ಮೂಡಲಗಿ: ಡಿಸೆಂಬರ್ ವೇಳೆಗೆ 175 ಜಿ ವ್ಯಾಟ್ ಸ್ಥಾಪಿತ ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು (ದೊಡ್ಡ ಹೈಡ್ರೊ ಹೊರತುಪಡಿಸಿ) ಸಾಧಿಸುವ ಗುರಿಯನ್ನು ಸರ್ಕಾರ ನಿಗದಿಪಡಿಸಿದೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರ ಪ್ರಶ್ನೆಗೆ ಕೇಂದ್ರ ವಿದ್ಯುತ್, ಹೊಸ ಮತ್ತು ನವೀಕರಿಸಬಹುದಾದ ಇಂಧನ ಮತ್ತು ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯ ರಾಜ್ಯ ಸಚಿವ ಆರ್. ಕೆ ಸಿಂಗ್ ಹೇಳಿದರು.
ನವದೆಹಲಿ ಸಂಸತ್ ಅಧಿವೇಶನದಲ್ಲಿ ರಾಜ್ಯಸಭೆ ಸದಸ್ಯ ಈರಣ್ಣ ಕಡಾಡಿ ಅವರು ಚುಕ್ಕಿ ಗುರುತಿನ ಪ್ರಶ್ನೆಗೆ ಸಚಿವ ಆರ್. ಕೆ ಸಿಂಗ್ ಲಿಖಿತವಾಗಿ ಉತ್ತರಿಸಿದ ಅವರು, 28-02-2021ರ ವೇಳೆಗೆ ಒಟ್ಟು 92.97 ಜಿವ್ಯಾಟ್ ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು (ದೊಡ್ಡ ಹೈಡ್ರೊ ಹೊರತುಪಡಿಸಿ) ದೇಶದಲ್ಲಿ ಸಂಚಿತವಾಗಿ ಸ್ಥಾಪಿಸಲಾಗಿದೆ. 50.15 ಜಿವ್ಯಾಟ್ ಸಾಮರ್ಥ್ಯವು ಅನುಷ್ಠಾನದ ವಿವಿಧ ಹಂತಗಳಲ್ಲಿದೆ ಮತ್ತು 27.02 ಜಿ ವ್ಯಾಟ್ ಸಾಮರ್ಥ್ಯವು ಬಿಡ್ಡಿಂಗ್ ವಿವಿಧ ಹಂತಗಳಲ್ಲಿದೆ ಎಂದರು.
ಕಳೆದ ಐದು ವರ್ಷಗಳಲ್ಲಿ ಅಂದರೆ 2015-16 ರಿಂದ 2019-20 ರವರೆಗೆ ಒಟ್ಟು 47.53 ಜಿವ್ಯಾಟ್ ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು (ದೊಡ್ಡ ಹೈಡ್ರೊ ಹೊರತುಪಡಿಸಿ) ಸೇರಿಸಲಾಗಿದೆ. 2020-21ರ ಅವಧಿಯಲ್ಲಿ (28-2-2021ರವರೆಗೆ) ಒಟ್ಟು 5.89 ಜಿವ್ಯಾಟ್ ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು (ದೊಡ್ಡ ಹೈಡ್ರೊ ಹೊರತುಪಡಿಸಿ) ಸೇರಿಸಲಾಗಿದೆ. ಇದಲ್ಲದೆ, ಹಿಂದಿನ ವರ್ಷದಲ್ಲಿ ಅಂದರೆ 2019-20ರಲ್ಲಿ ಒಟ್ಟು 8.76 ಜಿ ವ್ಯಾಟ್ ಸಾಮರ್ಥ್ಯವನ್ನು (ದೊಡ್ಡ ಹೈಡ್ರೊ ಹೊರತುಪಡಿಸಿ) ಸೇರಿಸಲಾಗಿದೆ ಎಂದರು.