spot_img
spot_img

ಚಿಕ್ಕವರಿದ್ದಾಗಲೇ ಮಕ್ಕಳಿಗೆ ಕೆಲಸ ಮಾಡುವುದನ್ನು ಕಲಿಸಬೇಕು

Must Read

- Advertisement -

ಇಂದು “ಅಂತಾರಾಷ್ಟ್ರೀಯ ಬಾಲ ದೌಜ೯ನ್ಯ ವಿರೋಧಿ ” ದಿನ, ಬಾಲದೌರ್ಜನ್ಯವನ್ನು ಭೌತಿಕವಾಗಿ ಅರ್ಥ ಮಾಡಿಕೊಂಡು ಅದನ್ನು ತಡೆಯುವ ಪ್ರಯತ್ನಗಳೇನೋ ಸರ್ಕಾರ ಕಾನೂನು ಮಾಡಿದೆ.

ಆದರೆ, ಬಾಲ್ಯದ ಸವಿಯನ್ನೇ ಸವಿಯದಂತಹ ಶಿಕ್ಷಣವನ್ನು ಮೊದಲೇ ನೀಡಿ ಮಕ್ಕಳನ್ನು ಹಿಂಸೆಗೊಳಿಸಿ ಶಿಕ್ಷೆ ನೀಡಿ ಬೆಳೆಸಿದವರ ಕಥೆ ವ್ಯಥೆಯಾಗಿರುವುದನ್ನು ಯಾವ. ಕಾನೂನು ಸರಿಪಡಿಸಲಾಗಿಲ್ಲ. ಇದೊಂದು ಅಧರ್ಮವಾಗಿ ಮಾನವಕುಲವನ್ನು ದಾರಿ ತಪ್ಪಿಸಿರೋದನ್ನು ಜ್ಞಾನಿಗಳಾದವರು ಅರ್ಥ ಮಾಡಿಕೊಂಡರೂ ವಿಜ್ಞಾನ ಜಗತ್ತು ಒಪ್ಪದೆ ಈಗ ಮಕ್ಕಳಿಗೆ ಕೆಲಸವಿಲ್ಲದೆ ಪೋಷಕರ ಆಸ್ತಿ ಅಂತಸ್ತು, ಹಣವನ್ನು ಬಳಸಿಕೊಂಡು ವ್ಯವಹಾರಕ್ಕೆ ಇಳಿದಿದ್ದಾರೆನ್ನಬಹುದು.

ವ್ಯವಹಾರದಲ್ಲಿ ಹೆಚ್ಚು ಲಾಭ ಸಿಗಲು ಅಸತ್ಯ,ಅನ್ಯಾಯ, ಭ್ರಷ್ಟಾಚಾರ ಹೆಚ್ಚಾಗಿದೆ. ಮಕ್ಕಳು ಸಣ್ಣವರಿರುವಾಗಲೇ ಅವರೊಳಗಿನ ಆತ್ಮಶಕ್ತಿ ಹೆಚ್ಚಾಗಬೇಕಾದರೆ ಸಣ್ಣ ಪುಟ್ಟ ಕೆಲಸ ಮಾಡಿಸುತ್ತ ಜೊತೆಗೆ ವಿದ್ಯೆ ಕಲಿಸುತ್ತಿದ್ದ ಹಿಂದಿನ ಗುರುಕುಲಗಳ ಉದ್ದೇಶ ತಿಳಿಯದೆ ಮಕ್ಕಳನ್ನು ಸೋಮಾರಿತನಕ್ಕೆ ತಳ್ಳಿ ,ಬೇಕಾದ್ದನ್ನು ಕೊಟ್ಟು ತಿನ್ನಿಸಿ ಬೇಡವಾದ ವಿಚಾರಗಳನ್ನು ತಲೆಗೆ ತುಂಬಿ ಬೆಳೆಸುವುದೆ ಮಕ್ಕಳ ಮೇಲಾಗಿರುವ ದೌರ್ಜನ್ಯ ಎನ್ನುವುದು ಆಧ್ಯಾತ್ಮ ಸತ್ಯ.

- Advertisement -

ಈಗ ಕೊರೊನ ಬಂದು ಮಕ್ಕಳು ಮನೆಯಲ್ಲಿ ಇದ್ದು ಸೋಮಾರಿಗಳಾದರೆ ಕೆಲಸ ಹೇಳಿಕೊಡಲು ಪೋಷಕರಿಗೆ ಕಷ್ಟ. ಬೆಳೆದು ನಿಂತವರಿಗೆ ಇದು ದೌರ್ಜನ್ಯ ಎನಿಸುತ್ತದೆ. ಹೀಗಾಗಿ ಮಕ್ಕಳಿಗೆ ಸಣ್ಣವರಿರುವಾಗಲೇ ಅವರಿಗೆ ಸಾಧ್ಯವಾಗುವ ಸಣ್ಣ ಪುಟ್ಟ ಕೆಲಸ ಕಲಿಸಿ,ಮಾಡಿಸಿ ಉತ್ತಮ ಶಿಕ್ಷಣ ನೀಡಿ ಬೆಳೆಸಿದರೆ ಮುಂದಿನ ಜೀವನವನ್ನು ಅವರು ಸ್ವತಂತ್ರ ವಾಗಿ ಸನ್ಮಾರ್ಗದಲ್ಲಿ ನಡೆಸುತ್ತಾರೆ. ಮಕ್ಕಳನ್ನು ಬೆಳೆಸುವುದಕ್ಕೆ ಹಣಕ್ಕಿಂತ ಜ್ಞಾನಬೇಕು.

ಜ್ಞಾನಕ್ಕೆ ಸರಿಯಾದ ಶಿಕ್ಷಣವಿರಬೇಕು. ಶಿಕ್ಷಣದಿಂದ ಮಾನವೀಯತೆ ಬೆಳೆಯಬೇಕು. ಮಾನವನಾದ ಮೇಲೆ ಮಹಾತ್ಮರಾಗಲು ಸಾಧ್ಯ. ಈಗ. ಯಾರು ಯಾರನ್ನು ದೌರ್ಜನ್ಯ ಮಾಡುತ್ತಿದ್ದಾರೆ? ಹಣವಿದ್ದವರಲ್ಲಿ ಗುಣವಿಲ್ಲ.ಗುಣವಿದ್ದವರಿಗೆ ಹಣವಿಲ್ಲ.

ವಿಜ್ಞಾನ ಭೌತಿಕಾಸಕ್ತಿ ಹೆಚ್ಚಿಸುತ್ತಾ ಮಾನವನನ್ನು ಅಧರ್ಮದೆಡೆಗೆ ನಡೆಸಿತು. ಜ್ಞಾನ ಆಧ್ಯಾತ್ಮದ ಕಡೆಗೆ ನಡೆಸಿ ಸಾಮಾನ್ಯರಲ್ಲಿ ಸಾಮಾನ್ಯರಂತೆ ನಡೆಸಿತು. ಶ್ರೀ ರಾಮಚಂದ್ರನಂತಹ ಮಹಾತ್ಮರು ಈಗಲೂ ಹಿಂದೂ ಜನರಿಗೆ ಮಹಾದೇವ.

- Advertisement -

ಆದರೆ, ಮಹಾದೇವನ ಭಕ್ತರಿಗೆ ಸಾಮಾನ್ಯರಲ್ಲಿರುವ ಸಾಮಾನ್ಯ ಜ್ಞಾನವನ್ನು ಗುರುತಿಸಿ ಬೆಳೆಸೋ ಶಿಕ್ಷಣವಿಲ್ಲವಾದರೆ ದೇವರು ಕಾಣುವರೆ? ಹೀಗೆಯೇ ಪರಮಾತ್ಮನು ಎಲ್ಲರೊಳಗಿದ್ದರೂ ಪರಕೀಯ ಬಾವನೆ ಎಲ್ಲರಲ್ಲಿಯೂ ಹೆಚ್ಚಾಗಿರೋದಕ್ಕೆ ಅಜ್ಞಾನದ ಅಹಂಕಾರ ಸ್ವಾರ್ಥ ಕಾರಣ. ಮಾನವನಿಗೆ ಸಾಮಾನ್ಯ ಜ್ಞಾನವಿಲ್ಲದೆ,ಕರ್ಮಮಾಡಿ ಹಣಗಳಿಸಿದರೆ ಅಹಂಕಾರ ಹೆಚ್ಚಾಗುತ್ತದೆ ಆತ್ಮವಿಶ್ವಾಸ ಕುಸಿಯುತ್ತದೆ.

ಕಷ್ಟಪಡದೆ ಗಳಿಸಿದ ಹಣದಿಂದ ಎಷ್ಟೇ ಧಾರ್ಮಿಕ ಕಾರ್ಯ ನಡೆಸಿ
ಅದರಿಂದ ಹೆಚ್ಚು ಪ್ರತಿಫಲವಿರೋದಿಲ್ಲ. ಫಲ ಸಿಗೋದು ಅಧರ್ಮಕ್ಕೆ ಎನ್ನಬಹುದು. ಅಸುರರಿಗೆ ಮಣೆ ಹಾಕಿ ಉಪಚಾರ ಮಾಡಿದರೆ ಅಸುರರೆ ಆಳೋದು. ನಮ್ಮಲ್ಲೇ ಅಡಗಿರುವ ಈ ಶಕ್ತಿಯನ್ನು ಹೊಡೆದೋಡಿಸಲು ಸತ್ಕರ್ಮ ಅಥವಾ ಕೆಲಸ ಮಾಡಬೇಕು. ಸತ್ಯವಿಲ್ಲದ ಕೆಲಸ ಮಾಡಿ ಹಣ ಅಧಿಕಾರ,ಸ್ಥಾನಮಾನ ಪಡೆದರೂ ಅದರಿಂದ ಭೂಮಿಗಾಗಲಿ, ದೇಶಕ್ಕಾಗಲಿ ಶಕ್ತಿ ಸಿಗದಿದ್ದರೆ ಜೀವಕ್ಕೆ ಮುಕ್ತಿಯಿಲ್ಲ.

ಒಟ್ಟಿನಲ್ಲಿ “ಕಾಯಕವೇ ಕೈಲಾಸ” ಶರಣರ ತತ್ವವು ಮಕ್ಕಳಿರುವಾಗಲೇ ತಿಳಿಸಿ, ಕಲಿಸಿ ,ಬೆಳೆಸಿದರೆ ಯಾರೂ ಯಾರನ್ನೂ ದೌರ್ಜನ್ಯ ಮಾಡದೆ ಅವರವರ ಜೀವನವನ್ನು ಸರಳ ಸುಲಭ, ಸ್ವಚ್ಚವಾಗಿ ನಡೆಸಿಕೊಳ್ಳುವ ಆತ್ಮಶಕ್ತಿ ಹೆಚ್ಚುತ್ತದೆ.

ಸ್ವಾವಲಂಬನೆಯನ್ನು ಪರಕೀಯರು ದೌರ್ಜನ್ಯವೆಂದು ತಡೆದು ತಮ್ಮ ಶಿಕ್ಷಣದಮೂಲಕ ಪರಾವಲಂಬನೆ ಬೆಳೆಸಿ ಭಾರತೀಯರ ಮೂಲ ಶಿಕ್ಷಣವನ್ನು ಹಿಂದುಳಿಸಿ ಆಳಲು ಹೊರಟು ಈಗ ಕೊರೊನ ಮಹಾಮಾರಿ ಶಿಕ್ಷಣವನ್ನು ನಿಲ್ಲಿಸಿ ಮಕ್ಕಳನ್ನು ಮನೆಯಲ್ಲಿ ಕೂರಿಸಿ,ಪೋಷಕರಿಗೆ ಆತ್ಮಾವಲೋಕನ ಮಾಡಿಕೊಳ್ಳಲು ಅವಕಾಶ ನೀಡಿದೆ.

ಈಗಲೂ ಮನೆಯೊಳಗಿದ್ದೇ ಅದೇ ಶಿಕ್ಷಣದಿಂದ ಮಕ್ಕಳ ಮನಸ್ಸನ್ನು ಹಾಳುಮಾಡಿ,ಕಾಲಹರಣಮಾಡಿದರೆ ಇದಕ್ಕೆ ತಕ್ಕ ಶಿಕ್ಷೆ ಹೊರಗೆ ಬಂದಾಗಲೇ ತಿಳಿಯುತ್ತದೆನ್ನಬಹುದು. ಸರ್ಕಾರ ಈಗಲಾದರೂ ಶಿಕ್ಷಣದಲ್ಲಿ ಹೊಸ ನೀತಿಯನ್ನು ಅಳವಡಿಸಿ ಜ್ಞಾನದ ಕಡೆಗೆ ಎಳೆದರೆ ಮುಂದಿನ ಭಾರತ ಆತ್ಮನಿರ್ಭರ ಭಾರತವಾಗುತ್ತದೆ.

ಇದಕ್ಕೆ ಪ್ರಜೆಗಳ ಸಹಕಾರದ ಅಗತ್ಯವಿದೆ.ಮನೆಯೊಳಗಿದ್ದೇ ಮಕ್ಕಳಿಗೆ ಉತ್ತಮ ಸಂಸ್ಕಾರದ ಶಿಕ್ಷಣ ನೀಡುವ ಅವಕಾಶವಿದೆ.ಆಗೋದೆಲ್ಲಾ ಒಳ್ಳೆಯದಕ್ಕೆ, ಆಗುತ್ತಿರುವುದೆಲ್ಲಾ ಒಳ್ಳೆಯದೆ, ಆಗೋದನ್ನು ತಡೆಯಲಾಗದು. ಒಳ್ಳೆಯದು ಒಪ್ಪಿ ನಡೆದರೆ ಒಳಿತಾಗುವುದು. ಮನುಕುಲದ ಒಳಿತು ಒಳ್ಳೆಯದರಲ್ಲಿದೆ.

ಶ್ರೀಮತಿ ಅರುಣ ಉದಯಭಾಸ್ಕರ, ಬೆಂಗಳೂರು

- Advertisement -
- Advertisement -

Latest News

ನಗು ನಿಜವಾಗಿಯೂ ಅತ್ಯುತ್ತಮವಾದ ಔಷಧವೇ ?

ಸರ್ವರಿಗೂ ವಿಶ್ವ ನಗುವಿನ ದಿನದ ಶುಭಾಶಯಗಳು.ನಗು ನಮಗೆ ದೇವರು ನೀಡಿದ ವರದಾನ. ಅಂದೆಂತಹ ಬೇಜಾರು ಇದ್ದರೂ ಒಂದು ಸುಂದರವಾದ ನಗುವಿನ ಮೂಲಕ ಅದನ್ನು ದೂರ ಮಾಡಬಹುದು....
- Advertisement -

More Articles Like This

- Advertisement -
close
error: Content is protected !!
Join WhatsApp Group