spot_img
spot_img

ಪ್ಯಾಸೆಂಜರ್ ರೈಲು ಪ್ರಾರಂಭ-ನೈರುತ್ಯ ರೈಲ್ವೆ ಸಲಹಾ ಸಮಿತಿ ಸದಸ್ಯ: ಈರಣ್ಣ ಕಡಾಡಿ

Must Read

ಮೂಡಲಗಿ: ಕೋವಿಡ್ ಕಾರಣದಿಂದಾಗಿ ಎರಡು ವರ್ಷಗಳಿಂದ ಸ್ಥಗಿತಗೊಂಡಿದ್ದ ಪ್ಯಾಸೆಂಜರ ರೈಲು ಸೇವೆಯನ್ನು ದಿ.25 ಗುರುವಾರದಿಂದ ಹುಬ್ಬಳ್ಳಿ-ಮೀರಜ್, ಲೊಂಡಾ-ಮೀರಜ್, ಕ್ಯಾಸರಲಾಕ್-ಮೀರಜ್ ಪ್ಯಾಸೆಂಜರ್ ರೈಲು ಸಂಚಾರ ಪ್ರಾರಂಭವಾಗಿದೆ ಎಂದು ನೈರುತ್ಯ ರೈಲ್ವೆ ಸಲಹಾ ಸಮಿತಿ ಸದಸ್ಯ ಹಾಗೂ ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಅವರು ಹೇಳಿದರು.

ಗುರುವಾರ ದಿ.25 ರಂದು ಪತ್ರಿಕಾ ಹೇಳಿಕೆ ನೀಡಿದ ಅವರು ಪ್ಯಾಸೆಂಜರ್ ರೈಲು ಸೇವೆ ಇಲ್ಲದಿರುವುದರಿಂದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಕೇಂದ್ರ ರೈಲ್ವೆ ಬೋರ್ಡ ಚೇರಮನ್ ಅವರಿಗೆ ಸಂಸದ ಈರಣ್ಣ ಕಡಾಡಿ ಅವರು ಮನವಿ ಮಾಡಿದ್ದರು ಹಾಗೂ ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕರಾದ ಸಂಜೀವ ಕಿಶೋರ ಹಾಗೂ ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಿ ಪುನಃ ಪ್ಯಾಸೆಂಜರ್ ರೈಲ್ವೆ ಪ್ರಾರಂಭ ಮಾಡಲು ಒತ್ತಾಯ ಮಾಡಿದ್ದರು.

ಸಂಸದರ ಮನವಿಗೆ ಸ್ಪಂಧಿಸಿ ಅಧಿಕಾರಿಗಳು ಪ್ಯಾಸೆಂಜರ್ ರೈಲು ಪ್ರಾರಂಭಿಸಿರುವುದು ಸಂತೋಷದ ವಿಷಯ. ಹಲವಾರು ಎಕ್ಸಪ್ರೆಸ್ ರೈಲ್ವೆಗಳನ್ನು ಘಟಪ್ರಭಾದಲ್ಲಿ ನಿಲುಗಡೆ ಮಾಡಲು ಮನವಿ ಮಾಡಿದ್ದು, ಅದರಂತೆ ಈಗಾಗಲೇ ಕೆಲವು ಎಕ್ಸಪ್ರೆಸ್ ರೈಲುಗಳನ್ನು ನಿಲುಗಡೆ ಮಾಡಲಾಗುತ್ತಿದೆ. ಇದರಿಂದ ಸಾರ್ವಜನಿಕರಿಗೆ ತುಂಬಾ ಅನುಕೂಲವಾಗಲಿದ್ದು ಇನ್ನಷ್ಟು ವ್ಯಾಪಾರ ವಹಿವಾಟು ಹೆಚ್ಚಾಗುವ ನಿರೀಕ್ಷೆ ಇದೆ ಎಂದು ಸಂಸದರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -
- Advertisement -

Latest News

ವಿಶೇಷ ಅಗತ್ಯತೆಯುಳ್ಳ ಮಕ್ಕಳ ವೈದ್ಯಕೀಯ ಮೌಲ್ಯಾಂಕನ ಶಿಬಿರ

ಯರಗಟ್ಟಿಃ ಇಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಮಾದರಿ ಶಾಲೆಯಲ್ಲಿ ೨೦೨೨-೨೩ ನೇ ಸಾಲಿನ ಯರಗಟ್ಟಿ ಹಾಗೂ ಮುರಗೋಡ ವಲಯಗಳ ವಿಕಲಚೇತನ ಮಕ್ಕಳ ಮೌಲಾಂಕನ ಶಿಬಿರ ಜರುಗಿತು. ಕಾರ‍್ಯಕ್ರಮದ...
- Advertisement -

More Articles Like This

- Advertisement -
close
error: Content is protected !!