ಓಂ ಸ್ವಯಂಸಿದ್ದಾರ್ಚಿತಪದಾಯ ನಮಃ
- ಶುಭೋದಯ
- ಶುಭಕೃತುನಾಮ ಸಂವತ್ಸರ
- ಉತ್ತರಾಯಣ
- ಗ್ರೀಷ್ಮ ಋತು
- ಜ್ಯೇಷ್ಠ ಮಾಸ
- ಕೃಷ್ಣ ಪಕ್ಷ
- ನವಮಿ ತಿಥಿ 20.45 ಕ್ಕೆ ಅಂತ್ಯ ದಶಮಿ ತಿಥಿ ಆರಂಭ.
22/06/2022 ಬುಧವಾರ
- ರೇವತಿ ನಕ್ಷತ್ರ ದಿನಪೂರ್ಣ.
- ಯೋಗ: ಶೋಭನ 28.55
- ಕರಣ: ತೈತುಲ 08.32
- ಗರಜ 20.45
- ಸೂರ್ಯೋದಯ: 05.56
- ಸೂರ್ಯಾಸ್ತ : 18.47
- ರಾಹುಕಾಲ:12.22-13.58
- ಯಮಘಂಡಕಾಲ: 07.33-09.09
- ಗುಳಿಕಕಾಲ: 10.45-12.22
- ಅಮೃತಘಳಿಗೆ: 09.10-10.40
13.59-17.08
17.57-21.56
24.21-25.56
ಎಲ್ಲರಿಗೂ ಶುಭವಾಗಲಿ.
ಊಟ ಬಲ್ಲವನಿಗೆ ರೋಗವಿಲ್ಲ. ಮಿತ ಆಹಾರವು ಉತ್ತಮ ಔಷಧ ಹಾಗೂ ಧೀರ್ಘಾಯಸ್ಸಿಗೆ ಮೂಲ. ಆರೋಗ್ಯ ಮತ್ತು ಲವಲವಿಕೆ ಒಂದನ್ನೊಂದು ಆಧರಿಸಿರುತ್ತದೆ. ಬೇಗ ಏಳುವುದು – ಮಲಗುವುದು ಆರೋಗ್ಯಕ್ಕೆ ದಾರಿ. ಅತಿ ಕಡಿಮೆ ತಿಂದರೂ,ಅತಿ ಹೆಚ್ಚು ತಿಂದರೂ ಅತಿ ಹೆಚ್ಚು ನೀರನ್ನು ಕುಡಿಯಿರಿ, ಸಮತೋಲನವಾಗಿರುವಿರಿ.
ಬೆಟ್ಟದ ಮೇಲೊಂದು ಮನೆಯ ಮಾಡಿ ಮೃಗಗಳಿಗಂಜಿದೊಡೆಂತಯ್ಯ? ಸಮುದ್ರದ ತಡಿಯಲೊಂದು ಮನೆಯ ಮಾಡಿ ನೊರೆತೆರೆಗಳಿಗೆ ಅಂಜಿದೊಡೆಂತಯ್ಯ? ಸಂತೆಯೊಳಗೊಂದು ಮನೆಯ ಮಾಡಿ ಶಬ್ದಕ್ಕೆ ನಾಚಿದೊಡೆಂತಯ್ಯ? ಚೆನ್ನಮಲ್ಲಿಕಾರ್ಜುನ ದೇವ ಕೇಳಯ್ಯ ಲೋಕದೊಳಗೆ ಹುಟ್ಟಿದ ಬಳಿಕ ಸ್ತುತಿನಿಂದೆಗಳು ಬಂದರೆ ಮನದಲ್ಲಿ ಕೋಪವ ತಾಳದೆ ಸಮಾಧಾನಿಯಾಗಿರಬೇಕು!
ಶರಣ ಶಿವಾನಂದ ಕಲ್ಲೂರ