ನಳಿನ್ ಕಟೀಲು ಅ. ೫ ರಂದು ಸಿಂದಗಿಗೆ – ಕೂಚಬಾಳ ಮಾಹಿತಿ

Must Read

25 ಸಾವಿರ ಮತಗಳಿಂದ ಬಿಜೆಪಿ ಗೆಲ್ಲುತ್ತದೆ – ಜೊಲ್ಲೆ ವಿಶ್ವಾಸ

ಸಿಂದಗಿ: ಎರಡು ಬಾರಿ ಚುನಾಯಿತರಾದ ರಮೇಶ ಭೂಸನೂರ ಅವರು ಅನೇಕ ಕೆಲಸಗಳನ್ನು ಮಾಡಿದ್ದಾರೆ ಅಲ್ಲದೆ ಕೇಂದ್ರ ಹಾಗೂ ರಾಜ್ಯದಲ್ಲಿ ಭಾಜಪ ಅಧಿಕಾರದಲ್ಲಿದೆ ಕ್ಷೇತ್ರದ ಅಭಿವೃದ್ಧಿ ದಿಸೆಯಲ್ಲಿ...

“ಕಲಾಸೃಷ್ಟಿ” ಆರ್ಟ್ ವರ್ಕ್ ಗೆ ಚಾಲನೆ ನೀಡಿದ ಲೋಕಲ್ ಲೀಡರ್ ನಟ ಕಲ್ಮೇಶ್

ಬಾಗಲಕೋಟೆ: ಇದೆ ಅಕ್ಟೋಬರ್ ೧೫ ರಂದು, ಗದ್ದನಕೇರಿಯಲ್ಲಿ "ಕಲಾಸೃಷ್ಟಿ" ಆರ್ಟ್ ವರ್ಕ್ ಪ್ರಾರಂಭವಾಯಿತು. ಇದನ್ನು ನಟ ಕಲ್ಮೇಶ್, ಬಾಗಲಕೋಟೆಯ ನಟಿ ಅಂಕಿತಾ ನಾಯ್ಡು ಹಾಗೂ ಸಹ...

ಗೋವಿಂದಹಳ್ಳಿಯ ಪಂಚಲಿಂಗೇಶ್ವರ ; ಐದು ಶಿಖರಗಳ ಅಪರೂಪದ ಗುಡಿ

ಸ್ಥಳದ ಬಗ್ಗೆ ಕಿರು ಪರಿಚಯ: ಪ್ರಖ್ಯಾತ ಪ್ರವಾಸಿ ತಾಣವಾದ ಗೋವಿಂದನಹಳ್ಳಿಯ ಬ್ರಹ್ಮಲಿಂಗೇಶ್ವರ ಗುಡಿಯಿರುವುದು ಮಂಡ್ಯದಿಂದ 52 ಕಿ.ಮೀ ಹಾಗೂ ಕೃಷ್ಣರಾಜಪೇಟೆಯಿಂದ 20 ಕಿ.ಮೀ ಹಾಗು ಕಿಕ್ಕೇರಿಯಿಂದ...

ಸಿಂದಗಿ: ಉಪ ಚುನಾವಣೆಯ ನಿಮಿತ್ತ ಕಾರ್ಯಕರ್ತರಲ್ಲಿ ಶಕ್ತಿ ತುಂಬಲು ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ ಅವರು ಅ.೫ ರಂದು ಸಿಂದಗಿ ನಗರಕ್ಕೆ ಆಗಮಿಸಲಿದ್ದಾರೆ ವಿವಿಧ ಹಳ್ಳಿಗಳಿಂದ ಬಿಜೆಪಿ ಕಾರ್ಯಕರ್ತರು ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ ಹೇಳಿದರು.

ಪಟ್ಟಣದ ಮಾಂಗಲ್ಯ ಭವನದಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅ.೫ ರಂದು ಮಧ್ಯಾಹ್ನ ೨ ಗಂಟೆಗೆ ಪಟ್ಟಣದ ಮಾಂಗಲ್ಯ ಭವನದಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಅವರು ಮಾತನಾಡಲಿದ್ದಾರೆ. ಈ ಸಂಧರ್ಭದಲ್ಲಿ ಜಿಲ್ಲೆಯ ಶಾಸಕರು, ಸಂಸದರು ಜಿಲ್ಲಾ ಮತ್ತು ತಾಲೂಕಾ ಮುಖಂಡರು ಭಾಗವಹಿಸಲಿದ್ದಾರೆ.

ಕಾಂಗ್ರೆಸ್ ಪಕ್ಷದ ದ್ವಂದ್ವ ನಿಲುವಿನಿಂದ ಈ ದೇಶ ಹಾಳಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಎಲ್ಲಾ ಸಾಮಾನ್ಯರನ್ನು ಮೇಲೆತ್ತುವ ಅನೇಕ ಯೋಜನೆಗಳನ್ನು ಮಾಡುತ್ತಿವೆ. ಇದೆಲ್ಲ ಕಾಂಗ್ರೆಸ್‍ಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಜಗತ್ತಿನಲ್ಲಿ ಅತಿ ಹೆಚ್ಚು ಉಚಿತ ಕೋವಿಡ್ ಲಸಿಕೆ ನೀಡಿರುವ ದೇಶ ಅದು ಭಾರತ ಮಾತ್ರ ಅದು ಕೇಂದ್ರ ಸರ್ಕಾರದ ಅತಿ ದೊಡ್ಡಕಾರ್ಯವಾಗಿದೆ. ಈ ಬಾರಿ ಸಿಂದಗಿ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲುವು ನಿಶ್ಚಿತ ಎಂದ ಅವರು ಉಪ ಚುನಾವಣೆಗೆ ಸಿಂದಗಿ ಮತಕ್ಷೇತ್ರದಿಂದ ಸುಮಾರು ೮ ಜನ ಟಿಕೆಟ್ ಆಕಾಂಕ್ಷಿಗಳಾಗಿ ಅರ್ಜಿ ಸಲ್ಲಿಸಿದ್ದರು. ಟಿಕೆಟ್ ಯಾರಿಗೇ ಸಿಕ್ಕರು ಎಲ್ಲರು ಒಮ್ಮತದಿಂದ ಚುಣಾವಣೆಯನ್ನು ಎದುರಿಸಲು ಸಿದ್ದರಾಗಿದ್ದಾರೆ ಯಾರಲ್ಲಿಯೂ ಅಸಮಾಧಾನ ಭಿನ್ನಾಭಿಪ್ರಾಯವಿಲ್ಲ ಒಟ್ಟಾರೆ ಎಲ್ಲರ ಗುರಿ ಬಿಜೆಪಿಯನ್ನು ಗೆಲ್ಲಿಸುವುದು ಗುರಿಯಾಗಿದೆ. ಎಂದರು.

- Advertisement -

ಪತ್ರಿಕಾಗೋಷ್ಠಿಯಲ್ಲಿ ಲಿಂಬೆ ಅಭಿವೃದ್ದಿ ನಿಗಮದ ಅಧ್ಯಕ್ಷ ಅಶೋಕ ಅಲ್ಲಾಪೂರ, ಮಾಜಿ ಶಾಸಕ ರಮೇಶ ಭೂಸನೂರ, ಚಂದ್ರಶೇಖರ ಕವಟಗಿ, ಶಿವರುದ್ರ ಬಾಗಲಕೋಟ, ಮಲ್ಲಿಕಾರ್ಜುನ ಜೋಗೂರ, ಚಂದ್ರಶೇಖರ ನಾಗೂರ, ಮುತ್ತು ಶಾಬಾದಿ, ಶಂಭುಲಿಂಗ ಕಕ್ಕಳಮೇಲಿ, ಸಿದ್ದಣ್ಣ ಬಿರಾದಾರ ಅಡಕಿ, ಮಂಡಲ ಅಧ್ಯಕ್ಷ ಈರಣ್ಣ ರಾವೂರ, ರಾಜಶೇಖರ ಪೂಜಾರಿ, ಸಂತೋಷ ಪಾಟೀಲ ಡಂಬಳ, ಸಿದ್ದು ಬುಳ್ಳಾ, ಗುರು ತಳವಾರ, ಎಸ್ಸಿ ಮೋರ್ಚಾ ಅಧ್ಯಕ್ಷ ಸಿದ್ದು ಪೂಜಾರಿ, ವಿಜಯ ಜೋಷಿ, ಸುದರ್ಶನ ಜಿಂಗಾಣಿ, ಬಿ.ಎಚ್.ಬಿರಾದಾರ, ಶಿವಕುಮಾರ ಬಿರಾದಾರ, ಮಹಾಂತೇಶ ಸಾತಿಹಾಳ ಕಾಜು ಬಂಕಲಗಿ, ಸೇರಿದಂತೆ ಅನೇಕರು ಇದ್ದರು.

- Advertisement -

LEAVE A REPLY

Please enter your comment!
Please enter your name here

- Advertisement -

Latest News

25 ಸಾವಿರ ಮತಗಳಿಂದ ಬಿಜೆಪಿ ಗೆಲ್ಲುತ್ತದೆ – ಜೊಲ್ಲೆ ವಿಶ್ವಾಸ

ಸಿಂದಗಿ: ಎರಡು ಬಾರಿ ಚುನಾಯಿತರಾದ ರಮೇಶ ಭೂಸನೂರ ಅವರು ಅನೇಕ ಕೆಲಸಗಳನ್ನು ಮಾಡಿದ್ದಾರೆ ಅಲ್ಲದೆ ಕೇಂದ್ರ ಹಾಗೂ ರಾಜ್ಯದಲ್ಲಿ ಭಾಜಪ ಅಧಿಕಾರದಲ್ಲಿದೆ ಕ್ಷೇತ್ರದ ಅಭಿವೃದ್ಧಿ ದಿಸೆಯಲ್ಲಿ...
- Advertisement -

More Articles Like This

- Advertisement -
close
error: Content is protected !!