ವಸಹಾಯ ಸಂಘಗಳಿಗೆ ಬಲ ತುಂಬಲಿದ್ದು, ಗ್ರಾಮೀಣ ಭಾಗದ ಮಹಿಳೆಯರ ಯಶಸ್ಸಿಗೆ ಮತ್ತು ಅವರು ಸ್ವತಂತ್ರವಾಗಿರುವುದಕ್ಕೆ ನೆರವಾಗಲಿದೆ.

- Advertisement -

ಈ ಯೋಜನೆ ಕುರಿತು ಡಿಸಿಬಿಎಲ್ ಬೆಳಗಾವಿಯ ಘಟಕದ ಮುಖ್ಯಸ್ಥರಾದ ಪ್ರಭಾತ್ ಕುಮಾರ್ ಸಿಂಗ್ ಅವರು, ನಾವು ಕಾರ್ಯಾಚರಿಸುವ ಪ್ರದೇಶದಲ್ಲಿರುವ ಗ್ರಾಮೀಣ ಜನರ ಬದುಕಿನಲ್ಲಿ ಅರ್ಥಪೂರ್ಣ ಶಾಶ್ವತ ಬದಲಾವಣೆ ಉಂಟು ಮಾಡಬೇಕು ಅನ್ನುವುದು ದಾಲ್ಮಿಯಾ ಭಾರತ್‌ ಸಂಸ್ಥೆಯ ನಿಲುವಾಗಿದೆ. ಈ ನಿಟ್ಟಿನಲ್ಲಿ ಗ್ರಾಮೀಣ ಭಾಗದ ಮಹಿಳೆಯರಿಗೆ ಆರ್ಥಿಕ ನೆರವು ನೀಡುವ ಮೂಲಕ ಅವರು ಯಶಸ್ಸು ಸಾಧಿಸಲು ಮತ್ತು ಅವರು ಸ್ವತಂತ್ರವಾಗಿರಲು ಪ್ರೋತ್ಸಾಹ ನೀಡುತ್ತಿದ್ದೇವೆ. ಈ ಯೋಜನೆಯು ಈ ಪ್ರದೇಶದ ಕುಟುಂಬಗಳನ್ನು ಬಲಪಡಿಸುವ ನಿಟ್ಟಿನಲ್ಲಿ, ಅವರು ಬೆಳವಣಿಗೆ ಸಾಧಿಸಲು ನೆರವಾಗುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ ಎಂದು ಹೇಳಿದರು.

ಆರ್ಥಿಕ ನೆರವು ಒದಗಿಸುವ ಕಾರ್ಯಕ್ರಮದಲ್ಲಿ ಬೆಳಗಾವಿಯ ಸ್ಫೂರ್ತಿ ಲೇಡಿಸ್ ಕ್ಲಬ್ ಅಧ್ಯಕ್ಷರಾದ ಶ್ರೀಮತಿ ವಂದನಾ ಸಿಂಗ್, ಯಾದವಾಡ ಗ್ರಾ.ಪಂ.ಅಧ್ಯಕ್ಷ ಬಸವರಾಜ ಭೂತಾಳಿ, ಬೆಳಗಾವಿ ಡಿಸಿಬಿಎಲ್ ನ ಹೆಚ್ಆರ್ ವಿಭಾಗದ ಮುಖ್ಯಸ್ಥ ಅವಧೇಶ್ ಕುಮಾರ್ ಮತ್ತು ಬೆಳಗಾವಿಯ ಸ್ಫೂರ್ತಿ ಲೇಡಿಸ್ ಕ್ಲಬ್ ಸದಸ್ಯರು ಉಪಸ್ಥಿತರಿದ್ದರು.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಕನ್ನಡಕ್ಕಾಗಿ ಇನ್ನೂ ಹೋರಾಡಬೇಕಾಗಿರುವುದು ವಿಷಾದನೀಯ – ಚಂದ್ರಶೇಖರ ಅಕ್ಕಿ

ಬೆಳಗಾವಿ ಜಿಲ್ಲಾ ೧೬ ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರ ಸಂದರ್ಶನ ಮೂಡಲಗಿ - ಬೆಳಗಾವಿ ಜಿಲ್ಲಾ ೧೬ ನೇ ಸಾಹಿತ್ಯ ಸಮ್ಮೇಳನವು ಇದೇ ದಿ. ೨೩ , ೨೪...
- Advertisement -

More Articles Like This

- Advertisement -
close
error: Content is protected !!
Join WhatsApp Group